For Quick Alerts
ALLOW NOTIFICATIONS  
For Daily Alerts

ಪುರುಷರು ಮತ್ತು ಮಹಿಳೆಯರ ನಡುವಿನ ವ್ಯತ್ಯಾಸಗಳು

By Deepu
|

ಪುರುಷರು ಮತ್ತು ಮಹಿಳೆಯರು ಜೈವಿಕವಾಗಿ ಮತ್ತು ತಳೀಯವಾಗಿ ವಿಭಿನ್ನತೆಯನ್ನು ಹೊಂದಿರುತ್ತಾರೆ. ಹಾಗಾಗಿಯೇ ಪುರುಷರ ಕೆಲವು ಅಂಶಗಳು ಮಹಿಳೆಯರಿಗೆ ಅರ್ಥವಾಗದು. ಮಹಿಳೆಯರ ಕೆಲವು ಗುಣಗಳು ಪುರುಷರಿಗೆ ಅರ್ಥವಾಗದು. ಉದಾರಹಣೆಗೆ ಮಹಿಳೆ ಮತ್ತು ಪುರುಷನ ನಡುವೆ ಪ್ರೀತಿಯ ಸಲ್ಲಾಪಗಳು ನಡೆದಾಗ ಪುರುಷ ಮುಗಿದ ತಕ್ಷಣ ಖುಷಿಯಿಂದ ನಿದ್ರಿಸಲು ಇಷ್ಟ ಪಡುತ್ತಾರೆ. ಅದೇ ಮಹಿಳೆಯರು ಇನ್ನಷ್ಟು ಸಮಯ ಮುದ್ದಿಸುವ ಅಥವಾ ಬಂಧಿಸುವ ಆಸೆಯನ್ನು ಹೊಂದಿರುತ್ತಾಳೆ.

ಗಂಡು ಮತ್ತು ಹೆಣ್ಣು ಇಬ್ಬರೂ ಪರಸ್ಪರ ಪ್ರೀತಿಯನ್ನು ಪಡೆದ ನಂತರ ಆಕ್ಸಿಟೋಸಿನ್ ಬಿಡಿಗಡೆಯಾದರೂ ಪುರುಷರು ಮತ್ತು ಮಹಿಳೆಯರಲ್ಲಿ ಪರಿಣಾಮಗಳು ವಿಭಿನ್ನವಾಗಿರುತ್ತದೆ. ಮಹಿಳೆಯರು ಇನ್ನಷ್ಟು ಸಮಯ ಪ್ರೀತಿಯಲ್ಲಿ ಇರಲು ಬಯಸುತ್ತಾರೆ. ಅದೇ ಪುರುಷರು ಸಿಗರೇಟ್, ಮಧ್ಯಪಾನ ಅಥವಾ ಏನಾದರೂ ತಿನ್ನುವ ಆಸೆಯನ್ನು ಹೊಂದಿರುತ್ತಾರೆ. ಇನ್ನು ಕೆಲವು ಸಂದರ್ಭದಲ್ಲಿ ಬಳಲಿಕೆ ಹೆಚ್ಚಾದಾಗ ನಿದ್ರೆಗೆ ಜಾರುತ್ತಾರೆ. ಮಹಿಳೆಯರಿಗೆ ಸ್ವಲ್ಪ ಸಮಯದ ನಂತರ ಇನ್ನೊಂದು ಪರಾಕಾಷ್ಟೆಗೆ ಬಯಸಬಹುದು. ಈ ರೀತಿಯಲ್ಲಿ ಜೈವಿಕ ವಿನ್ಯಾಸದಲ್ಲಿ ವಿಭಿನ್ನತೆ ಇರುವುದನ್ನು ಗಮನಿಸಬಹುದು.

