For Quick Alerts
ALLOW NOTIFICATIONS  
For Daily Alerts

  ಲೈಂಗಿಕ ಕ್ರಿಯೆ ಬಳಿಕ ಪುರುಷರು ದೂರವಾಗಲು ಕಾರಣಗಳೇನು?

  By Hemanth
  |

  ಲೈಂಗಿಕ ವಿಚಾರಗಳ ಬಗ್ಗೆ ಹಲವಾರು ಪ್ರಶ್ನೆಗಳು ಜನರಲ್ಲಿದ್ದರೂ ಅದನ್ನು ಕೇಳಲು ಮಾತ್ರ ಹಿಂಜರಿಕೆ. ಪುರುಷರು ಹಾಗೂ ಮಹಿಳೆಯರಲ್ಲಿ ಪ್ರಶ್ನೆಗಳು ಮಾತ್ರ ಇದ್ದೇ ಇರುತ್ತದೆ. ಅದರಲ್ಲೂ ಪುರುಷರು ಲೈಂಗಿಕ ಕ್ರಿಯೆ ಬಳಿಕ ಯಾಕೆ ಅಂತರ ಕಾಯ್ದುಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಹಲವಾರು ಮಂದಿಯಲ್ಲಿ ಇರಬಹುದು. ನೀವು ಪುರುಷರಾಗಿದ್ದರೆ ನಿಮ್ಮ ಇಂತಹ ನಡೆಗೆ ಕಾರಣವೇನು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳಿ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇದರಲ್ಲಿದೆ.

  ಲೈಂಗಿಕ ಕ್ರಿಯೆ ಎನ್ನುವುದು ಪರಸ್ಪರರನ್ನು ಒಟ್ಟು ಸೇರಿಸುವ ಮತ್ತು ಪ್ರೀತಿ ಬೆಸೆಯುವ ಕ್ರಿಯೆಯಾಗಿದೆ. ಅಂತಿಮವಾಗಿ ಲೈಂಗಿಕ ಕ್ರಿಯೆಯು ಪುರುಷ ಹಾಗೂ ಮಹಿಳೆಯರಿಗೆ ಸುಖ ನೀಡುವುದು. ಇಬ್ಬರು ಕೂಡ ಇದನ್ನು ಆನಂದಿಸುವರು. ಆದರೆ ಕ್ಲೈಮ್ಯಾಕ್ಸ್ ಬಳಿಕ ಪುರುಷರು ತಮ್ಮ ಸಂಗಾತಿಯಿಂದ ಅಂತರ ಕಾಯ್ದುಕೊಳ್ಳುವರು. ಇದಕ್ಕೆ ಈ ಕೆಳಗಿನ ವಿಚಾರಗಳು ಕಾರಣವಾಗಿದೆ.

  ಆತನಿಗೆ ಇದು ಕೇವಲ ಒಂದು ಘಟನೆಯಷ್ಟೇ!

  ಪುರುಷನು ನಿಮ್ಮೊಂದಿಗೆ ಸಂಪರ್ಕದಲ್ಲಿ ಇರಲು ಈ ಹಂತದಲ್ಲಿ ಬಯಸಿರುವುದಿಲ್ಲ. ಇದು ಕೇವಲ ಒಂದು ರಾತ್ರಿಯಷ್ಟೇ. ಆತ ನಿಮ್ಮೊಂದಿಗೆ ಅಮೂಲ್ಯವಾದ ಸಮಯ ಕಳೆದಿದ್ದಾನೆ ಮತ್ತು ಈಗ ಆತ ಹೋಗಿದ್ದಾನೆ. ಇದಕ್ಕಿಂತ ಹೆಚ್ಚು ಏನೂ ಇಲ್ಲ. ನೀವು ಆತನೊಂದಿಗೆ ಒಂದು ರೀತಿಯ ಭಾವನೆ ಇಟ್ಟುಕೊಳ್ಳಲು ಬಯಸಿರಬಹುದು. ಆದರೆ ಆತನಿಗೆ ಈ ಆಲೋಚನೆಯೇ ಇರಲಿಲ್ಲ. ಆತ ಬಂದ, ಅನುಭವಿಸಿದ ಮತ್ತು ಹೋದ. ಇದರಿಂದಾಗಿ ಪುರುಷರು ಲೈಂಗಿಕ ಕ್ರಿಯೆ ಬಳಿಕ ದೂರ ಉಳಿಯುವರು. ಇದಕ್ಕೆ ಏನೂ ಮಾಡಲು ಆಗಲ್ಲ. ನೀವು ಕೂಡ ಇದನ್ನು ಮರೆಯಬೇಕು.

