For Quick Alerts
ALLOW NOTIFICATIONS  
For Daily Alerts

ವೈವಾಹಿಕ ಜೀವನದಲ್ಲಿ ಪ್ರೀತಿಯೇ ಇಲ್ಲವೆನ್ನುವುದಕ್ಕೆ ಕಾರಣಗಳು…

By Hemanth
|

ವೈವಾಹಿಕ ಜೀವನವೆನ್ನುವುದು ಪ್ರೀತಿ, ನಂಬಿಕೆ ಮೇಲೆ ನಿಂತಿರುವುದು. ಇದರಲ್ಲಿ ಒಂದು ಕಡಿಮೆಯಾದರೂ ವೈವಾಹಿಕ ಜೀವನದಲ್ಲಿ ಅಲ್ಲೋಲಕಲ್ಲೋಲ ಉಂಟಾಗುವುದು. ಪ್ರೀತಿ ಇಲ್ಲದೇ ಇರುವಂತಹ ವೈವಾಹಿಕ ಜೀವನವು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಹಲವಾರು ವರ್ಷಗಳ ಕಾಲ ಜತೆಯಾಗಿ ಜೀವನ ಸಾಗಿಸುತ್ತಿರುವಾಗ ಸಂಬಂಧವು ಬೆಳೆಯುವುದು ಮತ್ತು ಭಾವನೆಗಳು ಕೂಡ ಗಟ್ಟಿಯಾಗುತ್ತಾ ಹೋಗುವುದು. ಆದರೆ ಕೆಲವೊಂದು ಸಂದರ್ಭಗಳಲ್ಲಿ ಪ್ರೀತಿಯು ನಿಧಾನವಾಗಿ ಕಡಿಮೆಯಾಗುತ್ತಾ ಹೋಗುವುದು.

ಪತಿ ಮತ್ತು ಪತ್ನಿಯ ಸಂಬಂಧವು ಸರಿಯಾಗಿಲ್ಲವೆಂದು ಸುಲಭವಾಗಿ ಒಪ್ಪಿಕೊಳ್ಳಲು ಆಗಲ್ಲ. ಇದು ಒಂದು ದಿನದಲ್ಲಿ ಆಗಿರುವಂತಹದ್ದಲ್ಲ. ಇವುಗಳ ಕೆಲವು ಲಕ್ಷಣಗಳು ಸೂಕ್ಷ್ಮವಾಗಿದ್ದರೆ, ಇನ್ನು ಕೆಲವು ಕಣ್ಣುಕುಕ್ಕುವಂತೆ ಇರುವುದು. ವೈವಾಹಿಕ ಜೀವನದಲ್ಲಿ ಪ್ರೀತಿಯು ಕಡಿಮೆಯಾಗುತ್ತಿದೆ ಎಂದು ನಿಮಗೆ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೆ ಆಗ ನೀವು ಕಳೆದುಹೋಗಿರುವಂತಹ ಪ್ರೀತಿಯನ್ನು ಮರಳಿ ಪಡೆಯಲು ಪ್ರಯತ್ನಿಸಬೇಕು. ನಿಮ್ಮ ವೈವಾಹಿಕ ಜೀವನದಲ್ಲಿ ಸಂಪೂರ್ಣವಾಗಿ ತಪ್ಪು ಎಂದು ಅನಿಸುವಂತಹ ಕೆಲವೊಂದು ಲಕ್ಷಣಗಳು ಇಲ್ಲಿವೆ...

signs you are in a loveless marriage

ನಾವು' ಎನ್ನುವುದಕ್ಕಿಂತ ನಾನು'ಎನ್ನುವುದು

ವೈವಾಹಿಕ ಜೀವನದಲ್ಲಿ ನೀವು ಆಲೋಚನೆ ಮಾಡುವಾಗ ದಂಪತಿಯಂತೆ ಇರಬೇಕು. ಇಲ್ಲಿ ನಾನು ಎನ್ನುವ ಬದಲು ನಾವು ಎನ್ನುವುದು ಇರಬೇಕು. ಆದರೆ ಭಾವನೆಗಳು ಕಡಿಮೆಯಾಗುತ್ತಾ ಬಂದಾಗ ನಿಮ್ಮ ಬಗ್ಗೆ ಮಾತ್ರ ಯೋಚಿಸಲು ಆರಂಭಿಸುತ್ತೀರಿ ಮತ್ತು ಇಬ್ಬರು ಕೂಡ ಸ್ವಾರ್ಥಿಗಳಾದಾಗ ದಾಂಪತ್ಯದ ಪದವೇ ಇರಲ್ಲ. ಹೀಗೆ ಆಗುತ್ತಲಿದ್ದರೆ, ನೀವು ಒಬ್ಬರ ಬಗ್ಗೆಯೇ ಯೋಚನೆ ಮಾಡುತ್ತಲಿದ್ದರೆ ಆಗ ನೀವು ಸ್ವಲ್ಪ ಇದನ್ನು ಅಲ್ಲಿಗೆ ನಿಲ್ಲಿಸಿ, ಬಳಿಕ ನಿಮ್ಮ ತಲೆಯಲ್ಲಿ ಏನು ಓಡುತ್ತಿದೆ ಎಂದು ಮರುಚಿಂತಿಸಿ.