ಕೇವಲ ಪ್ರೀತಿ ಪ್ರೇಮದ ವಿಚಾರವಷ್ಟೇ ಅಲ್ಲ. ನಿತ್ಯದ ಅನೇಕ ಸಂತಿಗಳಲ್ಲಿ, ಭಾವನೆಗಳಲ್ಲಿ ವರ್ತನೆಗಳಲ್ಲಿಯೂ ಮಹಿಳೆಯರು ಮತ್ತು ಪುರುಷರು ವಿಭಿನ್ನತೆಯನ್ನೇ ಹೊಂದಿರುತ್ತಾರೆ. ಹಾಗಾಗಿಯೇ ಪತಿ ಪತ್ನಿಗಳ ನಡುವೆ ಎಷ್ಟೇ ಪ್ರೀತಿ ವಾತ್ಸಲ್ಯಗಳಿದ್ದರೂ ಕೆಲವು ಸಂದರ್ಭದಲ್ಲಿ ತರ್ಕ ಹಾಗೂ ಜಗಳಗಳು ಉದ್ಭವ ಆಗುತ್ತವೆ. ನಾವು ಹೇಳುತ್ತಿರುವ ವಿಚಾರ ಹೌದೆನಿಸಿದರೆ ಮುಂದಿರುವ ಇನ್ನೂ ಅನೇಕ ವಿಚಾರಗಳನ್ನು ತಿಳಿದುಕೊಳ್ಳಿ...

ಮಹಿಳೆಯರು ನೆನಪಿಟ್ಟುಕೊಳ್ಳುವುದರಲ್ಲಿ ಸಮರ್ಥರು

ಮಹಿಳೆಯರು ನೆನಪಿಟ್ಟುಕೊಳ್ಳುವುದರಲ್ಲಿ ಸಮರ್ಥರು

ಮಗನಾದ ನೀವು ಕಾರಿನ ಕೀಯನ್ನು ಎಲ್ಲೋ ಇರಿಸಿ, ಬೇಕಾದ ಸಮಯದಲ್ಲಿ ಹುಡುಕುವಿರಿ. ಸಿಗದಿರುವಾಗ ಅಮ್ಮನನ್ನು ಕೇಳುತ್ತೀರಿ. ಅಮ್ಮ ನಿಖರವಾದ ಸ್ಥಾನವನ್ನು ಸೂಚಿಸಿ, ಕೀಯನ್ನು ತೆಗೆದುಕೊಡುವಳು. ಆಗ ನೀವು ಅಮ್ಮ ಎಲ್ಲವನ್ನು ತಿಳಿದಿರುತ್ತಾಳೆ ಎನ್ನುವ ಆಶ್ಚರ್ಯದ ಭಾವವನ್ನು ತಳೆಯುತ್ತೀರಿ. ಮಹಿಳೆಯರು ನಾವು ಎಲ್ಲಿದ್ದೇವೆ? ಎಲ್ಲಿ ಇಟ್ಟಿದ್ದೇವೆ ಎನ್ನುವುದನ್ನು ನೆನಪಿಟ್ಟುಕೊಳ್ಳುವ ಸಾಮಥ್ರ್ಯ ಹೊಂದಿರುತ್ತಾರೆ. ಅದೇ ಪುರುಷರು ನಿರ್ದೇಶನ ಹಾಗೂ ದೂರವನ್ನು ಮಾತ್ರ ನೆನಪಿಟ್ಟುಕೊಳ್ಳುತ್ತಾರೆ.

ಮಹಿಳೆಯರು ಹೆಚ್ಚು ಕೇಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ

ಮಹಿಳೆಯರು ಹೆಚ್ಚು ಕೇಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ

ಮಹಿಳೆಯರಿಗೆ ಕೇಳುವಿಕೆಯಲ್ಲಿ ಆಸಕ್ತಿ ಇರುತ್ತದೆ. ಏಕೆಂದರೆ ಕೇಳುವಿಕೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯ ನರವ್ಯವಸ್ಥೆಯು ಸಹಾಯಮಾಡುತ್ತದೆ. ಹಾಗಾಗಿಯೇ ಮಹಿಳೆಯರು ಪುರುಷರಿಗಿಂತ ಹೆಚ್ಚು ಶಬ್ಧಗಳನ್ನು ಬಳಸಲು, ಭಾಷಣಗಳನ್ನು ಮಾಡಲು ಮತ್ತು ವಿಶ್ಲೇಷಿಸಲು ಸಮರ್ಥರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿಯೇ ಮಗು ಅಳುವುದನ್ನು ಬಹುಬೇಗ ಕೇಳಿಸಿಕೊಳ್ಳುತ್ತಾರೆ. ಮತ್ತು ಅವರ ಬೇಕು ಬೇಡಗಳಿಗೆ ತಕ್ಷಣವೇ ಪ್ರತಿಕ್ರಿಯೆ ನೀಡುತ್ತಾರೆ. ಹಾಗಾಗಿ ಪುರುಷರಿಗಿಂತ ಮಹಿಳೆಯರಿಗೆ ಕೆಳುವ ಸಾಮರ್ಥ್ಯ ಹೆಚ್ಚಿರುತ್ತದೆ ಎಂದು ಹೇಳಲಾಗುವುದು.

