For Quick Alerts
ALLOW NOTIFICATIONS  
For Daily Alerts

ಗಂಡ-ಹೆಂಡತಿಯರು ಈ ಎಲ್ಲಾ ಸಂಗತಿಗಳನ್ನು ಮಾಡಲೇಬಾರದು

|

ನಂಬಿಕೆ, ನಿಷ್ಠೆ, ಪ್ರಾಮಾಣಿಕತೆ ಹೀಗೆ ಹಲವಾರು ವಿಚಾರಗಳಿಂದ ಸಂಬಂಧವು ಬಂಧಿಯಾಗಿರುವುದು. ಸಂಬಂಧವು ಬೆಸೆಯಬೇಕಾದರೆ ಅದಕ್ಕೆ ತುಂಬಾ ಸಮಯ ಕೂಡ ಬೇಕಾಗುವುದು. ಆದರೆ ಅದನ್ನು ಒಡೆಯಲು ಕೆಲವೇ ನಿಮಿಷಗಳು ಸಾಕು. ನಂಬಿಕೆಯಿಂದ ಇರುವಂತಹ ಸಂಬಂಧಗಳು ಯಾವತ್ತಿಗೂ ದೂರವಾಗಲ್ಲ. ಕೆಲವರಿಗೆ ಸಂಬಂಧವೆಂದರೆ ಅದು ದೇವರಷ್ಟೇ ಪೂಜ್ಯನೀಯ, ಇನ್ನು ಕೆಲವರಿಗೆ ಇದು ಆಟದ ಮೈದಾನವಿದ್ದಂತೆ. ಆದರೆ ಇದು ಅವರವರ ಭಾವಕ್ಕೆ ಬಿಟ್ಟಿರುವ ವಿಚಾರ.

ಕೆಲವರಿಗೆ ಸಾಮಾನ್ಯ ಸಂತೋಷ ಸಿಗುವಂತಹ ಸಂಬಂಧ ಸಾಕಿದ್ದರೆ, ಇನ್ನು ಕೆಲವರಿಗೆ ಬಾಲಿವುಡ್ ನ ರೋಮ್ಯಾನ್ಸ್ ನಂತಹ ಸಂಬಂಧ ಬೇಕಿರುವುದು. ಸಂಬಂಧವು ಪಾರದರ್ಶಕ ಮತ್ತು ಆರೋಗ್ಯಕರವಾಗಿರುವುದು ಅತೀ ಅಗತ್ಯ. ಸಂಬಂಧವು ಆರೋಗ್ಯಕಾರಿ ಯಾಗಿಲ್ಲವೆಂದಾದರೆ ಆಗ ದೀರ್ಘ ಸಮಯ ಹಿಡಿದೆಳೆದ ಬಳಿಕ ಅದು ತುಂಡಾಗುವುದು. ಸಂಬಂಧವೆಂದರೆ ಎತ್ತಿನ ಗಾಡಿಯಂತೆ. ಇಲ್ಲಿ ಎರಡು ಎತ್ತುಗಳು ಕೂಡ ಬಂಡಿ ಮುಂದೆ ಸಾಗಲು ಅತ್ಯಗತ್ಯ.

 Couples

ಹಲವಾರು ವಿಚಾರಗಳು ಸಂಬಂಧವನ್ನು ಉತ್ತಮ ರೀತಿಯಲ್ಲಿ ನೆರವಾಗುವುದು. ಅದೇ ಕೆಲವೊಂದು ಪರಿಸ್ಥಿತಿಗಳು ಸಂಬಂಧದ ಮೇಲೆ ಪರಿಣಾಮ ಬೀರುವುದು. ಕೆಲವೊಂದನ್ನು ನಾವು ಕಡೆಗಣಿಸಬಹುದಾದರೂ, ಇನ್ನು ಕೆಲವು ಕಡೆಗಣಿಸಲಾರದಂತಹ ಪರಿಸ್ಥಿತಿಯಿರುವುದು. ಕಡೆಗಣಿಸುವಂತಹ ಪರಿಸ್ಥಿತಿಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳದೆ ಹೋದರೆ ಆಗ ಸಂಬಂಧದ ಮೇಲೆ ದುಷ್ಟರಿಣಾಮ ಬೀರಬಹುದು. ಸಂಬಂಧದಲ್ಲಿ ಸೌಹಾರ್ದತೆ ಕಾಯ್ದುಕೊಳ್ಳಲು ಕಡಗಣಿಸಬಹುದಾದ ಕೆಲವೊಂದು ಪರಿಸ್ಥಿತಿಗಳ ಬಗ್ಗೆ ನಿಮಗೆ ನಾವು ತಿಳಿಸಿಕೊಡಲಿದ್ದೇವೆ.

