For Quick Alerts
ALLOW NOTIFICATIONS  
For Daily Alerts

ಮದುವೆ ಮುಂಚೆ ಡೇಟಿಂಗ್, ಸರಿಯೋ? ತಪ್ಪೋ?

By Deepu
|

ನಮ್ಮ ಭಾರತ ದೇಶದಲ್ಲಿ ಅಪ್ಪ-ಅಮ್ಮ ನೋಡಿ ಮಾಡಿದ ವ್ಯವಸ್ಥಿತ ಮದುವೆ ಅಥವಾ ಅರೆಂಜ್ಡ್ ಮ್ಯಾರೇಜ್‌ಗಳಿಗೆ ಹೆಚ್ಚಿನ ಬೆಲೆ ಇರುತ್ತದೆ. ಇವುಗಳಲ್ಲಿ ಸ್ಥಿರತೆ ಇದ್ದು, ನಂಬಿಕೆ ಮತ್ತು ಬೆಂಬಲ ಎಲ್ಲವೂ ಇರುತ್ತದೆ. ಹಾಗೆಂದು ನಮ್ಮ ದೇಶದಲ್ಲಿ ಪ್ರೀತಿಸಿ ಮದುವೆಯಾಗುವವರು ಯಾರೂ ಇಲ್ಲ ಎಂದುಕೊಳ್ಳಬೇಡಿ. ಪ್ರೀತಿಸಿ ಮದುವೆಯಾಗಿ ಅಥವಾ ಕುಟುಂಬದವರು ನೋಡಿ ಒಪ್ಪಿರುವವರನ್ನು ಮದುವೆಯಾಗಿ ಅದು ಬೇರೆ ಪ್ರಶ್ನೆ. ಆನ್‌ಲೈನ್ ಡೇಟಿಂಗ್ ಮಾಡುತ್ತಿರುವ ಹುಡುಗಿಯರೇ ಸ್ವಲ್ಪ ಹುಷಾರ್!

ಆದರೆ ಮದುವೆಗೆ ಮೊದಲು ಸ್ವಲ್ಪ ಕಾಲಾವಕಾಶ ಇರುತ್ತದೆ. ಆ ಕಾಲದಲ್ಲಿ ನೀವು ಇಬ್ಬರು ಒಟ್ಟಿಗೆ ಡೇಟಿಂಗ್ ಮಾಡಿ. ಇದೇನಪ್ಪಾ ಇಂತಹ ಸಲಹೆ ಎಂದುಕೊಂಡಿರಾ? ಹೌದು, ಮದುವೆ ಎನ್ನುವುದು ಜನ್ಮ ಜನ್ಮದ ಅನುಬಂಧ. ಅದರ ಒಳಗೆ ಹೋಗಲು ನಿಮಗೆ ಒಳ್ಳೆಯ ಸ್ವಾಗತ ದೊರೆಯುತ್ತದೆ. ಹೊರಗೆ ಬರುವುದು ತುಂಬಾ ಕಷ್ಟ. ಹಾಗಾಗಿ ಮದುವೆಯಾಗಿ ಜೀವನವನ್ನು ಆರಂಭಿಸುವ ಮೊದಲು ಸ್ವಲ್ಪ ದಿನ ಡೇಟಿಂಗ್ ಮಾಡಿ ಎಂದು ಹೇಳುತ್ತಿರುವುದು. ಡೇಟಿಂಗ್ ಎಂದ ಕೂಡಲೆ ತಪ್ಪಾಗಿ ಗ್ರಹಿಸಬೇಡಿ.

