Latest Updates
-
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್ -
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ!
ಪುರುಷರನ್ನು ನೋಡಿದರೆ ಸಾಕು, ಇವರು ತುಂಬಾ ಭಯಪಟ್ಟು ಕೊಳ್ಳುತ್ತಾರೆ!
ಬಾಲ್ಯದಲ್ಲಿ ನಡೆದ ಕೆಲವೊಂದು ಅಹಿತಕರ ಘಟನೆಗಳು, ತಾಯಿಯ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ಶಾಲೆಯಲ್ಲಿ ಗೆಳತಿಯ ಜತೆಗೆ ನಡೆದಿರುವ ಯಾವುದೇ ಕೆಟ್ಟ ಘಟನೆಗಳಿಂದ ಕೆಲವು ಮಹಿಳೆಯರು ಜೀವನದಲ್ಲಿ ಒಬ್ಬಂಟಿಯಾಗಿಯೇ ಇರಲು ಬಯಸುತ್ತಾರೆ. ಮದುವೆ ಎನ್ನುವ ಬಂಧನಕ್ಕೆ ಸಿಲುಕದೆ ಪ್ರೀತಿಪ್ರೇಮದಲ್ಲೂ ಬೀಳಲು ಬಯಸುವುದಿಲ್ಲ. ಇಂತಹ ಮಹಿಳೆಯರಿಗೆ ಪುರುಷರ ಬಗ್ಗೆ ಇರುವ ಭಯವನ್ನು ಎಂಡ್ರೋಫೋಬಿಯಾ ಎಂದು ಕರೆಯಲಾಗುತ್ತದೆ.
ಇಂತಹ ಮಹಿಳೆಯರು ಪುರುಷರ ಸಂಘದಲ್ಲಿ ಇರುವಾಗಲೂ ತುಂಬಾ ಭೀತಿಗೊಳಗಾಗುತ್ತಾರೆ. ಪುರುಷರು ತಮ್ಮನ್ನು ದೈಹಿಕವಾಗಿ ಹಿಂಸಿಸಬಹುದು ಅಥವಾ ಭಾವನಾತ್ಮಕವಾಗಿಯೂ ಹಾನಿ ಉಂಟು ಮಾಡಬಹುದು ಎಂದು ಭಾವಿಸಿರುತ್ತಾರೆ. ಇಂತಹ ಭೀತಿ ಒಮ್ಮೆ ಮನಸ್ಸಿನಲ್ಲಿ ಮೂಡಿದರೆ ಅದರಿಂದ ಹೊರಬರುವುದು ತುಂಬಾ ಕಷ್ಟ. ಪುರುಷರಿಗೆ ಮಹಿಳೆಯರು ಹೆದರಲು ಕಾರಣವೇನು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.....'

ತಜ್ಞರು ಹೇಳುವುದೇನು?
ಪುರುಷರೊಂದಿಗೆ ಆರೋಗ್ಯಕರ ಸಂಬಂಧ ನಡೆಸಿದ ಬಳಿಕ ಹೆಚ್ಚಿನ ಮಹಿಳೆಯರು ಇಂತಹ ಭೀತಿಯಿಂದ ಹೊರಬರುತ್ತಾರೆ ಎಂದು ಸಂಬಂಧ ತಜ್ಞರು ಹೇಳಿದ್ದಾರೆ.

ಸಹೋದರಿಯರ ಬಗ್ಗೆ ?
ತಂದೆ, ಸಹೋದರ ಮತ್ತು ಸೋದರ ಸಂಬಂಧಿಗಳ ಬಗ್ಗೆ ಇಂತಹ ಭೀತಿ ಅವರಿಗೆ ಇರುವುದಿಲ್ಲ. ಆದರೆ ಕುಟುಂಬಕ್ಕಿಂತ ಹೊರಗಿನ ಪುರುಷರ ಬಗ್ಗೆ ಈ ಭೀತಿಯಿರುತ್ತದೆ.

ಇದು ಆರಂಭವಾಗುವುದು ಹೇಗೆ
ಬಾಲ್ಯದಲ್ಲಿ ಅನುಭವಿಸಿದಂತಹ ಯಾವುದೇ ರೀತಿಯ ಅಹಿತಕರ ಅನುಭವವೇ ಈ ಭೀತಿಗೆ ಪ್ರಮುಖ ಕಾರಣವಾಗಿದೆ. ಬಾಲ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಾಗ ಮೆದುಳು ಇದನ್ನು ದಾಖಲು ಮಾಡಿಕೊಳ್ಳುತ್ತದೆ ಮತ್ತು ಇಂತಹ ಅಪಾಯದಿಂದ ಮುಂದೆ ದೂರ ಉಳಿಯುವಂತೆ ಅದು ಸೂಚಿಸುತ್ತದೆ.

