For Quick Alerts
ALLOW NOTIFICATIONS  
For Daily Alerts

  ಮಾನವನ ಏಳು ಬೀಳಿನ ಜೀವನದಲ್ಲಿ ಕುಟುಂಬದ ಪಾತ್ರ

  By Deepak M
  |

  ಮಾನವ ಮೂಲತಃ ಸಮಾಜದಲ್ಲಿ ಬದುಕಲು ಇಷ್ಟಪಡುತ್ತಾನೆ. ಆದ್ದರಿಂದ ಆಂಗ್ಲ ಭಾಷೆಯಲ್ಲಿ "ಮ್ಯಾನ್ ಬೈ ನೇಚರ್, ಇಸ್ ಎ ಸೋಶಿಯಲ್ ಅನಿಮಲ್" ಎಂಬ ಪ್ರಸಿದ್ಧ ಉಕ್ತಿಯನ್ನು ಉದಾಹರಿಸಲಾಗುತ್ತದೆ. ಅರಿಸ್ಟಾಟಲ್ ಹೇಳಿದ ಈ ಮಾತು ಸಾವಿರಾರು ವರ್ಷವಾದರು ಇಂದಿಗೂ ಸತ್ಯವಾಗಿ ಉಳಿದಿದೆ. ಮನುಷ್ಯರಿಲ್ಲದೆ ಸಮಾಜವಿಲ್ಲ, ಸಮಾಜವಿಲ್ಲದೆ ಮನುಷ್ಯರಿಲ್ಲ. ಒಬ್ಬರಿಂದ ಒಬ್ಬರು, ಒಬ್ಬೊಬ್ಬರು ಸೇರಿ ಒಂದು ಸಮಾಜ ಎಂದು ಆಗಿದೆ.

  Importance Of Family In One's Life
   

  ಹುಟ್ಟಿದಾಗಲಿಂದ ಸಾಯುವವರೆಗೆ ನಾವು ಸುಮಾರು ಜನರನ್ನು ಭೇಟಿ ಮಾಡುತ್ತಲೆ ಇರುತ್ತೇವೆ. ಆದರೆ ಹುಟ್ಟಿದಾಗಲಿಂದ ಸಾಯುವವರೆಗೆ ನಮ್ಮ ಜೊತೆ ಇರುವುದು ಕುಟುಂಬ. ಕುಟುಂಬ ಎಂದರೆ ರಕ್ತ ಸಂಬಂಧಿಗಳು. ಅಂದರೆ ಯಾವುದೋ ಒಂದು ಬಗೆಯಲ್ಲಿ ಒಂದೇ ರಕ್ತ ಹಂಚಿಕೊಂಡವರು. ಹೀಗೆ ಒಂದೇ ಕಡೆ, ಸಂಬಂಧಕ್ಕೆ ಕಟ್ಟು ಬಿದ್ದು ಬಾಳುವ ಜನರ ಗುಂಪನ್ನು ಕುಟುಂಬ ಎಂದು ಕರೆಯುತ್ತೇವೆ. ಈ ಕುಟುಂಬದ ಮಹತ್ವವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.

  Importance Of Family In One's Life
   

  ಕುಟುಂಬದ ಮಹತ್ವವನ್ನು ವಿವರಿಸಲು ಮಹಾನ್ ಮೇಧಾವಿಗಳು, ತತ್ವಜ್ಞಾನಿಗಳು, ಮನಃಶಾಸ್ತ್ರಜ್ಞರು ಮತ್ತು ಸಮಾಜ ಶಾಸ್ತ್ರ ತಜ್ಞರು ಎಲ್ಲರೂ ಪ್ರಯತ್ನವನ್ನು ಪಟ್ಟಿದ್ದಾರೆ. ಆದರೆ ಇಡೀ ಜೀವನವನ್ನು ಇದಕ್ಕಾಗಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ, ಕೊನೆಗೆ ಉತ್ತರವನ್ನು ಅಪೂರ್ಣವಾಗಿಯೇ ಉಳಿಸಿ ಹೋದವರು ತುಂಬಾ ಜನ, ಇದುವರೆಗೂ ಈ ಪ್ರಶ್ನೆಗೆ ನಿಖರ ಉತ್ತರವನ್ನು ಕಂಡುಕೊಳ್ಳಲು ಯಾರಿಂದಲೂ ಸಾಧ್ಯವಾಗಲಿಲ್ಲ.

