For Quick Alerts
ALLOW NOTIFICATIONS  
For Daily Alerts

ಸುಮ್ನೆ ಕಿರಿಕಿರಿ ಮಾಡಿದರೆ, ಪುರುಷರಿಗೆ ಆಗಿ ಬರಲ್ಲವಂತೆ!

By Hemanth
|

ಪುರುಷರು ಮತ್ತು ಮಹಿಳೆಯರು ದೈಹಿಕ ಹಾಗೂ ಭಾವನಾತ್ಮಕವಾಗಿ ತುಂಬಾ ಭಿನ್ನವಾಗಿರುತ್ತಾರೆ. ಅದರಲ್ಲೂ ಮಹಿಳೆಯರು ಭಾವನಾತ್ಮಕ ಜೀವಿಗಳು. ಮಹಿಳೆಯರ ಭಾವನೆಗಳಿಗೆ ಘಾಸಿಯಾದರೆ ಅದನ್ನು ಸರಿಪಡಿಸುವುದು ತುಂಬಾ ಕಷ್ಟ. ಆದರೆ ಪುರುಷರು ಹಾಗಲ್ಲ, ಎಲ್ಲವನ್ನೂ ಸರಿಪಡಿಸಿಕೊಂಡು ಮುನ್ನಡೆಯುತ್ತಾರೆ.

ಮಹಿಳೆಯರ ಮನಸ್ಸಿನಲ್ಲಿರುವ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಪುರುಷರನ್ನಾದರೂ ಒಂದು ಸಲಕ್ಕೆ ಅರ್ಥ ಮಾಡಿಕೊಳ್ಳಬಹುದು. ಆದರೆ ಮಹಿಳೆಯರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಪುರುಷರು ಮತ್ತು ಮಹಿಳೆಯರ ನಡವಳಿಕೆಗಳು ತುಂಬಾ ಭಿನ್ನವಾಗಿರುತ್ತದೆ. ಕೆಲವು ಪುರುಷರಿಗೆ, ಮಹಿಳೆಯರೆಂದರೆ ಸಿಕ್ಕಾಪಟ್ಟೆ ಭಯವಂತೆ!

ಇಂತಹ ಸಮಯದಲ್ಲಿ ಅವರೊಂದಿಗೆ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಅರ್ಥವಾಗಲ್ಲ. ಯಾವ ಸಂದರ್ಭದಲ್ಲಿ ಅವರ ಭಾವನೆ ಹೇಗಿರುತ್ತದೆಯಾ ಎನ್ನುವುದು ತಿಳಿಯಲ್ಲ. ಇದರಿಂದಾಗಿಯೇ ಪುರುಷರು ಮತ್ತು ಮಹಿಳೆಯರು ಪರಸ್ಪರ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಭಾವನೆ, ಮನಸ್ಥಿತಿ ಮತ್ತು ಹಾರ್ಮೋನುಗಳು ಪುರುಷರು ಮತ್ತು ಮಹಿಳೆಯರ ವರ್ತನೆಯಲ್ಲಿ ಬದಲಾವಣೆ ತರಬಹುದು. ಮಹಿಳೆಯರು ಮತ್ತು ಪುರುಷರ ಕೆಲವೊಂದು ಮೂಲ ವಿಷಯಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳಿ....

ಬೇಸರವಾದಾಗ

ಬೇಸರವಾದಾಗ

ಬೇಸರವಾದಾಗ ಪುರುಷರು ಮೌನವಾಗಿದ್ದು, ಏಕಾಂಗಿಯಾಗಿರಬೇಕೆಂದು ಬಯಸುತ್ತಾರೆ. ಅದೇ ಮಹಿಳೆಯರು ಬೇಸರವಾದಾಗ ಮೌನವಾಗಿರುವ ಬದಲು ಯಾರೊಂದಿಗಾದರೂ ಇದನ್ನು ಹಂಚಿಕೊಳ್ಳಲು ಬಯಸುತ್ತಾರೆ.

ಪುರುಷರು ನೇರನುಡಿಯವರು

ಪುರುಷರು ನೇರನುಡಿಯವರು

ಎಲ್ಲವೂ ಸರಿಯಾಗಿದೆ ಎಂದು ಪುರುಷರು ಹೇಳಿದರೆಂದರೆ ಅಲ್ಲಿ ಎಲ್ಲವೂ ಸರಿಯಾಗಿದೆ ಎಂದರ್ಥ. ಮಹಿಳೆಯರು ಹೀಗೆ ಹೇಳಿದರೆ ಎಲ್ಲವೂ ಸರಿಯಾಗಿಲ್ಲ. ಇದರ ಹಿಂದೆ ಏನೋ ಇದೆ ಎಂದು ತಿಳಿದುಕೊಳ್ಳಿ. ಆ ಕಾರಣವನ್ನು ಪುರುಷರು ಹುಡುಕಬೇಕೆಂದು ಮಹಿಳೆಯರು ಬಯಸುತ್ತಾರೆ. ಆದರೆ ಪುರುಷರಿಗೆ ಮಹಿಳೆಯರಿಂದ ನೇರ ಉತ್ತರ ಬೇಕಾಗಿರುತ್ತದೆ.

