For Quick Alerts
ALLOW NOTIFICATIONS  
For Daily Alerts

ಲೈಫ್‌ನಲ್ಲಿ ಪ್ರಾಮಾಣಿಕತೆಯನ್ನು ಎಂದಿಗೂ ಕೈಬಿಡದಿರಿ!

By Manu
|

ಸುಳ್ಳು ಹೇಳಿದರೆ ಆ ಸುಳ್ಳನ್ನು ಮುಚ್ಚಲು ಹಲವಾರು ಸುಳ್ಳುಗಳನ್ನು ಹೇಳುತ್ತಲೇ ಇರಬೇಕಾಗುತ್ತದೆ, ಆದರೆ ಸತ್ಯ ಒಮ್ಮೆ ಹೇಳಿದರೆ ಸಾಕು. ಸುಳ್ಳು ಮತ್ತು ಮೋಸವೆನ್ನುವುದು ಒಂದಲ್ಲ ಒಂದು ದಿನ ನಮ್ಮನ್ನು ಸಂಕಷ್ಟದಲ್ಲಿ ಸಿಲುಕಿಸುತ್ತದೆ. ಆದರೆ ಸತ್ಯ ಮತ್ತು ಪ್ರಾಮಾಣಿಕತೆ ಇದ್ದರೆ, ಗೆಲುವು ಯಾವತ್ತಾದರೂ, ನಮ್ಮ ಕಡೆ ವಾಲುತ್ತದೆ.

ಪ್ರಾಮಾಣಿಕತೆಯಿಂದ ಯಾವುದೇ ಕೆಲಸವನ್ನು ಮಾಡಿದರೆ ಆಗ ಬೇರೆ ಕಡೆ ಹೆಚ್ಚು ಗಮನಹರಿಸಬೇಕೆಂದಿಲ್ಲ. ಒಂದು ವೇಳೆ ಮೋಸ ಮಾಡಿದರೆ ಯಾವಾಗ ಸಿಕ್ಕಿಬೀಳುತ್ತೇನೋ ಎನ್ನುವ ಭಯ ಪ್ರತಿ ಕ್ಷಣವು ಕಾಡುತ್ತಲೇ ಇರುತ್ತದೆ. ಸುಳ್ಳು ಹೇಳಿದರೆ ಅಥವಾ ಮೋಸ ಮಾಡಿರುವುದಕ್ಕೆ ಕ್ಷಮೆ ಕೇಳಿದರೆ ಮತ್ತೆ ಸುಳ್ಳು ಹೇಳಬೇಕೆಂದಿಲ್ಲ. ಮೋಸ ಮಾಡುತ್ತಲೇ ಇದ್ದರೆ ಅದನ್ನು ಮಾಡುತ್ತಲೇ ಇರಬೇಕೆಂದಿನಿಸುತ್ತದೆ. ಈ ಲೇಖನದಲ್ಲಿ ನಾವು ಪ್ರಾಮಾಣಿಕತೆಯಿಂದ ಇರಬೇಕಾದ ಕೆಲವೊಂದು ವಿಷಯಗಳ ಬಗ್ಗೆ ತಿಳಿಸಲಿದ್ದೇವೆ. ಇದರಿಂದ ನಿಮ್ಮ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗಲಿದೆ...

ನೆರವು ಯಾಚನೆ

ನೆರವು ಯಾಚನೆ

ಏನು ತಿಳಿಯದೆ ಇದ್ದರೆ ನೆರವು ಪಡೆಯಲು ಹಿಂಜರಿಯಬೇಡಿ. ಇದರಿಂದ ನೀವು ಹೆಚ್ಚಿನ ವಿಷಯ ತಿಳಿದುಕೊಳ್ಳಬಹುದು ಮತ್ತು ಸ್ನೇಹಪರವಾಗಬಹುದು.

ಅಸುರಕ್ಷತೆ

ಅಸುರಕ್ಷತೆ

ಇದು ನಿಮ್ಮನ್ನು ಏಕಾಂಗಿಯಾಗಿರಿಸಲು ಬಿಡದೆ ಸ್ಪರ್ಧಾತ್ಮಕವಾಗಿರುವಂತೆ ಮಾಡುತ್ತದೆ. ಅಸುರಕ್ಷತೆಯ ಭಾವನೆಯನ್ನು ನಿಮ್ಮ ಸಂಗಾತಿ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದರಿಂದ ಸಂಬಂಧವು ಉತ್ತಮವಾಗುವುದು.

