For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಂಗಾತಿಗಳಿಗೆ ಟಿಪ್ಸ್

|

ತಮ್ಮ ಸಂಬಂಧದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಹಾಗೂ ಬಾಂಧವ್ಯ ಗಟ್ಟಿಗೊಳಿಸಲು ಸಂಗಾತಿಗಳು ಕೆಲ ಪ್ರಮುಖ ಟಿಪ್ಸ್‌ಗಳನ್ನು ತಿಳಿದುಕೊಳ್ಳುವುದು ಅಗತ್ಯ. ದಿನನಿತ್ಯ ಜೀವನದಲ್ಲಿ ಎದುರಾಗುವ ಹಲವಾರು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಲು ಸಂಗಾತಿಗಳಿಗೆ ಈ ಟಿಪ್ಸ್‌ಗಳು ಪ್ರಯೋಜನಕಾರಿಯಾಗಿವೆ. ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಆದರೆ ಸಂಬಂಧಗಳಲ್ಲಿ ಸಮಸ್ಯೆಗಳು ತಲೆದೋರಿದಾಗ ಅವುಗಳನ್ನು ಗಂಭೀರತೆಯಿಂದ ನಿಭಾಯಿಸಬೇಕಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಯಾವುದೋ ಸಣ್ಣ ಕಾರಣ ಅಥವಾ ಭಿನ್ನಾಭಿಪ್ರಾಯದಿಂದ ಉಂಟಾದ ಸಮಸ್ಯೆ ಸಂಬಂಧವನ್ನು ಹಾಳುಗೆಡಹುವ ಅಥವಾ ಸಂಗಾತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವಿಸಲು ಯಾರೂ ಬಯಸುವುದಿಲ್ಲ. ಮಧುರವಾದ ಸಂಬಂಧದಲ್ಲಿ ಸಮಸ್ಯೆ ಉಂಟಾಗುವುದನ್ನು ಯಾರೂ ಇಷ್ಟ ಪಡಲಾರರು. ಹೀಗಾಗಿ ಸಂಬಂಧದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಹಾಗೂ ಬಾಂಧವ್ಯ ಉಳಿಸಿಕೊಳ್ಳಲು ಸೂಕ್ಷ್ಮ ಒಳಮರ್ಮಗಳು ಹಾಗೂ ಕೆಲ ಟಿಪ್ಸ್‌ಗಳನ್ನು ಅರಿತುಕೊಳ್ಳುವುದು ಅವಶ್ಯವಾಗಿದೆ.

relationship tips

ಪರಿಪೂರ್ಣ ಬಾಂಧವ್ಯ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದ ವಿಚಾರವಾಗಿದೆ. ನಾವು ಸಂಬಂಧಗಳನ್ನು ನಿಭಾಯಿಸುವ ರೀತಿಯಲ್ಲೇ ಎಲ್ಲರೂ ಮಾಡಬೇಕೆಂದಿಲ್ಲ. ಆದರೆ ಕೆಲವು ಸಾಮಾನ್ಯ ಕ್ರಮಗಳ ಮೂಲಕ ಸಂಬಂಧಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಸಾಧ್ಯವಿದೆ. ಸಂಬಂಧ ಹಳೆಯದಾಗಿರಲಿ ಅಥವಾ ಹೊಸದಾಗಿರಲಿ ಈ ಟಿಪ್ಸ್‌ಗಳು ಎಲ್ಲರಿಗೂ ಉಪಯುಕ್ತವಾಗಿವೆ. ಸಂಗಾತಿಗಳು ತಮ್ಮ ಮಧ್ಯದ ಬಾಂಧವ್ಯವನ್ನು ಸ್ಥಿರವಾಗಿ ಕಾಪಾಡಿಕೊಳ್ಳಲು ಬೇಕಾಗುವ ಪ್ರಮುಖ ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ.

