Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಕೆಲವರು ವಯಸ್ಸು ಮೂವತ್ತು ದಾಟಿದರೂ ಮದುವೆ ಬೇಡ ಹೇಳುತ್ತಾರೆ! ಯಾಕೆ?
ಈ ದುನಿಯಾವೇ ಹಾಗೆ ಯಾರನ್ನೂ ಸುಮ್ಮನೆ ಬಿಡಲ್ಲ. ಯಾಕೆ ಗೊತ್ತಾ? ಪ್ರತಿಯೊಬ್ಬರನ್ನು ಅದು ಪ್ರಶ್ನಿಸುತ್ತಾ ಇರುತ್ತದೆ. ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರು ಈ ಸಮಾಜದ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಅದರಲ್ಲೂ ಹೆಚ್ಚಿನ ಪ್ರಶ್ನೆ ಬರುವುದು 25 ದಾಟಿದವರಿಗೆ. ಯಾಕೆಂದರೆ ಮದುವೆ ವಯಸ್ಸಿಗೆ ಬಂದಿರುವವರನ್ನು ಸಮಾಜ ಕೇಳುವ ಪ್ರಶ್ನೆ ಯಾವಾಗ ಮದುವೆ? ಇನ್ನು ಜೀವನದಲ್ಲಿ ಸೆಟ್ಲ್ ಆಗಲಿಕ್ಕಿಲ್ವ ಎನ್ನುವುದು. ಮನೆಯವರಿಂದ ಹಿಡಿದು ನೆರೆಮನೆಯಿಂದ ಸಾಗಿ ಸ್ನೇಹಿತರ ತನಕ ಇದೇ ಪ್ರಶ್ನೆ ಬರುತ್ತದೆ.
ಆದರೆ ಇದಕ್ಕೆ ಹೆದರದೆ ನಿಮ್ಮ ನಿರ್ಧಾರ ನೀವೇ ತೆಗೆದುಕೊಳ್ಳಿ. ಯಾಕೆಂದರೆ ಮದುವೆ ಎನ್ನುವ ಬಂಧನದಲ್ಲಿ ಬಂಧಿಯಾಗಲು ನಿಮಗೆ ಸಾಧ್ಯವೇ? ಹಾಗೊಂದು ವೇಳೆ ನಿಮಗೆ ಅಂತಹ ಜವಾಬ್ದಾರಿ ಬೇಡವೆಂದಿದ್ದರೆ ಏಕಾಂಗಿಯಾಗಿ ಬದುಕಿ. ಯಾರ ಒತ್ತಡಕ್ಕೂ ಮಣಿಯದೆ ನಿಮ್ಮ ಜೀವನದ ನಿರ್ಧಾರ ನೀವೇ ತೆಗೆದುಕೊಳ್ಳಿ.
ಯಾಕೆಂದರೆ ಒತ್ತಡಕ್ಕೆ ಮಣಿದು ಮದುವೆಯಾದರೆ ಮುಂದೊಂದು ದಿನ ದೊಡ್ಡ ಸಮಸ್ಯೆಗೆ ಸಿಲುಕಬಹುದು. ಆದರೆ ಜೀವಮಾನಪೂರ್ತಿ ನಿಮಗೆ ಏಕಾಂಗಿಯಾಗಿರಲು ಸಾಧ್ಯವೇ ಎಂದು ಯೋಚಿಸಿ. ಮದುವೆಯಾಗದಿರಲು ಕಾರಣಗಳು ಏನು ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ.....

ವಯಸ್ಸಾಗುತ್ತಿದೆ ಎನ್ನುವ ಕಾರಣಕ್ಕೆ!
ಮದುವೆಯಾಗು ಎಂದು ಒತ್ತಡ ಹಾಕುವವರು ವೈವಾಹಿಕ ಜೀವನದಲ್ಲಿ ನೀವು ವಿಫಲರಾದರೆ ಅಥವಾ ಮದುವೆ ಮುರಿದುಬಿದ್ದರೆ ನಿಮ್ಮ ಮುಖ ಕೂಡ ನೋಡಲ್ಲ. ನಿಮಗೆ ವಯಸ್ಸಾಗುತ್ತಿದೆ ಎನ್ನುವ ಕಾರಣಕ್ಕಾಗಿ ಜನರು ಮದುವೆ ಮಾಡಲು ಬಯಸುತ್ತಾರಷ್ಟೇ.

