For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ 'ಅಸೂಯೆ' ಎಂಟ್ರಿ ಆದರೆ ಮುಗಿಯಿತು! ಸಂಸಾರ ಅಲ್ಲೋಲ ಕಲ್ಲೋಲ

|

ಅಸೂಯೆ, ಇದು ಮಾನವರ ಸಹಜಗುಣವಾಗಿದ್ದು ಕೆಲವರಲ್ಲಿ ಅತಿಹೆಚ್ಚೇ ಇರುತ್ತದೆ. ಅಲ್ಪ ಪ್ರಮಾಣದ ಅಸೂಯೆ ಇರಲೂಬೇಕು, ಏಕೆಂದರೆ ಇದು ದೊಡ್ಡ ಸಾಧನೆಯನ್ನು ಸಾಧಿಸಲು ಮೆಟ್ಟಿಲಾಗುವ ಸಾಧ್ಯತೆಯೇ ಹೆಚ್ಚು. ಆದರೆ ಸಂಬಂಧದ ನಡುವೆ ನುಸುಳುವ ಅಸೂಯೆ ಅತಿಯಾದರೆ ಮಾತ್ರ ಇದು ವಿಷವಾಗಿ ಪರಿಣಮಿಸಬಲ್ಲುದು. ಕಾರ್ಯನಿಮಿತ್ತ ಮಹಿಳೆಯರೊಂದಿಗೆ ವ್ಯವಹರಿಸುವ ಪುರುಷರ ಪತ್ನಿಯರಲ್ಲಿ ಈ ಬಗೆಯ ಅಸೂಯೆಯನ್ನು ಹೆಚ್ಚಾಗಿ ಕಾಣಬಹುದು. ಒಂದು ವೇಳೆ ನೀವೂ ಸಂಬಂಧದಲ್ಲಿದ್ದು ನಿಮ್ಮ ಸಂಗಾತಿಯಲ್ಲಿ ಈ ವಿಷಕಾರಿ ಅಸೂಯೆ ಇದೆಯೇ ಇಲ್ಲವೇ ಎಂಬುದನ್ನು ಕಂಡುಕೊಳ್ಳಲು ಈ ಲೇಖನ ನಿಮಗೆ ನೆರವಾಗಲಿದೆ. ಯಾವುದೇ ಸಂಬಂಧದಲ್ಲಿ ಪರಸ್ಪರ ಬದ್ದತೆ, ವಿಶ್ವಾಸವೇ ಅನ್ಯೋನ್ಯತೆಯ ಅಡಿಪಾಯವಾಗಿದೆ ಹಾಗೂ ವಿಷಕಾರಿ ಅಸೂಯೆ ಈ ಅಡಿಪಾಯವನ್ನೇ ಶಿಥಿಲಗೊಳಿಸುತ್ತದೆ.

ಸಂಬಂಧದಲ್ಲಿದ್ದಾಗ ಈ ವ್ಯಕ್ತಿ ತನ್ನವನು/ಳು ಎಂಬ ಭಾವನೆ ಒಂದು ಬಂಧನವನ್ನು ಏರ್ಪಡಿಸುತ್ತದೆ. ಆದರೆ ಕಾಲಕ್ರಮೇಣ ಇಬ್ಬರಲ್ಲೊಬ್ಬರಲ್ಲಿ ಸುಪ್ತವಾಗಿದ್ದ ವಿಷಕಾರಿ ಅಸೂಯೆ ಹೆಡೆಯೆತ್ತಿ ಸಂಬಂಧವನ್ನು ಕಚ್ಚತೊಡಗುತ್ತದೆ. ಈ ವಿಷವನ್ನು ಗ್ರಹಿಸಿದವರು ತಮ್ಮ ಸಂಗಾತಿಯನ್ನು ಇತರರೊಂದಿಗೆ ಭೇಟಿಯಾಗದಿರಲು ಅಥವಾ ತಮ್ಮ ಕಾರ್ಯಗಳನ್ನು ಯೋಚಿಸಿಯೇ ಮುಂದುವರೆಸುವ ಮೂಲಕ ಸಂಬಂಧ ಕೆಡದಿರುವಂತೆ ಎಚ್ಚರ ವಹಿಸುತ್ತಾರೆ. ಈ ವ್ಯಕ್ತಿ ಕೇವಲ ತಮ್ಮವನಾಗಿಯೇ ಉಳಿಯಬೇಕೆಂಬ ಅಸೂಯೆ ಕಾಲಕ್ರಮೇಣ ಇನ್ನಶ್ಟು ವಿಷವಾಗುತ್ತಾ ಅಂತಿಮವಾಗಿ ಸಂಬಂಧವನ್ನೇ ಕೆಡಿಸುತ್ತದೆ.

