For Quick Alerts
ALLOW NOTIFICATIONS  
For Daily Alerts

ಹೆಂಡತಿಯೊಂದಿಗೆ ಜಗಳ ಸಮಸ್ಯೆಗಳು ಬಹಳ!

By C.M Prasad
|

ಇತ್ತೀಚಿನ ದಿನಗಳಲ್ಲಿ ಮಹಿಳೆಯಿಂದ ತಾಳ್ಮೆಯನ್ನು ನಿರೀಕ್ಷಿಸುವಂತಹ ಕಾಲ ಕಳೆದುಹೋಗಿದೆ. ಇಂದು ಮಹಿಳೆಗಿಂತ ಪುರುಷರು ಹೆಚ್ಚು ತಾಳ್ಮೆಯಿಂದಿರಬೇಕಾದ ಅನಿವಾರ್ಯತೆ ಬಂದೊದಗಿದೆ. ಏಕೆಂದರೆ ಮಹಿಳೆಯರು ಸಮಾಜದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೂ ಮಿಗಿಲಾಗಿ ಮಹಿಳೆಯರಲ್ಲಿರುವ ಕೆಲವು ಹಾರ್ಮೊನ್ ಸತ್ವಗಳಿಂದ ಅವರನ್ನು ಕೆಲವೊಂದು ಬಾರಿ ಹೆಚ್ಚು ಕೆರಳಿಸುವಂತೆ ಮಾಡುತ್ತದೆ. ಆದ್ದರಿಂದ ಮಹಿಳೆಯರೊಂದಿಗೆ ವಾದ ಮಾಡುವುದು ಒಳಿತಲ್ಲ. ಜಾಣ್ಮೆಯ ಪುರುಷನು ಯಾವುದೇ ಕಾರಣಕ್ಕೂ ಮಹಿಳೆಯೊಂದಿಗೆ ವಾದ ಮಾಡುವುದಿಲ್ಲ. ಸಂದರ್ಭ ಹಾಗೂ ಪರಿಸ್ಥಿತಿಯು ಆಕೆಯನ್ನು ಕೆರಳಿಸುವಂತೆ ಮಾಡಿರುವುದು ಆತನಿಗೆ ಚೆನ್ನಾಗಿ ಅರಿವಿರುತ್ತದೆ.

Why You Must Never Argue With Your Wife

ಬರೀ ಜಗಳದಿಂದ ಯಾವ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ, ಇದರಿಂದ ದಾಂಪತ್ಯ ಸಂಬಂಧಕ್ಕೇ ಹೆಚ್ಚು ತೊಡಕುಂಟಾಗುತ್ತದೆ. ನಿಮ್ಮ ಆಲೋಚನೆಗಳನ್ನು ಆಕೆಯ ಮೇಲೆ ಹೇರುವುದು ಹಾಗೂ ಆಕೆಗೆ ಅಸಹಕಾರ ನೀಡುವುದರಿಂದ ನಿಮ್ಮ ವೈವಾಹಿಕ ಜೀವನಕ್ಕೆ ಧಕ್ಕೆಯುಂಟಾಗುತ್ತದೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಅಹಂ ಭಾವವನ್ನು ಪ್ರಚುರಪಡಿಸುವುದು. ಸಾಮಾನ್ಯವಾಗಿ ಅಹಂ ಭಾವದಿಂದ ವಾದವನ್ನು ಮುಂದುವರೆಸುತ್ತಾ ಹೋದರೆ ವಾಗ್ವಾದ ಮುಂದುವರೆದು ಚೆಂದದ ದಾಂಪತ್ಯಕ್ಕೆ ಧಕ್ಕೆಯಾಗುವುದೇ ಹೊರತು ಇದರಿಂದ ಯಾರಿಗೂ ಉಪಯೋಗವಿಲ್ಲ. ನಿಮ್ಮ ಪತ್ನಿಯೊಂದಿಗೆ ನಿಷ್ಪ್ರಯೋಜಕವಾದ ವಾದಗಳ ಬಗ್ಗೆ ಕೆಲವು ಸಂಗತಿಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಮುಂದೆ ಓದಿ.... ಗಂಡ-ಹೆಂಡತಿಯ ನಡುವಿನ ಗುಟ್ಟು ಗುಟ್ಟಾಗಿಯೇ ಇರಲಿ!

