ವಿವಾಹದ ಬಳಿಕ ಸಮಸ್ಯೆಗಳು ಒಂದೇ, ಎರಡೇ?, ಯಾವುದಕ್ಕೂ ರೆಡಿಯಾಗಿರಿ!

By: Arshad
Subscribe to Boldsky

ಒಂದು ವೇಳೆ ನೀವು ನಿಮ್ಮ ಪ್ರಿಯತಮನೊಂದಿಗೆ ವೈವಾಹಿಕ ಬಂಧನಕ್ಕೆ ಒಳಗಾಗಲು ಇಚ್ಛಿಸಿದ್ದರೆ ಆತನ ಮನೆಯವರ ಬಗ್ಗೆ ತಿಳಿದು ಕೊಳ್ಳುವುದು ಉತ್ತಮ. ಒಂದು ಸಂಬಂಧದಲ್ಲಿರುವುದು ಹಾಗೂ ವಿವಾಹದ ಬಂಧನಕ್ಕೊಳಗಾಗುವುದು ಎರಡೂ ಬೇರೆ ಬೇರೆ ವಿಷಯಗಳು. ವಿವಾಹದ ಬಳಿಕ ನಿಮ್ಮ ಪತಿಯ ಮನೆಯವರೂ ನಿಮ್ಮ ಮನೆಯವರೇ ಆಗುವ ಕಾರಣ ಇವರಲ್ಲಿ ಪ್ರತಿಯೊಬ್ಬರ ಬಗ್ಗೆಯೂ ನೀವು ಅರಿತುಕೊಳ್ಳುವುದು ಅನಿವಾರ್ಯವಾಗುತ್ತದೆ.

ಈ ಬಗ್ಗೆ ನಿಮಗೆ ಮೊದಲೇ ತಿಳಿದಿದ್ದರೆ ವಿವಾಹದ ಬಳಿಕ ಇವರೊಂದಿಗೆ ವ್ಯವಹರಿಸಲು ನಿಮಗೆ ನೆರವಾಗುತ್ತದೆ. ಈ ಜಗತ್ತಿನಲ್ಲಿ ಎಲ್ಲಾ ವ್ಯಕ್ತಿಗಳು ಒಂದೇ ರೀತಿಯವರಾಗಿರುವುದಿಲ್ಲ. ಒಂದೇ ಮನೆಯ ಎಲ್ಲಾ ಸದಸ್ಯರೂ ಒಂದೇ ರೀತಿಯಾಗಿರುವುದಿಲ್ಲ. ಸಾಮಾನ್ಯವಾಗಿ ನಿಮ್ಮ ಪ್ರಿಯತಮ ಉತ್ತಮನಾಗಿದ್ದರೂ ಆತನ ಮನೆಯವರು ಬೇರೆಯೇ ವ್ಯಕ್ತಿತ್ವ ಹೊಂದಿರಬಹುದು. 

ಇದನ್ನೂ ಓದಿ - ಮದುವೆ ಮುಂಚೆಯೇ, ದೈಹಿಕ ಸಂಬಂಧ ಸರಿಯಲ್ಲ...

ಒಂದು ವೇಳೆ ವಿವಾಹಿತೆಯ ತಂದೆ ಕೊಂಚ ಅನುಕೂಲಸ್ಥರಾಗಿದ್ದರೆ ಪತಿಯ ಮನೆಯವರು ವಿವಾಹದ ಬಳಿಕ ಧನಪಿಪಾಸುಗಳಾಗಿ ಪರಿವರ್ತಿತರಾಗಿರುವುದನ್ನು ಪತ್ರಿಕೆಗಳಲ್ಲಿ ಓದುತ್ತಾ ಬಂದಿದ್ದೇವೆ. ಆದ್ದರಿಂದ ವಿವಾಹದಂತಹ ಅತ್ಯಂತ ಪ್ರಮುಖ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಆತನ ಮನೆಯವರ ಬಗ್ಗೆ ಅರಿತುಕೊಳ್ಳುವುದು ಅಗತ್ಯ. ಇಂದಿನ ಲೇಖನ ನಿಮಗೆ ಸೂಕ್ತ ನಿರ್ಧಾರ ಕೈಗೊಳ್ಳಲು ನೆರವಾಗಬಹುದು....     

