For Quick Alerts
ALLOW NOTIFICATIONS  
For Daily Alerts

ಅತ್ತೆ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ತಾಯಿ ನೆನಪು ಬರುವುದು ಈ ಸಂದರ್ಭಗಳಲ್ಲಿ…

|

ಹೆಣ್ಣು ಮಕ್ಕಳು ಹೆಚ್ಚಾಗಿ ತಾಯಿಯನ್ನು ಅತಿಯಾಗಿ ಪ್ರೀತಿಸುತ್ತಾ ಇರುತ್ತಾರೆ ಎನ್ನುವ ಮಾತು ಇದೆ. ಯಾಕೆಂದರೆ ಬಾಲ್ಯದಿಂದಲೂ ಹೆಣ್ಣು ಮಕ್ಕಳು ತಾಯಿಯ ಆರೈಕೆಯಲ್ಲಿ ಬೆಳೆದ ಬಳಿಕ ಮದುವೆಯಾದ ಮೇಲೆ ಪತಿ ಮನೆಯಲ್ಲಿ ಹೇಗಿರಬೇಕು ಮತ್ತು ಅಲ್ಲಿರುವಂತಹ ಜನರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದು ತಾಯಿ ಮಾತ್ರ ಹೇಳಿಕೊಡುವಳು. ತಾಯಿಯಿಲ್ಲದ ಹೆಣ್ಣು ಮಕ್ಕಳಿಗೆ ಇಂತಹ ಭಾಗ್ಯವು ಇರದು. ಕೆಲವು ಹೆಣ್ಣು ಮಕ್ಕಳು ತಾಯಿಯಿಲ್ಲದೆ ತಂದೆ ಅಥವಾ ಸಂಬಂಧಿಕರ ಪೋಷಣೆಯಲ್ಲಿ ಬೆಳೆದಿರುವಳು. ಆಕೆಗೆ ತನ್ನ ತಾಯಿಯ ಅನುಪಸ್ಥಿತಿ ಮಾತ್ರ ಅತಿಯಾಗಿ ಕಾಡುವುದು.

ಅದರಲ್ಲೂ ಮುಖ್ಯವಾಗಿ ಪ್ರತೀ ಹೆಣ್ಣಿಗೂ ತಾಯಿ ಮನೆಯನ್ನು ಬಿಟ್ಟು ಪತಿ ಮನೆಗೆ ಹೋಗುವ ವೇಳೆ ಆಕೆಗೆ ತಾಯಿಯ ನೆನಪು ಪದೇ ಪದೇ ಬರುತ್ತಲಿರುವುದು. ಮದುವೆ ಎನ್ನುವುದು ಹೆಣ್ಣಿನ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ತರುವುದು. ಆಕೆ ತನಗೆ ಅಪರಿಚಿತವಾಗಿರುವಂತಹ ಮನೆಗೆ ಹೋಗಿ ಅಲ್ಲಿ ಹೊಸ ಜೀವನ ನಡೆಸಬೇಕಾಗಿದೆ. ಎಲ್ಲರಿಗೂ ಹೊಂದಿಕೊಳ್ಳಬೇಕು.

ತಮ್ಮ ಮನೆಯಲ್ಲಿ ತುಂಬಾ ಆರಾಮವಾಗಿ, ತಾಯಿಯೊಂದಿಗೆ ಯಾವಾಗಲೂ ಬೆರೆತುಕೊಂಡು ಇದ್ದ ಹೆಣ್ಣು ಮಕ್ಕಳಿಗೆ ಹೊಸ ಮನೆ ಎನ್ನುವುದು ದೊಡ್ಡ ಸವಾಲು. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ ಈ ಹಂತವು ತುಂಬಾ ಕುತೂಹಲಕಾರಿ ಹಾಗೂ ಅಚ್ಚರಿಯ ಘಟ್ಟವಾಗಿರುವುದು. ಅದಾಗ್ಯೂ, ಕೆಲವೊಂದು ಸಂದರ್ಭದಲ್ಲಿ ಆಕೆಗೆ ತನ್ನ ತಾಯಿಯ ಅನುಪಸ್ಥಿತಿಯು ಅತಿಯಾಗಿ ಕಾಡುವುದು. ಇಂತಹ ಸಂದರ್ಭಗಳು ಯಾವುದು ಎಂದು ನೀವು ಲೇಖನದಲ್ಲಿ ಮುಂದೆ ಓದುತ್ತಾ ತಿಳಿಯಿರಿ.

