For Quick Alerts
ALLOW NOTIFICATIONS  
For Daily Alerts

ಉಫ್! ಸ್ವಲ್ಪ ದಿನ ಗಂಡನ ಕಿರಿಕಿರಿ ಇಲ್ಲ-ಆರಾಮಾಗಿ ಇದ್ದು ಬಿಡುತ್ತೇನೆ!!

By Arshad
|

ಇತ್ತೀಚೆಗೆ ನಡೆಸಲಾದ ಒಂದು ಸಮೀಕ್ಷೆಯಲ್ಲಿ ನವವಿವಾಹಿತ ಮಹಿಳೆಯರಿಗೆ ಒಂದು ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಯಲ್ಲಿ ಅವರ ಪತಿಯರ ಅನುಪಸ್ಥಿತಿಯ ಸಮಯವನ್ನು ತಾವು ಹೇಗೆ ಕಳೆಯುತ್ತೀರಿ ಎಂದು ಕೇಳಲಾಗಿತ್ತು. ಅಚ್ಚರಿ ಎಂದರೆ 80% ಕ್ಕೂ ಹೆಚ್ಚು ಮಹಿಳೆಯರು ತಾವು ತಮ್ಮ ಪತಿಯ ಅನುಪಸ್ಥಿತಿಯ ಸಮಯವನ್ನು ಕನಿಷ್ಠ ಒಂದು ಬಾರಿಯಾದರೂ ಸಂತೋಷದಿಂದ ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ.

ಅಂದರೆ ಇದರ ಅರ್ಥವನ್ನು ಪುರುಷರು ತಪ್ಪಾಗಿ ಅರ್ಥೈಸಿಕೊಳ್ಳಬೇಕಿಲ್ಲ. ಏಕೆಂದರೆ ವಿವಾಹವಾದ ಬಳಿಕ ಮಹಿಳೆ ತನ್ನ ಜೀವನದ ಪ್ರಮುಖ ಬದಲಾವಣೆಯ ಘಟ್ಟವನ್ನು ತಲುಪಿದ್ದು ಈ ಸಮಯದಲ್ಲಿ ಮನೆಯವರೊಂದಿಗೆ ಹೊಂದಿಕೊಳ್ಳುತ್ತಿರುವಾಗ, ಪತಿಯೊಂದಿಗಿನ ಸಮಯ ಹಾಗೂ ಮನೆಯ ಇತರ ಸದಸ್ಯರೊಂದಿಗಿನ ಹೊಸ ಬದುಕಿಗೆ ಸರಿಸಮನಾಗುವಂತೆ ಬದಲಾವಣೆ ಪಡೆಯುತ್ತಿರುವಾಗ ಕೊಂಚ ವೇಳೆಯನ್ನು ತನ್ನ ಸ್ವಂತಕ್ಕಾಗಿ ಬಳಸಿಕೊಳ್ಳುವುದು ಅಗತ್ಯವಾಗಿದ್ದು ಈ ಸಮಯ ಪತಿ ಇಲ್ಲದ ಹೊತ್ತೇ ಸೂಕ್ತವಾಗಿದೆ.