ಹೋಲಿಕೆ ಮತ್ತು ವ್ಯತ್ಯಾಸ ಮಾಡುವುದು ಬಿಡಬೇಕು
ತುಂಬಾ ಕೆಟ್ಟ ಪರಿಸ್ಥಿತಿಯೆಂದರೆ ನೀವು ಸಂಗಾತಿಯನ್ನು ನಿಮ್ಮ ಸ್ನೇಹಿತರು, ಮಾಜಿ ಸ್ನೇಹಿತ/ತೆ ಅಥವಾ ಕಚೇರಿಯಲ್ಲಿನ ಸಹೋದ್ಯೋಗಿಗೆ ಹೋಲಿಸುವುದು. ಹೋಲಿಕೆಯಿಂದಾಗಿ ಅವರಲ್ಲಿ ಕೀಳು ಹಾಗೂ ನಿರ್ಲಕ್ಷ್ಯ ಭಾವನೆ ಮೂಡುವುದು. ನಿಮಗಾಗಿ ಅವರು ಮಾಡಿರುವುದು ಸಾಕಾಗಲಿಲ್ಲವೆಂದು ಭಾವಿಸುವರು. ಹೋಲಿಕೆಯಿಂದಾಗಿ ನಿಮ್ಮ ಸಂಗಾತಿಯಲ್ಲಿ ಅಸಮರ್ಪಕ ಭಾವನೆ ಮೂಡಬಹುದು ಮತ್ತು ಇದರಿಂದ ಸಂಬಂಧದಲ್ಲಿ ಬಿರುಕು ಮೂಡಿ, ನಿಮ್ಮ ಮನಸ್ಸಿನ ನೆಮ್ಮದಿ ಹಾಳಾಗಬಹುದು. ಸಂಬಂಧದಲ್ಲಿ ಇದನ್ನು ಕಡೆಗಣಿಸಬೇಕು. ಇದರಿಂದ ಸಂಬಂಧದ ಮೌಲ್ಯವು ಕಡಿಮೆಯಾಗುವುದು ಮತ್ತು ಇದನ್ನು ನೀವು ಹೇಗಾದರೂ ಕಡೆಗಣಿಸಲೇಬೇಕು. ಬೇರೆ ಯಾರೋ ಉತ್ತಮ ಜೀವನ ಅಥವಾ ಸಂಬಂಧ ನಡೆಸುತ್ತಿರಬಹುದು. ಇದರರ್ಥ ನೀವು ಅವರನ್ನು ಸಂಗಾತಿಗೆ ಹೋಲಿಕೆ ಮಾಡಬೇಕೆಂದಲ್ಲ. ಇದು ತಪ್ಪು ಮತ್ತು ಇದು ಅನಗತ್ಯವಾಗಿ ಸಂಬಂಧದಲ್ಲಿ ಕಳಹ ಉಂಟು ಮಾಡುವುದು. ಇದನ್ನು ನೀವು ಸಂಬಂಧದಿಂದ ದೂರವಿಡಬೇಕು.