ಉದ್ದೇಶ

ಉದ್ದೇಶ

ನೀವು ಯಾವ ರೀತಿಯ ಉದ್ದೇಶವನ್ನು ಹೊಂದಿದ್ದೀರಿ ಎನ್ನುವ ಬಗ್ಗೆ ಪ್ರಾಮಾಣಿಕವಾಗಿರುವುದು ತುಂಬಾ ಮುಖ್ಯ. ನಿಮ್ಮ ಉದ್ದೇಶವನ್ನು ಬಚ್ಚಿಟ್ಟುಕೊಂಡರೆ ಇದರಿಂದ ಬೇರೆಯವರಿಗೆ ತಪ್ಪು ಕಲ್ಪನೆ ಉಂಟಾಗಬಹುದು ಮತ್ತು ಅವರ ನಿರೀಕ್ಷೆಗಳು ಹೆಚ್ಚಾಗಿ ಅಂತಿಮವಾಗಿ ನಿರಾಶೆ ಉಂಟಾಗಬಹುದು.

ಮೌಲ್ಯಗಳು

ಮೌಲ್ಯಗಳು

ನೀವು ಬೆಳೆದು ಬಂದಿರುವ ಮೌಲ್ಯಗಳ ಬಗ್ಗೆ ಯಾವುದೇ ಮುಚ್ಚುಮರೆ ಮಾಡಬೇಡಿ ಅಥವಾ ಸುಳ್ಳು ಹೇಳಬೇಡಿ. ಮೌಲ್ಯಗಳನ್ನು ಮುಚ್ಚಿಡುವುದರಿಂದ ಹೆಚ್ಚಿನ ಕಿರಿಕಿರಿ ಮತ್ತು ಬೇರೆಯವರು ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು.

ನಿಮ್ಮ ಭಾವನೆ

ನಿಮ್ಮ ಭಾವನೆ

ಪ್ರೀತಿಪಾತ್ರರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಸಮಯ ಬಂದಾಗ ಅದನ್ನು ಮುಚ್ಚಿಡಲು ಪ್ರಯತ್ನಿಸಬೇಡಿ. ಭಾವನೆಗಳನ್ನು ಬಚ್ಚಿಡುವುದರಿಂದ ಮತ್ತಷ್ಟು ಗೊಂದಲ ಉಂಟಾಗಿ ಸಂಬಂಧಗಳಿಗೆ ತೊಂದರೆಯಾಗಬಹುದು.

ನೀವು ಯಾವ ರೀತಿಯ ವ್ಯಕ್ತಿ

ನೀವು ಯಾವ ರೀತಿಯ ವ್ಯಕ್ತಿ

ನಿಮ್ಮ ಸುತ್ತಲು ಇರುವವರು ನೀವು ಯಾವ ರೀತಿಯ ವ್ಯಕ್ತಿ ಎಂದು ತಿಳಿದುಕೊಳ್ಳಬೇಕು. ತುಂಬಾ ಸಮಯದಿಂದ ನೀವು ಅವರಿಗೆ ಮೋಸ ಮಾಡುತ್ತಿದ್ದೀರಿ ಎಂದು ತಿಳಿದರೆ ಅದನ್ನು ಸಹಿಸುವುದು ಅಸಾಧ್ಯವಾಗುತ್ತದೆ. ಇದರಿಂದ ಯಾವಾಗಲೂ ಪ್ರಾಮಾಣಿಕವಾಗಿರಿ.

English summary

Attention! Be Honest About These Things!

In our lives we need to be honest in almost everything we do. This reduces the hassles of making things complicated. One needs to be totally upfront and honest in everything that they do. This helps you keep your mind occupied with various other things rather than plotting or making excuses for the things that you have done. Here, in this article, we've shared details on some of the things that we need to be honest about. These are the things that will help you build your character in a better way.
Story first published: Tuesday, July 26, 2016, 20:16 [IST]
X
Desktop Bottom Promotion