ಸಂಬಂಧದಲ್ಲಿ ಈ ಒಂದು ಮಾತು ನೆನೆಪಿಡಿ- ನಿಮ್ಮ ಸುತ್ತಲೂ ಧನಾತ್ಮಕ ವ್ಯಕ್ತಿಗಳು, ಧನಾತ್ಮಕ ಸ್ಥಳಗಳು ಮತ್ತು ಜನಗಳನ್ನು ಇರಿಸಿಕೊಳ್ಳುವುದು ಉತ್ತಮ. ಆಗ ನಿಮ್ಮ ಪದಗಳು, ಕೆಲಸಗಳು ಮತ್ತು ಆಲೋಚನೆಗಳಲ್ಲಿ ಧನಾತ್ಮಕತೆ ಬರುತ್ತದೆ. ಯಾವಾಗ ನಿಮ್ಮ ಜೀವನದಲ್ಲಿ ಧನಾತ್ಮಕತೆಯು ಬಂದು ನಿಲ್ಲುತ್ತದೆಯೋ, ಆಗ ನಿಮ್ಮ ಸಂಬಂಧದಲ್ಲಿ ಋಣಾತ್ಮಕತೆ ಇರುವುದಿಲ್ಲ. ಆಗ ನೀವು ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿರಿಸಿಕೊಳ್ಳಬೇಕೆಂಬ ಪ್ರಮೇಯವೇ ಬರುವುದಿಲ್ಲ.

ಸಂಗಾತಿ ಮೇಲೆ ಕೋಪಗೊಳ್ಳುವುದು ಕಡಿಮೆಯಾಗಿರುವುದು

ಪ್ರೀತಿಯಂತೆ ಕೋಪ ಕೂಡ ಒಂದು ಬಲವಾಗಿರುವ ಭಾವನೆ ಮತ್ತು ನಮಗೆ ಬೇಕಾಗಿರುವ ವ್ಯಕ್ತಿಯ ಮೇಲೆ ನಾವು ತುಂಬಾ ಕೋಪಗೊಳ್ಳುವುದು ಸಹಜ. ಸಂಗಾತಿಯ ಜತೆಗೆ ನೀವು ಸಣ್ಣ ಮಟ್ಟದಲ್ಲಿ ಜಗಳವಾಡುವುದನ್ನು ನಿಲ್ಲಿಸಿದ್ದರೆ ಆಗ ಇದು ಒಳ್ಳೆಯ ಲಕ್ಷಣವೆಂದು ನೀವು ಭಾವಿಸಬೇಡಿ. ಇದು ಯಾಕೆ ಹೀಗಾಗಿದೆ ಎಂದು ನೀವು ತಿಳಿಯಲು ಪ್ರಯತ್ನಿಸಿ. ಆರೋಗ್ಯಕಾರಿ ಜಗಳವು ತುಂಬಾ ಒಳ್ಳೆಯದು. ದಂಪತಿಯು ಇದನ್ನು ತುಂಬಾ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬಹುದು. ನಿಮ್ಮ ವೈವಾಹಿಕ ಜೀವನದಲ್ಲಿರುವ ಮೌನವನ್ನು ಮುರಿಯಲು ಪ್ರಯತ್ನಿಸಿ.

ಇನ್ನು ಚರ್ಚೆ ಮಾಡುವುದರಿಂದ ಸಮಸ್ಯೆಗಳು ಬಗೆಹರಿಯುತ್ತವೆ ನಂಬಿ. ಇಬ್ಬರೂ ಕುಳಿತು ಮೊದಲು ಸಮಸ್ಯೆಯ ಬಗ್ಗೆ ಮಾತನಾಡಿ, ಅದಕ್ಕೆ ಪರಿಹಾರವನ್ನು ಹುಡುಕಿ. ಒಂದು ವೇಳೆ ನಿಮ್ಮ ಉದ್ವೇಗವನ್ನು ಸುಮ್ಮನೆ ನಿಮ್ಮ ಸಂಗಾತಿಯ ಮೇಲೆ ಹೇರುವ ಮನೋಭಾವ ನಿಮಗಿದ್ದಲ್ಲಿ, ಅದನ್ನೆ ಅವರು ಸಹ ತಿರುಗಿ ನೀಡುತ್ತಾರೆ ಎಂಬುದನ್ನು ಮರೆಯಬೇಡಿ. ಇದರಿಂದ ಸಮಸ್ಯೆ ಬಗೆ ಹರಿಯುವುದಿಲ್ಲ. ಆದ್ದರಿಂದ ನಿಮ್ಮ ಭಾವನೆಗಳನ್ನು ನಿಭಾಯಿಸುವ ಬಗೆಯನ್ನು ಮೊದಲು ತಿಳಿದುಕೊಳ್ಳಿ. ಕೋಪವನ್ನು ನಿಭಾಯಿಸುವುದ ಒಂದು ಸಮರ್ಥ ಕಲೆ ಎಂಬುದನ್ನು ತಿಳಿದುಕೊಳ್ಳಿ.

