For Quick Alerts
ALLOW NOTIFICATIONS  
For Daily Alerts

ಎಲ್ಲಾ ಸಮಸ್ಯೆಗೂ ಪರಿಹಾರವಿದೆ, ನೀವು ಮನಸ್ಸು ಮಾಡಬೇಕಷ್ಟೆ!

By Deepu
|

ಮದುವೆಯಾದ ಹೊಸ ದಂಪತಿಯಲ್ಲಿ ಕೇಳುವಂತಹ ಮೊದಲ ಪ್ರಶ್ನೆಯೆಂದರೆ ಏನಾದರೂ ವಿಶೇಷವಿದೆಯಾ? ಎಂದು. ಇದು ಒಂದೆರಡು ವರ್ಷಗಳ ತನಕ ಬರುತ್ತಲೇ ಇರುವಂತಹ ಪ್ರಶ್ನೆಯಾಗಿದೆ. ಎರಡು ವರ್ಷಗಳ ಕಾಲ ಮಗುವೇ ಆಗದಿದ್ದರೆ ಆಗ ಬರುವ ಪ್ರಶ್ನೆ ಏನಾದರೂ ಸಮಸ್ಯೆಯಿದೆಯಾ ಎಂದು. ಇದು ನಮ್ಮ ಸಮಾಜದಲ್ಲಿ ಪ್ರತಿಯೊಬ್ಬ ದಂಪತಿಯು ಎದುರಿಸಿರುವಂತಹ ಪ್ರಶ್ನೆಯಾಗಿದೆ.

ಮಗುವನ್ನು ಪಡೆದರೆ ಅದಕ್ಕಿಂತ ದೊಡ್ಡ ಸಂತೋಷ ಬೇರೊಂದಿಲ್ಲ. ಆದರೆ ಮಗುವನ್ನು ಪಡೆಯುವ ಭಾಗ್ಯ ನಿಮಗಿಲ್ಲವೆಂದು ವೈದ್ಯರು ಹೇಳಿದರೆ ಅದಕ್ಕಿಂತ ದೊಡ್ಡ ನೋವು ಹಾಗೂ ಸಂಕಟ ಮತ್ತೊಂದಿಲ್ಲ.

ವಯಸ್ಸು ಮೂವತ್ತೈದು ದಾಟಿದರೂ ಇನ್ನೂ ಮದುವೆ ಆಗಿಲ್ಲವೇ?

ಪ್ರತಿಯೊಬ್ಬರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಈ ಜೀವನವೇ ಬೇಡ ಎನ್ನುವಷ್ಟು ಬೇಸರ ಮೂಡುತ್ತದೆ. ಮಕ್ಕಳಿಲ್ಲದ ವೈವಾಹಿಕ ಜೀವನ ತುಂಬಾ ನಿರಾಸದಾಯಕ. ಆದರೆ ಸಂಗಾತಿ ನಿಮ್ಮೊಂದಿಗೆ ಹೊಂದಾಣಿಕೆಯಲ್ಲಿದ್ದರೆ ಮಕ್ಕಳಿಲ್ಲದ ಜೀವನವನ್ನು ಕೂಡ ಸುಗಮವಾಗಿಸಬಹುದು.

#1

#1

ಮನೆಯಲ್ಲಿ ಮಗುವಿನ ಅಳು, ತೊದಲು ನುಡಿ ಮತ್ತು ಆಟವನ್ನು ನೋಡಬೇಕೆಂದು ಇದ್ದರೆ ಅನಾಥ ಮಗುವನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ನಿಮ್ಮ ಜತೆಗಾರರೊಂದಿಗೆ ಮಾತನಾಡಿ. ಹೀಗೆ ಮಾಡುವುದರಿಂದ ಅನಾಥ ಮಗುವಿಗೆ ಜೀವನ ಸಿಕ್ಕಂತೆ ಆಗುತ್ತದೆ.

#2

#2

ನಿಮ್ಮ ಹೂಡಿಕೆಯನ್ನು ಬಳಸಿಕೊಂಡು ವಿಶ್ವ ಪರ್ಯಟನೆ ಮಾಡಿ. ಇದು ನಿಮ್ಮ ಜೀವನಕ್ಕೆ ಹೊಸ ದೃಷ್ಟಿಕೋನವನ್ನು ನೀಡುವುದು. ಇದರಿಂದ ನಿಮ್ಮ ಆಕಾಂಕ್ಷೆಗಳು ಪೂರ್ತಿಯಾಗಿ ಮನಸ್ಸು ತುಂಬಿದಂತೆ ಆಗುತ್ತದೆ. ಇಷ್ಟು ದೊಡ್ಡ ವಿಶ್ವದಲ್ಲಿ ಮಗು ಇಲ್ಲದ ಕಾರಣ ಏಕಾಂಗಿಯಲ್ಲ ಎನ್ನುವಂತಹ ಭಾವನೆ ನಿಮ್ಮಲ್ಲಿ ಮೂಡುವುದು.