ಅಷ್ಟೇ, ಅಲ್ಲ, ನವ ವಿವಾಹಿತ ಪುರುಷರಿಗೂ ತಮ್ಮದೇ ಆಪ್ತ ಕ್ಷಣಗಳ ಅಗತ್ಯವಿದ್ದು ತಮ್ಮ ಪತ್ನಿಯರು ಸ್ಥಳದಲ್ಲಿ ಇಲ್ಲದಿದ್ದ ಸಮಯವನ್ನು ಬಳಸಿಕೊಳ್ಳಬಹುದು. ಕನ್ನಡದ ಗಾದೆ ಮಾತಿನಂತೆ ಹುಡುಗ ಕೂತು ಕೆಟ್ಟ, ಹುಡುಗಿ ತಿರುಗಿ ಕೆಟ್ಟಳು ಎಂಬಂತೆ ಪುರುಷರು ತಮ್ಮ ಉದ್ಯೋಗ ಅಥವಾ ಕಲಿಕೆಯ ನಿಮಿತ್ತ ಮನೆಯಿಂದ ಹೊರಗಿರುವುದೇ ಉತ್ತಮವಾಗಿದ್ದು ಈ ಸಮಯವನ್ನು ಗೃಹಿಣಿಯರು ಮನೆಯ ಅಥವಾ ಇತರ ಕೆಲಸಗಳನ್ನು ಪೂರೈಸಲು ಬಳಸಿಕೊಳ್ಳುತ್ತಾರೆ. ಆದರೆ ಕಾರಣ ನಿಮಿತ್ತ ನಿತ್ಯದ ಸಮಯಕ್ಕಿಂತಲೂ ಹೆಚ್ಚು ಕಾಲ ಪತಿಯ ಅನುಪಸ್ಥಿತಿಯನ್ನು ಮಹಿಳೆಯರು ಏಕಾಗಿ ಸಂತೋಷದಿಂದ ಸ್ವೀಕರಿಸುತ್ತಾರೆ ಎಂಬ ವಿವರಗಳು ಇಲ್ಲಿವೆ...

ಆಕೆ ತನ್ನ ಗೆಳತಿಯರನ್ನು ಮನೆಗೆ ಆಹ್ವಾನಿಸಬಹುದು

ಆಕೆ ತನ್ನ ಗೆಳತಿಯರನ್ನು ಮನೆಗೆ ಆಹ್ವಾನಿಸಬಹುದು

ಹಳೆಯ ಮತ್ತು ಆತ್ಮೀಯ ಗೆಳತಿಯರನ್ನು ಮನೆಗೆ ಆಹ್ವಾನಿಸಿ ಕೆಲ ಹೊತ್ತು ಕಾಡು ಹರಟೆಯಲ್ಲಿ ಕಳೆಯುವುದು ಪ್ರತಿ ಮಹಿಳೆಗೂ ಅತ್ಯಂತ ಇಷ್ಟವಾದ ಕಾರ್ಯವಾಗಿದ್ದು ಪತಿಯರು ಇರುವ ಸಮಯದಲ್ಲಿ ಇದು ಸಾಧ್ಯವಾಗುವುದಿಲ್ಲ. ಹಾಗಾಗಿ ಒಂದು ವೇಳೆ ಪತಿಯ ಅನುಪಸ್ಥಿಯಲ್ಲಿ ಪತ್ನಿ ಸಂತೋಷವಾಗಿಯೇ ಇದ್ದಾಳೆಂದರೆ ಈ ಸಮಯವನ್ನು ಆಕೆ ತನ್ನ ಆತ್ಮೀಯರೊಂದಿಗೆ ಕಳೆದು ಮನಸ್ಸಿನ ಒತ್ತಡಗಳನ್ನು ನಿವಾರಿಸಿಕೊಂಡು ನೆಮ್ಮದಿಯಿಂದಿದ್ದಾಳೆ ಎಂದು ಅರ್ಥೈಸಿಕೊಳ್ಳಬೇಕು.

