For Quick Alerts
ALLOW NOTIFICATIONS  
For Daily Alerts

ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ....

ಬರೆಯ ಜನ್ಮ ನೀಡಿದ ಮಾತ್ರಕ್ಕೆ ತಾಯಿ ಪರಿಪೂರ್ಣಳಾಗುವುದಿಲ್ಲ. ಬದಲಿಗೆ ತನ್ನ ಕುಡಿಯನ್ನು ಸಮಾಜದಲ್ಲಿ ಓರ್ವ ಗೌರವಾನ್ವಿತ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ತರ.

By Manu
|

ತಾಯಿ ಎಂಬ ಪದಕ್ಕೆ ವಿಶಾಲವಾದ ಅರ್ಥವಿದೆ. ಬರೆಯ ಜನ್ಮ ನೀಡಿದ ಮಾತ್ರಕ್ಕೆ ತಾಯಿ ಪರಿಪೂರ್ಣಳಾಗುವುದಿಲ್ಲ. ಬದಲಿಗೆ ತನ್ನ ಕುಡಿಯನ್ನು ಸಮಾಜದಲ್ಲಿ ಓರ್ವ ಗೌರವಾನ್ವಿತ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ತರ.

ಇಂದಿನ ದಿನಗಳಲ್ಲಿ ಪೈಪೋಟಿಯಲ್ಲಿ ಮುಂಚೂಣಿಗೆ ಬರುವುದೇ ಮಾನದಂಡವಾಗಿರುವಾಗ ಪ್ರತಿ ತಾಯಿಯೂ ತನ್ನ ಮಕ್ಕಳು ಅಗ್ರಸ್ಥಾನದಲ್ಲಿ ಬರಬೇಕೆಂಬ ಹಂಬಲದಿಂದ ಹೆಚ್ಚಿನ ಒತ್ತಡಕ್ಕೊಳಗಾಗುತ್ತಾಳೆ. ಒಂದು ಸಮೀಕ್ಷೆಯ ಪ್ರಕಾರ ಮಕ್ಕಳನ್ನು ಬೆಳೆಸುವ ನಿಟ್ಟಿನಲ್ಲಿ ಶೇಖಡಾ ಎಂಭತ್ತಕ್ಕೂ ಹೆಚ್ಚು ತಾಯಂದಿರು ಹೆಚ್ಚಿನ ಒತ್ತಡಕ್ಕೊಳಗಾಗುತ್ತಾರೆ. ತಂದೆಯ ಪ್ರೀತಿ ಮಗುವಿಗೆ ಶ್ರೀರಕ್ಷೆಯಾಗಲು ಸಲಹೆಗಳು

ಅಲ್ಲದೇ ಭಾರತದಲ್ಲಿ ಮನೆಯ ಎಲ್ಲಾ ಕೆಲಸಗಳ ಜೊತೆಗೇ ಮಕ್ಕಳನ್ನು ಪೈಪೋಟಿಯಲ್ಲಿ ಮುಂಚೂಣಿ ಯಲ್ಲಿರುಸುವುದೂ ಭಾರೀ ಸವಾಲೊಡ್ಡುವ ಕೆಲಸವಾಗಿದೆ. ಹಲವು ಸಮೀಕ್ಷೆಯಲ್ಲಿ ಕಂಡುಕೊಂಡಿರುವಂತೆ ಭಾರತದಲ್ಲಿ ತಾಯಂದಿರು ತಾವು 'ಸಮರ್ಥ ಪಾಲಕಿ'ಯರಾಗಬೇಕೆಂದು ಬಯಸುತ್ತಾರೆ.

