For Quick Alerts
ALLOW NOTIFICATIONS  
For Daily Alerts

ಪುರುಷರಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕುಗ್ಗಲು ಕಾರಣವೇನು?

By Hemanth
|

ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿ ಕೂಡ ತನ್ನ ಸಂತಾನೋತ್ಪತ್ತಿ ಮಾಡಲು ತನ್ನ ವಿರುದ್ಧ ಲಿಂಗದೊಂದಿಗೆ ಮಿಲನದಲ್ಲಿ ತೊಡಗುವುದು. ಮನುಷ್ಯ ಕೂಡ ಇದಕ್ಕೆ ಹೊರತಾಗಿಲ್ಲ. ಆತನು ತನ್ನ ಸಂತಾನೋತ್ಪತ್ತಿಗಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವನು. ಮನುಷ್ಯನು ತನ್ನ ಕಾಮಾಸಕ್ತಿಯನ್ನು ತಣಿಸಿಕೊಳ್ಳಲು ಮದುವೆಯೆನ್ನುವ ಬಂಧನದಲ್ಲಿ ಸಿಲುಕಿ ಕೊಳ್ಳುತ್ತಾನೆ. ಇಲ್ಲಿಂದ ಆತನ ಸಂತಾನೋತ್ಪತ್ತಿ ಕಾರ್ಯವು ಆರಂಭವಾಗುವುದು. ಆದರೆ ಇಂದಿನ ದಿನಗಳಲ್ಲಿ ಲೈಂಗಿಕ ಕ್ರಿಯೆ ಕಡೆ ಪುರುಷರು ಬೇಗನೆ ಆಸಕ್ತಿ ಕಳೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ.

ಇದಕ್ಕೆ ಹಲವಾರು ಕಾರಣಗಳು ಕೂಡ ಇದೆ. ನೀವು ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಬಯಸಿದರೂ ಆತ ಮಾತ್ರ ಇದರಿಂದ ದೂರವಾಗಲು ಬಯಸುತ್ತಿದ್ದಾನೆಯಾ? ಇದಕ್ಕೆ ಬೇರೆಯೇ ರೀತಿಯ ಕಾರಣಗಳು ಇರಬಹುದು ಮತ್ತು ನಿಮಗಿದು ತಿಳಿದಿರಲಿಕ್ಕಿಲ್ಲ. ನಿಮ್ಮೊಂದಿಗೆ ತುಂಬಾ ಅನ್ಯೋನ್ಯವಾಗಿದ್ದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದ ವ್ಯಕ್ತಿಯು ಈಗ ದೂರ ಹೋಗುತ್ತಿದ್ದರೆ ಕಾರಣಗಳು ಇದೆ. ಆತನಿಗೆ ಲೈಂಗಿಕ ಕ್ರಿಯೆ ಬಗ್ಗೆ ಬೇಸರ ಮೂಡಿರಬಹುದು. ಇದರ ಬಗ್ಗೆ ಮತ್ತಷ್ಟು ತಿಳಿಯಲು ಸ್ಕ್ರೋಲ್ ಡೌನ್ ಮಾಡುತ್ತಾ ಹೋಗಿ.