ಮದುವೆ ಎನ್ನುವುದು ಒಂದು ಲೇಬಲ್ ಇದ್ದಂತೆ!
ಹೌದು, ಮದುವೆ ಎನ್ನುವುದು ಒಂದು ಲೇಬಲ್ ಇದ್ದಂತೆ. ಹೆತ್ತವರು ಮತ್ತು ಸಮಾಜವು ಬದ್ಧತೆಯಿರುವ ಸಂಬಂಧಕ್ಕೆ ನೀಡಿರುವಂತಹ ಹೆಸರು ಇದಾಗಿದೆ. ನೀವು ಯಾರನ್ನಾದರೂ ಪ್ರೀತಿಸುತ್ತಾ ಇದ್ದರೆ ಆ ಪ್ರೀತಿಯನ್ನು ಆನಂದಿಸಬಹುದಾಗಿದೆ. ಮದುವೆ ಮತ್ತು ಇತರ ವಿಧಿವಿಧಾನಗಳು ಸಮಯ ಸಾಗಿದಂತೆ ನಡೆಯುತ್ತದೆ.

ಎಲ್ಲವೂ ನಿಮ್ಮ ಅದೃಷ್ಟ!
ಮದುವೆ ಒಳ್ಳೆಯ ರೀತಿಯಿಂದ ಸಾಗಿದರೆ ಅದು ಒಳ್ಳೆಯ ಆಯ್ಕೆ. ಆದರೆ ವಿಫಲಗೊಂಡರೆ ಮುಂದೆ ಜೀವನವೇ ನರಕವಾಗುವುದು. ಆ ನೋವು ನಿಮ್ಮನ್ನು ಜೀವಮಾನವಿಡಿ ಕಾಡಲಿದೆ.

ಕೈಯಿಡಿಯುವವಳು...
ನಿಮ್ಮನ್ನು ಅರ್ಥ ಮಾಡಿಕೊಳ್ಳುವಂತಹ ಜತೆಗಾರ್ತಿ ಮತ್ತು ಎರಡೂ ಕುಟುಂಬದಿಂದ ಒಳ್ಳೆಯ ಬೆಂಬಲ ಸಿಕ್ಕಿದರೆ ಮಾತ್ರ ಜೀವನ ಸುಖಮಯವಾಗುವುದು. ಸಂಗಾತಿಯು ನಿಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿ ಉಂಟು ಮಾಡಿದರೆ ಅಥವಾ ಎರಡು ಕುಟುಂಬಗಳ ಮಧ್ಯೆ ಜಗಳವಾಗುತ್ತಾ ಇದ್ದರೆ ಮದುವೆ ದುಸ್ವಪ್ನವಾಗುವುದು.

ಪ್ರೀತಿ ಇಲ್ಲದೇ ಇದ್ದರೆ...
ಸಂಗಾತಿ ಬಗ್ಗೆ ನಿಮಗೆ ಆಳವಾದ ಪ್ರೀತಿ ಇಲ್ಲದೆ ಇದ್ದರೆ ಹಲವಾರು ವರ್ಷಗಳ ಕಾಲ ಜತೆಯಾಗಿ ಉಳಿಯುವುದು ತುಂಬಾ ಕಷ್ಟವಾಗುತ್ತದೆ.

ಬಿಂದಾಸ್ ಜೀವನ ನಡೆಸಬೇಕೆಂದು ನಿರ್ಧರಿಸಿದ್ದರೆ...
ಜೀವನದಲ್ಲಿ ಹಲವಾರು ಗುರಿಗಳಿದ್ದರೆ ಮತ್ತು ಜವಾಬ್ದಾರಿಗಳು ಇಲ್ಲದೆ ಬಿಂದಾಸ್ ಜೀವನ ನಡೆಸಬೇಕೆಂದು ನಿರ್ಧರಿಸಿದ್ದರೆ ಮದುವೆಯು ನಿಮ್ಮ ಸಂತೋಷವನ್ನು ನುಂಗಿಹಾಕಲಿದೆ.

ಒತ್ತಡಕ್ಕೆ ಮಣಿದು ಮದುವೆಯಾಗಲು ಮುಂದಾಗಬೇಡಿ
ಮದುವೆಯಾಗಿ ಸುಖಕರ ಜೀವನ ಮತ್ತು ಮಕ್ಕಳನ್ನು ಪಡೆಯುವುದು ಮುಖ್ಯ ಉದ್ದೇಶ. ನೀವು ಈಗಾಗಲೇ ಸಂತೋಷದಿಂದ ಜೀವನ ಸಾಗಿಸುತ್ತಾ ಇದ್ದರೆ ಮಗುವನ್ನು ದತ್ತು ಪಡೆದುಕೊಳ್ಳಿ. ಯಾಕೆಂದರೆ ಜೀವನದಲ್ಲಿ ಸಂತೋಷವಾಗಿರಲು ಹಲವಾರು ಮಾರ್ಗಗಳಿವೆ. ಮದುವೆಯಿಂದ ಸಂತೋಷ ಸಿಗುತ್ತದೆ ಎಂದು ಮನವರಿಕೆಯಾಗುವ ತನಕ ಸ್ನೇಹಿತರು ಅಥವಾ ಮನೆಯವರ ಒತ್ತಡಕ್ಕೆ ಮಣಿದು ಮದುವೆಯಾಗಲು ಮುಂದಾಗಬೇಡಿ.



Click it and Unblock the Notifications











