For Quick Alerts
ALLOW NOTIFICATIONS  
For Daily Alerts

ನೆನಪಿಡಿ: ಅಪ್ಪಿ ತಪ್ಪಿಯೂ, ನಿಮ್ಮ ಪತ್ನಿಗೆ ಈ ಪ್ರಶ್ನೆಗಳನ್ನು ಕೇಳಬೇಡಿ!

By Arshad
|

ದಂಪತಿಗಳ ನಡುವೆ ಅತ್ಯಗತ್ಯವಾಗಿ ಇರಬೇಕಾದ ಗುಣವೆಂದರೆ ವಿಶ್ವಾಸ ಹಾಗೂ ಬದ್ದತೆ. ಈ ವಿಶ್ವಾಸವನ್ನುಳಿಸಿಕೊಳ್ಳಬೇಕಾದರೆ ಕೆಲವು ವಿಷಯಗಳನ್ನು ಕೆದಕದಿರುವುದೇ ಒಳ್ಳೆಯದು. ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಬೇಕಾದರೆ ಹುಳಿ ಹಿಂಡಬಹುದಾದ ಯಾವುದೇ ವಿಷಯಗಳನ್ನು ಪ್ರಸ್ತಾಪವೇ ಮಾಡಬಾರದು.

ಕೆಲವೊಮ್ಮೆ ಚಿಕ್ಕ ವಿಷಯದಿಂದ ಪ್ರಾರಂಭವಾದ ಕೋಳಿಜಗಳ ನಿಧಾನವಾಗಿ ಬೆಳೆಯುತ್ತಾ ದೊಡ್ಡ ಕಲಹವಾಗಿ ಇದರ ಪರಿಣಾಮ ದಂಪತಿಗಳು ಬೇರ್ಪಡುವವರೆಗೂ ಮುಂದುವರೆಯಬಹುದು. ಹೆಚ್ಚಿನ ದಂಪತಿಗಳಿಗೆ ಈ ಬಗ್ಗೆ ಅರಿವೇ ಇರುವುದಿಲ್ಲ. ಕೆಲವು ಪ್ರಶ್ನೆಗಳನ್ನು ಸರ್ವಥಾ ಕೇಳಬಾರದೆಂದೂ ಗೊತ್ತಿಲ್ಲ. ಒಂದು ವೇಳೆ ನೀವು ವಿವಾಹಿತರಾಗಿದ್ದರೆ ಅರಿವಿಲ್ಲದೇ ಕೇಳಬಹುದಾದ ಪ್ರಶ್ನೆಗಳನ್ನು ಕೇಳದೇ ಅದುಮಿಡುವ ಮೂಲಕ ನಿಮ್ಮ ಸಂಸಾರವನ್ನು ಸುಖಮಯವಾಗಿಸಬಹುದು. ಬನ್ನಿ, ಈ ಪ್ರಶ್ನೆಗಳು ಯಾವುವು ಎಂಬುದನ್ನು ನೋಡೋಣ....

ನಿಮ್ಮ ಪತ್ನಿಗೆ ಈ ಪ್ರಶ್ನೆಗಳನ್ನು ಕೇಳಬೇಡಿ

1. ಇಷ್ಟು ಹೆಚ್ಚಿನ ಮೇಕಪ್ ನಿಜವಾಗಿಯೂ ಅಗತ್ಯವಿದೆಯೇ?

1. ಇಷ್ಟು ಹೆಚ್ಚಿನ ಮೇಕಪ್ ನಿಜವಾಗಿಯೂ ಅಗತ್ಯವಿದೆಯೇ?