ಯಾರು ಹೆಚ್ಚು ನೋವನ್ನು ಅನುಭವಿಸುತ್ತಾರೆ?

ಯಾರು ಹೆಚ್ಚು ನೋವನ್ನು ಅನುಭವಿಸುತ್ತಾರೆ?

ಕೆಲವು ಸನ್ನಿವೇಶದಿಂದ ಉಂಟಾಗುವ ನೋವುಗಳು ಮೆದುಳನ್ನು ಪ್ರವೇಶಿಸುವಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಸ್ವಲ್ಪ ಭಿನ್ನವಾಗಿರುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ನೋವನ್ನು ಅನುಭವಿಸುತ್ತಾರೆ. ಪುರುಷರು ಕಡಿಮೆ ಪ್ರಮಾಣದಲ್ಲಿ ಸಹನೆ ಹೊಂದಿದ್ದರೂ ಮಹಿಳೆಯರ ನೋವನ್ನು ನಿವಾರಿಸುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಮಹಿಳೆಯರು ನಿಧಾನವಾಗಿ ಆರೋಪಗಳನ್ನು ಮಾಡುತ್ತಾ ಸಹನೆಯನ್ನು ಕಳೆದುಕೊಳ್ಳಬಹುದು. ಇದು ಭಾವನಾತ್ಮಕ ನೋವಿಗೆ ಕಾರಣವಾಗುವುದು

ಯಾರು ಹೆಚ್ಚು ಚಿಂತಿಸುತ್ತಾರೆ?

ಯಾರು ಹೆಚ್ಚು ಚಿಂತಿಸುತ್ತಾರೆ?

ಸೂಕ್ತ ಸಾಕ್ಷ್ಯಾಧಾರಗಳಿಲ್ಲದಿದ್ದರೂ ಪ್ರಸ್ತುತ ಅಧ್ಯಯನಗಳು ಮಹಿಳೆಯರೇ ಪುರುಷರಿಗಿಂತ ಹೆಚ್ಚು ಚಿಂತೆ ಮಾಡುತ್ತಾರೆ. ಇದಕ್ಕೆ ಕಾರಣ ಅವರ ಹಾರ್ಮೋನ್‍ಗಳ ವ್ಯತ್ಯಾಸ ಆಗಿರಬಹುದು. ಆದರೆ ಅದು ಅವರಿಗೊಂದು ಅನುಕೂಲವನ್ನೂ ಸೃಷ್ಟಿಸಿಕೊಡಬಹುದು. ನಿರೀಕ್ಷಿತ ಸಮಸ್ಯೆಗಳಿಗೆ ಮುಂಚೆಯೇ ಪುರುಷರು ಬಿಕ್ಕಟ್ಟನ್ನನು ನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ.

ನಿರ್ಲಕ್ಷಿಸುವ ಪ್ರವೃತ್ತಿ

ನಿರ್ಲಕ್ಷಿಸುವ ಪ್ರವೃತ್ತಿ

ಪುರುಷರ ಶ್ರವಣ ವ್ಯವಸ್ಥೆಯು ಸ್ವಲ್ಪ ವಿಭಿನ್ನ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಅವರ ಮನಸ್ಸು ಅದು ಮುಖ್ಯವಾದದ್ದು ಎಂದು ಸೂಚಿಸಿದರೆ ಮಾತ್ರ ಅದಕ್ಕೆ ಹೆಚ್ಚು ಗಮನವನ್ನು ನೀಡುತ್ತಾರೆ. ಇಲ್ಲವಾದರೆ ಸುತ್ತಲಿನ ಶಬ್ದವನ್ನು ನಿರ್ಲಕ್ಷಿಸುತ್ತಾರೆ. ವ್ಯಕ್ತಿ ಒಂದೇ ವಿಷಯವನ್ನು ಪುನರಾವರ್ತಿತವಾಗಿ ಹೇಳಿದಾಗ ವಿಶೇಷವಾಗಿ ಗಮನ ನೀಡುತ್ತಾರೆ. ಹಾಗಾಗಿಯೇ ಮನೆಯಲ್ಲಿ ಹೆಂಡತಿ ತರಕಾರಿ ತರಲು ಹೇಳಿದರೆ ಮರೆತು ಮನೆಗೆ ಬರುತ್ತಾರೆ.

