For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ಪುರುಷರಿಗೆ ಅಪ್ಪಿತಪ್ಪಿಯೂ ಮಹಿಳೆಯರು ಇಂತಹ ಪ್ರಶ್ನೆಗಳನ್ನು ಕೇಳಬಾರದು!

|

ಸಂಬಂಧಗಳು ದೀರ್ಘಕಾಲ ಬಾಳಬೇಕಾದರೆ ಇಬ್ಬರು ಸಂಗಾತಿಗಳ ಮಧ್ಯೆ ಉತ್ತಮ ಸಂಪರ್ಕ, ಮಾತುಕತೆ ಹಾಗೂ ಕಷ್ಟ ಸುಖ ಹಂಚಿಕೊಳ್ಳುವಿಕೆ ಬಹು ಮುಖ್ಯ ಪಾತ್ರ ವಹಿಸುತ್ತವೆ. ಆರೋಗ್ಯಕರ ಸಂಬಂಧಕ್ಕೆ ಇವು ಗಟ್ಟಿ ಅಡಿಪಾಯಗಳೂ ಹೌದು. ಆದರೂ ಕೆಲವೊಮ್ಮೆ ಮಾತನಾಡುವಾಗ ಏನು ಕೇಳಬೇಕು ಹಾಗೂ ಏನನ್ನು ಕೇಳಬಾರದು ಎಂಬ ಬಗ್ಗೆ ಜಾಗ್ರತೆ ವಹಿಸುವುದು ಸಹ ಅಗತ್ಯವಾಗುತ್ತದೆ.

ಅದರಲ್ಲೂ ಮಹಿಳೆಯರು ತಮ್ಮ ಪುರುಷ ಸಂಗಾತಿಗೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಅದಕ್ಕೆ ಅಷ್ಟೆ ಸಂತೋಷದಿಂದ ಪುರುಷರು ಉತ್ತರಗಳನ್ನೂ ನೀಡುತ್ತಾರೆ. ಆದರೆ ಹಾಗಂತ ಏನೇನೋ ಕೇಳಿ ಪುರುಷರಿಗೆ ಕಿರಿಕಿರಿಯುಂಟಾಗುವಂತೆ ಮಾಡುವುದು ಸಲ್ಲದು. ಪುರುಷ ಸಂಗಾತಿಗೆ ಮಹಿಳೆಯರು ಕೇಳುವ ಕೆಲ ಪ್ರಶ್ನೆಗಳು ಅವರಿಗೆ ಮುಜುಗರವನ್ನುಂಟು ಮಾಡುತ್ತವೆ. ಅತ್ತ 'ಹೌದು' ಎನ್ನಲಾಗದೆ ಇತ್ತ 'ಇಲ್ಲ' ಎನ್ನಲಾಗದೆ ಅವರು ಇಕ್ಕಟ್ಟಿಗೆ ಸಿಲುಕುವಂತಾಗುತ್ತದೆ. ಇದು ಸಂಬಂಧ ಹದಗೆಡಲು ಕಾರಣವೂ ಆಗಬಹುದು. ಹಾಗಾದರೆ ಮಹಿಳೆಯರು ತಮ್ಮ ಪುರುಷ ಸಂಗಾತಿಗೆ ಯಾವೆಲ್ಲ ಪ್ರಶ್ನೆಗಳನ್ನು ಕೇಳಬಾರದು ಎಂಬ ಕುತೂಹಲ ನಿಮ್ಮಲ್ಲಿದ್ದರೆ ಈ ಅಂಕಣ ಓದಿ....ತಮ್ಮ ಪುರುಷ ಸಂಗಾತಿಗೆ ಮಹಿಳೆಯರು ಕೇಳಲೇಬಾರದ ಪ್ರಶ್ನೆಗಳು ಹೀಗಿವೆ ನೋಡಿ:

ನಾನು ದಪ್ಪಗಿರುವೆನೆಂದು ನಿನಗೆ ಅನಿಸುತ್ತದೆಯಾ?

ನಾನು ದಪ್ಪಗಿರುವೆನೆಂದು ನಿನಗೆ ಅನಿಸುತ್ತದೆಯಾ?

