ಯಾಕೆ ಎಲ್ಲರೂ ತಮ್ಮ ಸಂಬಂಧಗಳ ಬಗ್ಗೆ ಮರೆ ಮಾಚುತ್ತಾರೆ?

By: Divya Pandith
Subscribe to Boldsky

ಮನಸ್ಸೆ ಹಾಗೆ ಕೆಲವೊಮ್ಮೆ ಏನನ್ನೋ ಬಯಸುತ್ತದೇ... ಏನನ್ನೋ ಅಲಕ್ಷಿಸುತ್ತದೆ... ಇನ್ನೂ ಕೆಲವು ಬಾರಿ ಬೇಕೆ ಬೇಕು ಎನ್ನುವ ಹಂಬಲವನ್ನು ಹೊಂದುತ್ತದೆ... ಹೀಗಿರುವಾಗ ಕೆಲವು ಸೂಕ್ಷ್ಮ ವಿಚಾರಗಳನ್ನು ರಹಸ್ಯವಾಗಿಡಲು ಬಯಸುತ್ತದೆ. ಅದರಲ್ಲೂ ಗಂಡು ಹೆಣ್ಣಿನ ನಡುವೆ ಇರುವ ಸಂಬಂಧಗಳ ಬಗ್ಗೆ ಮರೆಮಾಚುವ ಪ್ರಕ್ರಿಯೆಯು ಸಾಮಾನ್ಯವಾಗಿರುವುದನ್ನು ಗಮನಿಸಬಹುದು. ವಯಸ್ಸಿಗೆ ಬಂದಾಗ ಗಂಡು ಮತ್ತು ಹೆಣ್ಣಿನ ನಡುವೆ ಆಕರ್ಷಣೆಗಳು ಉಂಟಾಗುವುದು ಸಹಜ. ಅದರಂತೆಯೇ ಪರಸ್ಪರ ಪ್ರೀತಿಯಿಂದ ಇರಲು ಬಯಸುತ್ತಾರೆ. ಆದರೆ ಆಪ್ರೀತಿಯನ್ನು ಪ್ರಪಂಚಕ್ಕೆ ತೋರಿಸಲು ಅಥವಾ ಸಮಾಜ ಅದನ್ನು ಪ್ರಶ್ನಿಸುವುದನ್ನು ಇಷ್ಟಪಡುವುದಿಲ್ಲ.

ಒಬ್ಬರ ಜೊತೆ ದೀರ್ಘಾವಧಿಯ ಸಂಬಂಧ ಬೆಳೆಸಲು ಪ್ರಾರಂಭಿಸಿದರೆ ಅಥವಾ ಹೊಂದಿದ್ದರೆ ಆ ಸಂಬಂಧವೇ ಭಿನ್ನವಾದ ಅರ್ಥವನ್ನು ನೀಡುತ್ತದೆ. ಯಾವಾಗ ನೀವು ಒಬ್ಬ ವ್ಯಕ್ತಿಯ ಜೊತೆ ದೀರ್ಘಾವಧಿಯ ಸಂಬಂಧ ಹೊಂದುತ್ತೀರೋ ಆಗ ನೀವು ಪ್ರಪಂಚವನ್ನು ವಿಭಿನ್ನವಾದ ದೃಷ್ಟಿಕೋನದಿಂದ ನೋಡುತ್ತೀರಿ. ಹಾಗೆಯೇ ಜಗತ್ತು ಸಹ ನಿಮ್ಮನ್ನು ಒಳ್ಳೆಯ ದೃಷ್ಟಿಯಿಂದಲೇ ನೋಡುತ್ತಿರುತ್ತದೆ.

ದೀರ್ಘಾವಧಿಯ ಸಂಬಂಧಗಳು ನಿಧಾನವಾಗಿ ನಮ್ಮ ವಿಕಾಸವನ್ನುಂಟುಮಾಡುತ್ತದೆ. ವಾಸ್ತವವಾಗಿ ಸಂಬಂಧವು ಹೆಚ್ಚು ಸಂತೋಷ ಮತ್ತು ನೋವಿನ ಪಾಠವನ್ನು ಕಲಿಸುವ ಸಾಧನಾವಗಿರುತ್ತದೆ. ಸಂತೋಷಕರವಾದ ಜೀವನವನ್ನು ಅನುಭವಿಸಬೇಕು ಎಂದರೆ ದೀರ್ಘಕಾಲದ ಸಂಬಂಧವನ್ನು ಹೊಂದುವುದು ಅವಶ್ಯಕ. ಸಂಗಾತಿಯು ನಮ್ಮ ನೋವು-ನಲಿವು ಹಾಗೂ ಜೀವನದ ಏರಿಳಿತಗಳನ್ನು ನಿಭಾಯಿಸುವಲ್ಲಿ ಸಹಾಯಮಾಡುತ್ತಾರೆ.

