ಪುರುಷರಿಗೂ ಸಾಕಷ್ಟು ನೋವಿರುತ್ತೆ, ಬಾಯಿ ಬಿಡುವುದಿಲ್ಲ ಅಷ್ಟೇ!

By: Hemanth
Subscribe to Boldsky

ವೈವಾಹಿಕ ಜೀವನವೆಂದ ಮೇಲೆ ಅಲ್ಲಿ ಸುಖ ಹಾಗೂ ಶಾಂತಿಯಿದ್ದರೆ ಮಾತ್ರ ಜೀವನ ಸಾಗಿಸಲು ಸಾಧ್ಯ. ಇಲ್ಲವೆಂದಾದರೆ ಯಾವಾಗಲೂ ಮಾನಸಿಕ ಕಿರಿಕಿರಿ ಮತ್ತು ಗೊಂದಲ ಇದ್ದೇ ಇರುತ್ತದೆ. ಪತಿಯು ತುಂಬಾ ಕಿರಿರಿಕಿ ಮತ್ತು ದೈಹಿಕ ಹಿಂಸೆಯನ್ನು ನೀಡುತ್ತಲಿದ್ದರೆ ಪತ್ನಿಯು ಭಯಪಡುವುದು ಸಾಮಾನ್ಯ. ಅದೇ ರೀತಿ ಪತ್ನಿಯು ಬೈಗುಳ ನೀಡುತ್ತಾ ಯಾವಾಗಲೂ ಕಿರಿಕಿರಿಯನ್ನು ಉಂಟು ಮಾಡುತ್ತಲಿದ್ದರೆ ಅದರಿಂದ ಪತಿಗೆ ಮಾನಸಿಕ ನೆಮ್ಮದಿ ಎನ್ನುವುದು ಇರುವುದೇ ಇಲ್ಲ.

ಪುರುಷರು ಕೂಡ ಇಂತಹ ಪರಿಸ್ಥಿತಿಯಲ್ಲಿ ತುಂಬಾ ಭೀತಿಗೆ ಒಳಗಾಗುತ್ತಾರೆ ಎಂದು ಇತ್ತೀಚೆಗೆ ನಡೆಸಿದ ಅಧ್ಯಯನವೊಂದು ಹೇಳಿದೆ. ಆದರೆ ಪುರುಷರು ಇದನ್ನು ತಮ್ಮ ಸ್ನೇಹಿತರು ಅಥವಾ ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. ಹಾಗೆ ಮಾಡಿದರೆ ಅವರು ನಗೆಪಾಟಲಿಗೀಡಾಗುತ್ತಾರೆ ಎನ್ನುವ ಮತ್ತೊಂದು ಭಯ ಅವರಲ್ಲಿರುತ್ತದೆ. ಕೆಲವು ಪುರುಷರು ಏಕಾಂಗಿಯಾಗಿರುವಾಗ ಅಳುತ್ತಾರೆ ಎನ್ನುವ ವಿಚಾರವನ್ನು ಅಧ್ಯಯನವು ಹೊರಹಾಕಿದೆ. ಇದರ ಬಗ್ಗೆ ಮತ್ತಷ್ಟು ತಿಳಿಯಲು ಮುಂದಕ್ಕೆ ಓದುತ್ತಾ ಸಾಗಿ.... 

ಯಾವುದರ ಭೀತಿ?

ಯಾವುದರ ಭೀತಿ?

ವೈವಾಹಿಕ ಜೀವನದಲ್ಲಿ ವಿಫಲವಾಗಿರುವಂತಹ ಒಂದು ಸಾವಿರ ಮಂದಿ ಪುರುಷರ ಬಗ್ಗೆ ನಡೆಸಿದ ಅಧ್ಯಯನವೊಂದರ ಪ್ರಕಾರ ಪುರುಷರು ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಹೆದರುತ್ತಾರೆ ಎನ್ನುವುದನ್ನು ಗೌಪ್ಯವಾಗಿ ಹೇಳಿದ್ದಾರೆ. ಅವರು ಜಗಳ, ನಾಟಕ, ಬ್ಲ್ಯಾಕ್ ಮೇಲ್ ತಂತ್ರಕ್ಕೆ ಹೆದರುತ್ತಾರೆ.