ಬಹುತೇಕ ಪುರುಷರು ಇಂಥ ಒಂದು ಪ್ರಶ್ನೆಯನ್ನು ಉತ್ತರಿಸಲು ಇಷ್ಟಪಡುವುದಿಲ್ಲ. ಇಂಥ ಪ್ರಶ್ನೆಗೆ ಸಮರ್ಪಕ ಉತ್ತರ ನೀಡುವುದು ಪುರುಷ ಸಂಗಾತಿಗೆ ಸಾಧ್ಯವಾಗದೆ ಆತ ಚಡಪಡಿಸುವಂತಾಗುತ್ತದೆ. ನಾನು ದಪ್ಪಗಿರುವೆನೆಂದು ನಿನಗೆ ಅನಿಸುತ್ತದೆಯಾ ಎಂದು ಮಹಿಳಾ ಸಂಗಾತಿ ಕೇಳಿದಾಗ ಒಂದೊಮ್ಮೆ ಪುರುಷ ಸಂಗಾತಿ 'ಇಲ್ಲ' ಎಂದು ಹೇಳಿದಲ್ಲಿ ಅದಕ್ಕೆ 'ನೀನು ಸುಳ್ಳು ಹೇಳುತ್ತಿರುವೆ' ಎಂದು ಮಹಿಳೆ ತಕರಾರು ತೆಗೆಯಬಹುದು.

ನಾನು ದಪ್ಪಗಿರುವೆನೆಂದು ನಿನಗೆ ಅನಿಸುತ್ತದೆಯಾ?'ನೀನು ದಪ್ಪಗಿಲ್ಲ, ಆದರೂ ಐಸ್ ಕ್ರೀಂ ತಿನ್ನುವುದನ್ನು ಕಡಿಮೆ ಮಾಡು' ಎಂದು ಸೂಕ್ಷ್ಮವಾಗಿ ಪುರುಷನೇನಾದರೂ ಹೇಳಿದರೆ ಕತೆ ಮುಗಿದಂತೆಯೇ. ಇಂಥ ಉತ್ತರ ಮಹಿಳೆಯ ಮನಸ್ಸಿಗೆ ಘಾಸಿ ಮಾಡಬಹುದು. ಸಾಮಾನ್ಯವಾಗಿ ಪುರುಷರು ಆತ್ಮವಿಶ್ವಾಸ ಹಾಗೂ ದೃಢ ಮನಸ್ಸಿನ ಮಹಿಳೆಯರನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಇಂಥ ಪ್ರಶ್ನೆಗಳಿಂದ ಮಹಿಳೆಯರು ತಮ್ಮ ಮನದಲ್ಲಿನ ಅಸುರಕ್ಷಿತ ಭಾವನೆಯನ್ನು ಹೊರಹಾಕಿದಂತಾಗುತ್ತದೆ. ಜೊತೆಗೆ ಸುಖಾ ಸುಮ್ಮನೆ ಸಂಬಂಧದಲ್ಲಿ ಬಿರುಕು ಮೂಡಿಸಿದಂತಾಗುತ್ತದೆ. ಹೀಗಾಗಿ ದಪ್ಪಗಿರುವ ಬಗ್ಗೆ ಮಹಿಳೆಯರು ತಮ್ಮ ಪುರುಷ ಸಂಗಾತಿಗೆ ಈ ಪ್ರಶ್ನೆ ಕೇಳದಿರುವುದೇ ಲೇಸು.

Most Read: ಸೈಲೆಂಟಾಗಿ ನಿಮ್ಮ ಸಂಬಂಧವನ್ನು ಹಾಳು ಮಾಡುತ್ತಿರುವ ಲೈಂಗಿಕ ಸಮಸ್ಯೆಗಳು!

ನಿನ್ನ ಹಳೆ ಗರ್ಲ್ ಫ್ರೆಂಡ್ ಹೇಗಿದ್ದಳು?

ನಿನ್ನ ಹಳೆ ಗರ್ಲ್ ಫ್ರೆಂಡ್ ಹೇಗಿದ್ದಳು?