ಭಾರತದಲ್ಲಿ ಕಂಡು ಬರುವ ಈ ಪರಿ ವಿಶ್ವದ ಇತರೆಡೆ ಹೆಚ್ಚು ಕಂಡುಬರುವುದಿಲ್ಲ. ಅಂತೆಯೇ 'ಸಮರ್ಥ ಪಾಲಕಿ'ಯ ಪಟ್ಟ ಪಡೆಯುವ ನಿಟ್ಟಿನಲ್ಲಿ ಅತಿ ಹೆಚ್ಚಿನ ಒತ್ತಡಕ್ಕೂ ಒಳಗಾಗುತ್ತಾರೆ. ಈ ಬಗ್ಗೆ ನಡೆಸಿದ ಹಲವು ಸಂಶೋಧನೆಗಳ ಫಲಿತಾಂಶದ ಪ್ರಮುಖ ಅಂಶಗಳನ್ನು ಕೆಳಗಿ ನೀಡಲಾಗಿದೆ.....


ವಾಸ್ತವಾಂಶ #1

ವಾಸ್ತವಾಂಶ #1

65%ಕ್ಕೂ ಹೆಚ್ಚು ಮಹಿಳೆಯರು ತಾವು ಬಸುರಾಗುವ ಸಮಯವನ್ನು ಮುಂದೂಡುವ ಆಯ್ಕೆಯನ್ನು ತಪ್ಪಿತಸ್ಥ ಭಾವನೆಯಂತೆ ಕಾಣುತ್ತಾರೆ. ಏಕೆಂದರೆ ಮದುವೆಯಾದ ಮರುವರ್ಷ ಅಥವಾ ತದನಂತರದ ಒಂದೆರಡು ವರ್ಷಗಳಲ್ಲಿಯೇ ಮನೆಯಲ್ಲಿ ಮಗುವೊಂದು ಆಡುತ್ತಿರಬೇಕು ಎಂದು ಮನೆಯವರು, ನೆರೆಹೊರೆಯವರು ಹಾಗೂ ಸಂಬಂಧಿಕರು ಬಯಸುತ್ತಾರೆ. ಮಹಿಳೆ ತಾನು ಜೀವನದಲ್ಲಿ ಏನಾಗಬಯಸುತ್ತಾಳೆ, ಇದಕ್ಕೆ ಈಕೆಯ ಗರ್ಭಾವಸ್ಥೆ ಅಡ್ಡಿಯಾಗುತ್ತದೆಯೋ ಇಲ್ಲವೋ ಅದೆಲ್ಲಾ ಇವರಿಗೆ ಲೆಕ್ಕಕ್ಕಿಲ್ಲ, ಒಟ್ಟಾರೆ ಮದುವೆಯಾದ ಬಳಿಕ ಮಗುವಾಗಬೇಕು ಅಷ್ಟೇ...!

ವಾಸ್ತವಾಂಶ #2

ವಾಸ್ತವಾಂಶ #2

60%ಕ್ಕೂ ಹೆಚ್ಚು ಉದ್ಯೋಗಸ್ಥ ಮಹಿಳೆಯರು ತಾವು ಮಗುವಿನೊಂದಿಗೆ ಆಡುತ್ತಾ ಕಳೆಯುವ ಸಮಯದಲ್ಲಿ ಉದ್ಯೋಗಕ್ಕೆ ಹೋಗಬೇಕಾಯ್ತಲ್ಲಾ ಎಂದು ನೊಂದುಕೊಳ್ಳುತ್ತಾರೆ. ಮಗುವಿನ ಬಾಲ್ಯದ ಪ್ರತಿ ಕ್ಷಣವನ್ನೂ ತಾಯಿ ಅನುಭವಿಸುವ ಪರಿಯೇ ಬೇರೆಯಾಗಿದ್ದು ಉದ್ಯೋಗ ಈ ಅನುಭವವನ್ನು ಕಡಿಮೆಗೊಳಿಸುತ್ತದೆ ಎಂದು ಭಾವಿಸಿ ವ್ಯಾಕುಲಗೊಳ್ಳುತ್ತಾರೆ.

