ಈ ಕೆಲಸಗಳನ್ನು ಎಲ್ಲಾ ಜೋಡಿಗಳು ಮಾಡಿರುತ್ತಾರೆ... ಆದರೆ ಒಪ್ಪಿಕೊಳ್ಳುವುದಿಲ್ಲ!

By: Divya
Subscribe to Boldsky

ಗಂಡ ಹೆಂಡತಿ ಎಂದಮೇಲೆ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಅದಕ್ಕಾಗಿಯೇ ಕೆಲವೊಮ್ಮೆ ವಾದ ವಿವಾದಗಳು ನಡೆಯುತ್ತವೆ. ವಿವಾದಗಳ ಪರಿಣಾಮದಿಂದ ಇಬ್ಬರಲ್ಲಿ ಒಬ್ಬರು ಮುನಿಸಿಕೊಳ್ಳುತ್ತಾರೆ. ಆ ಮುನಿಸಿ ಗಂಟೆಗಳಕಾಲ ಅಥವಾ ದಿನಗಳ ತನಕವೂ ಮುಂದುವರಿಯುವುದುಂಟು. ಹಾಗಂತ ಅವರಲ್ಲೇನೂ ವೈರತ್ವ ಇರುವುದಿಲ್ಲ. ಅದು ಅವರ ನಡುವೆ ಇರುವ ಒಂದು ಬಗೆಯ ಪ್ರೀತಿ ಎಂತಲೇ ಹೇಳಬಹುದು. ಗಂಡ ಹೆಂಡತಿಯ ನಡುವೆ ಇರುವ ಒಂದು ತಮಾಷೆ ಎಂದರೆ ಅವರ ನಡುವೆ ನಡೆಯುವ ಜಗಳ, ವಾದ ಮತ್ತು ಸಮಸ್ಯೆಗಳ ಕುರಿತು ಬೇರೆಯವರ ಮುಂದೆ ಹೇಳಿಕೊಳ್ಳಲು ಅಥವಾ ತೋರಿಸಿಕೊಳ್ಳಲು ಇಷ್ಟಪಡುವುದಿಲ್ಲ.

ಅವರ ನಡುವೆ ಅದೆಷ್ಟೇ ಬೇಸರ ಅಥವಾ ಮುನಿಸು ಇದ್ದರೂ ಮೂರನೇ ವ್ಯಕ್ತಿಯ ಎದುರು ಬಹಳ ಪ್ರೀತಿಯಿಂದ ಇರುವವರಂತೆಯೇ ತೋರಿಸಿಕೊಳ್ಳುತ್ತಾರೆ. ಜೊತೆಗೆ ಅವರ ಧನಾತ್ಮಕ ಕೆಲಸಗಳ ಕುರಿತು ಹೊಗಳಿಕೆ ವ್ಯಕ್ತಪಡಿಸುತ್ತಾರೆ. ಅದರಲ್ಲೂ ಹೆಂಡತಿಯು ತನ್ನ ಗಂಡನ ಗೌರವನ್ನು ಕಳೆಯಲು ಇಷ್ಟಪಡುವುದಿಲ್ಲ. ಹಾಗೆಯೇ ಗಂಡನು ತನ್ನ ಹೆಂಡತಿಯ ಅಸಹಾಯಕ ಅಥವಾ ತಡ್ಡ ತನದ ಬಗ್ಗೆ ಹೇಳುವುದಿಲ್ಲ.

ಕೆಲವು ಬಗೆಯ ವಾದ ವಿವಾದಗಳು ಸಾಮಾನ್ಯವಾಗಿ ಎಲ್ಲಾ ಪತಿ-ಪತ್ನಿಗಳು ಮಾಡುತ್ತಾರೆ. ಆದರೆ ಅದರ ಬಗ್ಗೆ ಯಾರೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಒಂದು ಆಶ್ಚರ್ಯಕರ ಸಂಗತಿಯೆಂದರೆ ಕೆಲವರು ನಮ್ಮ ನಡುವೆ ಆ ಬಗೆಯ ಸಮಸ್ಯೆ ಬಂದೇ ಇಲ್ಲ ಎನ್ನುವ ಹಾರಿಕೆ ಉತ್ತರವನ್ನು ನೀಡುತ್ತಾರೆ. ಹೌದಾ! ಹಾಗಾದರೆ ಅದ್ಯಾವ ವಿಚಾರಗಳ ಕುರಿತು ಹೇಳಿಕೊಳ್ಳುವುದಿಲ್ಲ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕೆಂದರೆ ಮುಂದಿನ ವಿವರಣೆಯನ್ನು ಓದಿ... 

