For Quick Alerts
ALLOW NOTIFICATIONS  
For Daily Alerts

ಅರೇಂಜ್ಡ್ ಮ್ಯಾರೇಜ್- ಈ ಐದು ವಿಚಾರಗಳು ನಿಮಗೆ ತಿಳಿದಿರಲಿ

|

ಇತ್ತೀಚಿನ ದಿನಗಳಲ್ಲಿ ಯುವಜನತೆ ಪ್ರೀತಿ ಪ್ರೇಮಗಳಂತಹ ಸಂಬಂಧಗಳಿಂದ ಬೇಸತ್ತು ತಮ್ಮ ಕನಸಿನ ಸಂಗಾತಿಯನ್ನು ಹುಡುಕಲು ಅಂತರ್ಜಾಲದಲ್ಲಿ ಮ್ಯಾಟ್ರಿಮೋನಿ ಹಾಗೂ ತಮ್ಮ ತಂದೆ ತಾಯಿಯರು ತೋರಿಸಿದ ಸಂಬಂಧಗಳ ಮೊರೆ ಹೋಗುತ್ತಾ ಇದ್ದಾರೆ ಅಂದರೆ ಅರೇಂಜ್ಡ್ ಮ್ಯಾರೇಜ್. ಇದು ಸರಿಯಾಗಿಯೇ ಇದೆ. ತಮ್ಮ ಸಂಪೂರ್ಣ ಜೀವನವನ್ನು ಯಾರೋ ಒಬ್ಬ ಅಪರಿಚಿತ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದು ಭಯ ಹುಟ್ಟಿಸುವಂತಹ ವಿಚಾರವೇ ಆದರೂ ಇನ್ನೊಂದು ಕಡೆಯಿಂದ ರೋಚಕವಾದ ವಿಚಾರ! ಸ್ತ್ರೀ ಹಾಗೂ ಪುರುಷರು ವ್ಯವಸ್ಥಿತ ಮದುವೆಯನ್ನು ಬಹಳವೇ ಇಷ್ಟಪಡುತ್ತಾ ಇದ್ದಾರೆ.

ಆದರೆ ನೀವು ಮದುವೆಯಾಗುವ ವ್ಯಕ್ತಿಯ ಜೊತೆಗೆ ನೀವು ನಿಮ್ಮ ಇಡೀ ಜೀವನವನ್ನು ಕಳೆಯಬೇಕು.ಆದ್ದರಿಂದ ಅವರ ಬಳಿ ನೀವು ಏನೇನನ್ನು ಅಪೇಕ್ಷಿಸಬೇಕು ಎಂಬ ವಿಚಾರ ನಿಮಗೆ ತಿಳಿದಿದೆಯೇ ?ನೀವು ಅವರ ಬಳಿ ಇಷ್ಟ ಪಡುವಂತಹ ಹಾಗು ಇಷ್ಟ ಪಡದೇ ಇರುವಂತಹ ಸಾವಿರ ವಿಷಯಗಳು ಇರಬಹುದು.ನೀವು ಅವರ ಜೊತೆ ಸ್ವಲ್ಪ ಸಮಯವನ್ನು ಕಳೆಯದೆ ಇದ್ದರೆ ಈ ವಿಷಯಗಳು ನಿಮಗೆ ತಿಳಿಯುವುದು ಕಷ್ಟವಾಗುತ್ತದೆ.ಆದ್ದರಿಂದ ನೀವು ವ್ಯವಸ್ಥಿತ ಮದುವೆಯನ್ನು ಎದುರು ನೋಡುತ್ತಾ ಇದ್ದರೆ ನಿಮ್ಮ ಸಂಗಾತಿಯಾಗುವವರ ಜೊತೆಗೆ ಸ್ವಲ್ಪ ಸಮಯವನ್ನು ಕಳೆದು ಅವರ ಬಗ್ಗೆ ತಿಳಿದುಕೊಂಡರೆ ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುತ್ತದೆ... ಮುಂದೆ ಓದಿ...

ಅವರ ಸಂವಹನ ಕಲೆ ಹೇಗಿದೆ?

ಅವರ ಸಂವಹನ ಕಲೆ ಹೇಗಿದೆ?