ಸಂಶಯ ಪಡುವುದನ್ನು ಬಿಡಬೇಕು
ಸಂಬಂಧವೆನ್ನುವುದು ನಂಬಿಕೆ ಮತ್ತು ಗೌರವದ ಮೇಲೆ ನಿಂತಿರುವುದು. ನೀವು ಪರಸ್ಪರ ಯಾವಾಗಲೂ ಸಂಪರ್ಕದಲ್ಲಿರುವುದು ತುಂಬಾ ಒಳ್ಳೆಯದು. ಆದರೆ ಇದು ಅತಿಯಾಗಬಾರದು. ಸಂಗಾತಿಯು ನಿಮ್ಮ ಅಚ್ಚುಮೆಚ್ಚಿನವರಾಗಿರುವರು ಮತ್ತು ನಿಮಗೆ ಮೋಸ ಮಾಡುವುದಿಲ್ಲವೆಂದು ತಿಳಿದುಕೊಳ್ಳಬೇಕು. ಸಂಗಾತಿಗೆ ಪದೇ ಪದೇ ಕರೆ ಅಥವಾ ಸಂದೇಶ ಮಾಡಿ ವಿಚಾರಿಸುವುದು ಸರಿಯಾದ ಕ್ರಮವಲ್ಲ ಮತ್ತು ಇದು ಆರೋಗ್ಯಕರ ಸಂಬಂಧದ ಮೇಲೆ ಪರಿಣಾಮ ಬೀರುವುದು.

ಸಂವಹನ ಕೊರತೆಗೆ ಎಂದೂ ಆಸ್ಪದ ನೀಡಬೇಡಿ
ನಿಮ್ಮಲ್ಲಿ ಸಂವಹನದ ಕೊರೆತ ಇದ್ದಾಗ ಕೂಡ ಸಮಸ್ಯೆಗಳ ಅರ್ಥಮಾಡಿಸಿಕೊಳ್ಳುವಿಕೆ ಒಮ್ಮೊಮ್ಮೆ ಮನದಲ್ಲಿ ಹುದುಗಿರುವ ದುಃಖವಾಗುತ್ತದೆ. ಇಬ್ಬರು ಸಂಗಾತಿಯರಲ್ಲಿ ಸಂವಹನದ ಕೊರತೆ ಇದೆ ಎಂದಾದಲ್ಲಿ ಆ ಸಂಬಂಧ ಗಟ್ಟಿಯಾಗಿ ಇರುವುದಿಲ್ಲ. ಒಬ್ಬರನ್ನು ಇನ್ನೊಬ್ಬರು ಅರ್ಥಮಾಡಿಕೊಳ್ಳುವ ಸಂದರ್ಭವೇ ಇಲ್ಲಿ ಮಾಯವಾಗಿಬಿಡುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಚೆನ್ನಾಗಿ ಮಾತನಾಡದಿದ್ದಲ್ಲಿ ನಿಮ್ಮ ಸಂಬಂಧ ಹಳಸುತ್ತದೆ, ಹಾಗಾಗಿ ನಿಮ್ಮಬ್ಬರ ಸಂಬಂಧ ಹಾಲು ಜೇನಿನಂತೆ ಇರಲು ನೀವು ಬಯಸುವಿರಾದರೆ ಸಂವಹನಕ್ಕೆ ಹೆಚ್ಚಿನ ಮಹತ್ವ ನೀಡಿ.