ಹುಟ್ಟಲಿರುವ ಮಗುವಿನ ಹೆಸರಿನ ಕುರಿತು

ಹುಟ್ಟಲಿರುವ ಮಗುವಿನ ಹೆಸರಿನ ಕುರಿತು

ಸಾಮಾನ್ಯವಾಗಿ ಹೆಚ್ಚಿನ ದಂಪತಿಗಳು ಈ ಕೆಲಸವನ್ನು ಮಾಡಿರುತ್ತಾರೆ. ಮುದವೆಗಿಂತ ಮುಂಚೆ ಪಾರ್ಕ್‍ಗಳಲ್ಲಿ ಕುಳಿತಾಗ ಅಥವಾ ಅವರಿಷ್ಟದ ಸ್ಥಳಗಳಿಗೆ ಭೇಟಿ ನೀಡಿದಾಗ ತಮ್ಮ ಭವಿಷ್ಯದ ಮಗುವಿನ ಬಗ್ಗೆ ಹಾಗೂ ಅದರ ಹೆಸರಿನ ಬಗ್ಗೆ ಚರ್ಚಿಸಿರುತ್ತಾರೆ. ಈ ಕುರಿತು ಕೆಲವು ತಮಾಷೆಗಳನ್ನು ಮಾಡಿರುತ್ತಾರೆ. ಅದೇ ವಿಚಾರವನ್ನು ಮದುವೆ ಆದ ಬಳಿಕ ಅಥವಾ ಕೆಲವು ವರ್ಷಗಳ ನಂತರ ಹೇಳುವಾಗ ಹಾಗೆ ಮಾಡಲಿಲ್ಲ ಎನ್ನುವ ಉತ್ತರವೇ ಆಗಿರುತ್ತದೆ.

ಒಳ್ಳೆಯ ವಿಚಾರಕ್ಕೆ ಹೋಲಿಕೆ

ಒಳ್ಳೆಯ ವಿಚಾರಕ್ಕೆ ಹೋಲಿಕೆ

ಸಾಮಾನ್ಯವಾಗಿ ಎಲ್ಲಾ ದಂಪತಿಗಳು ಮಾಡಿರುತ್ತಾರೆ. ಬೇರೆ ಜೋಡಿಗಳು ಸಂತೋಷವಾಗಿರುವುದನ್ನು ನೋಡಿದಾಗ ಅವರೆಷ್ಟು ಖುಷಿಯಲ್ಲಿದ್ದಾರೆ, ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಬಹಳ ಖುಷಿಯಿಂದ ಇದ್ದಾರೆ ಎಂದು ಕೊಳ್ಳುತ್ತಾರೆ. ಜೊತೆಗೆ ನಾವು ಹಾಗಿಲ್ಲ ಎನ್ನುವ ಬೇಸರವನ್ನು ಮನಸ್ಸಲ್ಲೇ ಇಟ್ಟಿಕೊಳ್ಳುವರು. ಕೆಲವರು ತಾವು ಇತರರಂತೆ ಬಹಳ ಖುಷಿಯಾಗಿ ಇದ್ದೇವೆ. ನಮ್ಮಲ್ಲಿ ಪ್ರೀತಿ ಹೆಚ್ಚಿದೆ ಎನ್ನುವುದನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳಲು ಇಷ್ಟಪಡುತ್ತಾರೆ.