ಈ ಪ್ರಶ್ನೆ ಕೇಳಿ ನಂತರ ತುಟಿಕಚ್ಚಿಕೊಳ್ಳಬೇಕಾದ ಸಂದರ್ಭ ಎದುರಾಗಬಹುದು. ಒಂದು ಸಮೀಕ್ಷೆಯ ಪ್ರಕಾರ 80%ಕ್ಕೂ ಹೆಚ್ಚು ದಂಪತಿಗಳ ನಡುವಣ ಕೋಳಿಜಗಳಕ್ಕೆ ಈ ಪ್ರಶ್ನೆಯೇ ಕಾರಣವಾಗಿದೆ. ಈ ವಿಶ್ವದ ಪ್ರತಿಯೊಬ್ಬ ಹೆಣ್ಣೂ ಸೌಂದರ್ಯಪ್ರಿಯಳಾಗಿದ್ದು ನಿಮ್ಮ ಪತ್ನಿಯೂ ಇದಕ್ಕೆ ಹೊರತಲ್ಲ. ಹೊರಹೋಗುವ ಸಂದರ್ಭದಲ್ಲಿ ತಾನು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಕಾರಣದಿಂದ ಪ್ರತಿ ಹೆಣ್ಣು ತನ್ನದೇ ಆದ ಸಮಯ ತೆಗೆದುಕೊಳ್ಳುತ್ತಾಳೆ. ಕೆಲವರಿಗೆ ಇದು ಕೊಂಚ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ಈ ಪ್ರಶ್ನೆ ಮಹಿಳೆಯರಿಗೆ ತಮ್ಮ ಸ್ವಾಭಿಮಾನಕ್ಕೇ ಬಿದ್ದ ಪೆಟ್ಟಿನ ರೂಪದಲ್ಲಿ ಕೇಳಿಸುತ್ತದೆ. ಆದ್ದರಿಂದ ಆಕೆ ತನ್ನ ಅಲಂಕಾರಕ್ಕಾಗಿ ಹೆಚ್ಚಿನ ಸಮಯವನ್ನು ತೆಗೆದುಕೊಂಡರೂ ಪರವಾಗಿಲ್ಲ, ಈ ಪ್ರಶ್ನೆಯನ್ನು ಮಾತ್ರ ಕೇಳಬೇಡಿ. ಬದಲಿಗೆ ತಡವಾಗಿ ಹೋದರೆ ಚೆನ್ನಾಗಿರಲ್ಲ, ಬೇರೆಲ್ಲರೂ ಬಂದಿರುತ್ತಾರೆ, ಟ್ಯಾಕ್ಸಿ, ಬಸ್ ಸಿಗುವುದಿಲ್ಲ ಮೊದಲಾದ ಪದಗಳನ್ನೇ ಬಳಸಿ.

2. ನಿನ್ನ ಶಾಪಿಂಗಿಗೆ ಎಷ್ಟು ಖರ್ಚು ಮಾಡಿದೆ?

2. ನಿನ್ನ ಶಾಪಿಂಗಿಗೆ ಎಷ್ಟು ಖರ್ಚು ಮಾಡಿದೆ?

