25ರ ಹರೆಯದ ದಾಟಿದ ಬಳಿಕ ಪುರುಷರಿಗೆ 9 ಭೀತಿಗಳು ಕಾಡುತ್ತವೆಯಂತೆ!

By Hemanth
Subscribe to Boldsky

ಪುರುಷರು ಯಾವಾಗಲೂ ಹೆದುವವರಲ್ಲ, ಅವರು ಎಂಟೆದೆ ಬಂಟರು, ಬಹದ್ದೂರ್ ಗಂಡು ಹೀಗೆಲ್ಲಾ ಹಲವಾರು ಪ್ರಶಂಸೆಗಳು ಅವರ ಪರವಾಗಿ ಹೇಳಿ ಬರುತ್ತದೆ. ಆದರೆ ಇದು ನಿಜವೇ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತದೆ. ಖಂಡಿತವಾಗಿಯೂ ಇದೆಲ್ಲಾ ಸುಳ್ಳು. ಯಾಕೆಂದರೆ ಪುರುಷರಲ್ಲೂ ಒಂದಲ್ಲಾ ಒಂದು ರೀತಿಯ ಭೀತಿ, ಅಸುರಕ್ಷಿತ ಭಾವ ಕಾಡುತ್ತಾ ಇರುವುದು. ಪ್ರೌಢರಾಗುತ್ತಾ ಹೋದಂತೆ ಕೆಲವರು ಈ ಭೀತಿಯನ್ನು ಮೆಟ್ಟಿ ನಿಲ್ಲುವರು. ಪುರುಷರ ಅತೀ ದೊಡ್ಡ ಭಯವೇನು ಎಂದರೆ ನಮಗೆ ಹೇಳಲು ಕಷ್ಟವಾಗಬಹುದು.

ಯಾಕೆಂದರೆ ಇದನ್ನು ವಿಭಾಗಿಸುವುದು ಸುಲಭವಲ್ಲ. ಆದರೆ ಪುರುಷರು ಬೆಳೆಯುತ್ತಾ ನಿಂತಂತೆ ಅವರಲ್ಲಿ ಭೀತಿಯು ಹೆಚ್ಚಾಗುವುದು. ಹದಿಹರೆಯ ದಾಡಿದ ಬಳಿಕ ತಾವು ಹಾಸಿಗೆಯಲ್ಲಿ ಎಷ್ಟು ಸಫಲರಾಗುತ್ತೇವೆ ಎನ್ನುವ ಭೀತಿ, 25ರ ಹರೆಯದ ದಾಟಿದ ಬಳಿಕ ಸಂಸಾರ ಮತ್ತು ಮಕ್ಕಳ ಪೋಷಣೆಗೆ ಹಣ ಸಂಪಾದನೆ ಇದೆಯಾ ಎನ್ನುವ ಭೀತಿ. ಇಂತಹ ಹಲವಾರು ಭೀತಿಗಳು ಪುರುಷರಲ್ಲಿ ಇರುವುದು. ಕೆಲವರು ಇದರಿಂದ ಪಾರಾಗಿ ಬರುವರು. ಪುರುಷರ ಭೀತಿಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳುವ....

ಸುಂದರವಾಗಿದ್ದೇನೆಯಾ?

ಸುಂದರವಾಗಿದ್ದೇನೆಯಾ?

ಹುಡುಗಿಯರನ್ನು ಆಕರ್ಷಿಸಲು ನಾನು ಸುಂದರವಾಗಿದ್ದೇನೆಯಾ ಎನ್ನುವ ಭೀತಿ ಪ್ರತಿಯೊಬ್ಬ ಪುರುಷರಲ್ಲೂ ಇದ್ದೇ ಇರುತ್ತದೆ. ಉತ್ತಮ ಕಟ್ಟುಮಸ್ತಾದ ದೇಹ ಹೊಂದಿರುವ ಪುರುಷರಿಗೆ ಹುಡುಗಿಯರು ಮಾರು ಹೋಗುತ್ತಾರೆಂದು ಪುರುಷರು ಭಾವಿಸಿದ್ದಾರೆ. ತಮ್ಮ ದೇಹದ ಬಗ್ಗೆ ಪ್ರತಿಯೊಬ್ಬ ಪುರುಷನಿಗೂ ಭೀತಿ ಇದ್ದೇ ಇರುತ್ತದೆ.

