For Quick Alerts
ALLOW NOTIFICATIONS  
For Daily Alerts

ತಂದೆ-ತಾಯಿ ಇಬ್ಬರೇ ಕಣ್ಣಿಗೆ ಕಾಣುವ ದೇವರು

ಮಕ್ಕಳ ಏಳ್ಗೆಗಾಗಿ ತಮ್ಮ ಜೀವಮಾನದ ಗಳಿಕೆಯನ್ನೇ ಪಣವಾಗಿಟ್ಟು ತಮ್ಮ ಮಕ್ಕಳ ಸುಖದಲ್ಲಿಯೇ ಸುಖ ಕಾಣುವ ತಂದೆ ತಾಯಿಯರ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ.

By Arshad
|

ಪ್ರತಿ ವ್ಯಕ್ತಿಯ ಜೀವನದಲ್ಲಿ ತಂದೆ ತಾಯಿಯರ ಪ್ರಭಾವ ಅತ್ಯಮೂಲ್ಯವಾಗಿದೆ. ಬರೆಯ ಜನ್ಮದಾತರು ಮಾತ್ರವಲ್ಲ, ತಂದೆ ತಾಯಿಯರು ಮಗುವಿಗೆ ಉತ್ತಮ ಗುಣಗಳನ್ನು ಕಲಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾಡಲು ಶ್ರಮಿಸುತ್ತಾರೆ. ಈ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಮಕ್ಕಳ ಏಳ್ಗೆಗಾಗಿ ತಮ್ಮ ಜೀವಮಾನದ ಗಳಿಕೆಯನ್ನೇ ಪಣವಾಗಿಟ್ಟು ತಮ್ಮ ಮಕ್ಕಳ ಸುಖದಲ್ಲಿಯೇ ಸುಖ ಕಾಣುವ ತಂದೆ ತಾಯಿಯರ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ. ಆದರೆ ಕೆಲವು ಕೃತಘ್ನ ಮಕ್ಕಳು ತಮ್ಮ ರೆಕ್ಕೆ ಬಲಿತ ಬಳಿಕ ತಮ್ಮ ತಂದೆ ತಾಯಿಯರನ್ನು ಅಲಕ್ಷಿಸಿ ಸರಿಯಾಗಿ ನೋಡಿಕೊಳ್ಳದಿರುವುದು, ವೃದ್ಧಾಶ್ರಮಕ್ಕೆ ಅಟ್ಟುವುದು ಮೊದಲಾದ ಕ್ರಮಗಳ ಮೂಲಕ ಮಾನವತೆಗೇ ಕಳಂಕರಾಗಿದ್ದಾರೆ. ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ....

ಆದರೆ ತಂದೆತಾಯಿಯನ್ನು ಪ್ರೀತಿಸುವುದು, ಅವರ ಬಾಳಸಂಜೆಯಲ್ಲಿ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು, ಮಕ್ಕಳಂತೆ ಸಲಹುವುದು ಮೊದಲಾದವು ಮಕ್ಕಳ ಕರ್ತವ್ಯವೇ ಹೌದು. ಬನ್ನಿ, ತಂದೆ ತಾಯಿಯರನ್ನು ಏಕಾಗಿ ಪ್ರೀತಿಸಬೇಕು ಎಂಬುದನ್ನು ನೋಡೋಣ.....


ನಮ್ಮ ಅಸ್ತಿತ್ವಕ್ಕೆ ಅವರೇ ಕಾರಣ

ನಮ್ಮ ಅಸ್ತಿತ್ವಕ್ಕೆ ಅವರೇ ಕಾರಣ

ಈ ಜಗತ್ತಿನ ಮೇಲೆ ನಾವಿಂದು ಇರಬೇಕಾದರೆ ಇದಕ್ಕೆ ನಮ್ಮ ತಂದೆತಾಯಿಯರೇ ಕಾರಣ. ಹುಟ್ಟಿದ ದಿನದಿಂದ ರೆಕ್ಕೆ ಬಲಿಯುವವರೆಗೂ ಪಾಲನೆ ಮಾಡಿ ಸೂಕ್ತ ತಿಳಿವಳಿಕೆ-ಶಿಕ್ಷಣ ನೀಡಿ ಸಮಾಜದಲ್ಲಿ ಗಣ್ಯವ್ಯಕ್ತಿಯ ದರ್ಜೆ ಪಡೆಯಲು ನೆರವಾಗಿದ್ದಾರೆ.

ನಮ್ಮ ಅಸ್ತಿತ್ವಕ್ಕೆ ಅವರೇ ಕಾರಣ

ನಮ್ಮ ಅಸ್ತಿತ್ವಕ್ಕೆ ಅವರೇ ಕಾರಣ

ಯಾವುದೇ ತಂದೆ ತಾಯಿಯರಿಗೆ ತಮ್ಮ ಮಕ್ಕಳು ಸುಖವಾಗಿರಬೇಕು, ನೆಮ್ಮದಿಯ ಬಾಳುವೆ ನಡೆಸಬೇಕು ಎಂಬುದೇ ಮಹತ್ವಾಕಾಂಕ್ಷೆಯಾಗಿದ್ದು ಇವರು ತಮ್ಮ ಮಕ್ಕಳನ್ನು ತಮ್ಮ ಅಂತಿಮ ಉಸಿರಿನವರೆಗೂ ಪ್ರೀತಿಸುತ್ತಾರೆ.