reasons why he is not having sex

1.ಆತನಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕೆಂಬ ಭಾವನೆಯಾಗುತ್ತಿಲ್ಲ

ಕೆಲವೊಂದು ಸಲ ಪುರುಷರಿಗೆ ಕೂಡ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಬೇಡ ಎನ್ನುವ ಭಾವನೆ ಬರುವುದು. ನಿಮ್ಮ ಸಂಗಾತಿಗೂ ಹೀಗೆ ಆಗುತ್ತಲಿದ್ದರೆ ಆಗ ನೀವು ಆತನಿಗೆ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ನೀಡಬೇಕಾಗಿದೆ. ಆತ ಇದನ್ನು ನಿಭಾಯಿಸುತ್ತಾನೆ ಮತ್ತು ಕೆಲವೇ ಸಮಯದಲ್ಲಿ ಆತ ನಿಮ್ಮೊಂದಿಗೆ ಹಾಸಿಗೆಯಲ್ಲಿ ಮುದ್ದಾಡುವುದನ್ನು ಕಾಣಲಿದ್ದೀರಿ. ಆತ ಹೆಚ್ಚಿನ ಒತ್ತಡ ಅಥವಾ ಮಾಸಿಕ ತುಮುಲದಲ್ಲಿರಬಹುದು. ಇದರ ಬಗ್ಗೆ ಮಾತನಾಡಿ ಅದನ್ನು ಬಗೆಹರಿಸಿ.

2.ಆತನಿಗೆ ಸಂಬಂಧದಲ್ಲಿ ಸಂತೋಷವಿಲ್ಲ

ನಿಮ್ಮ ಬಗ್ಗೆ ಆತನಿಗೆ ಖುಷಿಯಿಲ್ಲದೆ ಇದ್ದರೆ ಮತ್ತು ಇದೇ ಕಾರಣಕ್ಕಾಗಿ ಆತ ನಿಮ್ಮೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗದೆ ಇದ್ದರೆ ಆಗ ನೀವು ಸರಿಯಾಗಿದ್ದೀರಿ. ಪುರುಷರು ತಮಗೆ ಖುಷಿ ನೀಡದೆ ಇರುವ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲ್ಲ. ಮಹಿಳೆಯರು ಕೂಡ ಹೀಗೆ ಮಾಡುವರು. ಆತನಿಗೆ ಸಂತೋಷ ನೀಡುವ ಬಗೆ ಯಾವುದು ಎಂದು ಕೇಳಿ ಮತ್ತು ನೀವು ಮುಕ್ತವಾಗಿ ಮಾತನಾಡಿ ಇದನ್ನು ಬಗೆಹರಿಸಿ. ಇದರಿಂದ ಮಾತ್ರ ಆತನ ಮನಸ್ಸಿನಲ್ಲಿರುವ ಕಾರಣ ತಿಳಿಯಬಹುದು. ಅಸಂತೋಷದಿಂದ ಇರುವುದು ಪುರುಷರ ಹಾರ್ಮೋನುಗಳ ಮೇಲೆ ಪರಿಣಾಮ ಬೀರುವುದು ಮತ್ತು ಇದರಿಂದ ಲೈಂಗಿಕ ಕ್ರಿಯೆಯಿಂದ ದೂರ ಹೋಗಬಹುದು.

3.ಸಂಬಂಧಲ್ಲಿ ಏನೋ ಕಳಕೊಂಡಿದ್ದೇನೆ ಎನ್ನುವ ಭಾವ

ಸಂಬಂಧಲ್ಲಿ ಕೆಲವೊಂದು ವಿಚಾರಗಳು ತುಂಬಾ ಪ್ರಾಮುಖ್ಯತೆ ಪಡೆಯುವುದು ಮತ್ತು ಪ್ರೀತಿಸುವಾಗ ಮತ್ತು ಲೈಂಗಿಕ ಕ್ರಿಯೆ ವೇಳೆ ಇದನ್ನು ವ್ಯಕ್ತಪಡಿಸದೆ ಇದ್ದರೆ ಆಗ ಯಾವುದೂ ಸರಿಯಾಗಿರಲ್ಲ. ಸಂಬಂಧದಲ್ಲಿ ಏನೋ ಕಳೆದುಕೊಂಡಿದ್ದೇನೆ ಎನ್ನುವ ಭಾವನೆಯು ನಿಮ್ಮ ಪುರುಷನಿಗೆ ಆಗಿರಬಹುದು ಮತ್ತು ಇದರಿಂದಾಗಿ ಆತ ಲೈಂಗಿಕ ಕ್ರಿಯೆಯಿಂದ ದೂರವಿರಬಹುದು. ತಮ್ಮ ಪರವಾಗಿ ಎಲ್ಲವೂ ಆಗಬೇಕೆಂದು ಪುರುಷರು ಬಯಸುವರು ಮತ್ತು ಇದರ ವಿರುದ್ಧವಾಗಿ ಸಾಗಿದರೆ ಆಗ ಅವರು ತುಂಬಾ ಕೆಟ್ಟದಾಗುವರು ಮತ್ತು ಹಾಸಿಗೆಯಲ್ಲಿ ಮಾತ್ರವಲ್ಲದೆ ಹೀಗೆ ಕೂಡ ಅವರು ನಿಮ್ಮ ಹತ್ತಿರಕ್ಕೆ ಬರಲ್ಲ.

