For Quick Alerts
ALLOW NOTIFICATIONS  
For Daily Alerts

ಮಿಲನದ ಬಳಿಕ ಪುರುಷರು ನೇರವಾಗಿ ನಿದ್ದೆಗೆ ಜಾರುವುದೇಕೆ?

By Arshad
|

ಹೆಚ್ಚಿನ ವಿವಾಹಿತ ಮಹಿಳೆಯರ ಸಮಾನ ದೂರು ಎಂದರೆ ಆಪ್ತಘಳಿಗೆಯ ಬಳಿಕ ತಮಗೆ ಪತಿಯ ಸಾಮೀಪ್ಯ ಬೇಕೆನಿಸಿದಾಗ ಪತಿರಾಯರು ನೇರವಾಗಿ ಗಾಢನಿದ್ದೆಗೆ ಜಾರುತ್ತಾರೆ ಎಂಬುದಾಗಿದೆ. ಈ ಸಮಯದಲ್ಲಿ ಹಿತವಾದ ಅಪ್ಪುಗೆ, ಚುಂಬನ, ಸವಿಮಾತುಗಳು ಹಾಗೂ ಸಾಕಷ್ಟು ಕಚಗುಳಿಗಳು ಇವರಿಗೆ ಬೇಕೆನಿಸುತ್ತದೆ.

ಆದರೆ ಇದಕ್ಕೂ ಮುನ್ನ ಪುರುಷರು ತಮ್ಮಲ್ಲಾ ಸಾಮರ್ಥ್ಯವನ್ನು ಬಳಸಿಕೊಂಡು ಖಾಲಿಯಾಗಿಬಿಟ್ಟಿದ್ದಾರೋ ಎಂಬಂತೆ ಯಾವುದೇ ಪ್ರತಿಕ್ರಿಯೆ ನೀಡದೇ ಗೊರಕೆ ಹೊಡೆಯುವುದು ಮಾತ್ರ ನಿರಾಶೆ ತರಿಸುತ್ತದೆ. ನೆನಪಿರಲಿ, ಪುರುಷರಿಗೆ ಮಿಲನದಲ್ಲಿ ಹೆಚ್ಚಿನ ಶಕ್ತಿ ವ್ಯಯವಾಗುತ್ತದೆ ಹಾಗೂ ಕರ್ತವ್ಯ ಮುಗಿಸಿದ ಬಳಿಕ ನಿಮ್ಮ ಮಡಿಲಿನಲ್ಲಿ ಮಲಗಲು ಇಚ್ಛಿಸುತ್ತಾರೆ. ಇವರೇನೂ ನಿಮಗೆ ನಿರಾಶೆ ಮೂಡಿಸಲೆಂದೇ ಹೀಗೆ ವರ್ತಿಸುವುದಿಲ್ಲ, ಬದಲಿಗೆ ಇದಕ್ಕೆ ಸ್ಪಷ್ಟ ಕಾರಣಗಳಿವೆ, ಬನ್ನಿ, ಏನು ಕಾರಣಗಳಿವೆ ಎಂದು ನೋಡೋಣ....

ಮನಸ್ಸು ಹಾಗೂ ದೇಹ ನಿರಾಳವಾಗ ಬಯಸುತ್ತದೆ!

ಮನಸ್ಸು ಹಾಗೂ ದೇಹ ನಿರಾಳವಾಗ ಬಯಸುತ್ತದೆ!

ಒಂದು ವೈಜ್ಞಾನಿಕ ಅಧ್ಯಯನದಲ್ಲಿ ಕಂಡುಬಂದ ಪ್ರಕಾರ ಸಮಾಗಮದ ಸಮಯದಲ್ಲಿ ಪುರುಷರ ಇಡಿಯ ದೇಹ ಪರಿಪೂರ್ಣವಾಗಿ ಬಳಕೆಯಾಗುತ್ತದೆ ಹಾಗೂ ದೇಹದ ರಕ್ತಪರಿಚಲನೆ ಹಾಗೂ ಮೆದುಳಿನ ಚಟುವಟಿಕೆಗಳು ಗರಿಷ್ಟವಾಗಿರುತ್ತವೆ. ಆದರೆ ಕ್ರಿಯೆಯ ಬಳಿಕ ಮನಸ್ಸು ಹಾಗೂ ದೇಹ ನಿರಾಳವಾಗಬಯಸುತ್ತದೆ. ಇದಕ್ಕೂ ಮುನ್ನ ಇದ್ದ ದುಗುಡ ಹಾಗೂ ಅಂತರ್ಗತವಾಗಿದ್ದ ಹೆದರಿಕೆಗಳೂ ಈಗ ಇಲ್ಲವಾಗಿರುತ್ತವೆ. ಇದು ನಿದ್ದೆ ಆವರಿಸಲು ಅತ್ಯಂತ ಸೂಕ್ತ ಸಂದರ್ಭಗಳಾಗಿರುವ ಕಾರಣ ಪುರುಷ ನಿದ್ದೆ ಹೋಗದೇ ಇರಲು ಸಾಧ್ಯವೇ ಇಲ್ಲ. ಹಾಗಾಗಿ ಆತ ನಿದ್ದೆಗೆ ಸ್ವಾಭಾವಿಕವಾಗಿಯೇ ಜಾರುತ್ತಾನೆ.