  ಕುಟುಂಬ ಎಂದ ಮೇಲೆ ಸಣ್ಣ-ಪುಟ್ಟ-ಕೆಲವೊಮ್ಮೆ ದೊಡ್ಡ ಭಿನ್ನಾಭಿಪ್ರಾಯಗಳು ಬರುವುದು ಸಾಮಾನ್ಯ. ಆದರೂ ಅವರ ನಡುವೆ ಒಂದು ಅನ್ಯೋನ್ಯತೆ ಇರುತ್ತದೆ. ಜನ ಸಾಮಾನ್ಯರ ಆಡು ಮಾತಿನಲ್ಲಿ ನೀವು ಕೇಳಿರಬಹುದು, "ನಾನು ಸತ್ತರೆ ಅವರಿಗೆ ಅಂಟು, ಅವರು ಸತ್ತರೆ ನನಗೆ ಅಂಟು" ಎಂದು ಈ ಅಂಟು ನಂಟಿನಿಂದ ಬಂದದ್ದು.

  Importance Of Family In One's Life
   

  ಒಬ್ಬ ಮನುಷ್ಯನನ್ನು ಪರಿಪೂರ್ಣ ಮನುಷ್ಯನನ್ನಾಗಿಸುವುದು ಕುಟುಂಬ. ಕುಟುಂಬವಿಲ್ಲದೆ ಮನುಷ್ಯ ಪರಿಪೂರ್ಣತೆಯನ್ನು ಪಡೆದುಕೊಳ್ಳಲು ಆಗುವುದಿಲ್ಲ. ಕುಟುಂಬದ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಲು ಹೋಗಬೇಕೆಂದರೆ, ಮೊದಲು ಕುಟುಂಬಕ್ಕೆ ಒಬ್ಬ ವ್ಯಕ್ತಿ ನೀಡುವ ಕೊಡುಗೆಗಳನ್ನು ತಿಳಿದುಕೊಳ್ಳಬೇಕು.

  ಸಾಮಾನ್ಯವಾಗಿ, ಒಬ್ಬ ಮನುಷ್ಯನಿಗೆ ತನ್ನ ಸುತ್ತ ಇರುವವರು, ತನ್ನನ್ನು ಹೊಗಳಬೇಕು ಎಂಬ ಆಸೆ ಇರುತ್ತದೆ. ಅದು ತನ್ನ ಪೋಷಕರು, ಒಡ ಹುಟ್ಟಿದವರು, ಸಂಗಾತಿ, ಮಕ್ಕಳು ಆಗಿರಬೇಕು ಎಂಬ ಆಸೆ ಅವರದಾಗಿರುತ್ತದೆ. ಬನ್ನಿ ಇನ್ನು ತಡ ಮಾಡದೆ ಕುಟುಂಬದ ಪ್ರಾಮುಖ್ಯತೆಯನ್ನು ತಿಳಿದುಕೊಂಡು ಬರೋಣ:

  ಕುಟುಂಬ - ಒಬ್ಬ ವ್ಯಕ್ತಿಯ ಜೀವನ ಆರಂಭವಾಗುವ ಸ್ಥಳ

  ಒಬ್ಬ ವ್ಯಕ್ತಿಯು ಜನಿಸಿದ ಕೂಡಲೆ ಒಂದು ಕುಟುಂಬದ ಸದಸ್ಯನಾಗುತ್ತಾನೆ. ಆ ವ್ಯಕ್ತಿಯ ಜನನಕ್ಕೆ ಯಾವುದೇ ಸ್ವಾರ್ಥ ಕಾರಣಗಳು ಇರುವುದಿಲ್ಲ. ಹುಟ್ಟುವ ಮಗುವು ಒಂದು ಕುಟುಂಬದ ಸಂತೋಷಕ್ಕೆ ಕಾರಣವಾಗುತ್ತದೆ. ಆ ವ್ಯಕ್ತಿಯನ್ನು ಬರಮಾಡಿಕೊಳ್ಳಲು, ಇಡೀ ಕುಟುಂಬ ಕಾಯುತ್ತಿರುತ್ತದೆ.