ಇದರ ಜೊತೆಗೆ ಇವುಗಳು ನಮಗೆ ಬಂದಾಗ ಅದಕ್ಕೆ ಆರೋಗ್ಯಕರವಾಗಿ ಸ್ಪಂದಿಸುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಅದೆಲ್ಲಕ್ಕಿಂತ ಮುಖ್ಯವಾಗಿ ನಿಮಗೆ ಎಂತಹ ಸಂದರ್ಭದಲ್ಲಿ ಕೋಪ ಬರುತ್ತದೆ ಎಂಬುದನ್ನು ನಿಮ್ಮ ಸಂಗಾತಿಗೆ ಮನವರಿಕೆ ಮಾಡಿಕೊಡಿ. ಇದನ್ನು ನಿಯಂತ್ರಿಸಿದರೆ ನೀವು ಕೋಪಕ್ಕೆ ತುತ್ತಾಗುವ ಸಂಭವವೇ ಇರುವುದಿಲ್ಲ. ಹೀಗೆ ಜಾಣತನದಿಂದ ಕೋಪವನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಿ. ಸಾತ್ವಿಕವಾದ ಕೋಪ ಒಳ್ಳೆಯದೇ, ಆದರೆ ಪದೇ ಪದೇ ಸಣ್ಣ ಸಣ್ಣ ವಿಚಾರಕ್ಕೂ ಕೋಪಿಸಿಕೊಳ್ಳುವುದು ಒಳ್ಳೆಯದಲ್ಲ. ಎಲ್ಲದಕ್ಕೂ ಕೋಪಿಸಿಕೊಂಡರೆ ಆ ಕೋಪಕ್ಕೆ ಅರ್ಥವೇ ಇರುವುದಿಲ್ಲ.

ನಿಮ್ಮಿಬ್ಬರಿಗೂ ಒಬ್ಬರೇ ಸ್ನೇಹಿತರೆನ್ನುವವರು ಇಲ್ಲ

ಮದುವೆಯಾದ ಆರಂಭದಲ್ಲಿ ನೀವು ಸಾಮಾಜಿಕವಾಗಿ ಬೆರೆಯಲು ಆರಂಭಿಸಿದಾಗ ಇಬ್ಬರು ಕೂಡ ಇದನ್ನು ಒಪ್ಪಿಕೊಳ್ಳುತ್ತಿದ್ದೀರಲ್ಲವೇ? ಪುರುಷರು ಸಾಮಾಜಿಕ ಪ್ರಾಣಿ ಮತ್ತು ಸಮಾನ ಭಾವನೆಗಳನ್ನು ಹೊಂದಿರುವವರ ಜತೆಗೆ ನಾವು ಬೆರೆಯುತ್ತೇವೆ. ಸಂಗಾತಿಗಳು ಸಭೆಗಳು ಮತ್ತು ಜನರೊಂದಿಗೆ ಸಮಯ ಕಳೆಯುತ್ತಲಿದ್ದರೆ, ಇವರು ಸಮಾನ ಸ್ನೇಹಿತರಲ್ಲದೆ ಇದ್ದರೆ ಆಗ ಏನೋ ಸರಿಯಿಲ್ಲವೆಂದು ಹೇಳಬಹುದು. ಹೆಚ್ಚಿನ ಜನರನ್ನು ಭೇಟಿಯಾಗಿ ಮತ್ತು ನಿಮಗಿಬ್ಬರಿಗೂ ಹೊಂದಿಕೊಳ್ಳುವ ಸ್ನೇಹಿತರನ್ನು ಸಂಪಾದಿಸಿ.