 ಆತನ ತಾಯಿ ಆತನ ಬಗ್ಗೆ ಹೆಚ್ಚು ಒಡೆತನದ ಭಾವನೆ ಹೊಂದಿರುವರೇ?

ಆತನ ತಾಯಿ ಆತನ ಬಗ್ಗೆ ಹೆಚ್ಚು ಒಡೆತನದ ಭಾವನೆ ಹೊಂದಿರುವರೇ?

ಕೆಲವು ತಾಯಿಯರು ತಮ್ಮ ಮಗನ ಬಗ್ಗೆ ಹೆಚ್ಚು ಒಡೆತನದ ಭಾವನೆ ಹೊಂದಿದ್ದು ಮಗ ತಾಯಿ ಹಾಕಿದ ಗೆರೆಯನ್ನು ದಾಟುವುದಿಲ್ಲ ಎಂಬ ಸ್ಥಿತಿಯಲ್ಲಿದ್ದರೆ ವಿವಾಹದ ಬಳಿಕ ಪರಿಸ್ಥಿತಿಯನ್ನು ಎದುರಿಸುವುದು ಅಷ್ಟು ಸುಲಭವಾಗಲಾರದು. ಸಾಮಾನ್ಯವಾಗಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರೆ, ಹಾಗೂ ಪುರುಷ ವಿವಾಹದ ಬಳಿಕ ತನ್ನ ತಾಯಿ ಮತ್ತು ಪತ್ನಿಯರಿಗೆ ಸಮಾನವಾದ ಆದ್ಯತೆಯನ್ನು ನೀಡಿದರೆ ಯಾವುದೇ ಸಮಸ್ಯೆ ಉದ್ಭವಿಸಲಾರದು. ಆದರೆ ಒಂದು ವೇಳೆ ಮಗನ ಎಲ್ಲಾ ನಿರ್ಧಾರಗಳನ್ನು ತಾಯಿಯೇ ಕೈಗೊಳ್ಳುವುದಾದರೆ ಆಕೆ ತನ್ನ ನಿರ್ಧಾರಗಳಲ್ಲಿ ನಿಮ್ಮ ಒಳಗೊಳ್ಳುವಿಕೆಯನ್ನು ಸಹಿಸಲಾರಳು. ಒಂದು ವೇಳೆ ಮಗನೂ ತಾಯಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಂತೆ ಕಂಡು ಬಂದರೆ ವಿವಾಹದ ಬಳಿಕ ನಿಮ್ಮನ್ನು ಆತ ಕಡೆಗಣಿಸುವುದು ಖಂಡಿತಾ. ಆದ್ದರಿಂದ ವಿವಾಹಕ್ಕೂ ಮುನ್ನ ಮನೆಯ ಉಳಿದ ಸದಸ್ಯರನ್ನು ಭೇಟಿಯಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

ಆತನ ತಂದೆ

ಆತನ ತಂದೆ

ಆತನ ಮನೆಯಲ್ಲಿ ತಂದೆಯ ಅಧಿಕಾರಷಾಹಿ ನಡೆಯುತ್ತಿದೆಯೇ ಎಂದು ಗಮನಿಸಿ. ಏಕೆಂದರೆ ತಮ್ಮ ಮಕ್ಕಳ ಮೇಲೆ ದರ್ಪ ನಡೆಸುವ ತಂದೆಯರು ಮನೆಯ ಸೊಸೆಯರ ಮೇಲೂ ದರ್ಪ ನಡೆಸುವುದಿಲ್ಲ ಎಂದು ನಿರೀಕ್ಷಿಸಲಾಗದು.