ಸಂಬಂಧದ ಮಿತಿಯನ್ನು ಅರಿತುಕೊಳ್ಳುವುದು

ನಮ್ಮ ಸಂಬಂಧದ ಮಿತಿಯನ್ನು ಮೊದಲು ಅರಿತುಕೊಳ್ಳುವುದು ಅವಶ್ಯವಾಗಿದೆ. ನಿಮ್ಮ ಸಂಗಾತಿಗಾಗಿ ಎಲ್ಲವನ್ನೂ ನೀವು ಮಾಡಲು ಬಯಸದೆ ಇರಬಹುದು. ಆದರೆ ಸಂದರ್ಭ ಬಂದಾಗ ಸಂಗಾತಿಗೆ ಬೇಕಾದ್ದೆಲ್ಲವನ್ನೂ ಮಾಡಬೇಕಾಗುತ್ತದೆ. ಅದೇ ರೀತಿ ಕೆಲವೊಮ್ಮೆ ಪರಿಸ್ಥಿತಿಯನ್ನು ಅವಲೋಕಿಸಿ ನಕಾರಾತ್ಮಕವಾಗಿಯೂ ವರ್ತಿಸಬೇಕಾಗುತ್ತದೆ. ಕೆಲವು ಬಾರಿ 'ಇಲ್ಲ' ಎನ್ನುವುದು ಸರಿಯಾಗುತ್ತದೆ. ನಿಮ್ಮ ಸಂಗಾತಿ ಬಯಸಿದ್ದು ಅವಶ್ಯಕವಿಲ್ಲ ಎಂಬುದು ನಿಜವಾಗಿದ್ದರೆ ನೀವು 'ಇಲ್ಲ' ಎಂದು ಹೇಳಬಹುದು. ಇದು ನಿಮ್ಮ ಮೇಲೆ ಸಂಗಾತಿಯ ಪ್ರೀತಿಯನ್ನು ಕಡಿಮೆ ಮಾಡಲಾರದು. ಇಷ್ಟಾದರೂ ನಿಮ್ಮ ಸಂಗಾತಿಯು ನಿಮ್ಮಿಂದ ದೂರವಾಗಲು ಬಯಸಿದರೆ ಅಂಥ ಸಂಬಂಧ ಮುಂದುವರಿಸುವುದಕ್ಕಿಂತ ಅವರನ್ನು ಅವರಷ್ಟಕ್ಕೆ ಬಿಟ್ಟು ಬಿಡುವುದೇ ವಾಸಿ.

ಸಂಗಾತಿಯನ್ನು ಗೌರವಿಸಿ ಹಾಗೂ ಕಾಳಜಿ ವಹಿಸಿ

ಕೆಲ ಸಂದರ್ಭಗಳಲ್ಲಿ ಭಾವನೆಗಳ ತೀವ್ರತೆಯಿಂದ ಹೇಳಬಾರದ್ದನ್ನು ಹೇಳಿ ಬಿಡುವುದು ಮಾನವ ಸಹಜ ಗುಣವಾಗಿದೆ. ವಾಸ್ತವದಲ್ಲಿ ನಮ್ಮ ಮಾತು ಆ ಕ್ಷಣದ ಒತ್ತಡದಿಂದ ಹೊರ ಬಂದಿರುತ್ತದೆ, ಆದರೆ ನಿಜವಾಗಿ ಅದು ನಮ್ಮ ಉದ್ದೇಶವಾಗಿರುವುದಿಲ್ಲ. ಆದರೆ ಇಂಥ ಸಂದರ್ಭಗಳಲ್ಲಿ ಸಂಗಾತಿಯು ಪ್ರತೀಕಾತ್ಮಕವಾಗಿ ಅಥವಾ ದೌರ್ಜನ್ಯತೆಯಿಂದ ವರ್ತಿಸಕೂಡದು. ಒಂದು ವೇಳೆ ನಿಮ್ಮ ಸಂಗಾತಿಯು ನಿಮ್ಮ ಭಾವನೆಗಳಿಗೆ ಗೌರವ ಕೊಡದಿದ್ದರೆ ಅಥವಾ ಪ್ರತೀಕಾತ್ಮಕವಾಗಿ ವರ್ತಿಸಿದರೆ ಅಂಥ ಸಂಬಂಧ ಕೊನೆಗೊಳಿಸುವುದೇ ಒಳ್ಳೆಯದು.
ಸಂಬಂಧ ಉತ್ತಮವಾಗಿರಲು ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಬೇಕು ಹಾಗೂ ಬಾಂಧವ್ಯ ವೃದ್ಧಿಗೆ ಕಾಳಜಿ ವಹಿಸಬೇಕು. ಪರಸ್ಪರರನ್ನು ಗೌರವಿಸುವುದು ಹಾಗೂ ಕಾಳಜಿಯಿಂದ ನೋಡಿಕೊಳ್ಳುವುದು ಗಟ್ಟಿ ಸಂಬಂಧದ ಅಡಿಪಾಯವಾಗಿದೆ. ಇದರಲ್ಲಿ ಏನಾದರೂ ವ್ಯತ್ಯಾಸವಾದಲ್ಲಿ ಸಂಬಂಧದಲ್ಲಿ ಬಿರುಕು ಮೂಡುತ್ತವೆ.

