Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೆಲವು ಪುರುಷರಿಗೆ, ಮಹಿಳೆಯರೆಂದರೆ ಸಿಕ್ಕಾಪಟ್ಟೆ ಭಯವಂತೆ!
ಮಹಿಳೆಯರ ಮುಂದೆ ಜಂಭ ಕೊಚ್ಚಿಕೊಳ್ಳುವಂತಹ ಪುರುಷರೇ ಹೆಚ್ಚು. ಮಹಿಳೆಯರನ್ನು ಆಕರ್ಷಿಸಲು ವಿವಿಧ ರೀತಿಯ ಕಸರತ್ತು ಮಾಡುತ್ತಾರೆ. ಇದರಲ್ಲಿ ತನ್ನ ಕೆಲಸ, ಹಣ, ಆಸ್ತಿ ಮೊದಲಾದ ಬಗ್ಗೆ ಕೊಚ್ಚಿಕೊಳ್ಳುತ್ತಾರೆ.
ಇಂತಹ ಪುರುಷರು ಒಂದು ವರ್ಗವಾದರೆ ಮಹಿಳೆಯರನ್ನು ಅದರಲ್ಲೂ ಸುಂದರವಾಗಿರುವ ಮಹಿಳೆಯರನ್ನು ನೋಡಿದರೆ ಭೀತಿ ಪಡುವಂತಹ ಪುರುಷರದ್ದು ಇನ್ನೊಂದು ವರ್ಗವಾಗಿದೆ. ಇದನ್ನು ಲಿಂಗ ಭೀತಿ ಎನ್ನಬಹುದಾಗಿದೆ. ಮಹಿಳೆಯರನ್ನು ಕಂಡರೆ ಅತಿಯಾಗಿ ಭೀತಿ ಪಡುವುದು. ಇವರ ಕಪಟ ಪ್ರೀತಿಯನ್ನು ನಂಬಿ, ಮೋಸ ಹೋದೀರಿ ಜೋಕೆ!
ಮಹಿಳೆಯರು ಸುತ್ತಲು ಇದ್ದರೆ ಆತಂಕಕ್ಕೆ ಒಳಗಾಗುವುದು ಅಥವಾ ಒತ್ತಡಕ್ಕೆ ಒಳಗಾಗುವುದು. ಹೀಗೆ ಮಹಿಳೆಯರೆಂದರೆ ಅವರಿಗೆ ಭಯ. ಇಂತಹ ಪುರುಷರು ಇದ್ದಾರೆಯಾ? ಎಂದು ನೀವು ಪ್ರಶ್ನಿಸಬಹುದು. ಆದರೆ ಇದು ನಿಜ. ಮಹಿಳೆಯರನ್ನು ಕಂಡರೆ ಭಯಬೀಳುವಂತಹ ಪುರುಷರು ಇದ್ದಾರೆ. ಇದಕ್ಕೆ ಕಾರಣಗಳು ಏನೆಂದು ಈ ಲೇಖನದಲ್ಲಿ ತಿಳಿದುಕೊಳ್ಳುವ.

ವಾಸ್ತವಾಂಶ#1
ಈ ಭೀತಿಯು ಸಾಮಾಜಿಕ ಆತಂಕ ರೋಗದಡಿಯಲ್ಲಿ ಬರುವುದು. ಇತರ ಭೀತಿಗಳಂತೆ ಇದಕ್ಕೆ ಕೆಲವೊಂದು ದೈಹಿಕ ಹಾಗೂ ಮಾನಸಿಕ ಲಕ್ಷಣಗಳು ಇವೆ.

ವಾಸ್ತವಾಂಶ #2
ಇಂತಹ ಭೀತಿಯನ್ನು ಎದುರಿಸುವಂತಹ ವ್ಯಕ್ತಿಯು ಮಹಿಳೆಯರೊಂದಿಗೆ ಇದ್ದಾಗ ಅವರಿಗೆ ವಾಕರಿಕೆ ಬರುವುದು, ಬೆವರುವುದು, ಹೃದಯಬಡಿತ ಹೆಚ್ಚಾಗುವುದು ಮತ್ತು ಹೆದರಿ ಕೊಳ್ಳಬಹುದು.

ವಾಸ್ತವಾಂಶ#3
ಮಹಿಳೆಯರ ಜತೆಗೆ ಮಾತನಾಡಲು ಹೇಳುವಾಗ ಕೆಲವು ಪುರುಷರು ಮೈಲು ದೂರ ಓಡಿಹೋಗಬಹುದು. ಮಹಿಳೆಯರೊಂದಿಗೆ ಮಾತನಾಡುವುದು ಅವರಿಗೆ ತುಂಬಾ ಹೆದರಿಕೆ.

ವಾಸ್ತವಾಂಶ#4
ಮಹಿಳೆಯರೊಂದಿಗೆ ಸಂಪರ್ಕ ಸಾಧಿಸಲು ಹೆಚ್ಚಿನ ಪುರುಷರು ಮುಂದೆ ಬಂದರೆ ಇಂತಹ ಭಯ ಹೊಂದಿರುವವರು ಯಾವುದೇ ಸಂಪರ್ಕ ಸಾಧಿಸಲು ಹಿಂಜರಿಯುತ್ತಾರೆ.

ವಾಸ್ತವಾಂಶ#5
ಹಿಂದೆ ಆಗಿರುವಂತಹ ಯಾವುದಾದರೂ ಕೆಟ್ಟ ಘಟನೆಗಳು ಈ ಭೀತಿಗೆ ಕಾರಣವೆಂದು ಮಾನಸಿಕ ತಜ್ಞರು ಅಭಿಪ್ರಾಯಪಡುತ್ತಾರೆ. ಕೆಲವೊಂದು ಘಟನೆಗಳಿಂದಾಗಿ ಮಹಿಳೆಯರು ತುಂಬಾ ಕೆಟ್ಟವರೆಂದು ಅವರು ಭಾವಿಸಿರಬಹುದು.

ವಾಸ್ತವಾಂಶ#6
ಮಹಿಳೆಯರಿಂದ ಚೆನ್ನಾಗಿ ಬೈಗುಳ ತಿಂದಿರುವ ಪುರುಷರು ಈ ಭೀತಿ ಎದುರಿಸುತ್ತಾರೆ. ತಾಯಿಯಿಂದ ಬೈಗುಳ ಹಾಗೂ ಪೆಟ್ಟು ತಿಂದಿರುವ ಪುರುಷರು ಈ ರೀತಿ ಭಯಪಡಬಹುದು. ಅಕ್ಕ, ಚಿಕ್ಕಮ್ಮ, ಅಜ್ಜಿ ಅಥವಾ ಇನ್ನು ಯಾರೇ ಬೈದಿದ್ದರೂ ಇದು ಪುರುಷರ ಭೀತಿಗೆ ಕಾರಣವಾಗಿರಬಹುದು.



Click it and Unblock the Notifications