ಪುರುಷನಿಗೆ ಆತನ ಹಿಂದಿನ ಗರ್ಲ್ ಫ್ರೆಂಡ್ ಬಗ್ಗೆ ಪ್ರಶ್ನೆ ಮಾಡುವ ಮೊದಲು ಹುಷಾರಾಗಿರಬೇಕು. ಈ ಪ್ರಶ್ನೆ ಮಾಡುವ ಹಿಂದಿನ ಉದ್ದೇಶಗಳೇನು ಎಂಬುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ. ನಿಮಗೂ ಮುನ್ನ ಆತ ಎಂಥ ಮಹಿಳೆಯತ್ತ ಆಕರ್ಷಿತನಾಗಿದ್ದ ಎಂಬುದನ್ನು ತಿಳಿಯುವ ಕುತೂಹಲವಾ ಅಥವಾ ಸುಮ್ಮನೆ ತಮಾಷೆಗೆ ಕೇಳುತ್ತಿರುವುದಾ ಅಥವಾ ನಿಮಗೂ ಮುನ್ನ ಆತ ಪ್ರೀತಿಸಿದ ಹುಡುಗಿಯ ಮೇಲೆ ನಿಮಗೇನಾದರೂ ಅಸೂಯೆ ಮೂಡಿದೆಯಾ ಎಂಬುದನ್ನು ವಿವೇಚಿಸಿ ನೋಡಿ.

ನಿನ್ನ ಹಳೆ ಗರ್ಲ್ ಫ್ರೆಂಡ್ ಹೇಗಿದ್ದಳು?

ನಿನ್ನ ಹಳೆ ಗರ್ಲ್ ಫ್ರೆಂಡ್ ಹೇಗಿದ್ದಳು?

ಇಷ್ಟಕ್ಕೂ ಆತ ಈ ಪ್ರಶ್ನೆಗೆ ಉತ್ತರ ನೀಡಿದಲ್ಲಿ ಅದರಿಂದ ನಿಮಗಾಗುವ ಲಾಭವಾದರೂ ಏನು? ಇಂದು ಆ ಪ್ರಶ್ನೆ ಎತ್ತುವುದು ಎಷ್ಟು ಪ್ರಸ್ತುತ ಎಂಬ ಅರಿವು ನಿಮ್ಮಲ್ಲಿರಲಿ. ಇವತ್ತು ಆತ ಅವಳ ಜೊತೆಗಲ್ಲ, ನಿಮ್ಮೊಂದಿಗೆ ಇರುವುದು ಎಂಬುದು ಗೊತ್ತಿರಲಿ. ಇದಕ್ಕೂ ಹೆಚ್ಚು ಮತ್ತೇನನ್ನೋ ಬಯಸುವುದು ತಪ್ಪಾದೀತು. ಇಂಥ ಪ್ರಶ್ನೆಗಳು ಸಹ ನಿಮ್ಮಲ್ಲಿನ ಅಸುರಕ್ಷತೆಯ ಭಾವನೆಯನ್ನು ತೋರ್ಪಡಿಸಿ ಸಂಬಂಧ ಹದಗೆಡಲು ಕಾರಣವಾಗಬಹುದು. ಯಾವುದೋ ಕಾರಣ ಇಟ್ಟುಕೊಂಡು ಸಂಬಂಧಗಳನ್ನು ಬೆಸೆಯಲಾಗುವುದಿಲ್ಲ. ಹೀಗಾಗಿ ಹಳೆಯ ಘಟನೆಗಳನ್ನು ನೆನಪಿಸಿ ಹಿತವಾದ ಸಂಬಂಧದಲ್ಲಿ ಹುಳಿ ಹಿಂಡುವುದು ಬೇಡ.

Most Read: ನೀವು ಪತ್ನಿಗೆ ಹೇಳಲೇಬಾರದ ಕೆಲವು ವಿಷಯಗಳು!

ನೀನು ಅಲ್ಲಿಗೆ ಹೋದ ಮೇಲೆ ಕಾಲ್ ಮಾಡುತ್ತೀಯಾ?

ನೀನು ಅಲ್ಲಿಗೆ ಹೋದ ಮೇಲೆ ಕಾಲ್ ಮಾಡುತ್ತೀಯಾ?

ನೀನು ಊರಿಗೆ ಹೋದ ಮೇಲೆ ನಂಗೆ ಕಾಲ್ ಮಾಡ್ತಾ ಇರ್‍ತೀಯಾ ಅಲ್ವಾ? ಆಫೀಸಿಗೆ ಹೋಗುವ ಮುಂಚೆ ಮೆಸೇಜ್ ಮಾಡ್ತೀಯಾ? ಮಲಗೋ ಮುಂಚೆ ಮತ್ತೆ ಕಾಲ್ ಮಾಡ್ತಿಯಾ ಚಿನ್ನಾ? ಎಂದೆಲ್ಲ ಹುಡುಗಿಯರು ತಮ್ಮ ಲವರ್ ಗೆ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ತನ್ನ ಪ್ರೀತಿಯ ಹುಡುಗಿಗೆ ಕಾಲ್ ಮಾಡುವುದು, ಮಾತನಾಡುವುದು ಎಂದರೆ ಹುಡುಗನಿಗೂ ಇಷ್ಟವೇ. ಆದರೆ ಹುಡುಗರು ತಾವು ಬಯಸಿದಾಗ ಮಾತ್ರ ಇದನ್ನೆಲ್ಲ ಮಾಡುವುದು ಎಂಬುದನ್ನು ಹುಡುಗಿಯರು ತಿಳಿದುಕೊಳ್ಳುವುದು ಒಳಿತು.