ಎಲ್ಲದಕ್ಕೂ ಮೊದಲ ಹೆಜ್ಜೆಯಾಗಿ ನೀವು ಖಂಡಿತವಾಗಿಯೂ ಅವರನ್ನು ಭೇಟಿಯಾಗಿರುತ್ತೀರಾ.ಮದುವೆಯ ಮಾತು ಕಥೆ ಮುಂದುವರೆಸುವ ಮೊದಲು ಅವರ ಮಾತು ಹೇಗಿದೆ ಎಂದು ನೀವು ತಿಳಿದುಕೊಳ್ಳಲು ಪ್ರಯತ್ನಿಸಿ. ನೀವು ಇಷ್ಟ ಪಡುವಂತೆ ಅವರು ಮಾತನಾಡುತ್ತಾರೆಯೇ ಹಾಗು ತಮ್ಮ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂದು ತಿಳಿದುಕೊಳ್ಳಿ.ಸಂವಹನ ಕಲೆ ಎಂಬುದು ಮದುವೆಯ ವಿಷಯದಲ್ಲಿ ತುಂಬಾ ಮುಖ್ಯ.ನೀವು ಅಥವಾ ನಿಮ್ಮ ಸಂಗಾತಿ ಸರಿಯಾಗಿ ಮಾತನಾಡದೆ ಇದ್ದರೆ ಅದು ನಿಮ್ಮ ವೈವಾಹಿಕ ಜೀವನಕ್ಕೆ ಮುಂದೆ ತೊಂದರೆಯನ್ನು ತಂದೊಡ್ಡ ಬಹುದು. ಆದ್ದರಿಂದ ಅವರು ಅಂತರ್ಮುಖಿಯಾಗಿದ್ದರೂ ತಮ್ಮ ಭಾವನೆಗಳನ್ನು ಹೇಗೆ ವ್ಯಕ್ತ ಪಡಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.

Most Read:ಜ್ಞಾಪಕಶಕ್ತಿ ಹೆಚ್ಚಲು, ತಪ್ಪದೇ ಇಂತಹ ಆಹಾರಗಳನ್ನು ದಿನನಿತ್ಯ ಸೇವಿಸಿ

2.ಅವರು ಪ್ರಾಬಲ್ಯವನ್ನು ಸಾಧಿಸುತ್ತಾ ಇದ್ದಾರೆಯೇ?

2.ಅವರು ಪ್ರಾಬಲ್ಯವನ್ನು ಸಾಧಿಸುತ್ತಾ ಇದ್ದಾರೆಯೇ?

ನೀವು ಮದುವೆಯಾಗುತ್ತಿರುವ ಹುಡುಗಿ ಅಥವಾ ಹುಡುಗನ ಜೊತೆಗೆ ಹೆಚ್ಚು ಸಮಯವನ್ನು ಕಳೆಯುವುದರಿಂದ ಅವರು ಹೇಗೆ ಏನು ಎಂಬ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ಸಹಾಯಕಾರಿಯಾಗಿದೆ.ನಿಮ್ಮ ಮೇಲೆ ಹಿಡಿತ ಸಾಧಿಸುವಂತಹವರನ್ನು ಮದುವೆಯಾಗುವುದು ಅಷ್ಟು ಸಮಂಜಸವಲ್ಲ.ನಿಮ್ಮ ಸಂಗಾತಿ ನಿಮಗೆ ಯಾವಾಗಲೂ ಸಮಾನವಾದ ಗೌರವವನ್ನು ಕೊಡುವಂತೆ ಇರಬೇಕು.ಒಂದು ವೇಳೆ ನಿಮ್ಮ ಮೇಲೆ ಪ್ರಾಬಲ್ಯವನ್ನು ಸಾಧಿಸುವಂತವರು ನಿಮಗೆ ಬೇಕು ಎಂತಾದರೆ ಅದು ನಿಮ್ಮ ಇಷ್ಟ!

3.ಅವರು ಪ್ರಾಮಾಣಿಕವಾಗಿ ಇದ್ದಾರೆಯೇ?

3.ಅವರು ಪ್ರಾಮಾಣಿಕವಾಗಿ ಇದ್ದಾರೆಯೇ?