  men sleeping

  ಆತ ಸಂಬಂಧಕ್ಕೆ ತಯಾರಾಗಿಲ್ಲ

  ಆತ ಯೋಚಿಸದೆ ಇರುವಂತಹ ಭಾವನೆಯು ನಿಮ್ಮ ಬಗ್ಗೆ ಮೂಡಿರಬಹುದು. ಆದರೆ ಆತನಲ್ಲಿರುವ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ದೂರವಾಗಿರಬಹುದು. ಆತ ಗಂಭೀರವಾಗಿಲ್ಲ ಮತ್ತು ಇದರಿಂದಾಗಿ ನಿಮ್ಮನ್ನು ದೂರ ಮಾಡುತ್ತಿದ್ದಾನೆ. ಇದರಲ್ಲಿ ನಿಮ್ಮ ತಪ್ಪೇನಿಲ್ಲ. ಆದರೆ ಆತ ಸಂಬಂಧದಲ್ಲಿ ಒಳಪಡಲು ಬಯಸಿಲ್ಲ.

  ನೀವು ತುಂಬಾ ಅಂಟಿಕೊಂಡಿರಬಹುದು

  ನೀವು ಆತನಿಗೆ ತುಂಬಾ ಅಂಟಿಕೊಳ್ಳಲು ಆರಂಭಿಸಿದ್ದಲ್ಲಿ ಆತ ನಿಮ್ಮಿಂದ ಅಂತರ ಕಾಯ್ದುಕೊಳ್ಳಬಹುದು. ಇದು ಕೆಲಸ ಮಾಡಬಹುದೆಂದು ನೀವು ಭಾವಿಸಿರಬಹುದು. ಆದರೆ ನಿಮ್ಮ ಅಂಟಿಕೊಳ್ಳುವ ಪ್ರವೃತ್ತಿಯಿಂದಾಗಿ ಆತ ದೂರವಾಗಿದ್ದಾನೆ. ಈ ಸಂಬಂಧವು ಮುಂದುವರಿಯಬೇಕೆಂದರೆ ನೀವು ಅಂತರ ಕಾಯ್ದುಕೊಳ್ಳಿ, ಅಂಟಿಕೊಳ್ಳಬೇಡಿ. ಮಹಿಳೆಯರು ಅಂಟಿಕೊಳ್ಳುವುದನ್ನು ಪುರುಷರು ಇಷ್ಟಪಡುವುದಿಲ್ಲ. ಇದರಿಂದಾಗಿ ಲೈಂಗಿಕ ಕ್ರಿಯೆ ಬಳಿಕ ಪುರುಷರು ದೂರವಾಗುವರು. ಆತ ನಿಜವಾಗಿಯೂ ನಿಮಗೆ ಬೇಕಿದ್ದರೆ ಈ ಮಾತು ನೆನಪಿಟ್ಟುಕೊಳ್ಳಿ. ಅಂಟಿಕೊಳ್ಳಲು ಹೋದರೆ ಪುರುಷರು ಓಡಿಹೋಗುವರು.