ಗಂಡ-ಹೆಂಡತಿಯ ಸಮಸ್ಯೆ ನಾಲ್ಕು ಗೋಡೆಯ ಮಧ್ಯವೇ ಇರಲಿ!

ಆತ್ಮಶ್ಲಾಘನೆಯ ವ್ಯಕ್ತಿತ್ವ

ಆತ್ಮಶ್ಲಾಘನೆಯ ವ್ಯಕ್ತಿತ್ವ

ಪತ್ನಿಯು ಆತ್ಮಶ್ಲಾಘನೆಯ ವ್ಯಕ್ತಿತ್ವವನ್ನು ತೋರ್ಪಡಿಸಿದಾಗ ಹೆಚ್ಚಿನ ಪುರುಷರು ಹೆದರುತ್ತಾರೆ.(ಇದು ಪುರುಷರಿಗೂ ಅನ್ವಯವಾಗುತ್ತದೆ. ವ್ಯಕ್ತಿತ್ವದ ಸಮಸ್ಯೆಯನ್ನು ಎದುರಿಸುವ ಪುರುಷರು ಪತ್ನಿಗೆ ಸಮಸ್ಯೆಯನ್ನು ಉಂಟು ಮಾಡಬಹುದು)

ಮನಸ್ಸಿನಲ್ಲೇ ಇಟ್ಟುಕೊಂಡಿರುತ್ತಾರೆ

ಮನಸ್ಸಿನಲ್ಲೇ ಇಟ್ಟುಕೊಂಡಿರುತ್ತಾರೆ

ಅಧ್ಯಯನದ ವೇಳೆ ಪುರುಷರು ಹೇಳಿಕೊಂಡಂತಹ ಮತ್ತೊಂದು ಸಮಸ್ಯೆಯೆಂದರೆ ಅವರು ಅದನ್ನು ಮನಸ್ಸಿನಲ್ಲೇ ಉದುಗಿಸಿಕೊಂಡಿರುವುದು. ಇದನ್ನು ತೋರಿಸಲು ಬೇರೆ ದಾರಿಯಿಲ್ಲ. ಪುರುಷರು ತುಂಬಾ ಬಲಿಷ್ಠವಾಗಿರುತ್ತಾರೆ, ಅಳುವುದಿಲ್ಲ ಅಥವಾ ದುರ್ಬಲರಾಗಿರುವುದಿಲ್ಲ ಎನ್ನುವುದೇ ಇದಕ್ಕೆ ಕಾರಣವಾಗಿದೆ. ಇದರಿಂದಾಗಿ ಅವರು ತಮ್ಮ ಭೀತಿಯನ್ನು ಯಾರೊಂದಿಗೂ ಹಂಚಿಕೊಳ್ಳದೆ ತಮ್ಮ ಮನಸ್ಸಿನಲ್ಲೇ ಇಟ್ಟುಕೊಂಡಿರುತ್ತಾರೆ.

ಸುಖಿ ದಂಪತಿಗಳು ಯಾವುದೇ ಕಾರಣಕ್ಕು ಮಾಡದಿರುವ 4 ಕೆಲಸಗಳು

ಪತ್ನಿ ಅಥವಾ ಪತಿಯಿಂದ ಕೂಗಾಟ

ಪತ್ನಿ ಅಥವಾ ಪತಿಯಿಂದ ಕೂಗಾಟ

ಪತಿ ಅಥವಾ ಪತ್ನಿ ಕೂಗಾಡಿದಾಗ ಮತ್ತೊಬ್ಬ ಸಂಗಾತಿಯು ತುಂಬಾ ಒತ್ತಡ ಮತ್ತು ಆತಂಕಕ್ಕೆ ಒಳಗಾಗುವ ಸಾಧ್ಯತೆಯಿದೆ. ಕೊರ್ಟಿಸೊಲ್ ಮತ್ತು ಅರ್ಡೆನಾಲಿನೆ ಸ್ರವಿಸುವಿಕೆಯಿಂದಾಗಿ ಹೀಗಾಗುತ್ತದೆ. ಆಕ್ರಮಣ ಅಥವಾ ಕೂಗಾಟದ ಸಮಯದಲ್ಲಿ ದೇಹವು ತಮ್ಮನ್ನು ತಯಾರುಗೊಳಿಸಲು ರಾಸಾಯನಿಕ ಬಿಡುಗಡೆ ಮಾಡುತ್ತದೆ.