ಪತ್ನಿ ನನಗೆ ಮೋಸ ಮಾಡುತ್ತಾಳೆಯಾ?

ಪತ್ನಿ ನನಗೆ ಮೋಸ ಮಾಡುತ್ತಾಳೆಯಾ?

ಪತ್ನಿ ತನಗೆ ಮೋಸ ಮಾಡುತ್ತಾಳೆ ಎನ್ನುವ ಭೀತಿ ಕೆಲವು ಪುರುಷರನ್ನು ಕಾಡುತ್ತಾ ಇರುತ್ತದೆ. 45ರ ಹರೆಯ ದಾಟಿದ ಪುರುಷರಲ್ಲಿ ಇಂತಹ ಭೀತಿ ಹೆಚ್ಚಾಗಿರುವುದು. ಯಾಕೆಂದರೆ ಈ ವಯಸ್ಸಿನ ಬಳಿಕ ಹಾಸಿಗೆಯಲ್ಲಿ ಪುರುಷರ ಪ್ರದರ್ಶನ ಅಷ್ಟಕಷ್ಟೇ.

ನಾನು ಸಾಕಷ್ಟು ಸಂಪಾದಿಸುತ್ತೇನಾ?

ನಾನು ಸಾಕಷ್ಟು ಸಂಪಾದಿಸುತ್ತೇನಾ?

ಹಣವಿದ್ದರೆ ಹುಡುಗಿಯರು ಹಿಂದೆ ಬೀಳುತ್ತಾರೆ ಎನ್ನುವ ಭಾವನೆ ಹೆಚ್ಚಿನ ಪುರುಷರಲ್ಲಿ ಇದೆ. ಆದರೆ ಹಣ ಮತ್ತು ಅಂತಸ್ತು ವ್ಯಕ್ತಿಯೊಬ್ಬನ ಪರಿಪೂರ್ಣತೆಗೆ ಮುಖ್ಯ. ಆದರೆ ಹಣ ಮಾತ್ರ ಒಳ್ಳೆಯ ಸಂಬಂಧವನ್ನು ಉಂಟು ಮಾಡದು. ಆದರೆ ಹೆಚ್ಚಿನ ಪುರುಷರು ತಮ್ಮ ಸಂಪಾದನೆ ಬಗ್ಗೆ ಯಾವಾಗಲೂ ಕೊರಗುತ್ತಾ ಇರುತ್ತಾರೆ. ಹಣ ಕಳಕೊಂಡರೆ ಏನಾಗಬಹುದು ಎನ್ನುವ ಭೀತಿ ಕೂಡ ಹೆಚ್ಚಿನವರಲ್ಲಿ ಇರುವುದು.

ನಪುಂಸಕನೆಂದು ಭಾವಿಸಲಾಗುವುದೇ?

ನಪುಂಸಕನೆಂದು ಭಾವಿಸಲಾಗುವುದೇ?

ಲೈಂಗಿಕ ಚಟುವಟಿಕೆಗಳಲ್ಲಿ ಯಾವುದೇ ಅನುಭವ ಇಲ್ಲದೆ ಇದ್ದರೆ ಅದನ್ನು ನಪುಂಸಕತ್ವ ಎಂದು ತಿಳಿಯಲಾಗುತ್ತದೆ ಎನ್ನುವ ಭೀತಿ ಹೆಚ್ಚಿನವರಲ್ಲಿ ಇರುವುದು. ಇದರಿಂದಾಗಿ ಅವರು ಯಾವಾಗಲೂ ಹಲವಾರು ಸಂಬಂಧಗಳ ಬಗ್ಗೆ ಮಾತನಾಡುತ್ತಾ ಇರುವರು. ಇದು ಹುರುಳಿಲ್ಲದ ಭೀತಿಯಾಗಿದೆ. ಆದರೆ ಪ್ಲೇಬಾಯ್ ಯಂತೆ ಇದ್ದರೆ ಹುಡುಗಿಯರು ಆಕರ್ಷಣೆಗೆ ಒಳಗಾಗುವರು ಎಂದು ಭಾವಿಸುತ್ತಾರೆ.

ಆಕೆ ತನ್ನ ಗಾತ್ರವನ್ನು ಹಳೆ ಗೆಳೆಯನಿಗೆ ಹೋಲಿಸಬಹುದೇ?

ಆಕೆ ತನ್ನ ಗಾತ್ರವನ್ನು ಹಳೆ ಗೆಳೆಯನಿಗೆ ಹೋಲಿಸಬಹುದೇ?

