Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆತ ಹೀಗೆಲ್ಲಾ ಸುತ್ತಿ-ಬಳಸಿ ಮಾತನಾಡುತ್ತಿದ್ದರೆ, ನಿಮ್ಮನ್ನು ಮದುವೆಯಾಗಲು ಬಯಸುತ್ತಾನೆ ಎಂದರ್ಥ!
ಪ್ರೀತಿಪ್ರೇಮವೆನ್ನುವುದು ಅದಾಗಿಯೇ ಮೂಡುವುದು. ಕಚೇರಿಯ ಸಹೋದ್ಯೋಗಿ, ಕಾಲೇಜಿನ ಸಹಪಾಠಿ, ಪ್ರತಿನಿತ್ಯ ಸಿಗುವ ಸಹಪ್ರಯಾಣಿಕ ಹೀಗೆ ಎಲ್ಲಿ ಬೇಕಿದ್ದರೂ ನಿಮ್ಮಲ್ಲಿ ಪ್ರೀತಿ ಮೊಳಕೆಯೊಡಬಹುದು. ನೀವು ಈಗಾಗಲೇ ಯಾರಾನ್ನಾದರೂ ಪ್ರೀತಿಸಲು ಆರಂಭಿಸಿದ್ದೀರಿ ಮತ್ತು ನೀವು ಆ ಮಧುರ ಕ್ಷಣಗಳನ್ನು ಆನಂದಿಸುತ್ತೀರಿ ಕೂಡ. ಆದರೆ ಕೆಲವೊಂದು ಸಮಸ್ಯೆಗಳು ನಿಮ್ಮಿಬ್ಬರಲ್ಲಿ ಕಾಣಿಸಿಕೊಂಡಿದೆ. ಸಂಬಂಧವೆಂದ ಮೇಲೆ ಸಮಸ್ಯೆಗಳು ಇರಲೇಬೇಕು. ಸಮಸ್ಯೆಗಳು ಇದ್ದರೆ ಮಾತ್ರ ಸಂಬಂಧವು ಬಲಗೊಳ್ಳುವುದು.
ನೀವು ಇಬ್ಬರು ಜತೆಯಾಗಿ ಸಮಸ್ಯೆಗಳನ್ನು ಪರಿಹರಿಸಿದಾಗ ಭಾಂದವ್ಯ ಬೆಸೆಯುವುದು. ಕೆಲವೊಂದು ವಿಚಾರಗಳಿಂದ ಆತ ನಿಮ್ಮನ್ನು ಮದುವೆಯಾಗಲು ಬಯಸುತ್ತಿದ್ದಾನೆ ಎಂದು ನೀವು ತಿಳಿದುಕೊಳ್ಳಬಹುದು. ಇಂತಹ ಐದು ವಿಚಾರಗಳನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಪ್ರೀತಿಯಲ್ಲಿರುವ ಮಹಿಳೆಯರು ಇದನ್ನು ತಿಳಿಯಲೇಬೇಕು.....ಓದಲು ತಯಾರಾಗಿರಿ.

1. ನಿಮ್ಮೊಂದಿಗೆ ಆತನ ಬಯಕೆಗಳೇನು ಮತ್ತು ನಿಮ್ಮೊಂದಿಗೆ ಕುಟುಂಬಕ್ಕೆ ಬಯಸುವನು
ಜೀವನದಲ್ಲಿ ತನ್ನ ಗುರಿಗಳನ್ನು ಹೇಳಿಕೊಳ್ಳುವಾಗ ಆತ ಈ ವಿಚಾರಗಳ ಬಗ್ಗೆ ಹೇಳುತ್ತಲಿದ್ದರೆ ಆಗ ಆತ ನಿಮ್ಮನ್ನು ಮದುವೆಯಾಗಲು ಬಯಸುತ್ತಿದ್ದಾನೆಂದು ನೀವು ಅರ್ಥ ಮಾಡಿಕೊಳ್ಳಬೇಕು. ನಿಮ್ಮೊಂದಿಗೆ ಮದುವೆಯಾಗುವ ಆಲೋಚನೆ ಇಲ್ಲದೆ ಹೋಗಿದ್ದರೆ ಆಗ ಆತ ನಿಮ್ಮೊಂದಿಗೆ ಈ ವಿಚಾರಗಳ ಬಗ್ಗೆ ಮಾತನಾಡುತ್ತಲೇ ಇರಲಿಲ್ಲ. ನೀವು ಮತ್ತು ಆತ ಜತೆಗಿರುವ ಜೀವನದ ಬಗ್ಗೆ ಆತ ಈಗಾಗಲೇ ಕನಸು ಕಂಡುಕೊಂಡಿದ್ದಾನೆ.