ವಾಸ್ತವವಾಗಿ ನಿಮ್ಮ ಪಾಲುದಾರರು ನಿಮ್ಮ ಪ್ರಭಾವಕ್ಕೆ ಒಳಗಾಗಿರುತ್ತಾರೆ. ದೀರ್ಘ ಸಮಯದೊಂದಿಗೆ ಅವರೊಂದಿಗೆ ಬೆರೆಯುವುದರಿಂದ ನಿಮ್ಮ ವರ್ತನೆ ಹಾಗೂ ಸ್ವಭಾವಗಳಲ್ಲೂ ಬದಲಾವಣೆ ಹೊಂದುವುದನ್ನು ಗಮನಿಸಬಹುದು. ಸಾರ್ವಜನಿಕವಾಗಿ ನೀವು ಮಾತನಾಡುವುದು ಹಾಗೂ ಹೇಳುವ ಶಬ್ದಗಳ ಪ್ರಯೋಗವೂ ವಿಭಿನ್ನವಾಗಿರುತ್ತದೆ. ಕೆಲವು ಒಳ್ಳೆಯ ಸಂಗತಿಯನ್ನು ನಿಮಗರಿಯದೆಯೇ ನಿಮ್ಮ ನಡತೆಯಲ್ಲಿ ರೂಢಿಸಿಕೊಂಡಿರುತ್ತೀರಿ.  ದೀರ್ಘಾವಧಿಯ ಸಂಬಂಧಗಳಲ್ಲಿ ಉಂಟಾಗುವ ಕೆಲವು ಒಳಿತು-ಕೆಡಕುಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಹಾಗಾದರೆ ಆ ವಿಚಾರಗಳು ಯಾವವು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕಾದರೆ ಮುಂದೆ ಓದಿ...

ಎಲ್ಲಾ ಸಮಯದಲ್ಲೂ ನೀವು ಸುಂದರವಾಗಿರುವುದಿಲ್ಲ

ಎಲ್ಲಾ ಸಮಯದಲ್ಲೂ ನೀವು ಸುಂದರವಾಗಿರುವುದಿಲ್ಲ

ಸಂಬಂಧಗಳ ಆರಂಭದಲ್ಲಿದ್ದಷ್ಟು ಶಾಂತತೆ, ಪ್ರೀತಿ ಮತ್ತು ಸುಂದರ ಭಾವ ಎಂದಿಗೂ ಒಂದೇ ರೀತಿಯಲ್ಲಿ ಇರುವುದಿಲ್ಲ. ವಾಸ್ತವವಾಗಿ ನಿಮ್ಮ ಪಾಲುದಾರರು ಮಾಡುವ ಕೆಲವು ವಿಷಯಗಳು ನಿಮಗೆ ಕಿರಿಕಿರಿಯನ್ನುಂಟುಮಾಡುತ್ತಿರುತ್ತದೆ. ಸಮಯದೊಂದಿಗೆ ನಿಮ್ಮ ಸಂಗಾತಿಯ ಭಾವನೆ ಹಾಗೂ ಗುಣಗಳು ಬದಲಾಗುತ್ತಿರುತ್ತದೆ. ಹಾಗಂತ ಇದು ನಿಮ್ಮ ಸಂಬಂಧಗಳ ಕುಸಿತದ ಗುಣಮಟ್ಟ ಎಂದರ್ಥವಲ್ಲ. ವಾಸ್ತವವಾಗಿ ನೀವು ಪ್ರೌಢಾವಸ್ಥೆಗೆ ಒಲವನ್ನು ತೋರುತ್ತೀರಿ.