marriage

ಆದರೆ ನಿಮ್ಮ ಸಂಗಾತಿಯಲ್ಲಿ ಈ ಅಸೂಯೆ ಇದೆ ಎಂಬುದನ್ನು ಕಂಡುಕೊಳ್ಳುವುದು ಹೇಗೆ? ಈ ಅಸೂಯೆ ಈಗ ಚಿಕ್ಕದಾಗಿದ್ದರೂ ಕಾಲಕ್ರಮೇಣ ಬೆಳೆದು ವಿಷವಾಗುವುದನ್ನು ಹೇಗೆ ತಡೆಯಬಹುದು? ಈ ಅಸೂಯೆಯ ಲಕ್ಷಣಗಳನ್ನು ಕಂಡುಕೊಂಡು ತಕ್ಷಣವೇ ತಿದ್ದಿ ಪರಸ್ಪರರಲ್ಲಿ ಜೀವನಪರ್ಯಂತ ಸಂಬಂಧ ಉತ್ತಮವಾಗಿರುವಂತೆ ಉಳಿಸಿಕೊಳ್ಳುವುದು ಹೇಗೆ? ಖಂಡಿತವಾಗಿಯೂ ಈ ಲಕ್ಷಣಗಳನ್ನು ಅರಿತುಕೊಳ್ಳಲು ಕೆಲವು ವಿಧಾನಗಳಿವೆ. ಆದರೆ ವಿಶೇಷವಾಗಿ ಮಹಿಳೆಯರ ಮನಸ್ಸನ್ನು ಅರಿತುಕೊಳ್ಳುವುದು ಅತಿ ಕಷ್ಟವಾಗಿದ್ದು ಈ ಲಕ್ಷಣವನ್ನು ಅರಿತುಕೊಳ್ಳುವುದು ಕೆಲವು ಸಂದರ್ಭಗಳಲ್ಲಿ ಕಷ್ಟಕರವಾಗಬಹುದು, ಆದರೆ ಅಸಾಧ್ಯವಂತೂ ಅಲ್ಲ! ಪ್ರಯತ್ನಿಸಿ ನೋಡಿ.