ಆಕೆಗೆ ಅಡುಗೆಯ ಚಿಂತೆ ಇರುವುದಿಲ್ಲ

ಆಕೆಗೆ ಅಡುಗೆಯ ಚಿಂತೆ ಇರುವುದಿಲ್ಲ

ಅಡುಗೆ ಯಾರಾದರೂ ಮಾಡಿ ಹಾಕುತ್ತಾರೆಂದರೆ ನಮಗೆಲ್ಲಾ ಅದರಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಗುಣವಿದ್ದೇ ಇರುತ್ತದೆ. ಉಪ್ಪು ಸರಿ ಇಲ್ಲ, ನೀರು ಹೆಚ್ಚು ಎಂದು ಮನೆಯ ಒಬ್ಬ ಸದಸ್ಯರು ಹೇಳಿದರೂ ಆಕೆಯ ಮನಸ್ಸು ಮುದುಡಬಹುದು. ಆದ್ದರಿಂದ ಎಲ್ಲರ ಮನ ಮೆಚ್ಚುವ ಅಡುಗೆಯನ್ನು ಮಾಡಲು ಗೃಹಿಣಿಗೆ ಸದಾ ಕೊಂಚ ಮಾನಸಿಕ ಒತ್ತಡವಿದ್ದೇ ಇರುತ್ತದೆ. ಆದರೆ ಪತಿಯ ಅನುಪಸ್ಥಿತಿಯ ಹೊತ್ತಿನಲ್ಲಿ ಆಕೆ ಅಡುಗೆ ಮನೆಗೆ ಭೇಟಿ ನೀಡುವುದನ್ನು ಮುಂದೆ ಹಾಕಿ ಈ ಸಮಯವನ್ನು ಯಾವುದೇ ಚಿಂತೆ, ದುಮ್ಮಾನಗಳಿಲ್ಲದೇ ಕಳೆಯಲು ಬಳಸಬಹುದು ಅಥವಾ ಮನೆಯವರಿಗೆ ಇಷ್ಟವಿರದ ಆದರೆ ತನಗೆ ಇಷ್ಟವಿರುವ ತಿನಿಸುಗಳನ್ನು ತಯಾರಿಸಿ ತಿನ್ನಲೂ ಉಪಯೋಗಿಸಬಹುದು. ಆಗಾಗ ಅಡುಗೆಯಿಂದ ರಜೆ ತೆಗೆದುಕೊಳ್ಳುವುದು, ಮನಮೆಚ್ಚಿದ ತಿಂಡಿಗಳನ್ನು ಹೊರಗಿನಿಂದ ತರಿಸಿ ತಿನ್ನುವ ಮೂಲಕವೂ ಮನಸ್ಸಿನ ದುಗುಡ, ಒತ್ತಡ ಕಡಿಮೆಯಾಗುತ್ತದೆ.

ಆಕೆ ಹೆಚ್ಚಿನ ನಿದ್ದೆಯನ್ನು ಪಡೆಯಬಹುದು

ಆಕೆ ಹೆಚ್ಚಿನ ನಿದ್ದೆಯನ್ನು ಪಡೆಯಬಹುದು

ಸಾಮಾನ್ಯವಾಗಿ ಗೃಹಿಣಿಯರು ಎಲ್ಲರಿಗಿಂತ ತಡವಾಗಿ ಮಲಗಿ ಎಲ್ಲರಿಗಿಂತ ಮೊದಲು ಎದ್ದು ಕೆಲಸವನ್ನು ಪ್ರಾರಂಭಿಸುತ್ತಾರೆ. ಅಂದರೆ ಉಳಿದವರಿಗಿಂತಲೂ ಕಡಿಮೆ ನಿದ್ದೆಯನ್ನು ಪಡೆಯುತ್ತಾರೆ. ಹಾಗಾಗಿ ಇವರ ಒಟ್ಟಾರೆ ನಿದ್ದೆ ಅಗತ್ಯಕ್ಕಿಂತಲೂ ಕಡಿಮೆಯೇ ಇರುತ್ತದೆ. ಪತಿಯ ಅನುಪಸ್ಥಿತಿಯ ಹೊತ್ತು ಈ ಕೊರತೆಯನ್ನು ತುಂಬಬಲ್ಲ ಸೂಕ್ತ ಸಮಯವಾಗಿದ್ದು ಪತ್ನಿಯರು ಈ ಸಂದರ್ಭವನ್ನು ನಿದ್ದೆಗಾಗಿ ಬಳಸಿಕೊಂಡಷ್ಟೂ ಅವರ ಆರೋಗ್ಯಕ್ಕೆ ಉತ್ತಮ.