ಪ್ರತಿ ಸ್ಪರ್ಶವೂ ರೋಮಾಂಚನಕಾರಿಯಾಗಿರುವುದಿಲ್ಲ

ಪ್ರತಿ ಸ್ಪರ್ಶವೂ ರೋಮಾಂಚನಕಾರಿಯಾಗಿರುವುದಿಲ್ಲ

ಸಂಬಂಧ ಬೆಳೆಸುವ ಮುಂಚೆ ನಾವು ಕಾಲ್ಪನಿಕವಾಗಿ ಸೃಷ್ಟಿಸಿಕೊಳ್ಳುವ ಸನ್ನಿವೇಶಗಳ ಹಾಗೇ ಎಲ್ಲಾ ಸಮಯದಲ್ಲೂ ಸಂಗಾತಿಯ ಸ್ಪರ್ಶವು ರೋಮಾಂಚನಕಾರಿ ಅನುಭವವನ್ನು ನೀಡುವುದಿಲ್ಲ. ನಮ್ಮ ಜೀವನವು ಮಸಾಲೆಯುಕ್ತ ಜೀವನದಂತೆ ಊಹಿಸುವುದು ಸಹಜ. ಆದರೆ ಆ ಕಲ್ಪನೆಯಂತೆ ಜೀವನ ಇರುವುದಿಲ್ಲ. ಕೆಲವು ದಿನಗಳಕಾಲ ಅಂದರೆ ಆರಂಭದಲ್ಲಿ ಇದೇ ರೀತಿಯ ಅನುಭವವನ್ನು ಹೊಂದಬಹುದು. ದಿನಗಳು ಉರುಳಿದಂತೆ ಸಾನಿಧ್ಯದಲ್ಲಿ ಸ್ವಲ್ಪ ಅಂತರ ಸೃಷ್ಟಿಯಾಗಬಹುದು. ಆದರೆ ಪ್ರೀತಿ ವಾತ್ಸಲ್ಯಗಳು ಪರಸ್ಪರ ಹಾಗೇ ಉಳಿದಿರುತ್ತದೆ. ಹಾಗಾಗಿ ದೀರ್ಘಕಾಲದ ಸಂಬಂಧ ಉತ್ತಮವಾದದ್ದು ಎನ್ನುತ್ತಾರೆ.

ಸಂಗಾತಿಯ ಫ್ಲರ್ಟಿಂಗ್ ನೋಡಬಹುದು

ಸಂಗಾತಿಯ ಫ್ಲರ್ಟಿಂಗ್ ನೋಡಬಹುದು

ನಿಮ್ಮ ಸಂಗಾತಿಯು ಇತರರೊಂದಿಗೆ ಆಕರ್ಷಣೆಗೊಳಗಾಗುವುದು ಅಥವಾ ಹೆಚ್ಚು ಸಮಯ ಬೇರೆಯುವುದನ್ನು ನೀವು ನೋಡಬಹುದು. ಹಾಗಂತ ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಾರೆ ಎಂದು ಚಿಂತಿಸಬೇಕಿಲ್ಲ. ದೀರ್ಘಾವಧಿಯ ಸಂಬಂಧದಲ್ಲಿ ದಂಪತಿಗಳು ಪರಸ್ಪರ ತಿಳುವಳಿಕೆಯನ್ನು ಹೊಂದಿರುತ್ತಾರೆ. ಚಿಕ್ಕ ಪುಟ್ಟ ವಿಚಾರಗಳು ಅವರಿಗೆ ಅಸುರಕ್ಷಿತ ಎನಿಸುವುದಿಲ್ಲ. ಅವರಿಗೆ ಯಾವುದು ಶಾಶ್ವತ ಹಾಗೂ ಯಾವುದು ತಾತ್ಕಾಲಿಕ ಎನ್ನುವ ಕಲ್ಪನೆಯಿರುತ್ತದೆ.

ಕ್ಷಮಿಸುವ ಕಲೆ ಬೇಕು

ಕ್ಷಮಿಸುವ ಕಲೆ ಬೇಕು

ಪರಸ್ಪರ ತಪ್ಪುಗಳನ್ನು ಮನ್ನಿಸುವಂತಹ ಕಲೆಯನ್ನು ಕಲಿಯುವ ತನಕ ಸಂಬಂಧಗಳು ವೃದ್ಧಿಯಾಗುವುದಿಲ್ಲ ಎನ್ನುವುದು ನಿಮಗೆ ಅರಿವಾಗುವುದು. ನೀವು ತುಂಬಾ ಸೂಕ್ಷ್ಮ ಹಾಗೂ ಕಠಿಣ ಸ್ವಭಾವದವರಾದರೆ ದೀರ್ಘಕಾಲಿನ ಸಂಬಂಧ ಬದುಕಲಾರದು. ನಿಮ್ಮ ಪಾಲುದಾರರ ಎಲ್ಲಾ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಪರಿಗಣಿಸುತ್ತಿದ್ದರೆ ನೀವೇ ನಿಮ್ಮ ಸಂಬಂಧವನ್ನು ಕೈಯಾರೆ ಹಾಳು ಮಾಡಿಕೊಳ್ಳುತ್ತೀರಿ.