ತಮ್ಮ ಸಂಗಾತಿಯ ಅಭಿಪ್ರಾಯಗಳನ್ನು ಸ್ವಾಗತಿಸಿ
ಒಂದು ವಿಷಯದ ಬಗ್ಗೆ ಪ್ರತಿಯೊಬ್ಬರ ಅಭಿಪ್ರಾಯವೂ ಭಿನ್ನವಾಗಿರಬಹುದು. ನಿಮ್ಮ ಸಂಗಾತಿಯ ಅಭಿಪ್ರಾಯವೂ ನಿಮ್ಮ ಅಭಿಪ್ರಾಯಕ್ಕೆ ಪೂರಕವೂ ಆಗಿರಬಹುದು, ವಿರುದ್ಧವೂ ಆಗಿರಬಹುದು. ಒಂದು ವೇಳೆ ವಿರುದ್ಧವಾಗಿದ್ದರೆ ತಕ್ಷಣ ಪ್ರತಿಕ್ರಿಯಿಸಬೇಡಿ, ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ಪರಿಗಣಿಸಿ. ಎರಡೂ ಅಭಿಪ್ರಾಯಗಳ ಸಾಧಕ ಬಾಧಕಗಳನ್ನು ಪರಾಮರ್ಶಿಸಿ. ಒಂದು ವೇಳೆ ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ಪರಾಮರ್ಶಿಸದೇ ಕಡೆಗಣಿಸಿದರೆ, ನಿಮ್ಮ ಸಂಗಾತಿ ನಿಮ್ಮನ್ನೇ ಕಡೆಗಣಿಸುವ ಅಪಾಯವಿರುತ್ತದೆ.

ಕೀಳುಭಾವನೆಗೆ ಆಸ್ಪದ ನೀಡಬೇಡಿ
ಪರಸ್ಪರರನ್ನು ಕೀಳಾಗಿ ಕಾಣುವುದು ಈ ಕ್ರಮವೇ ನಿಮ್ಮಿಬ್ಬರ ನಡುವೆ ಬೇಧವೆಣಿಸುವಂತೆ ಮಾಡುತ್ತದೆ. ಮತ್ತೊಬ್ಬರನ್ನು ಕೀಳಾಗಿ ಕಾಣುವುದು ಪ್ರೀತಿಯ ರೀತಿಯಲ್ಲ. ಇದಕ್ಕಿಂತ ಮೇಲಾಗಿ ಕೀಳಾಗಿ ಕಾಣುವ ಮನೋಭಾವನೆಯು ಪ್ರೀತಿಯ ಕೊರತೆಯನ್ನು ಎದ್ದು ಕಾಣುವಂತೆ ಮಾಡುತ್ತದೆ. ಯಾವಾಗ ತನ್ನ ಸಂಗಾತಿಯ ಕುರಿತಾಗಿ ಒಬ್ಬ ವ್ಯಕ್ತಿಯು ನಕಾರಾತ್ಮಕ ಅಂಶಗಳನ್ನು ಹುಡುಕಲು ಆರಂಭಿಸುತ್ತಾನೋ, ಆಗ ಆ ವ್ಯಕ್ತಿ ತನ್ನ ಸಂಗಾತಿಯನ್ನು ಒಪ್ಪಿಕೊಳ್ಳುವ ವಿಚಾರವನ್ನು ಮರೆತುಬಿಡುತ್ತಾನೆ ಆದರೆ ಯಶಸ್ವಿ ದಂಪತಿಗಳು ಹೀಗೆಲ್ಲ ಮಾಡುವುದಿಲ್ಲ. ಅವರು ತಮ್ಮ ಎಲ್ಲ ಇಲ್ಲಗಳ ನಡುವೆ ಪ್ರೀತಿಯ ಇರುವಿಕೆಯನ್ನು ಸಾಭೀತು ಮಾಡುತ್ತಾರೆ. ತಮ್ಮ ಸಂಗಾತಿಯ ಎಲ್ಲಾ ಕೊರತೆ, ಹೋರೆ ಮತ್ತು ಕೋರೆಗಳನ್ನು ಅವರು ಒಪ್ಪಿಕೊಂಡು, ಅವರನ್ನು ಸಹ ಒಪ್ಪಿಕೊಳ್ಳುವ ಮೂಲಕ ಅವರ ಜೊತೆಯಲ್ಲಿ ಜೀವನವನ್ನು ಸಾಗಿಸುತ್ತಾರೆ. ಇದರಿಂದ ಅವರ ನಡುವೆ ಸಂಬಂಧ ಮತ್ತಷ್ಟು ಗಾಢವಾಗುತ್ತದೆ ಮತ್ತು ಅವರ ಸಂಬಂಧ ಶಾಶ್ವತವಾಗಿರುತ್ತದೆ.