ಪರಸ್ಪರ ಬಟ್ಟೆಯ ಪರಿಮಳವನ್ನು ನೋಡುತ್ತಾರೆ

ಪರಸ್ಪರ ಬಟ್ಟೆಯ ಪರಿಮಳವನ್ನು ನೋಡುತ್ತಾರೆ

ದಂಪತಿಗಳು ಒಟ್ಟಿಗೆ ಇದ್ದಾಗ ಅದೆಷ್ಟೇ ಭಿನ್ನಾಭಿಪ್ರಾಯಗಳು ಉಂಟಾದರೂ ಪ್ರೀತಿ ಇದ್ದೇ ಇರುತ್ತದೆ. ಇಬ್ಬರಲ್ಲಿ ಒಬ್ಬರು ದೂರದ ಕೆಲಸಕ್ಕೆ ಹೋಗಿರುವಾಗ, ಮನೆಯಲ್ಲಿರುವವರು ಒಂಟಿ ತನವನ್ನು ಬೇಸರದಿಂದ ಸ್ವೀಕರಿಸುತ್ತಾರೆ. ಬದಲಿಗೆ ತಮ್ಮ ಸಂಗಾತಿಯ ಬಟ್ಟೆಯ ಪರಿಮಳವನ್ನು ನೋಡುವುದರ ಮೂಲಕ ಖುಷಿಯನ್ನು ಹೊಂದುತ್ತಾರೆ. ಈ ಕೆಲಸವನ್ನು ಸಾಮಾನ್ಯವಾಗಿ ಅನೇಕರು ಮಾಡಿರುತ್ತಾರೆ.

ಅಡುಗೆ ಮಾಡಲು ಬರದು!

ಅಡುಗೆ ಮಾಡಲು ಬರದು!

ಪತಿಗಾಗಿ ಪತ್ನಿಯು ವಿಶೇಷ ಅಡುಗೆಯನ್ನು ಮಾಡಿರುತ್ತಾಳೆ. ಜೊತೆಗೆ ಗಂಡ ಈ ಎಲ್ಲಾ ಅಡುಗೆಯನ್ನು ತಿಂದು ಖುಷಿ ಪಡುತ್ತಾರೆ ಎನ್ನುವ ಚಿಂತೆಯಲ್ಲಿರುತ್ತೀರಿ. ಆದರೆ ಅದೃಷ್ಟವಶಾತ್ ಪತಿಯು ಮಾಡಿರುವ ವಿಶೇಷ ತಿನಿಸುಗಳನ್ನು ಚೂರು ರುಚಿ ನೋಡಿ, ಹಾಗೇಯೇ ಬಿಟ್ಟು ಬಿಡುತ್ತಾರೆ. ಅಲ್ಲಿಯವರೆಗೆ ನೀವು ಚೆನ್ನಾಗಿ ಅಡುಗೆ ಮಾಡಿದ್ದೀರಿ ಎಂದೇ ಭಾವಿಸಿರುತ್ತೀರಿ. ಆಗ ತಿಳಿಯುತ್ತದೆ ನಿಮಗೆ ಅಷ್ಟಾಗಿ ಅಡುಗೆ ಮಾಡಲು ಬರುವುದಿಲ್ಲ ಎಂದು.

ಗೌಪ್ಯವಾದ ಶಬ್ದಗಳ ಬಳಕೆ

ಗೌಪ್ಯವಾದ ಶಬ್ದಗಳ ಬಳಕೆ

ಮದುವೆಯ ಆರಂಭಿಕ ಹಂತದಲ್ಲಿ ಎಲ್ಲಾ ಜೋಡಿಗಳು ಕೆಲವು ಲೈಂಗಿಕ ವಿಚಾರದ ಕುರಿತಾಗಿ ಬರಹಗಳನ್ನು ಚಾಟ್ ಮಾಡಿರುತ್ತಾರೆ. ಇದನ್ನು ಓದಲು ಮತ್ತು ಕಳುಹಿಸಲು ಪರಸ್ಪರ ಆನಂದಿಸುತ್ತಾರೆ. ಹಾಗಂತ ಇದೇನು ಕೆಟ್ಟ ಕಲ್ಪನೆಯಲ್ಲ. ಆದರೆ ಯಾರ ಬಳಿಯೂ ಯಾರೂ ಹೇಳಿಕೊಳ್ಳುವುದಿಲ್ಲ.