ನೀವು ಡೇಟಿಂಗ್ ಮಾಡುತ್ತಿರುವುದು ನಿಮ್ಮ ಬಾಳ ಸಂಗಾತಿಯಾಗುವವರ ಜೊತೆಗೆ, ಇಷ್ಟಕ್ಕೂ ಡೇಟಿಂಗ್ ಎಂದರೆ ಕೇವಲ ಪ್ರಣಯ ಅಷ್ಟೇ ಅಲ್ಲ, ಬದಲಿಗೆ ಅವರ ಜೊತೆಗೆ ಸುತ್ತಾಡಿ, ಪರಿಸ್ಥಿತಿಗಳಿಗೆ ಆಕೆ/ಆತ ಹೇಗೆ ಸ್ಪಂದಿಸುತ್ತಾರೆ ಎಂದು ತಿಳಿದುಕೊಳ್ಳುವುದಾಗಿರುತ್ತದೆ. ಡೇಟಿಂಗ್ ವಿಷಯದಲ್ಲಿ ಹುಡುಗಿಯರಿಗೆ ನಾಚಿಕೆ ಜಾಸ್ತಿಯಂತೆ!

ಇದರಿಂದ ನಿಮ್ಮ ಬಾಳ ಸಂಗಾತಿಯ ರುಚಿ ಮತ್ತು ಅಭಿರುಚಿಗಳು ನಿಮಗೆ ಗೊತ್ತಾಗುತ್ತವೆ ಮತ್ತು ಅವರಲ್ಲಿರುವ ಲೋಪ ದೋಷಗಳು ಸಹ ನಿಮಗೆ ಬೇಗ ಗೊತ್ತಾಗುತ್ತದೆ. ಮುಂದೆ ಅರ್ಥ ಮಾಡಿಕೊಂಡು ಬದುಕಲು ಇದರಿಂದ ಅನುಕೂಲವಾಗುತ್ತದೆ. ಬನ್ನಿ ಮದುವೆಗೆ ಮೊದಲು ಡೇಟಿಂಗ್ ಹೋಗುವುದರಿಂದ ನಿಮಗೆ ದೊರೆಯುವ ಲಾಭಗಳ ಕುರಿತು ತಿಳಿದುಕೊಳ್ಳೋಣ....

ಮನಬಿಚ್ಚಿ ಮಾತನಾಡಬಹುದು

ಮನಬಿಚ್ಚಿ ಮಾತನಾಡಬಹುದು

ಮದುವೆಗೆ ಮೊದಲು ಬಾಳಸಂಗಾತಿಗಳಾಗುವವರು ಅಧಿಕವಾಗಿ ಪರಸ್ಪರ ಮಾತನಾಡಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಅದರಲ್ಲಿಯೂ ಫೋನ್‌ಗಳಲ್ಲಿ ಗಂಟೆಗಟ್ಟಲೆ ಮಾತನಾಡಿಕೊಳ್ಳುವ ಪರಿಪಾಠ ಇವರಲ್ಲಿ ಇರುತ್ತದೆ. ಹಾಗಾಗಿ ಫೋನ್ ಮೂಲಕ ಅಥವಾ ಮನೆಯಲ್ಲಿ ಭೇಟಿಯಾಗುವ ಸ್ವಲ್ಪ ಸಮಯ ಮಾತನಾಡಲು ಸಾಧ್ಯವಾಗದಷ್ಟು ಮಾತುಗಳನ್ನು ಡೇಟಿಂಗ್ ಮಾಡುವಾಗ ಮಾತನಾಡಬಹುದು. ಡೇಟಿಂಗ್‌ನಿಂದ ಇದೊಂದು ಅನುಕೂಲ ಸಿಕ್ಕುತ್ತದೆ. ಮಾತನಾಡಲು ನಿಮಗೆ ಏಕಾಂತ ಮತ್ತು ಸಮಯಾವಕಾಶ ಎರಡೂ ಸಹ.

ಸಂಗಾತಿಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಬಹುದು

ಸಂಗಾತಿಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಬಹುದು

ಡೇಟಿಂಗ್ ಮಾಡುವಾಗ ನೀವು ನಿಮ್ಮ ಸಂಗಾತಿಯ ಕುರಿತು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಅವರು ಎಷ್ಟೇ ನಿಮ್ಮಿಂದ ಮರೆಮಾಚಿಕೊಂಡು ಈ ಅವಧಿಯಲ್ಲಿ ನಡೆದುಕೊಂಡರು ಸಹ, ಅವರ ಕುರಿತು ಒಂದು ಚಿತ್ರಣ ನಿಮಗೆ ಸಿಕ್ಕುತ್ತದೆ. ಮುಂದೆ ಅವರ ನಿಜ ಸ್ವರೂಪವನ್ನು ನೋಡಿದಾಗ ನಿಮಗೆ ಅಚ್ಚರಿಯಾಗಬಾರದು ಎಂದಾದಲ್ಲಿ, ಮದುವೆಗೆ ಮೊದಲು ಅವರ ಜೊತೆಗೆ ಸ್ವಲ್ಪ ದಿನ ಓಡಾಡಿ ಆಗ ಅವರ ಕುರಿತು ನಿಮಗೆ ಗೊತ್ತಾಗುತ್ತದೆ.

ನಿಮ್ಮ ನಿರೀಕ್ಷೆಗಳ ಕುರಿತು ಹೇಳಿಕೊಳ್ಳಬಹುದು

ನಿಮ್ಮ ನಿರೀಕ್ಷೆಗಳ ಕುರಿತು ಹೇಳಿಕೊಳ್ಳಬಹುದು

ನೀವು ನಿಮ್ಮ ಬಾಳಸಂಗಾತಿಯಾಗುವವರ ಜೊತೆಗೆ ಹೊಂದಿಕೊಂಡ ತಕ್ಷಣ, ಅವರಿಗೆ ನಿಮ್ಮ ನಿರೀಕ್ಷೆಗಳ ಕುರಿತು ತಿಳಿಸಬಹುದು. ಜೊತೆಗೆ ಅವರ ನಿರೀಕ್ಷೆಗಳೇನು ಎಂದು ಸಹ ತಿಳಿದುಕೊಳ್ಳಬಹುದು. ಇವೆಲ್ಲವೂ ಮದುವೆಯಾದ ಮೇಲೆ ನೀವು ಏನು ಬಯಸುತ್ತೀರಾ? ಎಂಬ ಮಾಹಿತಿಯನ್ನು ತಿಳಿಸುತ್ತದೆ. ಇದಕ್ಕೆ ಡೇಟಿಂಗ್ ಪೂರಕ ವಾತಾವರಣವನ್ನು ಒದಗಿಸುತ್ತದೆ.

ಸಂಗಾತಿಯನ್ನು ಪರೀಕ್ಷಿಸುವ ಸದಾವಕಾಶದ

ಸಂಗಾತಿಯನ್ನು ಪರೀಕ್ಷಿಸುವ ಸದಾವಕಾಶದ

ಕೆಲವೊಮ್ಮೆ ಇವುಗಳೆಲ್ಲದರ ಜೊತೆಗೆ ನಿಮ್ಮ ಬಾಳ ಸಂಗಾತಿಯಾಗುವವರು ನಿಮಗೆ ಹೊಂದಿಕೊಳ್ಳುತ್ತಾರೆಯೇ? ಇಲ್ಲವೇ? ಎಂದು ಪರೀಕ್ಷಿಸುವ ಸದಾವಕಾಶದ ಜೊತೆಗೆ ಮದುವೆ ಮಾಡಿಕೊಳ್ಳಬೇಕೆ? ಅಥವಾ ನಿಶ್ಚಿತಾರ್ಥವನ್ನು ರದ್ದು ಮಾಡಬೇಕೆ? ಎಂದು ಸಹ ಈ ಡೇಟಿಂಗ್ ಸ್ಪಷ್ಟತೆಯನ್ನು ನೀಡುತ್ತದೆ.

English summary

Why Dating Before Marriage Is Good?

Though arranged marriages do have success rate, it can also be a good thing to date a lot before marriage. Of course, we are not recommending dating as many people as possible, but dating the person that you are planning marry, may have some advantages. Of course, dating doesn't mean only romance or getting intimate with the other person. It can mean just going out with that person and spending some time.
X
Desktop Bottom Promotion