  ಆತನಿಗೆ ಭೀತಿ ಮೂಡಿಸಿರುವುದು

  ಒಂದು ರಾತ್ರಿಯ ಸಂಬಂಧದ ಬಳಿಕ ಆತ ನಿಮ್ಮನ್ನು ಪ್ರೀತಿಸುತ್ತಾನೆಂದು ತಿಳಿದಿದ್ದರೆ, ಈ ವಿಚಾರವನ್ನು ಮರೆತುಬಿಡುವುದು ಒಳಿತು. ಪುರುಷರು ಪ್ರೀತಿಯೆಂದರೆ ಹೆದರುವರು ಮತ್ತು ಅವರು ಯಾವುದೇ ರೀತಿಯಿಂದಲೂ ಬದ್ಧತೆಗೆ ಒಳಗಾಗುವುದನ್ನು ಬಯಸಲ್ಲ. ಲೈಂಗಿಕ ಕ್ರಿಯೆ ಮರುದಿನ ಆತ ನಿಮ್ಮನ್ನು ಪ್ರೀತಿಸುತ್ತಿದ್ದಾನೆಂದು ಭಾವಿಸಿದರೆ ಆತ ಖಂಡಿತವಾಗಿಯೂ ದೂರವಾಗುತ್ತಾನೆ. ಆತನ ಬಗ್ಗೆ ನಿಮಗೆ ಪ್ರೀತಿಯಿದ್ದರೆ ಅದನ್ನು ಬೇಗನೆ ತೋರಿಸಬೇಡಿ. ಸ್ವಲ್ಪ ಸಮಯ ಕಾದು ನೋಡಿ ಮತ್ತು ಆತನಿಗೂ ಸಮಯ ಕೊಡಿ. ನಿಧಾನವಾಗಿ ಆತ ನಿಮ್ಮ ಭಾವನೆಗಳ ಜಗತ್ತಿನೊಳಗೆ ಪ್ರವೇಶಿಸುವಂತೆ ಮಾಡಿ. ಆತನಿಗೂ ಇದೇ ಭಾವನೆಯಿದ್ದರೆ ಖಂಡಿತವಾಗಿಯೂ ಆತ ಸಂಬಂಧದಲ್ಲಿ ಮುಂದುವರಿಯುತ್ತಾನೆ.

  ಆತನಿಗೆ ಖುಷಿಯಾಗಿಲ್ಲ!

  ಇದು ಕೂಡ ನಿಜವಾಗಿರಬಹುದು. ನೀವಿಬ್ಬರೂ ಒಳ್ಳೆಯ ಲೈಂಗಿಕ ಕ್ರಿಯೆಯಲ್ಲಿ ಒಳಗಾಗಿದ್ದೀರಿ ಎಂದು ಆತ ಭಾವಿಸಿರಬಹುದು. ಆದರೆ ಎಲ್ಲವೂ ಇದಕ್ಕೆ ತದ್ವಿರುದ್ಧವಾಗಿರಬಹುದು. ಇದರಿಂದ ಆತ ನಿಮ್ಮಿಂದ ದೂರ ಹೋಗಿರಬಹುದು.

  ನಿರಾಶೆ

  ಹಾಸಿಗೆಯಲ್ಲಿ ತಾನು ಸಮರ್ಥನಿಲ್ಲವೆಂದು ಆತ ಭಾವಿಸಿರಬಹುದು ಮತ್ತು ಇದು ಆತನನ್ನು ಒಳಗಿನಿಂದಲೇ ಕೊರೆಯುತ್ತಿರಬಹುದು. ಇದರಿಂದ ಆತ ನಿಮ್ಮನ್ನು ಭೇಟಿಯಾಗಲು ಅಥವಾ ಸಂಪರ್ಕಿಸಲು ಹಿಂಜರಿಯಬಹುದು. ಆತನಿಗೆ ಸ್ವಲ್ಪ ಸಮಯ ನೀಡಿ ಮತ್ತು ಆತ ಎಷ್ಟು ಒಳ್ಳೆಯದಿದ್ದ ಎಂದು ಹೇಳಿ. ಆತನಲ್ಲಿ ಆತ್ಮವಿಶ್ವಾಸ ತುಂಬಿ. ಇದರಿಂದ ಆತ ನಿಮ್ಮಿಂದ ದೂರವಾಗುವುದು ತಪ್ಪುವುದು.