ಮದುವೆಗೆ ಮುಂಚೆ ಈ ಪ್ರಶ್ನೆ ಕೇಳಿದರೆ ಒಳ್ಳೆಯದು

ಹೀಗೆಲ್ಲಾ ಆದರೆ ತುಂಬಾ ಅಪಾಯಕಾರಿ!

ಹೀಗೆಲ್ಲಾ ಆದರೆ ತುಂಬಾ ಅಪಾಯಕಾರಿ!

ಅನಾರೋಗ್ಯಕರವಾಗಿರುವ ವೈವಾಹಿಕ ಸಂಬಂಧದಲ್ಲಿ ದೀರ್ಘ ಕಾಲದ ತನಕ ಉಳಿದುಕೊಳ್ಳುವುದು ಒತ್ತಡ, ಆತಂಕ ಮತ್ತು ಖಿನ್ನತೆಯ ದೃಷ್ಟಿಯಿಂದ ತುಂಬಾ ಅಪಾಯಕಾರಿಯಾಗಿದೆ.

ಕಾರಣ ತಿಳಿಯಿರಿ

ಕಾರಣ ತಿಳಿಯಿರಿ

ನಿಮ್ಮ ಪತ್ನಿ ಅಥವಾ ಪತಿಯ ಕೆಟ್ಟ ಆಲೋಚನೆಗಳಿಂದ ನಿಮಗೆ ತುಂಬಾ ಭೀತಿ ಉಂಟಾಗುತ್ತಾ ಇದ್ದರೆ ಇದರ ಹಿಂದಿರುವ ಕಾರಣವನ್ನು ನೀವು ಮೊದಲು ತಿಳಿದುಕೊಳ್ಳಬೇಕು. ಪತಿ ಅಥವಾ ಪತ್ನಿಯ ಕೂಗಾಟ, ಹಿಂಸೆ, ಸಂಘರ್ಷ, ಹಾನಿ ಅಥವಾ ಬ್ಲ್ಯಾಕ್ ಮೇಲ್ ತಂತ್ರದಿಂದ ನಿಮಗೆ ಭೀತಿಯಾಗುತ್ತಿದೆಯಾ? ಅಥವಾ ಬೇರೆ ಏನಾದರೂ ಕಾರಣವಿದೆಯಾ?

ನೆರವು ಪಡೆಯಿರಿ

ನೆರವು ಪಡೆಯಿರಿ

ನಿಮಗೆ ಏನು ಭೀತಿಯನ್ನು ಉಂಟು ಮಾಡುತ್ತಿದೆ ಎಂದು ಮೊದಲು ತಿಳಿದುಕೊಂಡರೆ ಅದರ ಬಗ್ಗೆ ನಿಮ್ಮ ಜತೆಗಾರರ ಜತೆ ಮಾತನಾಡಿ ಮತ್ತು ನೆರವು ಪಡೆಯಿರಿ. ನಿಮ್ಮ ಜತೆಗಾರ್ತಿ ಅಥವಾ ಜತೆಗಾರ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರೆ ಆಗ ಹೊರಗಿನವರ ನೆರವು ಪಡೆಯಿರಿ. ಕುಟುಂಬ ಸದಸ್ಯರಿಗೆ ಇದರ ಬಗ್ಗೆ ಹೇಳಿ ಮತ್ತು ಕೌನ್ಸಿಲಿಂಗ್ ತಜ್ಞರಿಂದ ನೆರವು ಪಡೆಯಿರಿ. ನಿಮ್ಮ ದೇಹ ಹಾಗೂ ಮನಸ್ಸಿನ ಮೇಲೆ ಭೀತಿ ತುಂಬಲು ಶುರುವಾದರೆ ಆಗ ಜೀವನವು ನರಕವಾಗುವುದು.

English summary

Are You Scared Of Your Wife? Read This!

Toxic relationships are dangerous. When you are in an abusive relationship, it is quite natural to get scared of your partner! This applies to both the genders. When the husband is an abusive person, the wife might suffer and if the wife is abusive, the husband might suffer. A recent survey claimed that even men suffer and get scared. But they don't admit it as friends or others around may make fun of them!
Subscribe Newsletter