ಆತನ ಸಹೋದರ/ಸಹೋದರಿಯರು

ಆತನ ಸಹೋದರ/ಸಹೋದರಿಯರು

ಆತನ ಸಹೋದರ ಹಾಗೂ ಸಹೋದರಿಯರ ಮನೋಭಾವ ನಿಮಗೆ ಹೊಂದುತ್ತದೆಯೇ ಎಂಬುದನ್ನು ನೀವೇ ಸ್ವತಃ ಪರಿಶೀಲಿಸಿ ನೋಡಬೇಕಾಗುತ್ತದೆ. ನಿಮ್ಮನ್ನು ಅವರು ಅತ್ತಿಗೆ ಎಂಬ ಅಭಿಮಾನದಿಂದ ಸ್ವಾಗತಿಸುತ್ತಾರೋ ಎಂಬುದನ್ನು ಮೊದಲು ಕಂಡುಕೊಳ್ಳಿ.

ಇದನ್ನೂ ಓದಿ- ವಯಸ್ಸು ಮೂವತ್ತೈದು ದಾಟಿದರೂ ಇನ್ನೂ ಮದುವೆ ಆಗಿಲ್ಲವೇ?

ಇವರು ಹೆಚ್ಚು ಅಧಿಕಾರಯುತವಾಗಿದ್ದಾರೆಯೇ?

ಇವರು ಹೆಚ್ಚು ಅಧಿಕಾರಯುತವಾಗಿದ್ದಾರೆಯೇ?

ಒಂದು ವೇಳೆ ನಿಮ್ಮ ಪತಿಯ ಮನೆಯಲ್ಲಿರುವ ಇತರ ಸದಸ್ಯರು ನಿಮ್ಮ ಪತಿಗಿಂತಲೂ ಹೆಚ್ಚು ಅಧಿಕಾರವುಳ್ಳವರಾಗಿದ್ದು ತಮ್ಮ ಅಧಿಕಾರವನ್ನು ದಮನಕಾರಿ ರೂಪದಲ್ಲಿ ಪ್ರಯೋಗಿಸುತ್ತಿದ್ದಾರೋ ಎಂದು ಪರೀಕ್ಷಿಸಿ. ಏಕೆಂದರೆ ನಿಮ್ಮ ಪತಿಯ ಮೇಲಿನ ದಮನ ನಿಮ್ಮ ಮೇಲೂ ಹೊರೆಯಾಗುವುದು ಖಂಡಿತ. ಈ ಪರಿಸ್ಥಿತಿ ಇದ್ದರೆ ನಿಮ್ಮ ಜೀವನ ಕಷ್ಟಕರವಾಗಬಹುದು.

ಆತನ ಸಂಬಂಧಿಕರು

ಆತನ ಸಂಬಂಧಿಕರು

ಎಷ್ಟೋ ಮನೆಗಳಲ್ಲಿ ಮನೆಯ ಸದಸ್ಯರಿಗೆ ಹೊರಗಿನ ಸದಸ್ಯರು ಅಥವಾ ಮೂರನೆಯ ವ್ಯಕ್ತಿಗಳು ತಮ್ಮ ಸಲಹೆ ನೀಡುವ ಮೂಲಕ ನಿಯಂತ್ರಿಸುತ್ತಿರುತ್ತಾರೆ. ಎಷ್ಟೋ ಮನೆಗಳ ಮನೆಯ ಮಗಳು ಮದುವೆಯಾಗಿ ಪತಿಯ ಮನೆಗೆ ಹೋದ ಬಳಿಕವೂ ತೌರು ಮನೆಯ ಮೇಲೆ ತಮ್ಮ ನಿರ್ಧಾರಗಳಿಂದ ಪ್ರಭುತ್ವವನ್ನು ಹೊಂದಿರುತ್ತಾರೆ. ಕೆಲವು ಮನೆಗಳಲ್ಲಿ ನೆರೆಮನೆಯವರು, ಆಪ್ತ ಸ್ನೇಹಿತರು ನಿರಾತಂಕವಾಗಿ ಒಳಬರುವುದು ಮಾತ್ರವಲ್ಲದೇ ಮನೆಯ ಸಂಗತಿಗಳಲ್ಲಿಯೂ ಮೂಗು ತೂರಿಸುತ್ತಾರೆ. ಈ ಬಗೆ ಇರುವ ಮನೆಯಲ್ಲಿ ನೆಮ್ಮದಿ ನೆಲೆಸುವಂತಾಗಲು ಕೊಂಚ ಹೆಚ್ಚೇ ಕಷ್ಟಪಡಬೇಕಾಗಿ ಬರುತ್ತದೆ.