  ಹಾರ್ಮೋನುಗಳು

  ಲೈಂಗಿಕ ಕ್ರಿಯೆ ಬಳಿಕ ಟೆಸ್ಟೊಸ್ಟೆರಾನ್ ಮಟ್ಟವು ಕುಸಿಯುವ ಕಾರಣದಿಂದಾಗಿ ಪುರುಷರಿಗೆ ತಮ್ಮ ಸ್ವಾತಂತ್ರ್ಯವು ಕಳೆದುಹೋದಂತೆ ಆಗುವುದು. ಇದು ಸಾಮಾನ್ಯ ಮತ್ತು ಈ ವೇಳೆ ನೀವು ನಿಮ್ಮ ಜೀವನದ ಕಡೆ ಗಮನಹರಿಸಿ. ಕೆಲವು ದಿನಗಳ ಬಳಿಕ ಆತ ಮತ್ತೆ ಮರಳುತ್ತಾನೆ. ಈ ಕಾರಣಗಳಿಂದಾಗಿ ಪುರುಷರು ನಿಮ್ಮಿಂದ ದೂರವಾಗಿದ್ದರೆ ಚಿಂತೆ ಮಾಡಬೇಡಿ. ಲೈಂಗಿಕ ಕ್ರಿಯೆ ಬಳಿಕ ಪುರುಷರು ನಿಮ್ಮನ್ನು ಕಡೆಗಣಿಸಲು ಮತ್ತು ದೂರವಾಗಲು ಇದು ಕಾರಣಗಳಾಗಿವೆ. ಈ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಇನ್ನು ಹೆಚ್ಚಾಗಿ ಮಿಲನದ ಬಳಿಕ ಪುರುಷರು ನೇರವಾಗಿ ನಿದ್ದೆಗೆ ಜಾರಿ ಬಿಡುತ್ತಾರೆ, ಅದಕ್ಕೆ ಕೆಲವೊಂದು ಕಾರಣಗಳು ಇಲ್ಲಿದೆ ನೋಡಿ... 

  ಪುರುಷರ ದೇಹದಲ್ಲಿ ಕೆಲವಾರು ರಸದೂತಗಳು ಬಿಡುಗಡೆಯಾಗುತ್ತವೆ

  ಇನ್ನೊಂದು ಸಿದ್ಧಾಂತದಲ್ಲಿ ವಿವರಿಸಿರುವ ಪ್ರಕಾರ ಮಿಲನಕ್ರಿಯೆ ಪೂರ್ಣಗೊಂಡ ಬಳಿಕ ಪುರುಷರ ದೇಹದಲ್ಲಿ ಕೆಲವಾರು ರಸದೂತಗಳು ಬಿಡುಗಡೆಯಾಗುತ್ತವೆ. ಇದರಲ್ಲಿ ಪ್ರೊಲ್ಯಾಕ್ಟಿನ್, ವ್ಯಾಸೋಪ್ರೆಸ್ಸಿನ್, ನೈಟೈಕ್ ಆಕ್ಸೈಡ್, ಸೆರೋಟೋನಿನ್, ಆಕ್ಸಿಟೋಸಿನ್ ಹಾಗೂ ನೋರೆಪಿನಿಫ್ರೀನ್ ಮೊದಲಾದವು ಪ್ರಮುಖವಾಗುವೆ. ಇವೆಲ್ಲವೂ ಮೆದುಳಿಗೆ ಮುದನೀಡುವ ರಸದೂತಗಳಾಗಿದ್ದು ಇವು ನಿದ್ದೆ ಆವರಿಸಲು ಕಾರಣವಾಗುತ್ತವೆ.

  ಆತ ಆಸಕ್ತಿ ಕಳೆದುಕೊಳ್ಳುತ್ತಾನೆ

  ಇನ್ನೂ ಕೆಲವು ಸಿದ್ಧಾಂತಗಳ ಪ್ರಕಾರ ಮಿಲನಕ್ರಿಯೆಯ ಕೊನೆಯ ಹಂತದಲ್ಲಿ ಸ್ಖಲನವಾದ ಬಳಿಕ ಪುರುಷನ ಮನೋಭಾವ ಮಿಲನ ಕ್ರಿಯೆಗೂ ಮುನ್ನ ಇರುವಂತಿರುವುದಿಲ್ಲ. ಈಗ ಆತ ಕೊಂಚ ಆಸಕ್ತಿಯನ್ನು ಕಳೆದುಕೊಳ್ಳುತ್ತಾನೆ ಹಾಗೂ ನಿದ್ದೆ ಮಾಡ ಬಯಸುತ್ತಾನೆ. ಅಲ್ಲದೆ ಮಿಲನಕ್ರಿಯೆಯಲ್ಲಿ ಪುರುಷ ಅಪರಿಮಿತ ಸುಖಾನುಭಾವವನ್ನು ಪಡೆದಿದ್ದು ಮಿಲನಕ್ರಿಯೆ ಪೂರ್ಣಗೊಂಡಾಗ ಇದನ್ನು ಮುಕ್ತಾಯವೆಂದು ಪರಿಗಣಿಸಿ ನಿದ್ದೆಯ ಮೂಲಕ ವಿಶ್ರಮಿಸಲು ತೊಡಗುತ್ತಾನೆ.