4.ಆತ ಸಮರ್ಥನಲ್ಲವೆಂದು ಭಾವಿಸಿರಬಹುದು

ನಿಮ್ಮ ಸಂಗಾತಿಯು ಯಾವುದೇ ಒಂದು ಭಾವನಾತ್ಮಕವಾಗಿರುವಂತಹ ಪರಿಸ್ಥಿತಿಯಿಂದ ಮೇಲೆದ್ದು ಬಂದಿರಬಹುದು ಮತ್ತು ಇದು ಆತನ ಆತ್ಮವಿಶ್ವಾಸ ಕುಂದಿಸಿರಬಹುದು. ಇದರಿಂದಾಗಿ ಆತ ನಿಮ್ಮೊಂದಿಗಿನ ಲೈಂಗಿಕ ಕ್ರಿಯೆಯಿಂದ ದೂರ ಉಳಿದಿರಬಹುದು. ಹಾಸಿಗೆಯಲ್ಲಿ ನಿಮ್ಮ ತೃಪ್ತಿಗೊಳಿಸಲು ಸಾಧ್ಯವಿಲ್ಲವೆಂದು ಆತ ಭಾವಿಸಿರಬಹುದು ಮತ್ತು ಇದರಿಂದಾಗಿ ಆತ ದೂರ ಹೋಗುತ್ತಿರಬಹುದು. ಪ್ರೀತಿ ತೋರಿಸುವಲ್ಲಿ ಪುರುಷರು ಅಧಿಪತ್ಯ ಸ್ಥಾಪಿಸಲು ಬಯಸುವರು. ಹಾಸಿಗೆಯಲ್ಲಿ ಅವರು ತಮ್ಮ ಆತ್ಮವಿಶ್ವಾಸ ತೋರಿಸುವರು. ಆದರೆ ಆತ ಸಮರ್ಥನಲ್ಲವೆಂದು ಭಾವಿಸಿದರೆ ಆಗ ಇದರ ಹಿಂದಿನ ಕಾರಣ ನಿಮಗೆ ಎಂದಿಗೂ ತಿಳಿಯದು. ನೀವು ಆತನೊಂದಿಗೆ ಮಾತನಾಡುತ್ತಲಿರಿ. ಇದರಿಂದ ಆತನಿಗೆ ಲೈಂಗಿಕ ಕ್ರಿಯೆಯಲ್ಲಿ ಯಾಕೆ ಆಸಕ್ತಿಯಿಲ್ಲ ಮತ್ತು ನಿಮ್ಮೊಂದಿಗೆ ಹಾಸಿಗೆ ಹಂಚಲು ಯಾಕೆ ಇಷ್ಟವಿಲ್ಲವೆಂದು ತಿಳಿಯುವುದು. ಆತನನ್ನು ಉತ್ತೇಜಿಸುವಂತೆ ಮಾಡಿ. ಪ್ರತಿಯೊಂದು ನಡೆಯಲ್ಲೂ ಸ್ವರ್ಗವಿದೆ ಎಂದು ಹೇಳಿ. ಆತ್ಮವಿಶ್ವಾಸದ ಮಾತುಗಳು ಆತನನ್ನು ಮತ್ತೆ ನಿಮ್ಮೆಡೆಗೆ ಸೆಳೆಯುವುದು.