2. ಇತರ ಯಾರೊಂದಿಗೂ ಹೊಸ ಸಂಬಂಧ ಬೆಳೆಸುವುದು ಇಷ್ಟವಾಗಲಾರದು
ನೀವು ಯಾವುದೇ ರೀತಿಯ ಹೊಸ ಸಂಬಂಧದ ಬಗ್ಗೆ ಮಾತನಾಡುತ್ತಾ ಇರುವಾಗ ಆತ ಅದನ್ನು ಕಡೆಗಣಿಸುತ್ತಾ ಇದ್ದರೆ ಆಗ ಇದು ಮದುವೆಯ ಸೂಚನೆ. ಆತ ಯಾವಾಗಲೂ ನಿಮಗೆ ಬದ್ಧನಾಗಿ ಉಳಿಯುತ್ತಾನೆಂದು ನಿಮಗೆ ತಿಳಿದಿದೆ. ಆತ ನಿಮಗೆ ಪ್ರಾಮಾಣಿಕವಾಗಿರುವ ಬಗ್ಗೆ ನೇರವಾಗಿ ಹೇಳುತ್ತಾನೆ. ಆತ ಬೇರೆ ಯಾರಾನ್ನಾದರೂ ನಿಮ್ಮ ಜಾಗದಲ್ಲಿ ನೋಡಲು ಬಯಸುತ್ತೇನೆಂದು ಹೇಳಲ್ಲ. ಆತ ನಿಮ್ಮೊಂದಿಗೆ ಇರುತ್ತಾನೆಂದು ನೇರವಾಗಿ ಹೇಳಿದರೆ ಆಗ ಯಾವುದೇ ರೀತಿಯ ಸಮಸ್ಯೆಯಿಲ್ಲ. ಆತ ನಿಮ್ಮನ್ನು ಮದುವೆಯಾಗಲು ಬಯಸುತ್ತಾನೆ ಎನ್ನುವುದನ್ನು ಇದು ಹೇಳುತ್ತದೆ.
3. ವಿಚಾರಗಳು ಮುಂದೆ ಸಾಗುತ್ತಲಿರುವುದು
ಮುಂದೆ ಸಾಗುವ ದೃಷ್ಟಿಕೋನದಲ್ಲಿ ಎಲ್ಲವನ್ನು ಇರಿಸಿ. ಆತ ಇದುವರೆಗೆ ನಿಮಗೆ ಪ್ರೇಮ ನಿವೇದನೆ ಮಾಡಿಲ್ಲ ಮತ್ತು ಸಂಬಂಧವು ಮುಂದೆ ಸಾಗುತ್ತಿಲ್ಲವೆಂದು ಅರ್ಥವಲ್ಲ. ನಿಧಾನ ಹಾಗೂ ಕ್ರಮಬದ್ಧವಾಗಿ ಇದು ಮುಂದೆ ಸಾಗಬಹುದು. ಆದರೆ ಇದು ನಿಶ್ಚಲವಾಗಬಾರದು. ನೀವಿಬ್ಬರು ತುಂಬಾ ಬಲವಾದ ಉತ್ಸಾಹ ಹಾಗೂ ಅನ್ಯೋನ್ಯತೆಯನ್ನು ದೀರ್ಘಕಾಲದಿಂದ ಉಳಿಸಿಕೊಂಡಿದ್ದರೆ ಆಗ ನೀವು ತುಂಬಾ ಸಂತೋಷಪಡಬೇಕು. ಆತ ನಿಮ್ಮೊಂದಿಗೆ ಪ್ರೀತಿಯಲ್ಲಿದ್ದಾನೆ ಮತ್ತು ಮದುವೆಯಾಗಲು ಬಯಸಿದ್ದಾನೆ ಎಂದರ್ಥ.