ವಾಸ್ತವಾಂಶ #3

ವಾಸ್ತವಾಂಶ #3

61%ಕ್ಕೂ ಹೆಚ್ಚಿನ ಗೃಹಿಣಿಯಾಗಿರುವ ತಾಯಂದಿರು ಛೇ, ಇಡಿಯ ದಿನ ಮನೆಯಲ್ಲಿಯೇ ಇದ್ದು ಕಾಲಹರಣ ಮಾಡುವ ಬದಲು ಹೊರಗೆ ಕೊಂಚ ಕಾಲ ಕೆಲಸವನ್ನಾದರೂ ಮಾಡಿದ್ದಿದ್ದರೆ ಸ್ವಲ್ಪಮಟ್ಟಿಗಿನ ಆದಾಯವನ್ನಾದರೂ ಮನೆಗೆ ತಂದು ಮಗುವಿನ ಖರ್ಚಿಗೆ ಬಳಸಬಹುದಿತ್ತಲ್ಲಾ ಎಂದು ವ್ಯಾಕುಲಗೊಳ್ಳುತ್ತಾರೆ.

ವಾಸ್ತವಾಂಶ #4

ವಾಸ್ತವಾಂಶ #4

60% ಕ್ಕೂ ಹೆಚ್ಚು ಗರ್ಭಿಣಿಯರು ತಮಗೆ ಎಲ್ಲಿ ಸಿಸೇರಿಯನ್ ಹೆರಿಗೆಯಗುತ್ತದೆಯೋ ಎಂಬ ಆತಂಕ ಎದುರಿಸುತ್ತಾರೆ. ವೈದ್ಯರೂ, ತಾಯಿಯೂ ಎಷ್ಟೇ ಧೈರ್ಯಕೊಟ್ಟರೂ ಸಹಜ ಹೆರಿಗೆಯಾಗದ ಬಗ್ಗೆ ವ್ಯಾಕುಲತೆ ಹೆಚ್ಚುತ್ತಾ ಹೋಗುತ್ತದೆ.

ವಾಸ್ತವಾಂಶ #5

ವಾಸ್ತವಾಂಶ #5

68%ಕ್ಕೂ ಹೆಚ್ಚು ಸಂತಾನರಹಿತ ಮಹಿಳೆಯರು ತಮಗೆ ಸಂತಾನವಾಗಲಿಲ್ಲವಲ್ಲ ಎಂದು ಕೊರಗುತ್ತಿರುತ್ತಾರೆ. ಇದಕ್ಕೆ ತಮ್ಮ ಪತಿಯ ನಪುಂಸಕತೆಯೇ ಕಾರಣ ಎಂದು ಗೊತ್ತಿದ್ದರೂ ತಮ್ಮ ಹಣೆಬರಹವನ್ನೇ ದೂಷಿಸುತ್ತಾರೆಯೇ ವಿನಃ ಪತಿಯನ್ನು ದೂರುವುದಿಲ್ಲ.

ವಾಸ್ತವಾಂಶ #6

ವಾಸ್ತವಾಂಶ #6

65%ಕ್ಕೂ ಹೆಚ್ಚು ಮಹಿಳೆಯರು ವಿವಾಹದ ಬಳಿಕ ಎಲ್ಲಾ ಸೌಕರ್ಯಗಳಿದ್ದು ಉತ್ತಮ ಜೀವನ ಹೊಂದಿದ್ದರೂ ವಿವಾಹಕ್ಕೂ ಮುನ್ನ ಇದ್ದ ಸ್ವಚ್ಛಂದ ಬದುಕೇ ಸುಂದರ ಎಂಬ ಅಭಿಪ್ರಾಯ ಹೊಂದಿದ್ದಾರೆ.

English summary

Concerns Of Indian Mothers

Many surveys indicate that Indian mothers try to be a 'good parent' first more than anything else which is a trend that isn't seen much anywhere outside India. Yes, Indian mothers take more pressure when it comes to parenting. Here are some more facts revealed by the latest surveys:
X
Desktop Bottom Promotion