ತಾಯಿಯ ಮಾಡಿದ ಅಡುಗೆ

ತಾಯಿಯ ಮಾಡಿದ ಅಡುಗೆ

ಅತ್ತೆ ಮನೆಯಲ್ಲಿ ಎಷ್ಟೇ ರುಚಿಕರವಾಗಿರುವಂತಹ ಆಹಾರ ಸಿಕ್ಕಿದರೂ ಅದು ತಾಯಿ ಮಾಡಿದಂತಹ ಅಡುಗೆಗೆ ಯಾವತ್ತೂ ಸಾಟಿಯಾಗದು. ತಾಯಿ ಮಾಡಿದ ಅಡುಗೆಗೆ ನಾಲಗೆಯು ತುಂಬಾ ಹೊಂದಿಕೊಂಡಿತ್ತು ಮತ್ತು ಆಕೆಯ ಮಾಡಿದ ಅಡುಗೆಯು ಇನ್ನು ಪ್ರತಿನಿತ್ಯ ತಿನ್ನಲು ಸಿಗುವುದಿಲ್ಲವೆಂದು ನಿಮಗೆ ಅರ್ಥ ಆಗಿರುವುದು. ಆಕೆ ಮಾಡಿದಂತಹ ಕೆಲವೊಂದು ಅಡುಗೆಗಳನ್ನು ನೀವು ಇಷ್ಟ ಪಡದೇ ಇದ್ದರೂ ಈಗ ಮಾತ್ರ ಅದು ನಿಮ್ಮನ್ನುಕಾಡುತ್ತಲಿರುವುದು. ಈಗ ಮತ್ತೆ ತವರಿಗೆ ಹೋಗಿ ತಾಯಿ ಮಾಡಿದ ಅಡುಗೆ ರುಚಿ ನೋಡಬೇಕೆಂದು ಮನಸ್ಸು ಬಯಸುತ್ತಾ ಇರುವುದು.

ನಿಮ್ಮ ವಸ್ತುಗಳು ಪತ್ತೆಯಾಗದೆ ಇದ್ದಾಗ…

ನಿಮ್ಮ ವಸ್ತುಗಳು ಪತ್ತೆಯಾಗದೆ ಇದ್ದಾಗ…

ತವರಿನಲ್ಲಿ ಯಾವಾಗಲೂ ನಿಮ್ಮ ಫೇವರಿಟ್ ಚಾ ಅಥವಾ ಲಿಪ್ ಸ್ಟಿಕ್ ಪತ್ತೆ ಆಗದೆ ಇದ್ದಾಗ ನೀವು ಮೊದಲು ಕರೆಯುತ್ತಾ ಇದ್ದದ್ದು ನಿಮ್ಮ ತಾಯಿಯನ್ನು. ಆಕೆಗೆ ಅದು ಎಲ್ಲಿರುತ್ತದೆ ಎಂದು ತಿಳಿದಿರುತ್ತದೆ ಮತ್ತು ಕೆಲವೇ ನಿಮಿಷಗಳಲ್ಲಿ ಆಕೆ ಅದನ್ನು ಹುಡುಕಿ ನಿಮ್ಮ ಕೈಯಲ್ಲಿ ಇಡುತ್ತಲಿದ್ದಳು. ನಾಪತ್ತೆ ಯಾಗಿರುವಂತಹ ವಸ್ತುಗಳನ್ನು ಪತ್ತೆ ಮಾಡುವುದರಲ್ಲಿ ತಾಯಿಯಂದಿರಿಗೆ ವಿಶೇಷ ಪ್ರತಿಭೆಯಿದೆ. ಆದರೆ ಮದುವೆ ಬಳಿಕ ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಮತ್ತು ನಿಮ್ಮ ಕಳೆದು ಹೋದ ಯಾವುದೇ ವಸ್ತುಗಳನ್ನು ಹುಡುಕಲು ಯಾರಾದರೂ ನೆರವಿಗೆ ಬರಬಹುದು ಎಂದು ನೀವು ಆಲೋಚನೆ ಮಾಡಬೇಡಿ.