#3

#3

ಸಾಕು ಪ್ರಾಣಿಯನ್ನು ತನ್ನಿ. ಸಾಕು ಪ್ರಾಣಿ ಮಗುವಿನಂತೆ ನಿಮ್ಮನ್ನು ಪ್ರೀತಿಸುತ್ತದೆ. ನಿಮಗೆ ಯಾವಾಗಲೂ ಪ್ರೀತಿ ಬೇಕೆಂದು ಇದ್ದರೆ ಆಗ ಬೆಕ್ಕು, ನಾಯಿ, ಗಿಳಿ ಮತ್ತು ಪಾರಿವಾಳವನ್ನು ಸಾಕಿ.

#4

#4

ಸಣ್ಣ ಜಾಗ ತೆಗೆದುಕೊಂಡು ಅದರಲ್ಲಿ ತೋಟ ಮಾಡಿ. ತೋಟದಲ್ಲಿ ಸಸಿಗಳನ್ನು ನೆಟ್ಟು ಅದಕ್ಕೆ ನೀರು ಹಾಕಿ ಸಸಿ ದೊಡ್ಡದಾಗುವಾಗ ನಿಜವಾದ ಸಂತೋಷ ನಿಮಗೆ ಸಿಗುವುದು. ಇದು ಮಕ್ಕಳಷ್ಟೇ ಖುಷಿಯನ್ನು ನಿಮಗೆ ನೀಡುವುದು. ಮನಶಾಸ್ತ್ರಜ್ಞರ ಪ್ರಕಾರ ಗಿಡ ಬೆಳೆಸುವುದು ಮಕ್ಕಳನ್ನು ಬೆಳೆಸಿದಷ್ಟೇ ಸಂತೋಷವನ್ನು ನೀಡುತ್ತದೆಯಂತೆ.

#5

#5

ಮಕ್ಕಳಿಲ್ಲದ ಕೊರಗನ್ನು ನೀಗಿಸಲು ನೀವು ಬಯಸುವಿರಾದರೆ ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಪ್ರಯತ್ನಿಸಿ. ಇದರಿಂದ ನಿಮಗೆ ಹೆಸರು, ಜನಪ್ರಿಯತೆ, ಹಣ ಮತ್ತು ಸಂತೋಷ ಸಿಗುವುದು.

#6

#6

ಮಕ್ಕಳಿಲ್ಲದ ನೋವನ್ನು ಕಡಿಮೆ ಮಾಡಬೇಕಾದರೆ ಜೀವನವನ್ನು ಆನಂದಿಸಿ. ನಿಮ್ಮ ಜತೆಗಾರರಿಗೆ ಮನವರಿಕೆ ಮಾಡಿಕೊಟ್ಟು ಯಾವುದಾದರೂ ಒಳ್ಳೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಇದರಿಂದ ನೋವು ಮರೆಯಲು ಸಾಧ್ಯವಾಗುತ್ತದೆ. ಹೊಸ ಹವ್ಯಾಸ ಬೆಳೆಸುವುದು, ಹೊಸ ಕಲೆ, ಅಡುಗೆ, ಪುಸ್ತಕ ಓದುವುದು ಮತ್ತು ಬರೆಯುದನ್ನು ನೀವು ಆಯ್ಕೆ ಮಾಡಬಹುದು. ನಿಮಗೆ ಸಂತೋಷವನ್ನು ಉಂಟು ಮಾಡಬಲ್ಲ ಮತ್ತು ಮನಸ್ಸನ್ನು ವ್ಯಸ್ತವಾಗಿಡಬಲ್ಲ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ.

#7

#7

ಆಧ್ಯಾತ್ಮಿಕತೆಯ ಬಗ್ಗೆ ನಿಮಗೆ ಹೆಚ್ಚಿನ ಆಸಕ್ತಿಯಿದ್ದರೆ ಅದರಲ್ಲಿ ಮುಂದುವರಿಯಿರಿ. ಆಧ್ಯಾತ್ಮಿಕವಾಗಿ ಹೆಚ್ಚು ತೊಡಗಿ ಕೊಂಡಿರುವ ವ್ಯಕ್ತಿಗಳು ಮಗುವನ್ನು ಪಡೆಯುವುದರಿಂದ ದೂರ ಉಳಿಯುತ್ತಾರೆ. ಯಾಕೆಂದರೆ ಭಾವನಾತ್ಮಕ ಸಂಬಂಧ, ಜವಾಬ್ದಾರಿ ಮತ್ತು ಇತರ ವಿಚಾರಗಳು ಅವರನ್ನು ಇದರಿಂದ ದೂರವಿಡುತ್ತದೆ. ನೀವು ಮತ್ತು ನಿಮ್ಮ ಸಂಗಾತಿ ಆಧ್ಯಾತ್ಮಿಕ ಪ್ರಯಾಣದಲ್ಲಿದ್ದರೆ ಅದರ ಕಡೆ ಹೆಚ್ಚಿನ ಗಮನ ಹರಿಸಿ. ಮುಂದುವರಿಯಿರಿ.

English summary

How To Deal With Childless Marriage

Married life with children can be awesome. But wait! Married life without kids can also be beautiful, if you wish to make it beautiful. When the doctor tells you that as a couple, you may not be able to reproduce, life seems to come to a standstill. The first issue is digesting the harsh truth. And the second issue is handling the words of others around you. Yes, that's a bigger problem! People around you may make you feel awkward by asking you that same old question "When are you expecting?" You may even feel like skipping social events to avoid such people!
X
Desktop Bottom Promotion