ಆಕೆ ತನ್ನ ಇಷ್ಟದ ಟೀವಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು

ಆಕೆ ತನ್ನ ಇಷ್ಟದ ಟೀವಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು

ಮಕ್ಕಳು ಮನೆಯಲ್ಲಿದ್ದರೆ ಕಾರ್ಟೂನು ಚಾನೆಲುಗಳನ್ನು ಹಾಕಿ ತಮ್ಮ ಇಷ್ಟದ ಕಾರ್ಯಕ್ರಮಗಳನ್ನು ಹಾಕಿ ನೋಡುತ್ತಿರುತ್ತಾರೆ. ಉಳಿದವರು ಮನೆಯಲ್ಲಿದ್ದ ಹೊತ್ತಿನಲ್ಲಿ ವಾರ್ತೆ ಅಥವಾ ಕ್ರೀಡೆಯೇ ಟೀವಿಯಲ್ಲಿ ನಡೆಯುತ್ತಿರುತ್ತದೆ. ಆ ಹೊತ್ತಿನಲ್ಲಿ ಗೃಹಿಣಿಯ ನೆಚ್ಚಿನ ಧಾರಾವಾಹಿ ಅಥವಾ ಇತರ ಯಾವುದೋ ಕಾರ್ಯಕ್ರಮ ಇದ್ದರೂ ಅದನ್ನು ನೋಡಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಗೃಹಿಣಿಯರೆಲ್ಲರೂ ಮನೆಯವರಿಗಾಗಿ ತಮ್ಮ ಆಸೆಯನ್ನು ಬಯಕೆಯಾಗಿಯೇ ಉಳಿಸಿಕೊಳ್ಳುತ್ತಾರೆ. ಆದರೆ ಪತಿಯ ಅನುಪಸ್ಥಿತಿಯ ಸಮಯ ಈ ಬಯಕೆಯನ್ನು ಪೂರೈಸಿಕೊಳ್ಳಲು ಸೂಕ್ತ ಸಮಯವಾಗಿ ಪರಿಣಮಿಸುತ್ತದೆ.

ಬಟ್ಟೆ ಒಗೆಯುವ ಚಿಂತೆಯಿಲ್ಲ

ಬಟ್ಟೆ ಒಗೆಯುವ ಚಿಂತೆಯಿಲ್ಲ

ಆರಾಮವಾಗಿ ಕಳೆಯುವ ಸಮಯವೆಂದರೇನು? ನಮಗಿಷ್ಟ ಬಂದುದನ್ನು ಮಾಡಬಹುದು ಎಂಬುದು ಒಂದು ವಿವರಣೆಯಾದರೆ, ಏನು ಮಾಡದೇ ಸುಮ್ಮನಿರುವುದು ಎಂಬುದು ಎರಡನೆಯ ವಿವರಣೆ. ಇತ್ತೀಚೆಗೆ ಎರಡನೆಯ ವಿವರಣೆಗೆ ಹೆಚ್ಚಿನ ಮಹತ್ವ ಬರುತ್ತಿದ್ದು ಮನೆಯಲ್ಲಿಯೇ ರಜೆ ಕಳೆಯುವ staycation ಎಂಬ ರಜಾದಿನಗಳಿಗೆ ಅಧಿಕೃತ ಮನ್ನಣೆಯೂ ದೊರಕಿದೆ. ಪತಿ ಇಲ್ಲದ ಸಮಯ ಗೃಹಿಣಿಗೆ ನಿಜವಾಗಿಯೂ ಯಾವುದೇ ಚಿಂತೆ, ಕೆಲಸವಿಲ್ಲದೇ ಕೆಳೆಯಬಹುದಾದ ಸಮಯವಾಗಿದ್ದು ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಮೊದಲಾದ ಚಿಂತೆಗಳನ್ನು ಪಕ್ಕಕ್ಕಿಡಬಹುದು.