ಪ್ರಶ್ನೆಗಳು ಇನ್ನೂ ಇರುತ್ತದೆ!

ಪ್ರಶ್ನೆಗಳು ಇನ್ನೂ ಇರುತ್ತದೆ!

ಗಂಭೀರವಾದ ಚರ್ಚೆ ನಡೆಸಿದ ಬಳಿಕವೂ ಪುರುಷರಲ್ಲಿ ಕೆಲವೊಂದು ಪ್ರಶ್ನೆಗಳು ಹಾಗೆ ಉಳಿದಿರುತ್ತದೆ. ಇದನ್ನು ಕೇಳಿದರೆ ಮಹಿಳೆಯರಿಗೆ ಕೋಪ ಉಕ್ಕೇರಿ ಹರಿಯುತ್ತದೆ. ಪುರುಷರಿಗೆ ಎಲ್ಲದರಲ್ಲೂ ಸ್ಪಷ್ಟತೆ ಬೇಕು ಮತ್ತು ಇದರಿಂದಾಗಿಯೇ ಹಲವಾರು ಪ್ರಶ್ನೆಗಳು ಅವರಲ್ಲಿರುತ್ತದೆ.

ಪುರುಷರ ಸಂಕ್ಷಿಪ್ತ ಉತ್ತರ

ಪುರುಷರ ಸಂಕ್ಷಿಪ್ತ ಉತ್ತರ

ಯಾವುದೇ ಪುರುಷನಲ್ಲಿ ನಿಮ್ಮ ದಿನ ಹೇಗಿತ್ತು ಎಂದು ಕೇಳಿದಾಗ, ಒಳ್ಳೆಯದಾಗಿತ್ತು ಎಂದು ಹೇಳಿ ಹೊರಟು ಹೋಗುತ್ತಾನೆ. ಮಹಿಳೆಯರಲ್ಲಿ ಇದೇ ಪ್ರಶ್ನೆ ಕೇಳಿದರೆ ಕಚೇರಿಯಲ್ಲಿ ನಡೆದಿರುವ ಗಾಸಿಪ್, ಆಕೆ ತನ್ನ ಬಾಸ್ ಜತೆ ಜಗಳ ಮಾಡಿರುವುದು ಸೇರಿದಂತೆ ಪ್ರತಿಯೊಂದನ್ನು ನಿಮ್ಮಲ್ಲಿ ಹೇಳುತ್ತಾಳೆ. ಮಹಿಳೆಯರು ತಾವು ಹೇಳುವುದನ್ನು ಎದುರಿನವರು ಕೇಳಬೇಕೆಂದು ಬಯಸುತ್ತಾರೆ.

ಅದೇ ಪ್ರಶ್ನೆಗಳನ್ನು ಕೇಳಿದರೆ ಪುರುಷರಿಗೆ ಕೋಪ

ಅದೇ ಪ್ರಶ್ನೆಗಳನ್ನು ಕೇಳಿದರೆ ಪುರುಷರಿಗೆ ಕೋಪ

ಪುರುಷರಲ್ಲಿ ದಿನದಲ್ಲಿ ಹಲವು ಬಾರಿ ನಿಮ್ಮ ದಿನ ಹೇಗಿತ್ತು ಎಂದು ಕೇಳಿದರೆ ಆಗ ಆತನಿಗೆ ಬರುವ ಕೋಪಕ್ಕೆ ನೀವು ತುತ್ತಾಗಬೇಕಾಗುತ್ತದೆ. ಅವರ ಬಗ್ಗೆ ಕಾಳಜಿಯಿಂದ ನೀವು ಕೇಳುತ್ತಿದ್ದರೂ ಇದು ಅವರನ್ನು ಕೆರಳಿಸುತ್ತದೆ. ಹಲವಾರು ಸಲ ಒಂದೇ ಪ್ರಶ್ನೆಯನ್ನು ಕೇಳಲು ಆತನಿಗೆ ಕಿರಿಕಿರಿಯಾಗಬಹುದು. ಆದರೆ ಮಹಿಳೆಯರಿಗೆ ಎಷ್ಟು ಸಲ ಈ ಪ್ರಶ್ನೆ ಕೇಳುತ್ತೀರೋ ಅಷ್ಟು ಸಲ ಅವರಿಗೆ ಸಂತೋಷವಾಗುತ್ತದೆ.

English summary

Reasons For Men And Women Misunderstand Each Other

Men and women naturally tend to misunderstand each other as there are slight changes in our biological makeups. Moods, emotions and hormones- there are so many factors that drive human beings. In this post, let us discuss about certain basic areas where men and women are different.
X
Desktop Bottom Promotion