ನೀನು ಅಲ್ಲಿಗೆ ಹೋದ ಮೇಲೆ ಕಾಲ್ ಮಾಡುತ್ತೀಯಾ?

ನೀನು ಅಲ್ಲಿಗೆ ಹೋದ ಮೇಲೆ ಕಾಲ್ ಮಾಡುತ್ತೀಯಾ?

ಪ್ರತಿ ಬಾರಿಯೂ ತಾನೆಲ್ಲಿಗೆ ಹೋಗುತ್ತಿದ್ದೇನೆ, ಏನು ಮಾಡುತ್ತಿದ್ದೇನೆ, ಯಾರನ್ನು ಭೇಟಿ ಮಾಡುತ್ತೀದ್ದೇನೆ ಎಂಬುದನ್ನು ಆಗಾಗ ಕಾಲ್ ಮಾಡಿ ಹೇಳಬೇಕೆಂದು ಹುಡುಗಿ ಬಯಸಿದರೆ ಸರಿಯಾಗಲಾರದು. ಇದು ಹುಡುಗರಲ್ಲಿ ಖಂಡಿತವಾಗಿಯೂ ಕಿರಿಕಿರಿಯ ಭಾವನೆಯನ್ನು ಮೂಡಿಸುತ್ತದೆ. ಇದರಿಂದ ಆತ ತನ್ನ ಹುಡುಗಿಯ ಕರೆಗಳಿಗೆ ಉತ್ತರಿಸುವುದನ್ನು ಕಡಿಮೆ ಮಾಡುತ್ತ ಹೋಗುವ ಸಾಧ್ಯತೆಗಳಿರುತ್ತವೆ. ಗಂಟೆಗೊಮ್ಮೆ ನಿಮ್ಮ ಪ್ರೀತಿಯ ಹುಡುಗ ಕಾಲ್ ಮಾಡಿ ಮಾತನಾಡುವುದು ನಿಮಗೆ ಸಂತೋಷ ತರಬಲ್ಲದು. ಆದರೆ ನಿಮ್ಮ ಹುಡುಗನಿಗೆ ನಿಮ್ಮ ನೆನಪಾದಾಗ ಆತನೇ ನಿಮಗೆ ಕಾಲ್ ಮಾಡುವುದು, ತಾನಾಗಿಯೇ ಎಲ್ಲ ಹೇಳಿಕೊಳ್ಳುವಷ್ಟು ಸ್ವಾತಂತ್ರ್ಯವನ್ನು ಆತನಿಗೆ ನೀಡಿ ಅದನ್ನು ನೀವು ಎಂಜಾಯ್ ಮಾಡುವುದು ಎಷ್ಟು ಹಿತವಾಗಿರುತ್ತದೆ ಎಂಬುದನ್ನು ಯೋಚಿಸಿ ನೋಡಿ. ಸಂಗಾತಿಯು ಪ್ರೀತಿಯಿಂದ ಇಷ್ಟಪಟ್ಟು ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೂ, ಬಲವಂತದಿಂದ ಅದನ್ನು ಮಾಡಿಸುವುದಕ್ಕೂ ಬಹಳ ವ್ಯತ್ಯಾಸವಿದೆ.

Most Read: ಪತ್ನಿಯರು ತಮ್ಮ ಪತಿಯಂದಿರ ಬಳಿ ಏನನ್ನು ಅಪೇಕ್ಷಿಸುತ್ತಾರೆ?

ಭವಿಷ್ಯದ ನಮ್ಮ ಜೀವನ ಹೇಗಿರಬಹುದು?

ಭವಿಷ್ಯದ ನಮ್ಮ ಜೀವನ ಹೇಗಿರಬಹುದು?