ಸಂಬಂಧದಲ್ಲಿ ಸೋಮಾರಿತನ ಬೇಡವೇ ಬೇಡ
ಸಂಬಂಧ ಎನ್ನುವುದು ಹೂವಿನ ಬೀಜವಿದ್ದಂತೆ ಅದನ್ನು ನೀವು ಚೆನ್ನಾಗಿ ಆರೈಕೆ ಮಾಡಿದಷ್ಟು ಅದು ನಿಮಗೆ ನೀಡುವ ಪ್ರತಿಫಲ ನಳನಳಿಸುವ ಹೂಗಿಡದಂತೆ ಸುಂದರವಾಗಿರುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಸಂಬಂಧದಲ್ಲಿ ಆಲಸ್ಯತನ ಮಾಡದಿರಿ. ನೀವು ಎಲ್ಲಿ ಎಡವುತ್ತಿದ್ದೀರಿ ಎಂಬುದನ್ನು ಕಂಡುಕೊಳ್ಳಿ. ನಿಮ್ಮ ಸಂಗಾತಿಯ ಹೃದಯವನ್ನು ಪ್ರೀತಿಯಿಂದ ಗೆಲ್ಲಿ ಜಯ ನಿಮಗೆ ಕಟ್ಟಿಟ್ಟ ಬುತ್ತಿಯಾಗುವುದು ಖಂಡಿತ.

ಪ್ರಾಮಾಣಿಕತೆ ಆದ್ಯತೆ ನೀಡಿ
ಪ್ರಾಮಾಣಿಕತೆ "ಸತ್ಯ ಮತ್ತು ಪ್ರಾಮಾಣಿಕತೆಯನ್ನು ಹೊಂದಿರುವವನಿಗೆ ಹೇಳಬೇಕಾದುದು ಏನೂ ಇಲ್ಲ" ಎಂದು ಹೇಳುತ್ತಾರೆ ಕನ್‍ಫ್ಯೂಶಿಯಸ್, ಹಾಗೆಯೇ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಹೊಂದಿರುವ ನಿಮ್ಮ ಸಂಗಾತಿಯ ಬಗ್ಗೆ ಇನ್ನೇನು ತಾನೇ ಹೇಳಲಾದೀತು. ಸಂಬಂಧದ ಬುನಾದಿಯೇ ಪ್ರಾಮಾಣಿಕತೆ. ನಿಮ್ಮ ಸಂಬಂಧವನ್ನು ಶಾಶ್ವತಗೊಳಿಸುವ ಮೊದಲು ಪ್ರಾಮಾಣಿಕತೆಗೆ ಆದ್ಯತೆ ನೀಡಿ..

ಗೂಢಚಾರಿಕೆ
ಸಂಗಾತಿಯು ನಿಮ್ಮ ಜತೆಯಲ್ಲಿ ಇಲ್ಲದೆ ಇರುವಾಗ ನೀವು ಗೂಢಚಾರಿಕೆ ಮಾಡುವುದು ಸಂಬಂಧದಲ್ಲಿ ಸರಿಯಾದ ವಿಧಾನವಲ್ಲ. ನೀವು ಗೂಢಚಾರಿಕೆ ಮಾಡುತ್ತಾ ಇರುವಾಗ ಸಿಕ್ಕಿ ಬೀಳಬಹುದು ಅಥವಾ ನಿಮಗೆ ಚಿಂತೆ ಮೂಡಿಸುವಂತಹ ವಿಷಯ ಸಿಗಬಹುದು. ಇದರಿಂದ ಸಂಬಂಧದಲ್ಲಿ ಹಲವಾರು ಸಮಸ್ಯೆಗಳು ಉಂಟಾಗಬಹುದು. ನೀವು ಭಾವಿಸಿರುವ ರೀತಿಯು ಬೇರೆ ಆಗಿರುವ ಕಾರಣದಿಂದ ಅದು ಸಂಬಂಧದಲ್ಲಿ ಹಲವಾರು ಸಮಸ್ಯೆ ಉಂಟು ಮಾಡಬಹುದು.