1. ವ್ಯಕ್ತಿಯ ಮೇಲಿನ ಒಡೆತನ

ಯಾವಾಗ ಓರ್ವ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಪಡೆಯುತ್ತಾನೋ/ಳೋ, ಆ ಕ್ಷಣದಿಂದ ಇವರು ತಮ್ಮ ಸಂಗಾತಿಯ ಒಡೆತನವನ್ನು ತಾವು ಹೊಂದಿರುವಂತೆ ವರ್ತಿಸುತ್ತಾರೆ. ಇದು ಅಸೂಯೆ ವಿಷಕಾರಿಯಾಗುವ ಸ್ಪಷ್ಟ ಲಕ್ಷಣವಾಗಿದೆ ಹಾಗೂ ಇದನ್ನು ಬೆಳೆಯತೊಡಗುವ ಮುನ್ನವೇ ಕಂಡುಕೊಳ್ಳುವುದು ಅಗತ್ಯವಾಗಿದೆ. ವಿವಾಹಕ್ಕೂ ಮುನ್ನ ವಧೂವರರ ಮನದಲ್ಲಿದ್ದ ಕಲ್ಪನೆಗಳೆಲ್ಲಾ ನನಸು ಮಾಡಿಕೊಳ್ಳುವ ಹುನ್ನಾರದಲ್ಲಿದ್ದು ಈ ಕಲ್ಪನೆಗಳನ್ನೆಲ್ಲಾ ತಮ್ಮ ಸಂಗಾತಿಯಿಂದ ಅಪೇಕ್ಷಿಸುತ್ತಾರೆ. ಈ ಅಸೂಯೆ ಹೆಚ್ಚಾಗಿ ಗುಪ್ತವೇ ಆಗಿದ್ದು ನಿಧಾನವಾಗಿ ಒಂದು ವ್ಯಸನದ ರೂಪ ಪಡೆಯುತ್ತದೆ. (ಅಂದರೆ ಸಂಗಾತಿ ಎದುರಿಗಿಲ್ಲದೇ ಇದ್ದರೆ ಆಗುವುದೇ ಇಲ್ಲ ಎಂಬಂತೆ ವರ್ತಿಸುವುದು). ಇವರಿಗೆ ತಮ್ಮ ಸಂಗಾತಿ ಮಾತ್ರವೇ ಈ ಜಗತ್ತಿನ ಏಕಮಾತ್ರ ವಿಶೇಷ ಹಾಗೂ ವಿಶಿಷ್ಟ ವ್ಯಕ್ತಿಯಾಗಿರುತ್ತಾನೆ. ಈ ವ್ಯಕ್ತಿಯ ಪ್ರತಿಯೊಂದು ನಡೆಯಲ್ಲಿಯೂ ಸರಿಯಾಗಿರುವ ಮತ್ತು ತಪ್ಪಾಗಿರುವುದನ್ನು ಇವರು ಅತಿ ಸೂಕ್ಷ್ಮವಾಗಿ ಗ್ರಹಿಸುತ್ತಾರೆ ಹಾಗೂ ಇವುಗಳನ್ನು ಎತ್ತಿ ತೋರಿಸತೊಡಗುತ್ತಾರೆ. ಇವರು ತಮ್ಮ ಸ್ನೇಹಿತರೊಂದಿಗೆ ವರ್ತಿಸುವ ರೀತಿ, ಸಾಮಾಜಿಕ ಜಾಲತಾಣಗಳಲ್ಲಿ ಯಾರೊಂದಿಗೆ ವ್ಯವಹರಿಸುತ್ತಾರೆ, ತಮ್ಮ ಕುಟುಂಬದವರೊಡನೆ ಹೇಗೆ ವರ್ತಿಸುತ್ತಾರೆ ಎಂಬ ಎಲ್ಲಾ ವಿಷಯಗಳಿಗೂ ಮೂಗು ತೂರಿಸಿ ತಪ್ಪುಗಳನ್ನು ತೋರಿಸಲು ತೊಡಗುತ್ತಾರೆ. ಅಲ್ಲದೇ ಇವರನ್ನು ತಮ್ಮ ಉದ್ಯೋಗಿ, ಆಪ್ತ ಸ್ನೇಹಿತರೊಂದಿಗೆ ಭೇಟಿಯಾಗುವುದರಿಂದಲೂ ತಡೆಯಲು ಯತ್ನಿಸುತ್ತಾರೆ. ಈ ಪ್ರಯತ್ನಗಳು ಹೆಚ್ಚುತ್ತಾ ಹೋದಂತೆ ವ್ಯಕ್ತಿ ನಿಧಾನವಾಗಿ ಸಂಕೋಲೆಗಳಿಂದ ಬಂಧಿತನಾಗುತ್ತಾ ಹೋಗುತ್ತಾನೆ. ನಿಧಾನವಾಗಿ ವ್ಯಕ್ತಿ ಇದುವರೆಗೆ ತನ್ನ ಆಪ್ತರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಂದ ಪಡೆದಿದ್ದ ಸಹಕಾರ ಸಹಾಯಗಳನ್ನೆಲ್ಲಾ ಕಳೆದುಕೊಳ್ಳುತ್ತಾ ಒಂಟಿತನದತ್ತ ಸಾಗುತ್ತಾನೆ/ಳೆ.