ಆಕೆಗೆ ನಿಜಕ್ಕೂ ಅರ್ಥವಾಗುವುದಿಲ್ಲ
ಸಾಮಾನ್ಯವಾಗಿ ವಾದ ಮಾಡುವವರು ತಮ್ಮ ಮನಸ್ಸಿನ ಹತಾಶೆಯನ್ನು ಹೋಗಲಾಡಿಸಲು ವಾದ ಮಾಡುವರು. ಆಕೆ ವಾದ ಮಾಡುತ್ತಲೇ ಇದ್ದರೂ ಸಹ ನೀವು ಶಾಂತ ಚಿತ್ತದಿಂದ ಆಕೆಯನ್ನು ಗಮನಿಸುತ್ತಿರಿ. ಆಕೆಗೆ ನಿಜಕ್ಕೂ ಆ ಪರಿಸ್ಥಿತಿಯಲ್ಲಿ ಯಾವ ವಿಷಯವೂ ಅರಿವಿಗೆ ಬರುವುದಿಲ್ಲ. ಈ ಮಧ್ಯೆ ನೀವೂ ವಾದ ಮಾಡಲು ಪ್ರಾರಂಭಿಸಿದರೆ ನಿಮ್ಮ ಸಂಬಂಧ ಕಲುಷಿತಗೊಳ್ಳುತ್ತದೆ.

ಪ್ರಬುದ್ಧತೆಯ ಕೊರತೆ
ನೀವಿನ್ನೂ ಹುಡುಗನಲ್ಲವೆಂದೂ, ಪ್ರಬುದ್ಧತೆಯಿಂದ ಕೂಡಿದ ಪುರುಷನೆಂದು ಒಮ್ಮೆ ಅರಿಯಿರಿ. ಪ್ರಬುದ್ಧ ಪುರುಷನು ಯಾವ ಸನ್ನಿವೇಶದಲ್ಲೂ ಸಹ ಪ್ರಬುದ್ಧತೆಯಿಂದ ಪರಿಸ್ಥಿತಿಯನ್ನು ಅವಲೋಕಿಸಬೇಕು. ಅರ್ಥ ಪೂರ್ಣವಲ್ಲದ ವಾದಗಳನ್ನು ಮಾಡುವುದು ಒಳ್ಳೆಯ ಹವ್ಯಾಸವಲ್ಲ. ಆದ್ದರಿಂದ ನಿಮ್ಮ ಮಾತಿನ ಮೇಲೆ ಸದಾ ಹಿಡಿತವಿರಲಿ, ಇದರಿಂದ ಸಮಾಧಾನವನ್ನು ಕಾಣಬಹುದು.ಇದರಿಂದ ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ

ಇಡೀ ಮನುಕುಲದ ಇತಿಹಾಸದಲ್ಲಿ ಅರ್ಥಪೂರ್ಣವಾದ ಚರ್ಚೆಗಳು ಬಾಂಧವ್ಯವನ್ನು ಹೆಚ್ಚಿಸಿದ್ದು, ಅರ್ಥಪೂರ್ಣ ವಾಗ್ವಾದಗಳು ಎಂದಿಗೂ ಸಹಕಾರಿಯಾಗಿಲ್ಲ. ಮತ್ತೊಂದು ಕಡೆ ಇದರಿಂದ ಸಂಬಂಧ ಬಾಂದವ್ಯಕ್ಕೆ ತೀವ್ರ ಧಕ್ಕೆಯುಂಟಾಗುತ್ತದೆ. ಸಂಗಾತಿ ಜೊತೆ ಜಗಳವಾಡಿದರೆ ಹೀಗೆ ಮಾಡಬಹುದೇ?

ಆಕೆಯನ್ನು ನೀವು ಪ್ರೀತಿಸುತ್ತೀರಾ ಅಲ್ಲವೇ?

ನೀವು ನಿಮ್ಮ ಪತ್ನಿಯನ್ನು ನಿಜಕ್ಕೂ ಮನಸಾರೆ ಪ್ರೀತಿಸುತ್ತಿದ್ದರೆ, ಆಕೆಯ ಆಲೋಚನೆಗಳನ್ನು ಮೊದಲು ಗೌರವಿಸಲು ಪ್ರಯತ್ನಿಸಿ. ನಿಮ್ಮ ಸಂಬಂಧದ ಅಂದವನ್ನು ಹೆಚ್ಚಿಸಲು ಮೊದಲು ಆಕೆಯ ಭಾವನೆಗಳಿಗೆ ಮನ್ನಣೆ ನೀಡಿ, ಆಕೆಯ ಭಾವನೆಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶ ನೀಡಿ. ಇದರಿಂದ ಆಕೆಗೂ ಸಹ ಸಮಾಧಾನ ಉಂಟಾಗಲು ನೆರವಾಗುತ್ತದೆ.
X
Desktop Bottom Promotion