ಈ ಪ್ರಶ್ನೆಯಿಂದ ಮನೆಯಲ್ಲಿ ಮಹಾಭಾರತವೇ ಪ್ರಾರಂಭವಾಗಿರುವುದನ್ನು ಎಷ್ಟೋ ಸಮೀಕ್ಷೆಗಳು ಸಾಬೀತುಪಡಿಸಿವೆ. ಇದು ಆಕೆಯ ಮನೋಭಾವವನ್ನೇ ಬದಲಿಸಬಹುದು. ಶಾಪಿಂಗ್ ಮೂಲಕ ಆಕೆ ಪಡೆದ ಸಂತೋಷ, ನೆಮ್ಮದಿ, ಸುಖವನ್ನೆಲ್ಲಾ ನಿಮ್ಮ ಈ ಒಂದು ಪ್ರಶ್ನೆ ನೀರಾಗಿಸಿ ಆ ಸ್ಥಳದಲ್ಲಿ ಹತಾಶೆ, ಕೋಪ, ದುಃಖ, ದುಮ್ಮಾನ, ಅಸಹ್ಯ, ನಿಮ್ಮ ಮೇಲೆ ತಿರಸ್ಕಾರ ಭಾವನೆ ಮೊದಲಾದವುಗಳನ್ನು ಸ್ಥಾಪಿಸುತ್ತದೆ. ಆಕೆ ಶಾಪಿಂಗ್ ಮಾಡಿದ ಹಣ ನಿಮ್ಮ ಗಳಿಕೆಯಾಗಿರಬಹುದು ಅಥವಾ ಆಕೆಯ ಗಳಿಕೆಯೇ ಆಗಿರಬಹುದು, ಆದರೆ ಸಂಸಾರದಲ್ಲಿ ಕಲಹ ಬರಬಾರದೆಂದರೆ ಈ ಖರ್ಚು ಆಕೆಯ ಸಂತೋಷಕ್ಕಿಂತ ಮಿಗಿಲಾದುದಿಲ್ಲ ಎಂಬುದನ್ನು ಪರಿಗಣಿಸಿ ಸುಮ್ಮನಿರುವುದೇ ಉತ್ತಮ. ಬದಲಿಗೆ ಆಕೆ ಖರೀದಿಸಿದ ವಸ್ತುಗಳ ಬಗ್ಗೆ ಮೆಚ್ಚುಗೆ ಹಾಗೂ ಇದಕ್ಕೆ ತಗಲಿದ ಖರ್ಚಿನ ಬಗ್ಗೆ ಕೇಳದೇ ನಿನಗಾಗಿ ಇಷ್ಟು ಮೊತ್ತವಿದೆ, ಇದನ್ನು ನೀನು ಹೇಗೆ ಬೇಕಾದರೂ ಖರ್ಚು ಮಾಡು ಎನ್ನಿ, ಪತಿಯನ್ನು ಪ್ರೀತಿಸುವ ಯಾವುದೇ ಪತ್ನಿ ಈ ಮಾತುಗಳನ್ನು ಮೆಚ್ಚುವುದು ಮಾತ್ರವಲ್ಲ, ತನ್ನ ಅಥವಾ ಪತಿಯ ಜೇಬಿಗೆ ಪೆಟ್ಟಾಗದಂತೆ ಜಾಗ್ರತೆಯನ್ನೂ ವಹಿಸುತ್ತಾರೆ. ಒಂದು ವೇಳೆ ಮೇಲಿನ ಪ್ರಶ್ನೆ ಕೇಳಿದರೆ ಇದನ್ನು ಪ್ರತೀಕಾರದ ರೂಪದಲ್ಲಿ ಪರಿಗಣಿಸುವ ಆಕೆ ಮುಂದಿನ ಬಾರಿ ಇನ್ನೂ ಹೆಚ್ಚು ಅಥವಾ ದುಬಾರಿ ಖರೀದಿಗಳನ್ನು ಮಾಡಿ ನಿಮ್ಮ ನಡುವಣ ಬಿರುಕನ್ನು ಇನ್ನೂ ಹೆಚ್ಚಿಸಬಹುದು.

3. ನೀನು ನನ್ನ ಫೋನನ್ನೇಕೆ ಚೆಕ್ ಮಾಡಿದೆ?

3. ನೀನು ನನ್ನ ಫೋನನ್ನೇಕೆ ಚೆಕ್ ಮಾಡಿದೆ?