ವೈರತ್ವ ಇಟ್ಟುಕೊಳ್ಳುವುದು
ಕೆಲವೊಂದು ಸಲ ಸಂಬಂಧಲ್ಲಿ ಪರಸ್ಪರ ವೈರತ್ವ ಇಟ್ಟುಕೊಳ್ಳುವುದು. ಹಿಂದಿನ ವಿಷಯಗಳನ್ನು ಜಗಳ ಮಾಡುವುದು ಸಾಮಾನ್ಯ. ಆದರೆ ಸಂಬಂಧದಲ್ಲಿ ಇದು ನಿಷಿದ್ಧ. ವೈರತ್ವ ಇಟ್ಟುಕೊಂಡರೆ ಆಗ ನಿಮ್ಮ ಸಂಗಾತಿ ಬಗ್ಗೆ ಅಸಹಿಷ್ಣುತೆ ಭಾವನೆ ಉಂಟಾಗುವುದು. ಇಲ್ಲಿ ಪ್ರೀತಿ ಒಳಗೊಳಗೆ ಉಸಿರುಗಟ್ಟಿ ಸಾಯುವುದು ಮತ್ತು ಕ್ರೋಧ ಹೆಚ್ಚಾಗುವುದು. ಕ್ರೀಡೆಯಲ್ಲಿ ಸೋಲಿಗೆ ಪ್ರತೀಕಾರ ಸರಿ. ಆದರೆ ಜೀವನದಲ್ಲಿ ಅಲ್ಲ. ಕ್ಷಮಿಸಿ ಹಾಗೂ ಮರೆತುಬಿಡಿ. ಇದು ಜೀವನದಲ್ಲಿ ಪಾಲಿಸಬೇಕಾದ ನಿಯಮ.

ಮೋಸ
ಸಂಬಂಧಲ್ಲಿ ಮೋಸ ಮಾಡುವುದು ಅನೈತಿಕ ಹಾಗೂ ತಪ್ಪು. ಪರಸ್ಪರ ಪ್ರೀತಿಸುವುದು ಇಬ್ಬರು ಸೇರಿಕೊಂಡು ಮಾಡಿರುವ ನಿರ್ಧಾರವಾಗಿರುವುದು. ಅದೇ ಮೋಸ ಎನ್ನುವುದು ಒಬ್ಬನಿಂದ ಆಗುವಂತದ್ದಾಗಿದೆ. ಸಂಗಾತಿ ಜತೆಗಿನ ಸಂಬಂಧ ಕಳೆದುಕೊಳ್ಳಲು ಬಯಸದೆ ಇದ್ದರೆ ಆಗ ನೀವು ಮೋಸ ಮಾಡಲೇಬಾರದು. ಈ ಎಂಟು ವಿಚಾರಗಳನ್ನು ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಸುಖ, ಸಂತೋಷವಿರುವುದು. ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳು ಏನು ಎನ್ನುವುದರ ಬಗ್ಗೆ ಕಮೆಂಟ್ ಬಾಕ್ಸ್‌ನಲ್ಲಿ ತಿಳಿಸಲು ಮರೆಯಬೇಡಿ. ಅದೇ ರೀತಿ ನಿಮ್ಮ ಪ್ರೀತಿಪಾತ್ರರ ಜತೆಗೆ ಇದನ್ನು ಶೇರ್ ಮಾಡಿಕೊಳ್ಳಿ.

English summary

Things You Need To Strictly Avoid In A Healthy Relationship

There are avoidable and unavoidable circumstances in a relationship. The avoidable circumstances are the ones that make a great deal in the relationship if not avoided. here we lists down all the unnecessary circumstances that should be avoided in order to aim for harmony in a relationship.
X
Desktop Bottom Promotion