ಅಪಾಯ ಹೆಚ್ಚಾಗಲು ಕಾರಣ
ಬಾಲ್ಯದಲ್ಲಿ ದೈಹಿಕ ಅಥವಾ ಲೈಂಗಿಕವಾಗಿ ಪೀಡನೆಗೆ ಒಳಗಾಗಿರುವಂತಹ ಮಹಿಳೆಯರು ಇಂತಹ ಭೀತಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದೆ.

ಪುರುಷರ ಪ್ರಾಬಲ್ಯವನ್ನು ದೂರಬಹುದೇ?
ಎಲ್ಲಾ ಕುಟುಂಬಗಳಲ್ಲಿ ಹೆಚ್ಚಾಗಿ ಪುರುಷರೇ ಪ್ರಾಬಲ್ಯ ಮೆರೆದಿರುತ್ತಾರೆ. ಇಂತಹ ಸಮಯದಲ್ಲಿ ಮಹಿಳೆಯರು ಭೀತಿಗೆ ಒಳಗಾಗುತ್ತಾರೆ. ಕುಟುಂಬದಲ್ಲಿ ತಂದೆಯು ತುಂಬಾ ಹಿಂಸಾ ಪ್ರವೃತ್ತಿಯವರಾಗಿದ್ದರೆ ಹೆಣ್ಣು ಮಕ್ಕಳಲ್ಲಿ ಇಂತಹ ಭೀತಿ ಉಂಟಾಗುವುದು ಸಹಜ.

ಇದು ಅನುವಂಶೀಯವೇ?
ಕೆಲವೊಂದು ಸಂದರ್ಭಗಳಲ್ಲಿ ಇಂತಹ ಭೀತಿಯು ಮುಂದಿನ ಪೀಳಿಗೆಗೂ ಬರಬಹುದು. ಇದನ್ನು ಅನುವಂಶೀಯವಾಗಿ ಬರುವ ಭೀತಿ ಎನ್ನಲಾಗುತ್ತದೆ.

ಲಕ್ಷಣಗಳು
ಈ ಭೀತಿ ನಿಮ್ಮಲ್ಲಿ ಇದೆಯಾ ಎಂದು ತಿಳಿದುಕೊಳ್ಳುವುದು ಹೇಗೆ? ಪುರುಷರ ಸಂಘದಲ್ಲಿರುವಾಗ ನಿಮಗೆ ಭೀತಿ, ಬೆವರು ಮತ್ತು ವಾಕರಿಕೆ ಉಂಟಾಗುತ್ತಾ ಇದ್ದರೆ ನಿಮಗೆ ಭೀತಿಯಿದೆ ಎಂದರ್ಥ. ಈ ಭೀತಿ ಆರಂಭವಾದರೆ ಕೆಲವು ಮಹಿಳೆಯರ ಎದೆಯಲ್ಲಿ ನೋವು ಹಾಗೂ ಅತಿಯಾದ ಉಸಿರಾಟ ಉಂಟಾಗಬಹುದು. ಪುರುಷರು ನಮಗೆ ತುಂಬಾ ಅಪಾಯಕಾರಿ ಎಂಬ ಭಾವನೆ ಕೆಲವು ಮಹಿಳೆಯರಲ್ಲಿ ಮೂಡಬಹುದು.

ಏನು ಮಾಡಬೇಕು
ಈ ಭೀತಿಗೆ ಸರಿಯಾದ ಚಿಕಿತ್ಸೆ ನೀಡದೆ ಇದ್ದರೆ ಅದು ಖಿನ್ನತೆ ಮತ್ತು ಏಕಾಂಗಿತನಕ್ಕೆ ಕಾರಣವಾಗಬಹುದು. ಇದರಿಂದ ಸಾಮಾಜಿಕ ಹಾಗೂ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಹುದು. ತಜ್ಞರ ನೆರವು ಪಡೆಯುವುದು ಅತೀ ಅಗತ್ಯವಾಗಿದೆ. ಭೂಮಿ ಮೇಲಿರುವ ಎಲ್ಲಾ ಪುರುಷರು ಕೆಟ್ಟವರಲ್ಲ, ಹೀಗಾಗಿ ನೀವು ಒಂಟಿಯಾಗಿಯೇ ಇರಬೇಕೆಂದಿಲ್ಲ. ಪುರುಷನೊಬ್ಬ ನಿಮ್ಮ ಜೀವನದೊಳಗೆ ಪ್ರವೇಶಿಸಿ ನಿಮ್ಮ ಜೀವನವೂ ಸುಂದರವಾಗಿದೆ ಎಂದು ಸಾಬೀತು ಮಾಡಬಹುದು.



Click it and Unblock the Notifications