ನಿಮ್ಮ ಫೋನನ್ನು ನಿಮ್ಮ ಪತ್ನಿ ಮಾತ್ರವಲ್ಲ ಗುಟ್ಟಾಗಿ ಇತರರೂ ಪರಿಶೀಲಿಸುತ್ತಾರೆ. ಬೇಕಾದರೆ ನಿಮ್ಮ ಸ್ನೇಹಿತರನ್ನೇ ಕೇಳಿ ನೋಡಿ. ಹೆಚ್ಚಿನ ಪತ್ನಿಯರು ತಮ್ಮ ಪತಿಯರ ಫೋನ್ ಅನ್ನು ಪರಿಶೀಲಿಸುವುದು ತಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ನೋಡುತ್ತಾರೆ. ಒಂದು ವೇಳೆ ನೀವು ನಿಮ್ಮ ಪತ್ನಿಯನ್ನು ನಿಜವಾಗಿಯೂ ಪ್ರೀತಿಸುತ್ತಿದ್ದೀರೇ ಆದರೆ ನಿಮ್ಮ ಫೋನನ್ನು ಸಂಪೂರ್ಣವಾಗಿ ಪರಿಶೀಲಿಸಲು ಆಕೆಗೆ ಅವಕಾಶ ಮಾಡಿ ಕೊಡಿ. ಇದಕ್ಕೂ ಮುನ್ನ ನಿಮ್ಮ ವೈಯಕ್ತಿಕ ಬ್ರೌಸ್ ಹಿಸ್ಟರಿಯನ್ನು ನಿವಾರಿಸಿ. ನಿಮ್ಮ ಪತ್ನಿಗೆ ಮುಜುಗರವಾಗಬಹುದಾದ ಎಲ್ಲಾ ಸಂದೇಶಗಳನ್ನು ಅಳಿಸಿ ಬಿಡಿ. ನೀವು ನಿಮ್ಮ ಪತ್ನಿಗೆ ಮೋಸ ಮಾಡುತ್ತಿಲ್ಲವೆಂದು ಆಕೆಗೆ ಮನದಟ್ಟಾಗಲು ವಾಸ್ತವವಾಗಿ ನಿಮಗೆ ಇದೊಂದು ಸದಾವಕಾಶ. ಪತಿ ಕೇವಲ ತನ್ನವನಾಗಿರಬೇಕು ಎಂದು ಪ್ರತಿ ಪತ್ನಿಯ ಬಯಕೆಯಾಗಿದ್ದು ಫೋನನ್ನು ಪರಿಶೀಲಿಸುವ ಮೂಲಕ ಇದನ್ನು ಖಾತರಿಪಡಿಸುತ್ತಿದ್ದಾರೆ ಅಷ್ಟೇ.

4. ನೀನು ಗರ್ಭಿಣಿಯಾಗಿದ್ದಾಗಲೂ ನಾವು ಕೂಡಬಹುದೇ?

4. ನೀನು ಗರ್ಭಿಣಿಯಾಗಿದ್ದಾಗಲೂ ನಾವು ಕೂಡಬಹುದೇ?

ಈ ಪ್ರಶ್ನೆಯನ್ನು ಕೇಳಿದರೆ ಆಕೆ ತನ್ನ ಮನದಲ್ಲಿ ನಿಮ್ಮ ಬಗ್ಗೆ ತಾತ್ಸಾರ ಭಾವನೆ ಮೂಡಿಸಿಕೊಳ್ಳಬಹುದು. ನಿಮಗೆ ಪತ್ನಿ ಎಂದರೆ ಕೇವಲ ದೈಹಿಕ ಬಯಕೆಗಳನ್ನು ಪೂರೈಸಿಕೊಳ್ಳುವ ಮಾಧ್ಯಮ ಎಂದೇ ನಿಮ್ಮ ಬಗ್ಗೆ ಭಾವನೆ ಮೂಡಬಹುದು. ಎಷ್ಟೆಂದರೂ ನೀವು ಪತಿ, ಪರಮೇಶ್ವರನ ಸ್ಥಾನದಲ್ಲಿರುವವರು, ನೇರವಾಗಿ ಹೇಳುವಂತಿಲ್ಲ. ಕೆಲವರು ಮಾತ್ರ ಈ ಪ್ರಶ್ನೆಗೆ ಥಟ್ಟನೇ ಕಪಾಳಕ್ಕೆ ಬಿಗಿಯುವ ಮೂಲಕ ಉತ್ತರಿಸಿದರೆ ಇಷ್ಟು ಧೈರ್ಯವಿಲ್ಲದ ಇತರ ಪತ್ನಿಯರು ಖಿನ್ನತೆಗೆ ಶರಣಾಗಬಹುದು. ಬದಲಿಗೆ ಆಕೆಯೇ ನಿಮ್ಮಲ್ಲಿ ತನ್ನ ಅಗತ್ಯವನ್ನು ಹೇಳಿಕೊಂಡಾಗ ಮಾತ್ರ, ಅದೂ ವೈದ್ಯರ ಸಲಹೆ ಪಡೆದು ಅವರ ಸೂಚನೆಗಳನ್ನು ಅನುಸರಿಸುವ ಮೂಲಕ ಮಾತ್ರವೇ ಮುಂದುವರೆಯಿರಿ.