 ಉದ್ಯೋಗಿ ಮಹಿಳೆಯರು ಹೆಚ್ಚಿನ ಸಮಯ ಕೆಲಸಕ್ಕೆ ಮೀಸಲಿಡಬಹುದು

ಉದ್ಯೋಗಿ ಮಹಿಳೆಯರು ಹೆಚ್ಚಿನ ಸಮಯ ಕೆಲಸಕ್ಕೆ ಮೀಸಲಿಡಬಹುದು

ಒಂದು ವೇಳೆ ಈಕೆ ಉದ್ಯೋಗಸ್ಥೆಯಾಗಿದ್ದರೆ ತನ್ನ ಕಛೇರಿಯ ಕೆಲಸಕ್ಕೆ ಹೆಚ್ಚಿನ ಸಮಯ ಹಾಗೂ ಗಮನವನ್ನು ನೀಡುವ ಮೂಲಕ ಹೆಚ್ಚಿನ ಅಭಿವೃದ್ದಿಯನ್ನು ಸಾಧಿಸಬಹುದು. ಸಾಮಾನ್ಯವಾಗಿ ಪತಿ ಮನೆಗೆ ಬರುವ ಹೊತ್ತಿನಲ್ಲಿ ತಾನೂ ಮನೆಯಲ್ಲಿರಬೇಕೆಂಬ ಹಂಬಲದಿಂದ ಕೆಲಸವನ್ನು ಲಗುಬಗೆಯಿಂದ ಮುಗಿಸುವುದು ಸಾಮಾನ್ಯವಾಗಿದ್ದು ಪತಿ ಊರಿನಿಂದ ಹೊರಗಿದ್ದ ಸಮಯದಲ್ಲಿ ಕೆಲಸವನ್ನು ಅವಸರದಲ್ಲಿ ಮುಗಿಸುವ ಧಾವಂತವಿಲ್ಲದೇ ಅಚ್ಚುಕಟ್ಟಾಗಿ ಪೂರೈಸಲು ನೆರವಾಗುತ್ತದೆ.

 ಪತಿ ಬಳಿ ಇಲ್ಲದಿದ್ದಲ್ಲಿ ಜಗಳವೂ ಇಲ್ಲ

ಪತಿ ಬಳಿ ಇಲ್ಲದಿದ್ದಲ್ಲಿ ಜಗಳವೂ ಇಲ್ಲ

ಪತಿ ಊರಿನಲ್ಲಿಲ್ಲದ ಸಮಯದಲ್ಲಿ ಗೃಹಿಣಿ ಆರಾಮವಾಗಿ ಕುಳಿತು ತನ್ನ ನೆಚ್ಚಿನ ಸಂಗೀತ ಆಲಿಸುವುದು, ಧ್ಯಾನ ಆಚರಿಸುವುದು ಅಥವಾ ಸುಮ್ಮನೇ ಸೋಮಾರಿಯಾಗಿ ಕಾಲ ಕಳೆಯುವ ಮೂಲಕ ಮನಸ್ಸಿನ ನಿರಾಳತೆಯನ್ನು ಅನುಭವಿಸಬಹುದು. ಅಂದರೆ ಪತಿ ಪತ್ನಿಯರ ನಿತ್ಯದ ಚಿಕ್ಕ ಪುಟ್ಟ ಜಗಳಗಳಿಗೆಲ್ಲಾ ಅಲ್ಪ ವಿರಾಮ. ಹಾಗೂ ಪತಿಯ ದಾರಿಯನ್ನು ಕಾಯುವುದರಲ್ಲಿ ಸುಖವನ್ನು ಪಡೆಯುವುದು. ಅಷ್ಟಿಲ್ಲದೇ ಅಡಿಗರು ಸುಮ್ಮನೇ ಹೇಳಿದ್ದಾರೆಯೇ? "ಕಾಯುವುದರಲ್ಲಿರುವ ಸುಖ ಕೂಡುವುದರಲ್ಲಿ ಇಲ್ಲ" ಎಂದು?

English summary

Does Your Wife Enjoy Your Absence When You Go Out Of Station?

A new survey conducted on young and newly married women states that nearly 80% of the women enjoy the absence of the husband at least once in a while! Well, men don't need to take them wrong as women just want some space for a short while. Of course, even men want some space and that's why some men enjoy their time well when their wives are out of station!
X
Desktop Bottom Promotion