ಸಾಮಾನ್ಯವಾಗಿ ಹುಡುಗರ ಮನಸಿನಲ್ಲಿ ಮುಂದಿನ 10 ಅಥವಾ 20 ವರ್ಷಗಳ ಜೀವನದ ಬಗ್ಗೆ ಅಂಥ ದೊಡ್ಡ ಕಲ್ಪನೆಗಳು ಇರುವುದಿಲ್ಲ. ಅವರು ಪ್ರಸ್ತುತದಲ್ಲಿ ಜೀವಿಸುತ್ತ, ತನ್ನ ಸಂಗಾತಿಯೊಂದಿಗೆ ಜೀವನ ಎಂಜಾಯ್ ಮಾಡಲು ಬಯಸುತ್ತಿರುತ್ತಾರೆ. ಹಾಗಂತ ಹುಡುಗರಿಗೆ ಭವಿಷ್ಯದ ಬಗ್ಗೆ ಚಿಂತೆಯೇ ಇರುವುದಿಲ್ಲ ಅಥವಾ ಅವರಿಗೆ ಜೀವನದಲ್ಲಿ ಗುರಿಗಳೇ ಇರುವುದಿಲ್ಲ ಎಂದರ್ಥವಲ್ಲ. ಸದ್ಯ ಅವಳಿಗಾಗಿ ತನ್ನ ಜೀವನವನ್ನು ಸಮರ್ಪಿಸಿಕೊಂಡಿರುವ ಆತ ಖುಷಿಯಾಗಿದ್ದು, ಜೀವನ ಇನ್ನಷ್ಟು ಕಾಲ ಹೀಗೆಯೇ ಮುಂದುವರೆಯಲಿ ಎಂಬುದು ಆತನ ಬಯಕೆಯಾಗಿರುತ್ತದೆ. ಅದನ್ನೆಲ್ಲ ಬಿಟ್ಟು ಇನ್ನು ಹತ್ತು ವರ್ಷ ಬಿಟ್ಟು ಏನಾಗಲಿದೆ ಎಂದು ಚಿಂತಿಸುತ್ತ ಕೂರುವುದು ಆತನಿಗಿಷ್ಟವಾಗದ ಸಂಗತಿ.

ಅಸುರಕ್ಷತೆಯ ಭಾವನೆಯಿಂದ ಹೊರಬನ್ನಿ

ಅಸುರಕ್ಷತೆಯ ಭಾವನೆಯಿಂದ ಹೊರಬನ್ನಿ

ಅಸುರಕ್ಷತೆಯ ಭಾವನೆಯಿಂದ ಬಳಲುತ್ತಿರುವ ಮಹಿಳೆಯರು ಬಹುತೇಕ ಸಂದರ್ಭಗಳಲ್ಲಿ ಮದುವೆ, ಮಕ್ಕಳು, ಮನೆ ಕಟ್ಟುವುದು, ಮುಂದಿನ ಜೀವನ ಇಂಥ ಪ್ರಶ್ನೆಗಳನ್ನು ಪದೆ ಪದೆ ಕೇಳುತ್ತ ಕಿರಿಕಿರಿ ಉಂಟು ಮಾಡುತ್ತಿರುತ್ತಾರೆ. ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಳ್ಳುವುದು ತಪ್ಪಲ್ಲ. ಆದರೆ ಇದೀಗ ಆರು ತಿಂಗಳಿಂದ ಜೊತೆಯಾಗಿರುವ ಹುಡುಗನಿಗೆ ಇಂಥ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸಮಂಜಸ ಎಂಬುದನ್ನು ಹುಡುಗಿಯರು ಮೊದಲು ತಮ್ಮನ್ನು ತಾವೇ ಕೇಳಿಕೊಳ್ಳಬೇಕು. ಆದಷ್ಟೂ ಇಂಥ ಪ್ರಶ್ನೆಗಳನ್ನು ಕೇಳದೆ ಪ್ರೀತಿ, ವಿಶ್ವಾಸಗಳಿಂದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಯತ್ನಿಸಿದಲ್ಲಿ ಬಯಸಿದ್ದೆಲ್ಲ ತಾನಾಗಿಯೇ ದೊರಕಬಲ್ಲದು.

English summary

Irritating Questions You Should Never Ask Your Man

Communication is crucial in a healthy relationship and most guys are game to answer any questions you may have. However, there are some questions that a man never wants to hear come out of a woman's mouth. To avoid ruining your chances with a guy, here are four questions to never ask a guy.
X
Desktop Bottom Promotion