ಇದು ಪುರುಷರನ್ನು ಕಾಡುವಂತಹ ಗುಪ್ತ ಭೀತಿಯಾಗಿದೆ. ತನ್ನ ಗಾತ್ರವನ್ನು ಪ್ರಿಯತಮೆಯು ತನ್ನ ಹಳೆಯ ಗೆಳೆಯನೊಂದಿಗೆ ಹೋಲಿಕೆ ಮಾಡುತ್ತಾಳೆಯಾ ಮತ್ತು ನನ್ನನ್ನು ಬಿಟ್ಟು ಬಿಡುತ್ತಾಳೆಯಾ ಎನ್ನುವ ಭೀತಿ ಇರುವುದು. ಇದು ತುಂಬಾ ಕ್ಷುಲ್ಲಕವಾಗಿ ಕಾಣಿಸಬಹುದು. ಆದರೆ ಸೊಂಟದ ಕೆಳಗಿನ ವಿಷಯದ ಬಗ್ಗೆ ಪುರುಷರಿಗೆ ಹೆಚ್ಚಿನ ಚಿಂತೆಯಿದೆ.

ಆಕೆಗೆ ಆಪ್ತ ಪುರುಷ ಗೆಳೆಯರಿದ್ದಾರೆಯಾ?

ಆಕೆಗೆ ಆಪ್ತ ಪುರುಷ ಗೆಳೆಯರಿದ್ದಾರೆಯಾ?

ತನ್ನ ಪ್ರೇಯಸಿಗೆ ಬೇರೆ ಗೆಳೆಯರು ಇರುವುದನ್ನು ಪ್ರತಿಯೊಬ್ಬ ಪುರುಷ ಕೂಡ ದ್ವೇಷಿಸುತ್ತಾನೆ. ಕೆಲವು ಪುರುಷರು ತಮ್ಮ ಗೆಳತಿಯ ಗೆಳೆಯರ ಬಗ್ಗೆ ಫೇಸ್ ಬುಕ್ ನಲ್ಲಿ ಹುಡುಕಾಟ ನಡೆಸುವುದು ಇದೆ.

ನಾನು ಆಕೆಗೆ ಬೇಕಾದಷ್ಟು ಉದ್ದವಿದ್ದೇನೆಯಾ?

ನಾನು ಆಕೆಗೆ ಬೇಕಾದಷ್ಟು ಉದ್ದವಿದ್ದೇನೆಯಾ?

ಕುಳ್ಳಗಿನ ಹುಡುಗಿಯರು ನಮ್ಮನ್ನು ನೋಡುತ್ತಾರೆ ಎನ್ನುವ ಭೀತಿ ಉದ್ದಗಿನ ಹುಡುಗರಲ್ಲಿ ಇರುತ್ತದೆ. ಅದೇ ಕುಳ್ಳಗಿನ ಹುಡುಗರಿಗೆ ಮಹಿಳೆಯರು ಉದ್ದದ ಪುರುಷರನ್ನು ಇಷ್ಟಪಡುತ್ತಾರೆ ಎನ್ನುವ ಭೀತಿಯಿರುವುದು. ಉದ್ದ ಹಾಗೂ ಕುಳ್ಳಗಿನ ಹುಡುಗರಲ್ಲಿ ತಪ್ಪು ಕಲ್ಪನೆಯಿದೆ. ಮಹಿಳೆಯರು ಪ್ರೀತಿಯಲ್ಲಿ ಬಿದ್ದರೆ ಯಾರನ್ನಾದರೂ ಪ್ರೀತಿಸಬಹುದು. ಉದ್ದ ಪ್ರೀತಿಗೆ ಅಡ್ಡಿಯಾಗದು.

ಅತ್ತರೆ ನಾನು ದುರ್ಬಲನಾಗುವೆನೇ?

ಅತ್ತರೆ ನಾನು ದುರ್ಬಲನಾಗುವೆನೇ?

ಮುಕ್ತವಾಗಿ ಅತ್ತರೆ ದುರ್ಬಲನಾಗುತ್ತೇನೆ ಎನ್ನುವ ಭೀತಿ ಪುರುಷರಲ್ಲಿ ಇರುವುದು. ಪುರುಷರಿಗೆ ಕೂಡ ಅಳು ಬರುವುದು. ಆದರೆ ತಾವು ಬಲಿಷ್ಠವಾಗಿದ್ದೇವೆ ಎಂದು ತೋರಿಸಲು ಅಳು ತಡೆಯುವರು. ಇದರಿಂದ ಅವರಲ್ಲಿ ಒತ್ತಡ ಹೆಚ್ಚಾಗುವುದು.