  ಮನಸ್ಸು ಹಾಗೂ ದೇಹ ನಿರಾಳವಾಗ ಬಯಸುತ್ತದೆ!

  ಒಂದು ವೈಜ್ಞಾನಿಕ ಅಧ್ಯಯನದಲ್ಲಿ ಕಂಡುಬಂದ ಪ್ರಕಾರ ಸಮಾಗಮದ ಸಮಯದಲ್ಲಿ ಪುರುಷರ ಇಡಿಯ ದೇಹ ಪರಿಪೂರ್ಣವಾಗಿ ಬಳಕೆಯಾಗುತ್ತದೆ ಹಾಗೂ ದೇಹದ ರಕ್ತಪರಿಚಲನೆ ಹಾಗೂ ಮೆದುಳಿನ ಚಟುವಟಿಕೆಗಳು ಗರಿಷ್ಟವಾಗಿರುತ್ತವೆ. ಆದರೆ ಕ್ರಿಯೆಯ ಬಳಿಕ ಮನಸ್ಸು ಹಾಗೂ ದೇಹ ನಿರಾಳವಾಗಬಯಸುತ್ತದೆ. ಇದಕ್ಕೂ ಮುನ್ನ ಇದ್ದ ದುಗುಡ ಹಾಗೂ ಅಂತರ್ಗತವಾಗಿದ್ದ ಹೆದರಿಕೆಗಳೂ ಈಗ ಇಲ್ಲವಾಗಿರುತ್ತವೆ. ಇದು ನಿದ್ದೆ ಆವರಿಸಲು ಅತ್ಯಂತ ಸೂಕ್ತ ಸಂದರ್ಭಗಳಾಗಿರುವ ಕಾರಣ ಪುರುಷ ನಿದ್ದೆ ಹೋಗದೇ ಇರಲು ಸಾಧ್ಯವೇ ಇಲ್ಲ. ಹಾಗಾಗಿ ಆತ ನಿದ್ದೆಗೆ ಸ್ವಾಭಾವಿಕವಾಗಿಯೇ ಜಾರುತ್ತಾನೆ.

  ಇದು ಸ್ವಾಭಾವಿಕೆ ಕ್ರಿಯೆ...

  ಎಲ್ಲಾ ಸಿದ್ಧಾಂತಗಳನ್ನು ಬದಿಗಿರಿಸಿ ಸಾಮಾನ್ಯ ಜ್ಞಾನದ ಪ್ರಕಾರ ನೋಡಿದರೆ ಕೆಲವು ಪುರುಷರು ಮಿಲನಕ್ರಿಯೆಯಲ್ಲಿ ಮಾತನಾಡಲು ಬಯಸದೇ ಕೇವಲ ತಮ್ಮ ಪಾಲಿನ ಕರ್ತವ್ಯ ಮುಗಿಸಿದ ಬಳಿಕ ಸುಮ್ಮನೇ ಮಲಗಿ ಬಿಡುತ್ತಾರೆ. ಇದನ್ನು ಅರ್ಥಮಾಡಿಕೊಳ್ಳಿ ಹಾಗೂ ಇದಕ್ಕೂ ಹೊರತಾಗಿ ನಿಮ್ಮನ್ನು ಆತನೂ ಅರ್ಥಮಾಡಿಕೊಳ್ಳುವಂತೆ ಮನವೊಲಿಸಿ. 

  English summary

  Reasons Why Men Distance Themselves After Sex

  There are plenty of queries that come up about the stage, after sex. One of them is the query about why men distant themselves after having sex? Did you have this query as well? Well, this article is about to reveal all truth behind this act of men. Sex is about connection and intimacy where you feel you get along with the person in a better way. Sex has been the ultimate point of pleasure for men and women. While both enjoy it, some men try to distant themselves from their female partners. The reasons behind why men distance themselves after sex are:
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more