ನೀವು ಅನಾರೋಗ್ಯಕ್ಕೆ ಒಳಗಾದಾಗ…

ನೀವು ಅನಾರೋಗ್ಯಕ್ಕೆ ಒಳಗಾದಾಗ…

ನೀವು ಅನಾರೋಗ್ಯಕ್ಕೆ ಒಳಗಾದಾಗ ಪತಿ ಹಾಗೂ ಅತ್ತೆ ನಿಮ್ಮ ಆರೈಕೆ ಮಾಡಬಹುದು. ಆದರೆ ನಿಮ್ಮ ತಾಯಿಯ ಆರೈಕೆ ಹಾಗೂ ಕಾಳಜಿಗೆ ಯಾವುದೇ ಪರ್ಯಾಯವಿದೆಯಾ? ಖಂಡಿತವಾಗಿಯೂ ಇಲ್ಲ, ನಿಮ್ಮ ತಾಯಿಯು ಹತ್ತಿರವಿರುವಾಗ ನೀವು ಅನಾರೋಗ್ಯಕ್ಕೆ ಒಳಗಾಗಿದ್ದರೆ ಆಗ ನಿಮಗೆ ಬೆರಳನ್ನು ಅಲುಗಾಡಿಸಲು ಬಿಡಲ್ಲ. ನಿಮಗೆ ಏನು ಬೇಕೆಂದು ಆಕೆಗೆ ತಿಳಿದಿರುತ್ತದೆ. ನೀವು ಹಸಿದಿರುವಾಗ ಬೇಕಾಗುವ ಆಹಾರ ಮತ್ತು ಆರೈಕೆಗೆ ಬೇಕಾದ ಸೂಪ್ ಪ್ರತಿಯೊಂದು ನಿಮಗೆ ಬೇಕಿದ್ದಾಗ ಸಿಗುವುದು. ಇದರೊಂದಿಗೆ ತಲೆನೋವಿದ್ದರೆ ಆಗ ಆಕೆಯೇ ಮಸಾಜ್ ಮಾಡುತ್ತಿದ್ದಳು.

ಅಲಾರಂ ಸದ್ದಿಗೆ ನೀವು ಎಚ್ಚರಗೊಂಡಾಗ…

ಅಲಾರಂ ಸದ್ದಿಗೆ ನೀವು ಎಚ್ಚರಗೊಂಡಾಗ…

ಬೆಳಗ್ಗೆ ನೀವು ತಡವಾಗಿ ಏಳುವವರು ಆಗಿದ್ದರೆ ಆಗ ನೀವು ಖಂಡಿತವಾಗಿಯೂ ತಾಯಿಯ ದೊಡ್ಡ ಸ್ವರ ಕೇಳಿಯೇ ಎದ್ದವರು ಆಗಿರುತ್ತೀರಿ. ಅತ್ತೆ ಮನೆಯಲ್ಲಿ ನೀವು ಅಲರಾಂ ಸದ್ದಿಗೆ ಎದ್ದಾಗ ತವರಿನ ನೆನಪು ಬರುವುದು. ಯಾಕೆಂದರೆ ಅಲ್ಲಿ ತಾಯಿ ನಿಮ್ಮನ್ನು ನಿದ್ರೆಯಿಂದ ಎಬ್ಬಿಸಲು ಬಂದಾಗ ಇನ್ನೈದು ನಿಮಿಷ ಮಲಗಿರುತ್ತೇನೆ ಎಂದು ಹೇಳಿರುವುದು ಖಂಡಿತವಾಗಿಯೂ ನೆನಪಾಗುವುದು. ಸಮಯ ಹೇಗೆ ಬದಲಾಗುತ್ತದೆ ನೋಡಿ...

English summary

things that make a woman miss her mother after getting married

Needless to say, marriage is a life-changing decision for everyone. And let’s be honest—things get a little more challenging for a woman who move out from the comfort of her home and needs to adjust to the ways of a new family. For a newly married woman, this new phase of life is full of excitement and surprises. However, there will also be moments that will make her miss her parents, especially her mother.
Story first published: Wednesday, December 19, 2018, 13:32 [IST]
X
Desktop Bottom Promotion