ಜಗಳ ಕ್ಷಣಿಕವಾಗಿರಲಿ

ವಾದ ವಿವಾದ ಮಾಡುವುದು ಅಥವಾ ಜಗಳಾಡುವುದು ಸಂಬಂಧಗಳಲ್ಲಿ ಸಾಮಾನ್ಯವಾಗಿ ನಡೆದೇ ಇರುತ್ತವೆ. ಯಾವುದಾದರೂ ಸಮಸ್ಯೆ ಉದ್ಭವಿಸಿದಾಗ ಅದನ್ನು ಪರಿಹರಿಸಿಕೊಳ್ಳಲು ಯತ್ನಿಸಬೇಕು. ಆದರೆ ಹಾಗಂತ ಸಂಗಾತಿಯನ್ನು ಕೀಳಾಗಿ ನೋಡಬಾರದು. ಯಾವುದೇ ವಿಷಯದ ಮೇಲೆ ಸಕಾರಣದಿಂದ ಕೂಡಿದ ವಾದ ಹಾಗೂ ಸಮರ್ಥನೀಯವಾದ ಸಣ್ಣ ಜಗಳ ಸಮಸ್ಯೆಯನ್ನು ಪರಿಹರಿಸಬಲ್ಲದು. ಆದರೆ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡುವುದು, ಸಂಬಂಧವಿರದ ವಿಷಯಗಳನ್ನು ಜಗಳದಲ್ಲಿ ಎಳೆದು ತರುವುದು ಸರಿಯಲ್ಲ. ಇದು ಸಮಸ್ಯೆ ಪರಿಹಾರಕ್ಕೆ ದಾರಿಯಾಗಲಾರದು. ಆದ್ದರಿಂದ ಯಾವುದೇ ವಾದ ವಿವಾದ ಮಾಡಿದರೂ ಅದು ಸಕಾರಣವಾಗಿರಬೇಕು ಹಾಗೂ ಸಮರ್ಥನೀಯವಾಗಿರಬೇಕು ಎಂಬುದು ಗಮನದಲ್ಲಿರಲಿ.

ನವಿರಾದ ಹಾಸ್ಯ ಇರಲಿ

ವ್ಯಕ್ತಿಯಾಗಲಿ ಅಥವಾ ಸಂಗಾತಿಗಳ ಸಂಬಂಧವಾಗಿರಲಿ ಎಲ್ಲರ ಜೀವನದಲ್ಲಿ ತುಸು ಹಾಸ್ಯ ಇರಲೇಬೇಕು. ಹಾಸ್ಯ ಹಾಗೂ ಆನಂದದ ಕ್ಷಣಗಳು ಗಟ್ಟಿ ಬಾಂಧವ್ಯಕ್ಕೆ ಕಾರಣವಾಗುತ್ತವೆ. ನಿಮ್ಮ ಸಂಗಾತಿಯನ್ನು ನಗಿಸುತ್ತ ಯಾವಾಗಲೂ ನೀವು ಖುಷಿಯಾಗಿ ಇಡಬಲ್ಲವರಾದರೆ ನಿಮ್ಮ ಸಂಬಂಧ ಬಹು ದೂರದವರೆಗೆ ಮಧುರವಾಗಿ ಸಾಗುತ್ತದೆ. ಹಾಸ್ಯದಿಂದ ದೊರಕುವ ಆನಂದ ಸಂಗಾತಿಗಳಿಬ್ಬರಿಗೂ ಹಿತವಾದ ಸಂಬಂಧದ ಅನುಭವವನ್ನು ನೀಡುತ್ತದೆ. ಹೀಗಾಗಿ ಜೀವನದಲ್ಲಿ ನವಿರಾದ ಹಾಸ್ಯದ ಲೇಪನ ಯಾವಾಗಲೂ ಇರಲಿ.