ಪುರುಷನೇ ಹೆಚ್ಚು ಕಷ್ಟಪಡುತ್ತಾನೆ!

ಪುರುಷನೇ ಹೆಚ್ಚು ಕಷ್ಟಪಡುತ್ತಾನೆ!

ಸಾಮಾನ್ಯವಾಗಿ ದಾಂಪತ್ಯದ ಈ ಕ್ರಿಯೆ ರಾತ್ರಿಯ ಸಮಯದಲ್ಲಿ, ಮಲಗುವ ಮುನ್ನ ಜರುಗುತ್ತದೆ. ಇಡಿಯ ದಿನದ ಚಟುವಟಿಕೆಗಳಿಂದಾಗಿ ದೇಹ ಈಗಾಗಲೇ ಬಳಲಿರುತ್ತದೆ ಹಾಗೂ ನಿದ್ದೆ ಆವರಿಸುವುದು ಸ್ವಾಭಾವಿಕವಾಗಿದೆ. ಇದಕ್ಕಾಗಿ ಆತನನ್ನು ಹೊಣೆಯಾಗಿಸಬೇಡಿ. ಅದರಲ್ಲೂ ಮಿಲನಕ್ರಿಯೆಯಲ್ಲಿ ಪುರುಷನೇ ಹೆಚ್ಚು ಕಷ್ಟಪಡುತ್ತಾನೆ, ನೆನಪಿರಲಿ.

ಮಹಿಳೆಯರು ಮಿಲನದ ಬಳಿಕವೂ ಮುದ್ದಾಟವನ್ನು ಬಯಸುತ್ತಾರೆ

ಮಹಿಳೆಯರು ಮಿಲನದ ಬಳಿಕವೂ ಮುದ್ದಾಟವನ್ನು ಬಯಸುತ್ತಾರೆ

ಪುರುಷ ಭಾವಪರವಶೆಯ ಹಂತವನ್ನು ತಲುಪಿದಾಗ ಆತನ ಜಾಗೃತ ಮನಸ್ಸು ಸ್ಥಗಿತಗೊಳ್ಳುತ್ತದೆ ಹಾಗೂ ಈ ಸಮಯದಲ್ಲಿ ನಿದ್ದೆ ಸ್ವಾಭಾವಿಕವಾಗಿಯೇ ಆವರಿಸುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಮಹಿಳೆಯರಿಗೆ ಮಿಲನದ ತಕ್ಷಣ ನಿದ್ದೆ ಬರುವುದಿಲ್ಲ. ಮಹಿಳೆಯರ ದೇಹದಲ್ಲಿ ಪ್ರಕೃತಿ ನಿರ್ಮಿಸಿರುವ ಈ ವೈಪರೀತ್ಯದಿಂದಲೇ ಮಹಿಳೆಯರು ಮಿಲನದ ಬಳಿಕವೂ ಕೊಂಚ ಹೆಚ್ಚು ಹೊತ್ತು ಮುದ್ದಾಟವನ್ನು ಬಯಸುತ್ತಾರೆ.