5.ಆತ ನಿಮ್ಮೊಂದಿಗೆ ಸಂತೋಷವಾಗಿಲ್ಲ

ನೀವು ಎಲ್ಲವನ್ನು ಸರಿಯಾಗಿ ಪ್ರಯತ್ನಿಸಿದರೂ ಆತ ನಿಮ್ಮೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ತಯಾರಿಲ್ಲವೆಂದಾದರೆ ಆಗ ಆತ ನಿಮ್ಮೊಂದಿಗೆ ಸಂತೋಷವಾಗಿಲ್ಲವೆಂದು ಅರ್ಥ. ಈ ಸಮಯದಲ್ಲಿ ಸಂಬಂಧದಲ್ಲಿ ಪ್ರೀತಿಯು ಸಾಯುವುದು ಮತ್ತು ಲೈಂಗಿಕ ಕ್ರಿಯೆಯು ನಿಮ್ಮ ಮಧ್ಯೆ ನಡೆಯುವುದು ದೂರದ ಮಾತು. ಪುರುಷನು ನಿಮ್ಮೊಂದಿಗಿನ ಸಂಬಂಧದಲ್ಲಿ ಸಂತೋಷವಾಗಿಲ್ಲವೆಂದಾದರೆ ಆಗ ಆತ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಬಗ್ಗೆ ಪರಿಗಣಿಸಲ್ಲ. ಆತ ಪ್ರೀತಿಸುವಂತೆ ಮಾಡಿ, ಸಂಬಂಧವು ಸುಧಾರಿಸಿದರೆ ಆಗ ಖಂಡಿತವಾಗಿಯೂ ಮತ್ತೆ ಆತ ಹಾಸಿಗೆಗೆ ಬರುತ್ತಾನೆ. ಹೀಗೆ ಆಗದೇ ಇದ್ದರೆ ನೀವು ಅದನ್ನು ಬಿಟ್ಟುಬಿಡುವುದು ಒಲಿತು.

ಪುರುಷರು ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಹಿಂಜರಿಯುವುದು ಯಾಕೆ ಎನ್ನುವುದನ್ನು ಇದು ಐದು ಕಾರಣಗಳು. ನೀವು ಸರಿಯಾಗಿ ಮಾತುಕತೆ ನಡೆಸಿ, ನಿಮ್ಮ ಲೈಂಗಿಕ ಜೀವನದ ಕಿಡಿಯನ್ನು ಉಳಿಸಿಕೊಳ್ಳಬಹುದು. ಇದಕ್ಕಾಗಿ ನಿಮ್ಮಿಬ್ಬರ ನಡುವಿನ ಪ್ರೀತಿ ಮತ್ತು ಆಕಾಂಕ್ಷೆಯು ಅತೀ ಅಗತ್ಯ. ಯಾವುದೇ ಸಮಸ್ಯೆಗಳಿದ್ದರೂ ಅದನ್ನು ನಿಮ್ಮ ಸಂಗಾತಿ ಜತೆಗೆ ಮಾತನಾಡಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಸುಂದರವಾದ ಲೈಂಗಿಕ ಜೀವನವನ್ನು ನಡೆಸಿ.
ನಿಮಗೆ ಈ ಲೇಖನವು ಇಷ್ಟವಾಗಿದ್ದರೆ ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆಗಳನ್ನು ಖಂಡಿತವಾಗಿಯೂ ಬರೆಯಿರಿ.

English summary

Is Your Man Bored Of Having Sex? The Reasons Are Here

Men being social animals are fond of affection and sex. Sex being the ultimate pleasure, becomes a process to connect with another human. Thus the way one thinks about sex differs from one man to another. In a relationship, there are various reasons that make a man get bored of the relationship. Does your man wonder and wander around and avoid sex as many times as you approach him? Things can be different and you won't be knowing.
X
Desktop Bottom Promotion