ಪ್ರೀತಿಯಲ್ಲಿ ಉತ್ಕಟತೆಯಿರಲಿ

ಸಂಬಂಧವು ದೇದಿಪ್ಯಮಾನವಾಗಿ ಯಾವಾಗಲೂ ಬೆಳಗುತ್ತಿರಬೇಕಾದರೆ ಸಂಗಾತಿಗಳಿಬ್ಬರೂ ಪರಸ್ಪರರಲ್ಲಿ ಉತ್ಕಟವಾದ ಪ್ರೀತಿಯ ಭಾವವನ್ನು ಹೊಂದಿರುವುದು ಅಗತ್ಯ. ಪ್ರೀತಿಯು ನಮ್ಮ ಮಧುರ ಭಾವನೆಗಳನ್ನು ವ್ಯಕ್ತ ಪಡಿಸುವ ಮಾರ್ಗವಾಗಿದ್ದು, ಪ್ರೀತಿಯೊಂದಿದ್ದರೆ ಸಂಬಂಧ ಅಮರವಾಗಿರುವುದು. ಪ್ರೀತಿಯಿಂದ ಸಂಬಂಧದಲ್ಲಿ ಅನ್ಯೋನ್ಯತೆಯ ಉಚ್ಛ್ರಾಯ ಸ್ಥಿತಿಯನ್ನು ಕಾಣಬಹುದು. ಪ್ರೀತಿಯ ಬಾಹುಗಳಲ್ಲಿ ಬಂಧಿಯಾಗಿ, ಉತ್ಕಟತೆಯ ಪರಾಕಾಷ್ಠೆಯಲ್ಲಿದ್ದರೆ ಸಂಬಂಧ ಯಾವಾಗಲೂ ಗಟ್ಟಿಯಾಗಿರುವುದು.

ಸಂಗಾತಿಯೊಂದಿಗೆ ಪ್ರಾಮಾಣಿಕತೆಯಿಂದಿರಿ

ಜೀವನದಲ್ಲಿ ಪ್ರಾಮಾಣಿಕತೆಗೆ ಯಾವಾಗಲೂ ಬೆಲೆ ಇದೆ. ಅದರಲ್ಲೂ ಸಂಗಾತಿಗಳ ಜೀವನದಲ್ಲಿ ನಂಬಿಕೆ ಉಳಿಸಿಕೊಳ್ಳಲು ಹಾಗೂ ಸಂಬಂಧ ಗಟ್ಟಿಗೊಳಿಸಲು ಪ್ರಾಮಾಣಿಕವಾಗಿರುವುದು ಅತಿ ಅಗತ್ಯ. ಸಂಗಾತಿಗಳು ಪರಸ್ಪರ ನಂಬಿಕೆ ವಿಶ್ವಾಸದಿಂದ ಬಾಳಬೇಕಾದರೆ ಒಬ್ಬರಿಗೊಬ್ಬರು ಪ್ರಾಮಾಣಿಕರಾಗಿ ರಬೇಕಾಗುತ್ತದೆ.

ರಹಸ್ಯಗಳನ್ನು ಬಚ್ಚಿಟ್ಟುಕೊಳ್ಳುವುದು ಅಥವಾ ಹೇಳಬೇಕಾದ ವಿಷಯವನ್ನು ಹೇಳದೆ ಇರುವುದು ಯಾವತ್ತೂ ಸಮರ್ಥನೀಯವಲ್ಲ. ಸತ್ಯ ಕಹಿಯಾಗಿದ್ದರೂ ಅದನ್ನು ಮುಚ್ಚಿಡದೆ ಮುಕ್ತವಾಗಿ ಹೇಳಿ ಬಿಡುವುದೇ ಒಳಿತು. ಬಚ್ಚಿಟ್ಟ ವಿಷಯ ಯಾವುದೋ ರೀತಿ ಸಂಗಾತಿಗೆ ತಿಳಿದಾಗ ಅದು ಸಂಬಂಧವನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ನಂಬಿಕೆ, ವಿಶ್ವಾಸಗಳ ಕೊರತೆ ಆಗದಂತೆ ಎಚ್ಚರಿಕೆ ವಹಿಸಿ, ಪ್ರಾಮಾಣಿಕತೆಯಿಂದ ವರ್ತಿಸಿ.