2. ಇವರ ಸಲಹೆಗಳು ಟೀಕೆಯ ರೂಪ ಪಡೆಯುತ್ತವೆ:

ಇಬ್ಬರ ವ್ಯಕ್ತಿಗಳ ಸಂಬಂಧಕ್ಕೊಳಪಟ್ಟಾಗ ಎಲ್ಲವೂ ಒಂದು ಸುಂದರ ಕಥೆಯಲ್ಲಿ ಕಂಡುಬಂದಂತೆ ಇರುತ್ತದೆ. ಪರಸ್ಪರರಲ್ಲಿ ಏನು ಬೇಕು, ಏನು ಬೇಡ, ಏನು ಇಷ್ಟ, ಏನು ಇಷ್ಟವಿಲ್ಲ ಎಂಬುದನ್ನೆಲ್ಲಾ ಕೇಳಿ ಅರಿತುಕೊಳ್ಳುತ್ತಾ ತಮ್ಮ ಸಂಗಾತಿಯನ್ನು ಸಂತೈಸಲು ಆ ಪ್ರಕಾರವೇ ನಡೆದುಕೊಳ್ಳುತ್ತಾ, ಇಷ್ಟದ ವಸ್ತುಗಳನ್ನೇ ಖರೀದಿಸುತ್ತಾ, ಅವರ ಇಷ್ಟದಂತೆಯೇ ನಡೆಯುತ್ತಾ ಸಾಗುತ್ತಾರೆ. ಆದರೆ ಇವೆಲ್ಲಾ ಪ್ರಾರಂಭಿಕ ದಿನಗಳಲ್ಲಿ ಮಾತ್ರ! ದಿನಗಳೆದಂತೆ ಅಸೂಯೆ ಈ ವ್ಯಕ್ತಿಯನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಾ ಇವರ ಸಲಹೆಗಳು ಮತ್ತು ಮಾತುಗಳಲ್ಲಿ ಸಂಗಾತಿಯ ಮೇಲಿನ ಒಡೆತನವನ್ನು ಸಾಧಿಸಲು ಯತ್ನಿಸುತ್ತದೆ. ಉತ್ತಮ ಸಂಬಂಧ ಮುಂದುವರೆಯಬೇಕಾದರೆ ಈ ಅಸೂಯೆ ಬೆಳೆಯಕೊಡಬಾರದು ಹಾಗೂ ತಕ್ಷಣವೇ ತಿದ್ದಿಕೊಳ್ಳಲು ಸಂಗಾತಿ ಕೊಂಚ ಕಟುವಾದ ಕ್ರಮವನ್ನೂ ಅನುಸರಿಸಬೇಕಾಗಬಹುದು.