4. ಆತನಿಗೆ ಮದುವೆಯಾಗಿರುವ ಗೆಳೆಯರು
ನಿಮ್ಮೊಂದಿಗೆ ಆತ ಮದುವೆ ಪ್ರಸ್ತಾವ ಇಡುವವನಿದ್ದರೆ ಮತ್ತು ಮದುವೆಯಾಗಲು ಉತ್ಸುಕನಾಗಿದ್ದರೆ ಆಗ ಆತ ಖಂಡಿತವಾಗಿಯೂ ತನ್ನ ಮದುವೆಯಾಗಿರುವ ಗೆಳೆಯರ ಬಗ್ಗೆ ಮಾತನಾಡಲಿದ್ದಾನೆ. ತನ್ನ ಗೆಳೆಯ ಮತ್ತು ಆತನ ಸಂಗಾತಿ ನಡುವಿನ ಪ್ರೀತಿ ಬಗ್ಗೆ ಹೇಳಿಕೊಳ್ಳುತ್ತಾನೆ. ಆತನ ಹೆಚ್ಚಿನೆಲ್ಲಾ ಗೆಳೆಯರು ಮದುವೆಯಾಗಿದ್ದರೆ ಆಗ ಆತ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದಾನೆ. ಇದರಿಂದ ಆತನಿಗೆ ನಿಮ್ಮನ್ನು ಮದುವೆಯಾಗಲು ಆಸಕ್ತಿಯಿದೆ ಎಂದು ತಿಳಿಯಬಹುದು.
5. ಆತನ ಸಾಮಾನ್ಯ ನಡವಳಿಕೆಯು ಅಸಾಮಾನ್ಯವಾಗುವುದು
ಆತ ನಿಮಗೆ ಮದುವೆ ಪ್ರಸ್ತಾವ ಮಾಡುತ್ತಾನೆಂದರೆ ಆಗ ಆತ ಸಣ್ಣ ಸಣ್ಣ ವಿಚಾರಗಳು ನಿಮ್ಮಿಬರ ಮಧ್ಯೆ ಮೊದಲ ಸಲ ನಡೆಯುತ್ತಿದೆಯೆನ್ನುವಂತೆ ಮಾತನಾಡುವನು. ನೀವು ತುಂಬಾ ದೀರ್ಘ ಸಮಯದ ತನಕ ಜತೆಯಾಗಿದ್ದರೂ ಆತ ಮಾತ್ರ ನಿಮ್ಮಿಬ್ಬರ ಮೊದಲ ಭೇಟಿಯಂತೆ ವರ್ತಿಸುತ್ತಾನೆ. ಆತ ಮದುವೆ ಪ್ರಸ್ತಾವನ್ನಿಡಲು ತಯಾರಾಗಿದ್ದಾನೆ ಎನ್ನುವುದರ ಸೂಚನೆಯಿದು. ಪುರುಷರು ಮದುವೆ ಪ್ರಸ್ತಾವನ್ನಿಡುತ್ತಾರೆ ಎನ್ನುವುದನ್ನು ತಿಳಿಯಲು ಇದು ಕೆಲವೊಂದು ವಿಧಾನಗಳು.
ಮದುವೆ ವಿಚಾರದ ಬಗ್ಗೆ ಯಾರೂ ತುಂಬಾ ಲಘುವಾಗಿ ಪರಿಗಣಿಸಬಾರದು ಮತ್ತು ಇದರ ಬಗ್ಗೆ ಅವಸರ ಕೂಡ ಸರಿಯಲ್ಲ. ಕೆಲವೊಂದು ಅಂಶಗಳು ಮದುವೆಯ ಬಲ ಮತ್ತು ಸಾಮರ್ಥ್ಯ ನಿರ್ಧರಿಸುವುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕು.
ನಿಮಗೆ ಗೊಂದಲವಿರುವ ಸಂಬಂಧದಲ್ಲಿ ಒತ್ತಡಕ್ಕೆ ಮದುವೆಯಾಗಬೇಡಿ. ಆತನಿಗೂ ಕೂಡ ಇದೇ ರೀತಿ ಒತ್ತಡವನ್ನು ನೀವು ಹಾಕಬೇಡಿ. ನಿಮ್ಮ ಸಮಯ ಬಂದೇ ಬರುವುದು. ನೀವಿಬ್ಬರು ತಯಾರಾಗಿದ್ದೀರಿ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕು. ನಿಮ್ಮ ಸರಿಯಾದ ನಿರ್ಧಾರವು ಮದುವೆಯೆಂಬ ಹೊಸ ಜೀವನದಲ್ಲಿ ನಿಮಗೆ ಸಂತೋಷ ನೀಡುವುದು.



Click it and Unblock the Notifications