ಪುರುಷರ ದೇಹದಲ್ಲಿ ಕೆಲವಾರು ರಸದೂತಗಳು ಬಿಡುಗಡೆಯಾಗುತ್ತವೆ

ಪುರುಷರ ದೇಹದಲ್ಲಿ ಕೆಲವಾರು ರಸದೂತಗಳು ಬಿಡುಗಡೆಯಾಗುತ್ತವೆ

ಇನ್ನೊಂದು ಸಿದ್ಧಾಂತದಲ್ಲಿ ವಿವರಿಸಿರುವ ಪ್ರಕಾರ ಮಿಲನಕ್ರಿಯೆ ಪೂರ್ಣಗೊಂಡ ಬಳಿಕ ಪುರುಷರ ದೇಹದಲ್ಲಿ ಕೆಲವಾರು ರಸದೂತಗಳು ಬಿಡುಗಡೆಯಾಗುತ್ತವೆ. ಇದರಲ್ಲಿ ಪ್ರೊಲ್ಯಾಕ್ಟಿನ್, ವ್ಯಾಸೋಪ್ರೆಸ್ಸಿನ್, ನೈಟೈಕ್ ಆಕ್ಸೈಡ್, ಸೆರೋಟೋನಿನ್, ಆಕ್ಸಿಟೋಸಿನ್ ಹಾಗೂ ನೋರೆಪಿನಿಫ್ರೀನ್ ಮೊದಲಾದವು ಪ್ರಮುಖವಾಗುವೆ. ಇವೆಲ್ಲವೂ ಮೆದುಳಿಗೆ ಮುದನೀಡುವ ರಸದೂತಗಳಾಗಿದ್ದು ಇವು ನಿದ್ದೆ ಆವರಿಸಲು ಕಾರಣವಾಗುತ್ತವೆ.

ಆತ ಆಸಕ್ತಿ ಕಳೆದುಕೊಳ್ಳುತ್ತಾನೆ

ಆತ ಆಸಕ್ತಿ ಕಳೆದುಕೊಳ್ಳುತ್ತಾನೆ

ಇನ್ನೂ ಕೆಲವು ಸಿದ್ಧಾಂತಗಳ ಪ್ರಕಾರ ಮಿಲನಕ್ರಿಯೆಯ ಕೊನೆಯ ಹಂತದಲ್ಲಿ ಸ್ಖಲನವಾದ ಬಳಿಕ ಪುರುಷನ ಮನೋಭಾವ ಮಿಲನ ಕ್ರಿಯೆಗೂ ಮುನ್ನ ಇರುವಂತಿರುವುದಿಲ್ಲ. ಈಗ ಆತ ಕೊಂಚ ಆಸಕ್ತಿಯನ್ನು ಕಳೆದುಕೊಳ್ಳುತ್ತಾನೆ ಹಾಗೂ ನಿದ್ದೆ ಮಾಡ ಬಯಸುತ್ತಾನೆ.

ವಿಶ್ರಮಿಸಲು ಬಯಸುತ್ತಾನೆ

ವಿಶ್ರಮಿಸಲು ಬಯಸುತ್ತಾನೆ

ಮಿಲನಕ್ರಿಯೆಯಲ್ಲಿ ಪುರುಷ ಅಪರಿಮಿತ ಸುಖಾನುಭಾವವನ್ನು ಪಡೆದಿದ್ದು ಮಿಲನಕ್ರಿಯೆ ಪೂರ್ಣಗೊಂಡಾಗ ಇದನ್ನು ಮುಕ್ತಾಯವೆಂದು ಪರಿಗಣಿಸಿ ನಿದ್ದೆಯ ಮೂಲಕ ವಿಶ್ರಮಿಸಲು ತೊಡಗುತ್ತಾನೆ.

ಇದು ಸ್ವಾಭಾವಿಕೆ ಕ್ರಿಯೆ...

ಇದು ಸ್ವಾಭಾವಿಕೆ ಕ್ರಿಯೆ...

ಎಲ್ಲಾ ಸಿದ್ಧಾಂತಗಳನ್ನು ಬದಿಗಿರಿಸಿ ಸಾಮಾನ್ಯ ಜ್ಞಾನದ ಪ್ರಕಾರ ನೋಡಿದರೆ ಕೆಲವು ಪುರುಷರು ಮಿಲನಕ್ರಿಯೆಯಲ್ಲಿ ಮಾತನಾಡಲು ಬಯಸದೇ ಕೇವಲ ತಮ್ಮ ಪಾಲಿನ ಕರ್ತವ್ಯ ಮುಗಿಸಿದ ಬಳಿಕ ಸುಮ್ಮನೇ ಮಲಗಿ ಬಿಡುತ್ತಾರೆ. ಇದನ್ನು ಅರ್ಥಮಾಡಿಕೊಳ್ಳಿ ಹಾಗೂ ಇದಕ್ಕೂ ಹೊರತಾಗಿ ನಿಮ್ಮನ್ನು ಆತನೂ ಅರ್ಥಮಾಡಿಕೊಳ್ಳುವಂತೆ ಮನವೊಲಿಸಿ.

English summary

Why Men Fall Asleep After Intercourse

Many women complain that men tend to sleep soon after a passionate lovemaking session. Women expect a lot more after intercourse. They need hugs, kisses, conversations and a lot of cuddling but all that men feel like doing after burning tons of calories in bed is to fall asleep. Many reasons are there behind his sleepiness. Read on to know more...
X
Desktop Bottom Promotion