ನಮ್ಮನ್ನು ಪ್ರತಿಫಲಾಪೇಕ್ಷೆಯಿಲ್ಲದೇ ಪ್ರೀತಿಸುವ ಜೀವಿಗಳು

ನಮ್ಮನ್ನು ಪ್ರತಿಫಲಾಪೇಕ್ಷೆಯಿಲ್ಲದೇ ಪ್ರೀತಿಸುವ ಜೀವಿಗಳು

ಈ ಜಗತ್ತಿನಲ್ಲಿ ಹೆಚ್ಚಿನ ಎಲ್ಲಾ ಪ್ರೀತಿಗಳು ಸ್ವಾರ್ಥಭರಿತವಾಗಿರುತ್ತವೆ. ನಮ್ಮ ಉದ್ಯೋಗಗಳಂತೂ ಇಷ್ಟು ಕೆಲಸಕ್ಕೆ ಇಷ್ಟು ಸಂಬಳ ಎಂಬ ಅಪ್ಪಟ ವ್ಯಾಪಾರವೇ ಹೌದು. ನಮ್ಮ ಸ್ನೇಹಿತರು, ಸಹೋದ್ಯೋಗಿಗಳು, ನೆಂಟರು ನಮ್ಮನ್ನು ಪ್ರೀತಿಸಿದರೂ ಇವರಾರ ಪ್ರೀತಿಯೂ ತಂದೆ ತಾಯಿಯರ ಪ್ರೀತಿಗೆ ಸರಿಸಮನಾಗಲಾರದು.

ನಮ್ಮನ್ನು ಪ್ರತಿಫಲಾಪೇಕ್ಷೆಯಿಲ್ಲದೇ ಪ್ರೀತಿಸುವ ಜೀವಿಗಳು

ನಮ್ಮನ್ನು ಪ್ರತಿಫಲಾಪೇಕ್ಷೆಯಿಲ್ಲದೇ ಪ್ರೀತಿಸುವ ಜೀವಿಗಳು

ಏಕೆಂದರೆ ಬೇರೆ ಎಲ್ಲರ ಪ್ರೀತಿಯಲ್ಲಿ ಕಡಿಮೆಯಾದರೂ ತಂದೆ ತಾಯಿಗಳ ಪ್ರೀತಿಯಲ್ಲಿ ಮಾತ್ರ ಎಂದೂ ಕಡಿಮೆಯಾಗದು. ಏಕೆಂದರೆ ಇವರ ಪ್ರೀತಿ ಯಾವುದೆ ಪ್ರತಿಫಲಾಪೇಕ್ಷೆ ಇಲ್ಲದ ಅಪ್ಪಟ ಪ್ರೀತಿಯಾಗಿದ್ದು ಇದಕ್ಕೆ ಈ ಭೂಮಿಯಲ್ಲಿ ಸಾಟಿಯಾದುದು ಯಾವುದೂ ಇಲ್ಲ.

ತಂದೆ ತಾಯಿಯರೇ ಜೀವನದ ಅತ್ಯುತ್ತಮ ಶಿಕ್ಷಕರು

ತಂದೆ ತಾಯಿಯರೇ ಜೀವನದ ಅತ್ಯುತ್ತಮ ಶಿಕ್ಷಕರು

ಉತ್ತಮ ಶಿಕ್ಷಣವನ್ನು ನಾವು ಶಾಲಾ ಕಾಲೇಜುಗಳಲ್ಲಿ ಪಡೆದರೂ ಜೀವನವನ್ನು ಎದುರಿಸುವ ಶಿಕ್ಷಣವನ್ನು ಮಾತ್ರ ನಮ್ಮ ತಂದೆ ತಾಯಿಯರು ನೀಡುತ್ತಾರೆ. ಈ ತರಬೇತಿಯನ್ನು ಯಾವುದೇ ಶಾಲೆ ನೀಡಲು ಸಾಧ್ಯವಿಲ್ಲ....

ತಂದೆ ತಾಯಿಯರೇ ಜೀವನದ ಅತ್ಯುತ್ತಮ ಶಿಕ್ಷಕರು

ತಂದೆ ತಾಯಿಯರೇ ಜೀವನದ ಅತ್ಯುತ್ತಮ ಶಿಕ್ಷಕರು

ಉತ್ತಮ ಸಂಸ್ಕಾರ, ವಿನಯ, ನಡೆ ನುಡಿ, ಹಿರಿಯರಿಗೆ ನೀಡುವ ಗೌರವ, ಕಷ್ಟಕ್ಕೆ ನೆರವಾಗುವ ಗುಣ, ಎದೆಗುಂದದೇ ಮುನ್ನುಗ್ಗಲು, ಸೋತಾಗ ಮತ್ತೆ ಎದುರಿಸಲು, ಬಿದ್ದಾಗ ಎದ್ದೇಳಲು, ಜಗತ್ತಿನ ಕೃತ್ರಿಮತೆಗಳನ್ನು ಅರಿಯಲು, ನಯವಂಚನೆ ಮೊದಲಾದವುಗಳನ್ನು ಅರಿಯುವ ಮೊದಲಾದ ನೂರಾರು ವಿದ್ಯೆಗಳನ್ನು ಪಾಲಕರ ಹೊರತಾಗಿ ಯಾವುದೇ ಶಾಲೆಯಲ್ಲಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳಿಗೆ ತಂದೆ ತಾಯಿಯರೇ ಜೀವನದ ಅತ್ಯುತ್ತಮ ಶಿಕ್ಷಕರಾಗಿದ್ದಾರೆ.

English summary

This Is Why Everybody Should Love Their Parents

Our parents are the ones for our existence. They have inculcated values in us and also taught us how to face the world. Even after all this, most of us choose to ignore them and move on with our daily lives. They raised us to be good, responsible citizens and we would be nothing without our parents. In this article, we are about to share some of the reasons as to why we should love our parents...
X
Desktop Bottom Promotion