ಸಂಗಾತಿಯ ಮಾತು ಆಲಿಸಿ

ಒಬ್ಬರಿಗೊಬ್ಬರು ಹೇಳುವ ವಿಷಯಗಳನ್ನು ಲಕ್ಷ್ಯವಿಟ್ಟು ಆಲಿಸಿ ಹಾಗೂ ಚಿಕ್ಕ ವಿಷಯಗಳಿಗೂ ಗಮನ ನೀಡಿ. ಇದರಿಂದ ಪರಸ್ಪರರನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಸಂಬಂಧದಲ್ಲಿ ಮಧುರತೆ ಮೂಡಿಸಲು ಸಹಾಯಕವಾಗುತ್ತದೆ. ನಿಮ್ಮ ಸಂಗಾತಿಗೆ ಇಷ್ಟವಾಗುವ ವಸ್ತು, ಆಹಾರ ಅಥವಾ ಇನ್ನಿತರ ವಿಷಯಗಳನ್ನು ನೆನಪಿಟ್ಟುಕೊಂಡು ಅವುಗಳನ್ನು ನೀಡುವುದರಿಂದ ಸಹಜವಾಗಿಯೇ ನಿಮ್ಮ ಮೇಲೆ ಸಂಗಾತಿಯ ಪ್ರೀತಿ ಹೆಚ್ಚಾಗುತ್ತದೆ. ಚಿಕ್ಕ ಪುಟ್ಟ ಸಂಗತಿಗಳೇ ಗಟ್ಟಿ ಬಾಂಧವ್ಯಕ್ಕೆ ಆಧಾರ ಎಂಬುದು ಗೊತ್ತಿರಲಿ.

ಕೃತಜ್ಞತೆ ಇರಲಿ

ಸಂಗಾತಿಗಳು ಒಬ್ಬರಿಗೊಬ್ಬರು ಸಹಾಯ ಮಾಡುತ್ತ, ಅದೇ ಸಂದರ್ಭದಲ್ಲಿ ಕೃತಜ್ಞರೂ ಆಗಿರಬೇಕಾಗುತ್ತದೆ. ಸಂಗಾತಿಯು ನಿಮ್ಮ ಸರ್ವಸ್ವವೇ ಆಗಿರುವುದನ್ನು ಆಗಾಗ ಕೆಲ ವಿಧಾನಗಳ ಮೂಲಕ ವ್ಯಕ್ತ ಪಡಿಸಬೇಕಾಗುತ್ತದೆ. ಇದು ಸಂಬಂಧ ದೀರ್ಘಕಾಲ ಬಾಳಲು ಸಹಕಾರಿಯಾಗುತ್ತದೆ. ಸಂಬಂಧದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಮೇಲೆ ತಿಳಿಸಲಾದ ಟಿಪ್ಸ್‌ಗಳನ್ನು ಅಳವಡಿಸಿಕೊಳ್ಳಿ. ನಿಮಗೆ ಈ ಬರಹ ಇಷ್ಟವಾದಲ್ಲಿ ಕೆಳಗೆ ಕಮೆಂಟ್ ವಿಭಾಗದಲ್ಲಿ ನಿಮ್ಮ ಪ್ರತಿಕ್ರಿಯೆ ನೀಡಲು ಮರೆಯದಿರಿ.

English summary

Relationship Tips; Bring Stability In Your Relationship

Relationship tips help a lot with couples. These tips are often relationship hacks that come handy in daily life situations between couples. There might be hurdles in every aspect of life but when it comes to relationships, we look deep into them, for we do not want anything that would consume our relationship and make us deprived of our partner. We do not want troubles in a relationship. To control these we need to learn certain relationship tips that would give us the insight to handle these situations or avoid them at all cost.
Story first published: Saturday, August 18, 2018, 11:53 [IST]
X
Desktop Bottom Promotion