ಕೆಲವೊಮ್ಮೆ ನೀವು ದುರ್ಬಲರಾಗಬಹುದು

ಕೆಲವೊಮ್ಮೆ ನೀವು ದುರ್ಬಲರಾಗಬಹುದು

ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಒರಟಾಗಿ ವರ್ತಿಸಿದರೆ ಅಥವಾ ಸಿಟ್ಟು ಮಾಡಿದರೆ ನಿಮಗೆ ಬೇಸರವಾಗುವುದು. ಕೆಲವು ವರ್ತನೆಗಳು ನಿಮಗೆ ಕಿರಿಕಿರಿಯನ್ನು ಉಂಟುಮಾಡಬಹುದು. ಅಂತಹ ವರ್ತನೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ, ಹೊಂದಾಣಿಕೆಯ ಜೀವನ ನಡೆಸಲು ಹಾಗೂ ಮುಂದೆ ಸಾಗಲು ಅನುವುಮಾಡಿಕೊಡುತ್ತದೆ.

ನೀವು ಹೆಚ್ಚು ಒಳ್ಳೆಯವರಂತೆ ವರ್ತಿಸಬೇಕಿಲ್ಲ

ನೀವು ಹೆಚ್ಚು ಒಳ್ಳೆಯವರಂತೆ ವರ್ತಿಸಬೇಕಿಲ್ಲ

ನಿಮ್ಮ ಸಂಗಾತಿಗೆ ನೀವು ಏನು ಎನ್ನುವುದು ಅರಿವಾಗಿರುತ್ತದೆ. ಹಾಗಾಗಿ ನಿತ್ಯವೂ ಒಳ್ಳೆಯವರಂತೆ ನಟಿಸುವ ಅಗತ್ಯವಿರುವುದಿಲ್ಲ. ಅಲ್ಲದೇ ದಿನವೂ ಮುಖವಾಡ ಧರಿಸಿ ಬದುಕುವ ಅಗತ್ಯವಿರುವುದಿಲ್ಲ. ಬದಲಿಗೆ ನೈಜ ವರ್ತನೆಯನ್ನೇ ತೋರಬಹುದು.

ಸ್ನಾನ ಗೃಹಗಳ ಬಳಕೆ ಹಂಚಿಕೆಯಾಗಿರುತ್ತದೆ

ಸ್ನಾನ ಗೃಹಗಳ ಬಳಕೆ ಹಂಚಿಕೆಯಾಗಿರುತ್ತದೆ

ದೀರ್ಘಾವಧಿಯ ಸಂಬಂಧಗಳಲ್ಲಿ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಅರಿತಿರುವಾಗ ಸ್ನಾನಗೃಹಗಳ ಬಳಕೆಗೆ ಮುಜುಗರ ಅಥವಾ ಯಾವುದಾದರೂ ವಸ್ತುಗಳ ಬಳಕೆಗೆ ಪರವಾನಗಿ ಪಡೆದುಕೊಳ್ಳುವ ಅಗತ್ಯವಿರುವುದಿಲ್ಲ. ಜೊತೆಗೆ ಸಂಗಾತಿ ಬಕೇಟ್ ನೀರನ್ನು ತರಲು ಹೇಳುವುದು, ಫ್ಲಷ್‍ಮಾಡು ಎಂದು ಹೇಳುವುದು ಎಲ್ಲವೂ ಸಹಕಾರ ಹೊಂದಾಣಿಕೆಯಲ್ಲಿಯೇ ನಡೆಯುತ್ತದೆ.