5. ನೀನು ಪ್ರತಿವಾರವೂ ತವರಿಗೇಕೆ ಹೋಗುವುದು?

5. ನೀನು ಪ್ರತಿವಾರವೂ ತವರಿಗೇಕೆ ಹೋಗುವುದು?

ನಿಮಗೆ ಆಕೆಯ ಮನೆಯವರು ಇಷ್ಟವಿಲ್ಲದಿದ್ದರೂ ಆಕೆಗೆ ತವರಿನ ಸದಸ್ಯರೆಂದರೆ ಈಗಲೂ ಆತ್ಮೀಯರೇ ಹೌದು. ಆದ್ದರಿಂದ ಈ ಪ್ರಶ್ನೆಯನ್ನು ಕೇಳದೇ ಇದ್ದಷ್ಟೂ ನಿಮಗೇ ಒಳ್ಳೆಯದು. ಒಂದು ವೇಳೆ ಕೇಳಿದರೆ ನಿಮ್ಮನ್ನು ಆಕೆ ದ್ವೇಶಿಸಲು ಪ್ರಾರಂಭಿಸಬಹುದು. ಇದು ದಂಪತಿಗಳ ನಡುವಣ ದೂರವನ್ನು ಹೆಚ್ಚಿಸುವ ಹುಳಿಯೂ ಆಗಿದೆ.

6. ನಾನು ಬಕ್ಕತಲೆಯ ಪತಿಯೇ?

6. ನಾನು ಬಕ್ಕತಲೆಯ ಪತಿಯೇ?

ಈ ಬಗೆಯ ಪ್ರಶ್ನೆಗಳನ್ನು ನೀವು ಸರ್ವಥಾ ಕೇಳಕೂಡದು. ಪ್ರತಿ ಹೆಣ್ಣಿಗೂ ತನ್ನ ಪತಿ ಮನ್ಮಥನೇ ಆಗಿರಬೇಕು ಎಂಬ ಬಯಕೆ ಇರುತ್ತದೆ. ಆದರೆ ಪ್ರತಿ ಪತಿಯೂ ಮನ್ಮಥನಾಗಿರುವುದಿಲ್ಲವಲ್ಲ. ಈ ಪ್ರಶ್ನೆಗೆ ಆಕೆ ಥಟ್ಟನೇ ಇಷ್ಟವಿಲ್ಲದಿದ್ದರೂ ಹೌದು ಎಂದು ಉತ್ತರ ನೀಡಿದರೆ? ಈ ಉತ್ತಮ ನಿಮ್ಮ ನಿದ್ದೆಯನ್ನೇ ಕಸಿದುಕೊಳ್ಳಬಹುದು. ವಿವಾಹವಾದ ಬಳಿಕ ಪತ್ನಿಯರು ತಮ್ಮ ಪತಿಯಲ್ಲಿಯೇ ಮನ್ಮಥನನ್ನು ಕಾಣಲು ಯತ್ನಿಸುತ್ತಾರೆ. ದೈಹಿಕ ರೂಪದಲ್ಲಿ ಅಲ್ಲ! ಬದಲಿಗೆ ಮನಸ್ಸಿನ ರೂಪದಲ್ಲಿ! ಆಕೆಗೆ ಇಂತಹ ಪ್ರಶ್ನೆಗಳು ಕಿರಿಕಿರಿ ಎನ್ನಿಸಬಹುದು. ಆದ್ದರಿಂದ ಇವನ್ನು ಕೇಳಲೇಬಾರದು.

English summary

Questions You Should Never Ask Your Wife

There are some things you should never ask your wife. Yes, if you wish to avoid conflicts at home and lead a peaceful life, it is safe to stay away from topics that are too acidic in nature. Sometimes, small quarrels may turn into big fights and even lead to breakups. Are you wondering what those small things are? Or are you wondering how seemingly small things can break relationships? Here are some questions not to ask your wife.
X
Desktop Bottom Promotion