ಜೀವನ ಮೌಲ್ಯಗಳು

ಜೀವನ ಮೌಲ್ಯಗಳು

ಈ ಜಗತ್ತಿನಲ್ಲಿ ಎಲ್ಲರೂ ಎಲ್ಲಾ ವಿಷಯಗಳಿಗೆ ಸಮಾನವಾದ ಮೌಲ್ಯ ನೀಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ನಿಮ್ಮ ಪತಿಯ ಮನೆಯವರು ಯಾವುದಕ್ಕೆ ಹೆಚ್ಚಿನ ಮೌಲ್ಯ ನೀಡುತ್ತಾರೆ ಎಂಬುದನ್ನು ಗಮನಿಸಿ. ಉದಾಹರಣೆಗೆ ನಿಮ್ಮ ತಾಯಿಯ ಮನೆಯಲ್ಲಿ ಮಾನವಸಂಬಂಧಗಳಿಗೆ ಹಣಕ್ಕಿಂತಲೂ ಹೆಚ್ಚು ಮೌಲ್ಯ ನೀಡುತ್ತಿದ್ದು ನಿಮ್ಮ ಪತಿಯ ಮನೆಯಲ್ಲಿ ಇದಕ್ಕೆ ವಿರುದ್ದವಾದ ಪರಿಸ್ಥಿತಿ ಇದ್ದರೆ ನಿಮ್ಮ ಬದುಕು ಕಷ್ಟಕರವಾಗಬಹುದು.

ಅವರು ನಿಮ್ಮನ್ನು ಬದಲಿಸಲು ಯತ್ನಿಸಬಹುದು

ಅವರು ನಿಮ್ಮನ್ನು ಬದಲಿಸಲು ಯತ್ನಿಸಬಹುದು

ಸಾಮಾನ್ಯವಾಗಿ ಪ್ರತಿ ಮನೆಗೆ ಆಗಮಿಸುವ ಸೊಸೆ ಈ ಮನೆಯ ನಿಯಮಗಳಿಗೆ ಅನುಸಾರವಾಗಿ ಬಾಳಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಈ ಒಗ್ಗುವಿಕೆ ನಿಮ್ಮ ಆತ್ಮವಿಶ್ವಾಸವನ್ನೇ ಕಸಿದುಕೊಳ್ಳುವಂತಾದರೆ ನಿಮ್ಮ ಬದುಕು ಕಷ್ಟಕರವಾಗಬಹುದು. ಉದಾಹರಣೆಗೆ ನಿಮಗೆ ವಾರಕ್ಕೊಂದು ಸಿನಿಮಾ ಕಡ್ಡಾಯವಾಗಿ ನೋಡುವ ಅಭ್ಯಾಸವಿದ್ದು ನಿಮ್ಮ ಪತಿಯ ಮನೆಯಲ್ಲಿ ಸಿನೇಮಾ ನೋಡುವುದಕ್ಕೆ ನಿಷೇಧವಿದ್ದರೆ ಆ ಮನೆಯಲ್ಲಿ ಬಾಳಲು ನಿಮಗೆ ಎರಡು ವಾರವೂ ಸಾಧ್ಯವಾಗಲಾರದು. ನಿಮ್ಮನ್ನು ಬದಲಿಸಲು ಯತ್ನಿಸುವ ಮನೆಯಿಂದ ದೂರವಿರುವುದೇ ಜಾಣತನದ ಕ್ರಮ.

English summary

Things You Should Know About His Family!

What will you do if your guy is good but not his family members? Well, that is why it is better to meet them much before you get too serious about your guy. Here are some things you need to know about his family.
Story first published: Tuesday, May 16, 2017, 23:42 [IST]
Subscribe Newsletter