ಯಾವುದಾದರೂ ತರ್ಕಗಳು ನಡೆಯಬಹುದು

ಯಾವುದಾದರೂ ತರ್ಕಗಳು ನಡೆಯಬಹುದು

ಅಲ್ಪಾವಧಿಯ ಸಂಬಂಧದಲ್ಲಿರುವಾಗ ನಿಮಗೆ ಯಾವುದಾದರೂ ವಿಚಾರದ ಬಗ್ಗೆ ಮಾತನಾಡುವಾಗ ಅಥವಾ ತರ್ಕಮಾಡುವ ಸಂದರ್ಭಗಳಲ್ಲಿ ಯೋಚಿಸಿ ಮಾತನಾಡಬೇಕಾಗುತ್ತದೆ. ಅದೇ ದೀರ್ಘಾವಧಿಯ ಸಂಬಂಧದಲ್ಲಿ ಚಿಕ್ಕ ಪುಟ್ಟ ವಿಚಾರಗಳಿಗೂ ವಾದ-ಪ್ರತಿವಾದಗಳು ನಡೆಯುತ್ತಲೇ ಇರುತ್ತದೆ. ಇದಕ್ಕೆ ಯಾವುದೇ ಭಯವಿರುವುದಿಲ್ಲ. ಬದಲಿಗೆ ನಂತರ ಇಬ್ಬರೂ ಒಟ್ಟಿಗೆ ಇರುತ್ತೇವೆ ಎನ್ನುವ ನಂಬಿಕೆ ಇರುತ್ತದೆ.

ನಿಮ್ಮ ಸ್ಥಾನವನ್ನು ಪಡೆದುಕೊಳ್ಳಬಹುದು

ನಿಮ್ಮ ಸ್ಥಾನವನ್ನು ಪಡೆದುಕೊಳ್ಳಬಹುದು

ದೀರ್ಘಾವಧಿಯ ಸಂಬಂಧದಲ್ಲಿ ಪರಸ್ಪರ ಒಬ್ಬರಿಗೊಬ್ಬರೂ ಸ್ಪಂದಿಸುತ್ತಾರೆ. ಪರಸ್ಪರ ಒಬ್ಬರಿಗೊಬ್ಬರು ಸಮಯ ನೀಡಲು ಆಶಿಸುತ್ತಾರೆ. ಹಾಗೊಮ್ಮೆ ಸಿಗದಿದ್ದರೆ ಕೇಳಿ ಪಡೆದುಕೊಳ್ಳುತ್ತಾರೆ. ಜೊತೆಗೆ ಆಗಾಗ ಏಕಾಂತದಲ್ಲಿ ಸಮಯಕಳೆಯುತ್ತಾರೆ. ಚಿಕ್ಕ ಪುಟ್ಟ ಪ್ರವಾಸಗಳ ಮೂಲಕ ಸಂಬಂಧವನ್ನು ಗಟ್ಟಿಮಾಡಿಕೊಳ್ಳುತ್ತಾರೆ.

ಪ್ರೀತಿ ಹಳೆಯದಾಗುವುದಿಲ್ಲ

ಪ್ರೀತಿ ಹಳೆಯದಾಗುವುದಿಲ್ಲ

ಪ್ರೀತಿಯನ್ನು ವ್ಯಕ್ತಪಡಿಸುವಿಕೆಯು ಎಂದಿಗೂ ಹಳೆಯದಾಗುವುದಿಲ್ಲ. ಹಾಗಾಗಿ ದಶಕಗಳ ಕಾಲದ ನಂತರವೂ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎನ್ನುವ ಮಾತು ಖುಷಿಯನ್ನು ನೀಡುತ್ತದೆ. ವಯಸ್ಸಾದಂತೆ ಒಬ್ಬರಿಗೊಬ್ಬರ ಆಸರೆಯ ಅಗತ್ಯ ಹೆಚ್ಚಾಗುತ್ತದೆ. ಪ್ರೀತಿಯೂ ದ್ವಿಗುಣವಾಗುತ್ತದೆ. ಸಂಗಾತಿಯ ಬಾಯಿಂದ ಬರುವ ಪ್ರೀತಿಯ ಮಾತನ್ನು ಹೆಚ್ಚು ಆನಂದಿಸುತ್ತಾರೆ ಕೂಡ.

English summary

What Nobody Tells About Being In Long-Term Relationships

Why have a long term relationship? Well, long-term relationships are totally different. When you are with someone for a long time, you slowly start seeing the world in a different way. You may start seeing through the other person's perspective. Even the world starts seeing you in a different way! Such relationships can help you grow, learn and evolve into a mature human being. In fact, a relationship is more like a tool that teaches lessons while offering you pleasure and pain.
Subscribe Newsletter