3. ತನ್ನ ಸಂಗಾತಿಯ ಪ್ರತಿ ನಡೆಯನ್ನೂ ದಾಖಲಿಸುವುದು

ಅಸೂಯೆಯ ಲಕ್ಷಣಗಳಲ್ಲಿ ಇದು ಅತಿ ವಿಚಿತ್ರವಾದ ಲಕ್ಷಣವಾಗಿದೆ. ವ್ಯಕ್ತಿ ಮನೆಯಿಂದ ಹೊರ ಹೋದ ಬಳಿಕ ಎಲ್ಲೆಲ್ಲಿ ಹೋಗುತ್ತಾನೆ, ಯಾರನ್ನು ಭೇಟಿಯಾಗುತ್ತಾನೆ ಎಂಬೆಲ್ಲಾ ಮಾಹಿತಿಗಳನ್ನು ಇವರ ಸಂಗಾತಿ ದಾಖಲಿಸತೊಡಗುತ್ತಾರೆ. ಯಾವಾಗ ಈ ಬಗೆಯ ಅಸೂಯೆ ಪ್ರಕಟಗೊಂಡಿತೋ ಆಗಲೇ ಸಂಬಂಧಕ್ಕೆ ಕ್ಯಾನ್ಸರ್ ತಗುಲಿತೆಂದು ತಿಳಿದುಕೊಳ್ಳಬೇಕು. ಇದು ಅಸೂಯೆ ವಿಷಕಾರಿಯಾಗುವ ಅಲ್ಲ, ಈಗಾಗಲೇ ಅತಿ ವಿಷಕಾರಿ ರೂಪ ತಳೆದಿರುವ ಸ್ಪಷ್ಟ ಲಕ್ಷಣವಾಗಿದ್ದು ಇದುವರೆಗೆ ಕಂಡುಬಂದಿರುವ ಲಕ್ಷಣಗಳಲ್ಲಿ ಘೋರವಾಗಿದೆ. ಈ ಅಸೂಯೆ ಇರುವ ವ್ಯಕ್ತಿ ಗುಪ್ತವಾಗಿ ತನ್ನ ಸಂಗಾತಿಯ ನಡವಳಿಕೆ ಹಾಗೂ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸತೊಡಗುತ್ತಾರೆ ಹಾಗೂ ಇದಕ್ಕಾಗಿ ಇವರು ಇತರರ ಅಥವಾ ಇತರ ಮಾಧ್ಯಮಗಳ ನೆರವನ್ನೂ ಪಡೆಯಬಹುದು.

4. ವೇತನದ ಬಗ್ಗೆ ಕೀಳರಿಮೆ

ಅಸೂಯೆಯನ್ನು ಹಸಿರು ಬಣ್ಣಕ್ಕೆ ಹೋಲಿಸಲಾಗುತ್ತದೆ. ಯಾವಾಗ ಅಸೂಯೆ ಪ್ರಕಟವಾಗುತ್ತದೆಯೋ ಆಗ ಈ ವ್ಯಕ್ತಿ ಹಸಿರು ಬಣ್ಣ ತಾಳುತ್ತಾನೆ ಎಂದು ಆಂಗ್ಲ ಭಾಷೆಯಲ್ಲಿ ಹೇಳಲಾಗುತ್ತದೆ (Going Green). ಸಾಮಾನ್ಯವಾಗಿ ಈ ಅಸೂಯೆಯುಳ್ಳ ವ್ಯಕ್ತಿ ತನ್ನ ಸಂಗಾತಿಯ ವೇತನವನ್ನು ತನ್ನ ವೇತನದೊಂದಿಗೆ ಹೋಲಿಸಿ ಕೀಳರಿಮೆ ಅನುಭವಿಸುತ್ತಾರೆ. ನಿಮ್ಮ ವೇತನವನ್ನು ಪಡೆದಾಗ ನಿಮ್ಮ ಸಂಗಾತಿಯ ಮುಖವನ್ನು ಗಮನಿಸಿ. ಇವರ ಮುಖದಲ್ಲಿ ಮೂಡುವ ಮುಗುಳ್ನಗೆ ಸಂತಸದ ಭಾವ ಪ್ರಕಟಿಸಿದರೂ ಒಳಗಿಂದೊಳಗೇ ಇವರು ಅಸೂಯೆಯಿಂದ ಬೇಯುತ್ತಿದ್ದಿರಬಹುದು! ಆದರೆ ಆ ಕ್ಷಣದಿಂದ ಇವರು ತಮ್ಮ ಸಂಗಾತಿಯನ್ನು ಅವರ ಕೆಲಸ, ವೇತನ ಅಥವಾ ಈಗಿರುವ ಹುದ್ದೆಯ ಸಮಾನಾಂತರ ಹುದ್ದೆಯಲ್ಲಿರುವವರು ಕೊಂಡ ಆಸ್ತಿ, ವಸ್ತುಗಳನ್ನು ಉಲ್ಲೇಖಿಸತೊಡಗಿದರೆ ಇವರಲ್ಲಿ ಅಸೂಯೆ ಸುಪ್ತವಾಗಿದೆ ಎಂದು ಅರಿಯಬಹುದು.