ಒತ್ತಡಕ್ಕೆ ಪುರುಷರ ಮತ್ತು ಮಹಿಳೆಯರ ಪ್ರತಿಕ್ರಿಯೆ

ಒತ್ತಡಕ್ಕೆ ಪುರುಷರ ಮತ್ತು ಮಹಿಳೆಯರ ಪ್ರತಿಕ್ರಿಯೆ

ಒತ್ತಡಕ್ಕೆ ಒಳಗಾದಾಗ ಪುರುಷರು ಆಕ್ರಮಣಶೀಲ ಪ್ರವೃತ್ತಿ ತೋರಬಹುದು ಅಥವಾ ತಾಳ್ಮೆಯನ್ನು ಕಳೆದುಕೊಳ್ಳಬಹುದು. ಅದೇ ಮಹಿಳೆಯರು ಸ್ವಲ್ಪ ಸಮಯದ ನಂತರ ಶಾಂತ ಮತ್ತು ಸಂಯೋಜನೆಯ ಪ್ರವೃತ್ತಿ ತೋರುವರು. ಇದಕ್ಕೆ ಕಾರಣ ಈಸ್ಟ್ರೋಜೆನ್. ಮಹಿಳೆಯರಿಗೆ ಒತ್ತಡ ಉಂಟಾದಾಗ ಈಸ್ಟ್ರೋಜೆನ್ ಜೊತೆಗೆ ರಾಸಾಯನಿಕಗಳು ಬಿಡುಗಡೆಯಾಗುವವು. ಹಾಗಾಗಿಯೇ ಬಹು ಬೇಗ ಸಂತೈಸಿಕೊಳ್ಳುವರು. ಪುರುಷರಿಗೆ ಕೇವಲ ಈಸ್ಟ್ರೋಜೆನ್ ಮಾತ್ರ ಬಿಡುಗಡೆಯಾಗುತ್ತದೆ. ರಾಸಾಯನಿಕಗಳ ಉತ್ಪಾದನೆ ಆಗದು. ಹಾಗಾಗಿಯೇ ಅವರು ಬಹು ಬೇಗ ತಣ್ಣಗಾಗುವುದಿಲ್ಲ.

 ಯಾರು ಹೆಚ್ಚು ವಾದಿಸುತ್ತಾರೆ?

ಯಾರು ಹೆಚ್ಚು ವಾದಿಸುತ್ತಾರೆ?

ಮಹಿಳೆಯರ ಸಂಘರ್ಷದಲ್ಲಿ ಒತ್ತಡ, ಆತಂಕ, ಭಯ ಮತ್ತು ದುಃಖದ ಭಾವನೆಗಳು ಒಮ್ಮೆಲೇ ಉಂಟಾಗುತ್ತದೆ. ಪುರುಷರಲ್ಲಿ ಘರ್ಷಣೆಯ ಭಾವವೊಂದೇ ಉಂಟಾಗುತ್ತದೆ. ಹಾಗಾಗಿ ಪುರುಷರಿಗಿಂತ ಹೆಚ್ಚು ಮಹಿಳೆಯರು ವಾದಿಸುತ್ತಾರೆ ಎಂದು ಹೇಳಲಾಗುತ್ತದೆ. ಪುರುಷರು ಅನಗತ್ಯ ವಾದಗಳನ್ನು ಮಾಡುವುದಿಲ್ಲ.