  Importance Of Family In One's Life
   

  ಕುಟುಂಬ- ಕಲಿಯಲು ಮತ್ತು ಬೆಳೆಯಲು ಇರುವ ಸ್ಥಳ

  ಹುಟ್ಟಿದಾಗಲಿಂದ ಮಗುವಿನ ಕಲಿಕೆಯ ಕಾಲ ಆರಂಭವಾಗುತ್ತದೆ. ಕುಟುಂಬವು ಅವನ ಮೊದಲ ಪಾಠಶಾಲೆಯಾಗಿರುತ್ತದೆ. ಪ್ರತಿದಿನವು ಆತನಿಗೆ ಕಲಿಯಲು ಏನಾದರು ಒಂದು ವಿಚಾರ ದೊರೆಯುತ್ತದೆ. ಹೀಗೆ ಕುಟುಂಬವು ಒಬ್ಬ ಮನುಷ್ಯನನ್ನು ಪರಿಪೂರ್ಣತೆಯತ್ತ ಮುನ್ನಡೆಸುವಲ್ಲಿ ನೆರವಾಗುತ್ತದೆ. ಇದು ಕುಟುಂಬದ ಅತ್ಯಂತ ಪ್ರಮುಖ ಅಂಶವಾಗಿರುತ್ತದೆ.

  ಕುಟುಂಬ - ಸುಖ ದುಃಖಗಳನ್ನು ಹಂಚಿಕೊಳ್ಳುವ ಸ್ಥಳ

  ಪ್ರತಿಯೊಬ್ಬರಿಗು ತಮ್ಮ ಸುಖ-ದುಃಖವನ್ನು ಹಂಚಿಕೊಳ್ಳಲು ಕೆಲವರು ಬೇಕಾಗುತ್ತಾರೆ. ಅದರಲ್ಲಿ ಮೊದಲಿಗೆ ನಿಲ್ಲುವವರು ಕುಟುಂಬದ ಸದಸ್ಯರು. ಮಾನವರನ್ನು ಅಭಿವೃದ್ಧಿ ಮಾಡುವಲ್ಲಿ ಈ ಅಂಶವು ಪ್ರಮುಖ ಪಾತ್ರವನ್ನುವಹಿಸುತ್ತದೆ. ಇದು ಮಾನವರಿಗೆ ಜವಾಬ್ದಾರಿಯ ಪ್ರಜ್ಞೆಯನ್ನು ನೀಡುತ್ತದೆ. ಇದು ಮನೆಯಿಂದಲೇ ಮೊದಲು ಆರಂಭವಾಗುತ್ತದೆ. ಆಮೇಲೆ ಇದು ಹೊರಗಡೆ ಪಸರಿಸುತ್ತದೆ. ಆ ಮೂಲಕ ಸಮಾಜದ ಬುನಾದಿಯನ್ನು ಉತ್ತಮಗೊಳಿಸುತ್ತದೆ.

  Importance Of Family In One's Life

  ಕುಟುಂಬ- ಕಷ್ಟಗಳ ವಿರುದ್ಧ ಹೋರಾಡುವ ಬಗೆಯನ್ನು ತಿಳಿಸುತ್ತದೆ

  ಜೀವನ ಸುಖದ ಸುಪ್ಪತ್ತಿಗೆಯಲ್ಲ. ಅದು ಮುಳ್ಳಿನ ಹಾಸಿಗೆ. ಕಷ್ಟಗಳನ್ನು ಎದುರಿಸುವಾಗ ಒಬ್ಬರಿಗಿಂತ ಒಂದು ಸಮೂಹ ಇದ್ದರೆ ಒಳ್ಳೆಯದು. ಆ ಸಮೂಹದಲ್ಲಿ ಕುಟುಂಬವು ಮೊದಲ ಪಂಕ್ತಿಯಲ್ಲಿರುತ್ತದೆ. ಕುಟುಂಬದ ಸದಸ್ಯರು ಒಬ್ಬ ವ್ಯಕ್ತಿಗೆ ಬೇಕಾಗುವ ಮಾನಸಿಕ ಬೆಂಬಲವನ್ನು ಮತ್ತು ಒಮ್ಮೊಮ್ಮೆ ಜನ ಬೆಂಬಲವನ್ನು ಸಹ ನೀಡುತ್ತಾರೆ. ಆಮೇಲೆ ನಿಮಗೆ ಬೇಕಾದ ಫಲಿತಾಂಶ ಬರುವಂತೆ ಮಾಡುತ್ತಾರೆ. ಅದಕ್ಕಾಗಿ ಕುಟುಂಬ ಬೇಕಾಗುತ್ತದೆ.

  English summary

  Importance Of Family In One's Life

  Man, by nature, is a social animal, and he develops well only when he stays with the society. Whenever you talk about the society, then you cannot avoid or ignore the family that is obviously the first and foremost step of society. Right from the birth, a person grows in the family that consists of many relatives. In such a situation, it is not a difficult task to find out what is the importance of family in one’s life.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more