5. ಅತಿಯಾರಾಧನೆಯ ಗೀಳು

ಓರ್ವ ವ್ಯಕ್ತಿಯನ್ನು ಅತಿಯಾಗಿ ಆರಾಧಿಸುವುದು ಸಹ ವಿಷಕಾರಿಯಾಗಿ ಪರಿಣಮಿಸಬಹುದು. ಸಂಬಂಧವನ್ನು ಉಳಿಸಿಕೊಳ್ಳಲು ಯತ್ನಿಸುವ ಯಾರೇ ಆದರೆ ಈ ಅತಿಯಾರಾಧನೆಯನ್ನು ನಿಲ್ಲಿಸಬೇಕು. ತನ್ನ ಪತಿ/ಪತ್ನಿ ದೇವರ ಸಮಾನ, ಪತಿ/ಪತ್ನಿ ಹೇಳಿದ ಮಾತುಗಳೆಲ್ಲವೂ ದೇವರ ಮಾತುಗಳಂತಿದ್ದು ಇದಕ್ಕೆ ವಿರುದ್ದವಾಗಿ ಮಾತೇ ಆಡದಿರುವುದು, ಪತಿ/ಪತ್ನಿಯ ಬೇಕು ಬೇಡಗಳೇ ತನ್ನ ಜೀವನದ ಏಕಮಾತ್ರ ಧ್ಯೇಯವೆಂಬಂತೆ ವರ್ತಿಸುವುದು ಮೊದಲಾದವು ವ್ಯಕ್ತಿಯ ಮೇಲೆ ಇರುವ ಗೀಳಿನ ಪರಮಾವಧಿಯಾಗಿದೆ. ಈ ನಡವಳಿಕೆ ಅಸೂಯೆ ವಿಷಕಾರಿಯಾಗಿದ್ದು ಸಂಗಾತಿಯ ಚಿಕ್ಕ ತಪ್ಪು ಸಹಾ ಇವರ ಮೇಲೆ ಅತಿ ಘೋರವಾದ ಪರಿಣಾಮವನ್ನು ಬೀರಬಹುದು. ಉದಾಹರಣೆಗೆ ವೈದ್ಯರೊಬ್ಬರು ಪಕ್ಕದಲ್ಲಿ ನರ್ಸ್ ಇದ್ದರೂ ತಾವೇ ಮಹಿಳಾ ರೋಗಿಯೊಬ್ಬರ ಕೈ ಹಿಡಿದು ನಾಡಿ ನೋಡಿದರೆಂದು ಆ ವೈದ್ಯರ ಪತ್ನಿ ರಂಪಾಟ ಮಾಡಿದ ಉದಾಹರಣೆಗಳಿವೆ. ಹಾಗಾಗಿ ಈ ಬಗೆಯ ಅಸೂಯೆ ಕಂಡುಬಂದರೆ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ತಡವಾಗುವ ಮುನ್ನವೇ ಸಂಬಂಧವನ್ನು ಉಳಿಸಿಕೊಳ್ಳಬಹುದು.

English summary

Toxic Jealousy Will Kill Your Love!

Jealousy in little quants is good for a relationship. If it increases, it becomes the toxic element for any relationship. If one is in such a relationship and doesn't know about it then this article will help you understand the signs of such toxic jealousy. When two people come into a relationship, they tend to become possessive about each other. This possessiveness helps you create a bond. But in the long run it most of the times turns into a toxic jealousy.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more