ಯಾವುದೇ ಒಬ್ಬ ವ್ಯಕ್ತಿ ಪ್ರಾಮಾಣಿಕವಾಗಿದ್ದಾರೆಯೇ ಎಂದು ತಿಳಿದುಕೊಳ್ಳಲು ಅವರ ಜೊತೆಗೆ ನೀವು ಸ್ವಲ್ಪ ಸಮಯವನ್ನು ಕಳೆಯಲೇ ಬೇಕು.ಯಾವುದೇ ಒಬ್ಬ ವ್ಯಕ್ತಿ ಪ್ರಾಮಾಣಿಕರೋ ಇಲ್ಲವೋ ಎಂದು ತಿಳಿಯಲು ಮೊದಲ ಭೇಟಿಯಲ್ಲಿ ಸಾಧ್ಯವಿಲ್ಲ.ನೀವು ಅವರ ಜೊತೆ ಸ್ವಲ್ಪ ಸಮಯವನ್ನು ಕಳೆದರೆ ಅವರ ವ್ಯಕ್ತಿತ್ವ ಅವರ ಗುಣ ಹಾಗು ಅವರು ಎಷ್ಟು ಪ್ರಾಮಾಣಿಕರು ಎಷ್ಟು ಕರುಣಾವಂತರು ಎಂಬ ವಿಷಯಗಳು ನಿಮಗೆ ತಿಳಿಯುತ್ತವೆ.ಪ್ರಾಮಾಣಿಕತೆ ಎನ್ನುವುದು ಬಹಳ ಮುಖ್ಯವಾದ ಗುಣ.ಎಲ್ಲರೂ ಹಲವು ಬಾರಿ ಚಿಕ್ಕ ಪುಟ್ಟ ಸುಳ್ಳುಗಳನ್ನು ಹೇಳುತ್ತಾರೆ ಆದರೆ ಅದನ್ನೇ ಅಭ್ಯಾಸವನ್ನಾಗಿ ಇಟ್ಟುಕೊಂಡು ತಮ್ಮ ಲಾಭಕ್ಕಾಗಿ ಹಲವು ಬಾರಿ ಸುಳ್ಳು ಹೇಳುವುದು ತಪ್ಪು.

4. ಹುಡುಗಿಯಾಗಿದ್ದರೆ ಅವಳು ಸ್ವಾವಲಂಬಿಯಾಗಿದ್ದಾಳೆಯೇ?

4. ಹುಡುಗಿಯಾಗಿದ್ದರೆ ಅವಳು ಸ್ವಾವಲಂಬಿಯಾಗಿದ್ದಾಳೆಯೇ?

ಸ್ವಾವಲಂಬಿಯಾದ ಹುಡುಗಿಯನ್ನು ಪ್ರತಿಯೊಬ್ಬರೂ ಇಷ್ಟ ಪಡುತ್ತಾರೆ. ಸ್ವಾವಲಂಬಿ ಮಹಿಳೆ ಕೇವಲ ಆರ್ಥಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಯಾರ ಮೇಲೂ ಅವಲಂಬಿತಳಾಗಿ ಇರುವುದಿಲ್ಲ.ಹಾಗು ತನ್ನ ಬಗ್ಗೆ ತಾನೇ ಕಾಳಜಿಯನ್ನು ತೆಗೆದು ಕೊಳ್ಳುವಂತಹವಳಾಗಿರುತ್ತಾಳೆ.ಆರ್ಥಿಕ ಭದ್ರತೆ ಈಗಿನ ಕಾಲದಲ್ಲಿ ಬಹಳವೇ ಮುಖ್ಯ ಹಾಗು ಅದೇ ರೀತಿ ಯೋಚಿಸುವ ಸ್ತ್ರೀಯರನ್ನು ಹುಡುಕುವುದು ಬಹಳಮುಖ್ಯ.ಭಾವನಾತ್ಮಕವಾಗಿಯೂ ಸ್ವಾವಲಂಬಿಯಾಗಿರುವ ಮಹಿಳೆಯರು ಯಾವುದೇ ರೀತಿಯ ತೊಂದರೆಗಳನ್ನು ಎದುರಿಸಲು ಮುಂದೆ ಇರುತ್ತಾರೆ ಮತ್ತು ಅವರು ಎಲ್ಲವನ್ನು ಕಾಳಜಿ ವಹಿಸಿ ನೋಡಿಕೊಳ್ಳುತ್ತಾರೆ.ನಿಮ್ಮ ಮೇಲೆಯೇ ಎಲ್ಲದಕ್ಕೂ ಅವಲಂಬಿಸಿ ನಮ್ಮ ಹಿಂದೆಯೇ ಸುತ್ತುವ ಮಹಿಳೆಯರನ್ನು ಯಾರು ಸಹ ಇಷ್ಟ ಪಡುವುದಿಲ್ಲ.

Most Read:ಈ ಊರಿನಲ್ಲಿ 'ನವರಾತ್ರಿ' ದಿನ ದೇವಿಗೆ ಪ್ರಾಣಿ ಬಲಿ ಕೊಡುತ್ತಾರಂತೆ!