ಭಾವನೆಗಳು

ಭಾವನೆಗಳು

ಪುರುಷರಿಗಿಂತ ಹೆಚ್ಚು ಮಹಿಳೆಯರಿಗೆ ಭಾವನಾತ್ಮಕ ಸೆಳೆತವಿರುತ್ತದೆ. ಕಾರಣ ಹದಿಹರೆಯದ ಸಂದರ್ಭದಲ್ಲಿ ಮಿದುಳಿಗೆ ಸಂಭವಿಸುವ ಕೆಲವು ಬದಲಾವಣೆಗಳು ಮಹಿಳೆಯರಿಗೆ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಹೆಚ್ಚು ಸಹಾಯ ಮಾಡುತ್ತದೆ. ಪುರುಷರು ಸಾಮಾನ್ಯವಾಗಿ ಕೆಲವು ಭಾವನೆಗಳನ್ನು ಮರೆಮಾಚಲು ಪ್ರಯತ್ನಿಸುತ್ತಾರೆ.

ಕೋಪ

ಕೋಪ

ಕೋಪ ಬಂದಾಗ ಮಹಿಳೆಯರಿಗೆ ತಮ್ಮ ಭಾಷೆಯಲ್ಲಿ ಮಾತಿನ ಮೇಲೆ ಹಿಡಿತವನ್ನು ಕಳೆದುಕೊಳ್ಳುತ್ತಾರೆ. ಗಂಡಸರು ತಮ್ಮ ದೈಹಿಕ ವರ್ತನೆಯ ಮೇಲೆ ಹಿಡಿತವನ್ನು ಕಳೆದುಕೊಳ್ಳುತ್ತಾರೆ. ಕೋಪಗೊಂಡಾಗ ಮಿದುಳಿನಲ್ಲಿ ಆಗುವ ವ್ಯತ್ಯಾಸವು ಮಹಿಳೆ ಮತ್ತು ಪುರುಷರಲ್ಲಿ ವಿಭಿನ್ನವಾಗಿರುತ್ತದೆ. ಹಾಗಾಗಿಯೇ ಕೋಪಗೊಂಡ ಮಹಿಳೆ ಮೊದಲು ಚೀರುತ್ತಾ ತನ್ನ ಮಾತನ್ನು ಪ್ರಾರಂಭಿಸುತ್ತಾಳೆ. ಅದೇ ಕೋಪಗೊಂಡ ಪುರುಷ ಹಿಂಸೆ ಮಾಡುತ್ತಾ ತೊಂದರೆಗೆ ಇಳಿಯುತ್ತಾನೆ.

ವ್ಯಭಿಚಾರ

ವ್ಯಭಿಚಾರ

ಕೆಲವು ಅಧ್ಯಯನದ ಪ್ರಕಾರ ಮಹಿಳೆಯರಿಗಿಂತ ಬಹು ಬೇಗ ಪುರುಷರು ವ್ಯಭಿಚಾರವನ್ನು ಪತ್ತೆಹಚ್ಚುತ್ತಾರೆ. ಪುರುಷರು ಮೋಸಕ್ಕೆ ಒಳಗಾದಾಗ ತೀವ್ರವಾದ ಹಾನಿಯನ್ನು ಅನುಭವಿಸುತ್ತಾನೆ. ಮಹಿಳೆಯರಿಗೆ ಮೋಸವಾದಾಗ ಹೆಚ್ಚು ನೋವನ್ನು ಅನುಭವಿಸುತ್ತಾರೆ. ಪುರುಷರು ತಮ್ಮನ್ನು ಬಿಟ್ಟು ಇನ್ನೊಂದು ಮಹಿಳೆಗೆ ಹತ್ತಿರವಾದಾಗ ಹೆಚ್ಚು ಬೇಸರ ಹಾಗೂ ಭಯಕ್ಕೆ ಒಳಗಾಗುತ್ತಾರೆ. ಅದೇ ಮಹಿಳೆ ಇನ್ನೊಬ್ಬ ವ್ಯಕ್ತಿಗೆ ದೈಹಿಕವಾಗಿ ಹತ್ತಿರವಾದರೆ ಪುರುಷ ಅಸಮಧಾನಕ್ಕೆ ಒಳಗಾಗುತ್ತಾನೆ.

English summary

Differences Between Men And Women

Men and women are different biologically and genetically. That is why some aspects of women cannot be understood by men and some qualities of men can't be understood by women For example, men fall asleep after making love whereas women would want to cuddle for some time and talk about something stimulating. The reason behind those behaviours is difference in the way men and women are wired.
Story first published: Tuesday, October 24, 2017, 19:57 [IST]
X
Desktop Bottom Promotion