ನಾನು ಪುಕ್ಕಲನೆಂದು ಪರಿಗಣಿಸಲ್ಪಡುತ್ತೇನೆಯಾ?

ನಾನು ಪುಕ್ಕಲನೆಂದು ಪರಿಗಣಿಸಲ್ಪಡುತ್ತೇನೆಯಾ?

ರಸ್ತೆಯಲ್ಲಿ ಗೆಳತಿಯೊಂದಿಗೆ ಹೋಗುತ್ತಿರುವಾಗ ಯಾರಾದರೂ ಹುಡುಗರು ನಿಮ್ಮೊಂದಿಗೆ ಜಗಳ ತೆಗೆದರೆ ಏನು ಮಾಡುಪುರುಷರು ಯಾವಾಗಲೂ ಹೆದುವವರಲ್ಲ, ಅವರು ಎಂಟೆದೆ ಬಂಟರು, ಬಹದ್ದೂರ್ ಗಂಡು ಹೀಗೆಲ್ಲಾ ಹಲವಾರು ಪ್ರಶಂಸೆಗಳು ಅವರ ಪರವಾಗಿ ಹೇಳಿ ಬರುತ್ತದೆ. ಆದರೆ ಇದು ನಿಜವೇ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತದೆ. ಖಂಡಿತವಾಗಿಯೂ ಇದೆಲ್ಲಾ ಸುಳ್ಳು. ಯಾಕೆಂದರೆ ಪುರುಷರಲ್ಲೂ ಒಂದಲ್ಲಾ ಒಂದು ರೀತಿಯ ಭೀತಿ, ಅಸುರಕ್ಷಿತ ಭಾವ ಕಾಡುತ್ತಾ ಇರುವುದು. ಪ್ರೌಢರಾಗುತ್ತಾ ಹೋದಂತೆ ಕೆಲವರು ಈ ಭೀತಿಯನ್ನು ಮೆಟ್ಟಿ ನಿಲ್ಲುವರು. ಪುರುಷರ ಅತೀ ದೊಡ್ಡ ಭಯವೇನು ಎಂದರೆ ನಮಗೆ ಹೇಳಲು ಕಷ್ಟವಾಗಬಹುದು. ಯಾಕೆಂದರೆ ಇದನ್ನು ವಿಭಾಗಿಸುವುದು ಸುಲಭವಲ್ಲ. ಆದರೆ ಪುರುಷರು ಬೆಳೆಯುತ್ತಾ ನಿಂತಂತೆ ಅವರಲ್ಲಿ ಭೀತಿಯು ಹೆಚ್ಚಾಗುವುದು. ಹದಿಹರೆಯ ದಾಡಿದ ಬಳಿಕ ತಾವು ಹಾಸಿಗೆಯಲ್ಲಿ ಎಷ್ಟು ಸಫಲರಾಗುತ್ತೇವೆ ಎನ್ನುವ ಭೀತಿ, 25ರ ಹರೆಯದ ದಾಟಿದ ಬಳಿಕ ಸಂಸಾರ ಮತ್ತು ಮಕ್ಕಳ ಪೋಷಣೆಗೆ ಹಣ ಸಂಪಾದನೆ ಇದೆಯಾ ಎನ್ನುವ ಭೀತಿ. ಇಂತಹ ಹಲವಾರು ಭೀತಿಗಳು ಪುರುಷರಲ್ಲಿ ಇರುವುದು. ಕೆಲವರು ಇದರಿಂದ ಪಾರಾಗಿ ಬರುವರು. ಪುರುಷರ ಭೀತಿಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳುವ.

For Quick Alerts
ALLOW NOTIFICATIONS
For Daily Alerts

    English summary

    What Do Guys Worry About? Here Are 9 Secret Fears Of Men!

    What? Do men have secret fears? Of course, yes. Every human being may have certain insecurities at some or the other point in life. Of course, some men conquer their fears as they mature whereas some men don't.Are you wondering what could be man's greatest fears? It is tough to categorise fears but men do have more than one fear. In fact, during adolescence, men secretly worry whether they will able to grow a beard and look manly.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more