5. ನೀವಿಬ್ಬರೂ ಒಂದೇ ರೀತಿಯ ಆಲೋಚನೆಗಳನ್ನು ಹೊಂದಿದ್ದೀರಾ

5. ನೀವಿಬ್ಬರೂ ಒಂದೇ ರೀತಿಯ ಆಲೋಚನೆಗಳನ್ನು ಹೊಂದಿದ್ದೀರಾ

ಮದುವೆಯ ವಿಷಯ ಬಂದಾಗ ಇದು ಬಹಳ ಮುಖ್ಯವಾಗುತ್ತದೆ.ಮೊದಲಿಗೆ ನಿಮ್ಮಿಬ್ಬರ ನಡುವೆ ಸಾಮ್ಯತೆ ಇಲ್ಲದೆ ಇದ್ದರೂ ಮುಂದೆ ಸರಿಹೋಗಬಹುದು ಎಂದು ನೀವು ಭಾವಿಸಬಹುದು ಆದರೆ ದಂಪತಿಗಳ ಮಧ್ಯೆ ಮುಂದೆ ಇದೇ ಒಂದು ದೊಡ್ಡ ಸಮಸ್ಯೆ ಆಗುವ ಸಾಧ್ಯತೆಗಳಿವೆ.ಆದ್ದರಿಂದ ನಿಮ್ಮ ಅಭಿರುಚಿಗಳಿಗೆ ತಕ್ಕಂತೆ ಇರುವವರನ್ನು ನೀವು ಆರಿಸಿಕೊಳ್ಳುವುದು ಸೂಕ್ತ.ಮದುವೆಯ ನಂತರ ಇರುವ ಜೀವನದ ದಾರಿಗಳಾದ ಮಕ್ಕಳು,ನಿಮ್ಮ ಭವಿಷ್ಯದ ಹಾದಿ,ಜೀವನಶೈಲಿ ಮುಂತಾದವುಗಳಿಗೆ ನೀವರಿಬ್ಬರೂ ಒಂದೇ ರೀತಿಯಲ್ಲಿ ಆಲೋಚಿಸುವಂತಿರ ಬೇಕು.ಇದೆಲ್ಲ ಇದ್ದಾಗ ಮಾತ್ರ ನೀವು ಒಬ್ಬ ಅಪರಿಚಿತ ವ್ಯಕ್ತಿಯೊಂದಿಗೆ ಮದುವೆಯಾದರೂ ಕೂಡ ನಿಮ್ಮ ಜೀವನದಲ್ಲಿ ಸಂತೋಷವಾಗಿರಬಹುದು.

ಜೀವನ ಸಂಗಾತಿಯ ಆಯ್ಕೆಯ ವಿಚಾರ ಬಂದಾಗ ಸರಿಯಾದ ಹೆಜ್ಜೆಯಿಡಿ

ಜೀವನ ಸಂಗಾತಿಯ ಆಯ್ಕೆಯ ವಿಚಾರ ಬಂದಾಗ ಸರಿಯಾದ ಹೆಜ್ಜೆಯಿಡಿ

ಅರೇಂಜ್ಡ್ ಮ್ಯಾರೇಜ್ ಸ್ವಲ್ಪ ಕಷ್ಟವೆನಿಸಬಹುದು ಆದರೂ ಒಂದು ರೀತಿಯಲ್ಲಿ ಸುಲಭವೇ. ಕೆಲವೊಮ್ಮೆ ಈ ಮದುವೆಗಳು ಗೆಲ್ಲಬಹುದು ಕೆಲವೊಮ್ಮೆ ಸೋಲಬಹುದು ಕೆಲವೊಮ್ಮೆ ಎಷ್ಟೋ ಜೋಡಿಗಳು ಅದ್ಭುತವಾದ ಜೀವನವನ್ನೂ ನಡೆಸಿದ್ದಾರೆ.ಆದ್ದರಿಂದ ಪ್ರಯತ್ನಿಸದೆ ನಿಮಗೆ ಅನುಭವವಾಗುವುದಿಲ್ಲ.ಸರಿಯಾದ ವ್ಯಕ್ತಿಯೊಂದಿಗೆ ಆ ಪ್ರಯತ್ನ ನಿಮ್ಮದಾಗಲಿ.

English summary

Five Things to Know Before Getting Arranged Marriage

Many of us are just so done with relationships in general, that we're actually looking forward to meeting the woman of our dreams, through matrimonial sites or through our parents. And that's fair. Sharing a life with a complete stranger seems a little more daunting but absolutely thrilling at the same time and men-women alike are taking to this concept like fish to water. But have you ever thought about what you really need to look for in a person if you're spending an entire lifetime with them.
X
Desktop Bottom Promotion