For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ನಿದ್ದೆ ಅತಿಯಾದರೆ ಸಂಬಂಧದಲ್ಲಿ ಬಿರುಕು!

By Hemanth
|

ಸಂಗಾತಿಗೂ ನಿದ್ರೆಗೂ ಏನಾದರೂ ಸಂಬಂಧವಿದೆಯಾ ಎಂದು ಕೇಳಿದರೆ ಇಲ್ಲೊಂದು ಸಂಶೋಧನೆಯು ಹೌದು ಎನ್ನುತ್ತಿದೆ. ಸಂಗಾತಿಯನ್ನು ನೀವು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ಮತ್ತು ಅವರನ್ನು ಯಾವ ರೀತಿಯಲ್ಲಿ ಆರೈಕೆ ಮಾಡುತ್ತೀರಿ ಎನ್ನುವುದು ನಿದ್ರೆಯ ಮೇಲೆ ಅವಲಂಬಿತವಾಗಿದೆ ಎಂದು ತಿಳಿದುಬಂದಿದೆ.

ಕಡಿಮೆ ಆತಂಕ ಹಾಗೂ ಪ್ರಚೋದನೆ ಹೊಂದಿರುವವರು ಗುಣಮಟ್ಟದ ನಿದ್ರೆ ಪಡೆಯುತ್ತಾರೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ ಎಂದು ಟರ್ಕಿಯ ಮಿಡಲ್ ಈಸ್ಟ್ ಟೆಕ್ನಿಕಲ್ ವಿಶ್ವವಿದ್ಯಾನಿಲಯದ ಪ್ರಮುಖ ಲೇಖಕ ಎಮ್ರೆ ಸೆಲ್ಕುಕ್ ತಿಳಿಸಿದ್ದಾರೆ.

Bad Relationship Leads To Poor Sleep

ನಿದ್ರೆಯ ಮುಖ್ಯ ಉದ್ದೇಶವೆಂದರೆ ಮತ್ತಷ್ಟು ಹಾನಿಗೀಡಾಗುವ ದೈಹಿಕ ಆರೋಗ್ಯವನ್ನು ಕಾಪಾಡುವುದು. ಯಾವುದೇ ಅಡ್ಡಿಗಳಿಲ್ಲದೆ ಗುಣಮಟ್ಟದ ನಿದ್ರೆ ಮಾಡಿದಾಗ ಮಾತ್ರ ರಕ್ಷಣಾತ್ಮಕವಾಗಿರುವ ಕ್ರಿಯೆಯು ನಮಗೆ ತಿಳಿದುಬರುತ್ತದೆ. ಇದನ್ನೇ ಪುನಶ್ಚೈತನ್ಯಕಾರಿ ನಿದ್ರೆ ಎನ್ನುತ್ತಾರೆ. ಸಣ್ಣ ಪುಟ್ಟ ತಪ್ಪುಗಳೇ ಸಾಕು, ದಾಂಪತ್ಯದಲ್ಲಿ ವೈಮನಸ್ಸು ಮೂಡಲು

ಯಾವುದೇ ಭೀತಿಯಿಲ್ಲದೆ ರಕ್ಷಣೆ, ಸುರಕ್ಷತೆಯ ಭಾವನೆ ಇದ್ದಾಗ ಮಾತ್ರ ಪುನಶ್ಚೈತನ್ಯಕಾರಿ ನಿದ್ರೆ ಬರುವುದು. ಮನುಷ್ಯರಿಗೆ ಸುರಕ್ಷತೆಯ ಭಾವನೆ ಬರುವುದು ಸಂಗಾತಿಯಿಂದ ಮಾತ್ರ. ಇದು ಬಾಲ್ಯದ ಸ್ನೇಹಿತ ಆಗಿರಬಹುದು ಅಥವಾ ವಯಸ್ಕರಾದಾಗ ಸಿಗುವ ಸಂಗಾತಿಯಾಗಿರಬಹುದು.

ಜವಾಬ್ದಾರಿಯುತವಾಗಿರುವ ಸಂಗಾತಿಯಿದ್ದರೆ ಆಗ ಯಾವುದೇ ಸಂದರ್ಭದಲ್ಲಿ ಏನಾದರೂ ಸಮಸ್ಯೆಯಾದರೂ ನಮ್ಮನ್ನು ಕಾಪಾಡಲು ಅವರು ಇದ್ದೇ ಇರುತ್ತಾರೆ ಎನ್ನುವ ಭಾವನೆ ನಮ್ಮಲ್ಲಿ ಇರುತ್ತದೆ. ಇದರಿಂದಾಗಿ ಮನುಷ್ಯರು ಆತಂಕ ಮತ್ತು ಪ್ರಚೋದನೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದು ಸೆಲ್ಕುಕ್ ಹೇಳಿದ್ದಾರೆ. ಹೆಂಡತಿಯೊಂದಿಗೆ ಜಗಳ ಸಮಸ್ಯೆಗಳು ಬಹಳ!

ಸಂಗಾತಿಗಳ ಪುನಶ್ಚೈತನ್ಯಕಾರಿ ನಿದ್ರೆ, ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು ಹಲವಾರು ವರ್ಷಗಳಿಂದ ಸಂಶೋಧನೆ ಮಾಡಿರುವ ಅಮೆರಿಕಾದ ಮಿಡ್ ಲೈಫ್ ಪ್ರಾಜೆಕ್ಟ್ ನಿಂದ ಇದು ತಿಳಿದುಬಂದಿದೆ.

ಸಂತೋಷಕರ, ಆರೋಗ್ಯಕರ ಮತ್ತು ದೀರ್ಘ ಜೀವನಕ್ಕಾಗಿ ಜವಾಬ್ದಾರಿಯುತ ಸಂಗಾತಿ ಬೇಕೇಬೇಕು ಎಂದು ಇತ್ತೀಚೆಗೆ ನಡೆಸಿರುವ ಸಂಶೋಧನೆಗಳು ಮತ್ತು ಅದರಿಂದ ಕಲೆಹಾಕಿದ ಮಾಹಿತಿಯಿಂದ ತಿಳಿದಿದೆ ಎನ್ನುತ್ತಾರೆ ಸೆಲ್ಕುಕ್. ಸಂಶೋಧನೆಯ ವರದಿಯನ್ನು ಜರ್ನಲ್ ಆಫ್ ಸೋಶಿಯಲ್ ಪರ್ಸನ್ಯಾಲಿಟಿ ಮತ್ತು ಸೈಕಾಲಜಿ ಸೈನ್ಸ್‌ನಲ್ಲಿ ಪ್ರಕಟಿಸಲಾಗಿದೆ.

English summary

Bad Relationship Leads To Poor Sleep

How well you think your partner understands and cares for you is linked to how well you sleep, new research suggests. "Our findings show that individuals with responsive partners experience lower anxiety and arousal, which in turn improves their sleep quality," said lead author Emre Selcuk from Middle East Technical University in Turkey.
X
Desktop Bottom Promotion