ಅಡ್ಡ ಹೆಸರನ್ನು ನೀಡುತ್ತಾರೆ

ಅಡ್ಡ ಹೆಸರನ್ನು ನೀಡುತ್ತಾರೆ

ಬಹುತೇಕವಾಗಿ ಎಲ್ಲಾ ದಂಪತಿಗಳು ಪರಸ್ಪರ ಪ್ರೀತಿ ವಿಶ್ವಾಸದಿಂದ ಅಡ್ಡ ಹೆಸರನ್ನು ಇಟ್ಟುಕೊಂಡಿರುತ್ತಾರೆ. ಕೆಲವೊಮ್ಮೆ ಆ ಹೆಸರಿನಿಂದಲೇ ಅವರನ್ನು ಕರೆಯುತ್ತಾರೆ. ಜೊತೆಗೆ ಅವರಿಗೆ ಆ ಹೆಸರಿನಿಂದ ಕರೆಯುವಾಗ ಆಂತರಿಕವಾಗಿ ಖುಷಿಪಡುತ್ತಾರೆ.

ಮಕ್ಕಳಂತೆ ದೂರು ನೀಡುತ್ತಾರೆ

ಮಕ್ಕಳಂತೆ ದೂರು ನೀಡುತ್ತಾರೆ

ದಂಪತಿಗಳು ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ದುಃಖದ ವಿಚಾರವನ್ನು ಬಹಳ ಆತ್ಮೀಯವಾಗಿ ಹಂಚಿಕೊಳ್ಳುತ್ತಾರೆ. ಖುಷಿಯಲ್ಲಿ ಇರುವಾಗ ಹಾಗೂ ದುಃಖದಲ್ಲಿರುವಾಗ ಮಕ್ಕಳಂತೆ ವರ್ತಿಸುತ್ತಾರೆ. ಸಂಗಾತಿಯ ಮಡಿಲಲ್ಲಿ ತಲೆಯಿಟ್ಟು ಮಲಗುವುದು, ದುಃಖಿಸುವುದು, ಸಂತೈಸುವುದು ಮತ್ತು ಮುದ್ದಿಸುವುದು ಸಹ ಮಕ್ಕಳಂತೆ. ಒಟ್ಟಿನಲ್ಲಿ ಇಬ್ಬರ ನಡುವೆಯೂ ಮುಗ್ಧ ಮಗುವಿನಂತಹ ವರ್ತನೆಗಳು ಇರುತ್ತದೆ.

ಅವರಿಗೆ ತೋರಿಸುತ್ತಾರೆ!

ಅವರಿಗೆ ತೋರಿಸುತ್ತಾರೆ!

ನಮ್ಮ ದೇಹದ ಕೆಲವು ಭಾಗಗಲ್ಲಿ ಉಂಟಾದ ಗಾಯ ಅಥವಾ ವ್ಯತ್ಯಾಸಗಳನ್ನು ನಾವು ಕನ್ನಡಿಯಲ್ಲಿ ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆ ಸಮಯದಲ್ಲಿ ಸಂಗಾತಿಗೆ ತೋರಿಸಿಕೊಂಡು ಆರೈಕೆ ಮಾಡಿಸಿಕೊಳ್ಳುತ್ತಾರೆ. ಇದು ಸಾಮಾನ್ಯವಾಗಿ ಎಲ್ಲಾ ದಂಪತಿಗಳು ಮಾಡುತ್ತಾರೆ. ಆದರೆ ಈ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ.

ವಯಸ್ಸಾದಾಗ ಹೇಗಿರುತ್ತೇವೆ

ವಯಸ್ಸಾದಾಗ ಹೇಗಿರುತ್ತೇವೆ

ಸಾಮಾನ್ಯವಾಗಿ ನಮಗೆ ವಯಸ್ಸಾದಾಗ ಹೇಗಿರುತ್ತೇವೆ? ಅದರ ಚಿತ್ರಣ ಹೇಗಿರಬಹುದು ಎನ್ನುವ ಕಲ್ಪನೆ ಹಾಗೂ ಚಿತ್ರೀಕರಣವನ್ನು ಮಾಡಿಕೊಳ್ಳಲು ಇಷ್ಟ ಪಡುತ್ತಾರೆ. ಜೊತೆಗೆ ಹಾಗೆಯೇ ಒಮ್ಮೆಯಾದರೂ ವರ್ತಿಸಿರುತ್ತಾರೆ.

English summary

Things All Couples Do But Never Admit

There are some things all couples do but never admit. Some of them are cute and some of them are weird. But at the end of the day, all couples tend to do such things without knowing that other couples also do them at least once in lifetime. Once two people come together and become a couple, they tend to let their guards down and that is when the true selves tend to come out.
Subscribe Newsletter