ಪರಸ್ಪರರ ಕುಟುಂಬದವರೊಂದಿಗೆ ಮಾತನಾಡುವುದು ವಿರಳ

ಮದುವೆಯಾದ ಬಳಿಕ ನೀವು ಒಂದು ಕುಟುಂಬದ ಮಾತ್ರವಲ್ಲ, ಎರಡು ಕುಟುಂಬದ ಭಾಗವಾಗಿರುವಿರಿ. ನೀವು ಅವರೊಂದಿಗೆ ಮಾತನಾಡದೆ ದೂರ ಉಳಿದರೆ ಆಗ ನೀವು ಆತ/ಆಕೆಯ ಕುಟುಂಬದಿಂದ ದೂರವಾಗುತ್ತಿದ್ದೀರಿ ಎಂದು ಹೇಳಬಹುದು. ಹೀಗೆ ಆಗುತ್ತಲಿದ್ದರೆ ಆಗ ನೀವು ಅತ್ತೆ ಮತ್ತು ಮಾವನ ಜತೆಗೆ ಮಾತನಾಡಿ.

ದೀರ್ಘಕಾಲದಿಂದ ಪ್ರವಾಸಕ್ಕೆ ಹೋಗದೇ ಇರುವುದು

ಪ್ರವಾಸವು ಎರಡು ವ್ಯಕ್ತಿಗಳನ್ನು ತುಂಬಾ ಹತ್ತಿರಕ್ಕೆ ತರುವುದು. ಇದರಿಂದಾಗಿ ಹೆಚ್ಚಿನ ಜನರು ಪ್ರವಾಸಕ್ಕೆ ಹೋಗಲು ಇಷ್ಟಪಡುವುದು. ಹೊಸ ಪ್ರದೇಶಗಳಿಗೆ ಹೋಗುವುದು, ಹೊಸ ಅಡುಗೆಯ ರುಚಿ ಮತ್ತು ಹೊಸ ಸಂಸ್ಕೃತಿ ನೋಡುವುದು ಇದರಲ್ಲಿ ಪ್ರಮುಖವಾಗಿದೆ. ಇದನ್ನು ನೀವು ನಿಲ್ಲಿಸಿದರೆ ಆಗ ನಿಮ್ಮ ವೈವಾಹಿಕ ಜೀವನದಲ್ಲಿ ಏನೋ ಸರಿಯಾಗಿಲ್ಲವೆಂದು ಹೇಳಬಹುದು. ವಾರಾಂತ್ಯದಲ್ಲಿ ತಿರುಗಾಡಲು ಹೋಗುವುದು ಮತ್ತು ವ್ಯಸ್ತ ಮತ್ತು ಒತ್ತಡದ ಜೀವನದಿಂದ ಹೊರಬಂದು ನಿಮ್ಮ ಸಂಗಾತಿ ಜತೆಗೆ ಸಮಯ ಕಳೆಯುವುದು ಮುಖ್ಯವಾಗಿದೆ.

ನೀವು ಮಾಡುವಂತಹ ಯಾವುದಾದರೂ ಕೆಲಸವನ್ನು ನಿಮ್ಮ ಪತಿ ಅಥವಾ ಪತ್ನಿ ಇಷ್ಟಪಡದೇ ಇದ್ದರೆ ಆಗ ನಿಮಗೆ ಬೇಸರವಾಗುವುದಿಲ್ಲವೇ? ಸಂಗಾತಿಯೊಂದಿಗಿನ ಭಾವನೆಗಳು ನಿಂತುಹೋಗಿದೆ ಮತ್ತು ಸಂಗಾತಿ ಬಗ್ಗೆ ಕಾಳಜಿ ವಹಿಸುತ್ತಿಲ್ಲವೆಂದು ನೀವು ಹೇಳಬಹುದು. ನೀವು ಹೀಗೆ ಮಾಡುತ್ತಲಿದ್ದರೆ ಆಗ ಸಂಗಾತಿ ಮೇಲಿನ ಪ್ರೀತಿ ಯಾಕೆ ಕಡಿಮೆಯಾಗುತ್ತಿದೆ ಎಂದು ತಿಳಿಯಿರಿ. ಇದಕ್ಕೆ ಉತ್ತರ ಕಂಡುಕೊಳ್ಳಲು ಅಷ್ಟು ಸುಲಭವೇನಲ್ಲ. ಆದರೆ ಪ್ರಯತ್ನಪಟ್ಟರೆ ನಿಮಗೆ ಹೊಸ ಜೀವನ ಸಿಗಬಹುದು.

English summary

signs you are in a loveless marriage

Can a marriage survive without love? That’s not easy to answer. As a relationship develops and we spend years together, our emotions evolve too. Most of the times, the emotions grow stronger but there are also instances when love starts to fade, slowly. It’s not easy to accept that the beautiful relationship between a husband and a wife can go wrong. It does not happen suddenly or overnight. There are signs, some subtle and others quite glaring. When you see these signs of a loveless marriage, it’s time to recreate the lost magic and get the love back in your life.
X
Desktop Bottom Promotion