For Quick Alerts
ALLOW NOTIFICATIONS  
For Daily Alerts

ಆಪ್ತ ಸಮಾಲೋಚನೆ ನಡೆಸಿ, ಸಮಸ್ಯೆ ಬಗೆಹರಿಸಿಕೊಳ್ಳಿ!

By Super
|

ದಾಂಪತ್ಯ ಎಂಬುದು ವಿಶ್ವದಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಜಟಿಲವಾದ ಸಂಬಂಧ. ಇಲ್ಲಿ ಎರಡು ಜೀವಗಳು ಬೇರೆ ಬೇರೆ ಸಾಮಾಜಿಕ, ಮನೋ ವೈಜ್ಞಾನಿಕ, ಆರ್ಥಿಕ ಮತ್ತು ದೈಹಿಕ ಹಿನ್ನಲೆಗಳೊಂದಿಗೆ ಬಂದು ಒಂದೇ ಕಡೆ ಕೂಡಿ ಇರುವ ಕಾಯಕವನ್ನು ನಡೆಸುತ್ತಾರೆ. ಆದರೆ ಇಲ್ಲಿ ಹೊಂದಿಕೊಂಡರೆ ಆ ಮನೆಯೇ ಸ್ವರ್ಗ...! ಜೀವನ ಪರ್ಯಂತ ಸುಖ, ಸಂತೋಷದಿಂದ ಕೂಡಿದ ಸಮಯವನ್ನು ಕಳೆಯಬೇಕೆಂದು ಪ್ರತಿಯೊಬ್ಬ ದಂಪತಿಗಳ ಆಸೆಯಾಗಿರುತ್ತದೆ. ಆದರೆ ಈ ಆಸೆಯು ಕೈಗೂಡಬೇಕಾದರೆ ನಾವು ನಮ್ಮ ಸಂಬಂಧದ ಬಗ್ಗೆ ಹಲವಾರು ಅಂಶಗಳನ್ನು ತಿಳಿದುಕೊಂಡಿರಬೇಕು. ಪ್ರೀತಿ ನಿಜಕ್ಕು ಅತ್ಯಂತ ಬಲಿಷ್ಟವಾದ ಶಕ್ತಿ, ಆದರೆ ಅದರಲ್ಲಿ ಸರ್ವಾಧಿಕಾರಿ ಪ್ರವೃತ್ತಿ ಮಾತ್ರ ಇರಬಾರದು.
ಸಾಮಾನ್ಯವಾಗಿ ಪ್ರತಿ ದಂಪತಿಗಳಲ್ಲಿಯೂ ಯಾವುದಾದರೊಂದು ವಿಷಯದಲ್ಲಿ ಒಮ್ಮತ ಮೂಡದೇ ಚಿಕ್ಕಪುಟ್ಟ ಕಲಹಗಳಾಗುವುದುಂಟು. ಸಂಪನ್ನ ಮತ್ತು ಸುಖಕರ ಜೀವನಕ್ಕೆ ಈ ಚಿಕ್ಕಪುಟ್ಟ ಜಗಳಗಳು ಅಗತ್ಯವೂ ಹೌದು. ಜೀವನದ ಸಿಹಿಕಹಿಗಳನ್ನು ಸಮನಾಗಿ ಹಂಚಿಕೊಂಡು ಬಾಳಿ ಎಂದೇ ವಿವಾಹದ ಮಂತ್ರಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಎಲ್ಲಾ ಧರ್ಮಗಳಲ್ಲಿಯೂ ಕಷ್ಟಸುಖಗಳನ್ನು ಸಮಾನವಾಗಿ ಹಂಚಿಕೊಂಡು ಉತ್ತಮ ಬಾಳನ್ನು ಬಾಳಿ ಎಂದೇ ಸಾರಲಾಗುತ್ತದೆ. ಅಂದರೆ ತಮ್ಮ ಸಂಗಾತಿಯ ಒಳ್ಳೆಯ ಗುಣಗಳನ್ನು ಸ್ವೀಕರಿಸಿದಂತೆ ಕೆಟ್ಟ ಗುಣಗಳನ್ನೂ ಸಹಿಸಿಕೊಳ್ಳಬೇಕಾಗುತ್ತದೆ. ಇದೇ ರೀತಿಯಲ್ಲಿ ತನ್ನ ಸಂಗಾತಿಗೆ ಇಷ್ಟವಾಗದ ನಡತೆಯನ್ನು ಅನಿವಾರ್ಯವಾಗಿ ಬಿಡಬೇಕಾಗುತ್ತದೆ. ಇವನು ತನ್ನ ಜೀವನ ಸಂಗಾತಿಯಾಗಲು ಅರ್ಹನೇ?

Why Counseling Isn't A Bad Idea?

ಇದೇ ಸುಖದಾಂಪತ್ಯದ ಗುಟ್ಟು. ಬೇರೆಯವರಿಗೆ ತಮ್ಮನ್ನು ಹೋಲಿಸಿಕೊಳ್ಳದೇ ತಮ್ಮ ಪಾಲಿಗೆ ಬಂದದ್ದನ್ನು ಅನುಭವಿಸುವ, ಮುಕ್ತ ಸಮಾಲೋಚನೆಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸಿ ಸಂಗಾತಿಯ ಅಭಿಪ್ರಾಯವನ್ನೂ ಪರಿಗಣಿಸುವ ಮೂಲಕ ಒಬ್ಬರನ್ನೊಬ್ಬರು ಗೌರವಿಸುವುದೇ ಸುಖವಾದ ಬಾಳಿನ ತಳಹದಿ. ಆದರೆ ಈ ತಳಹದಿಯನ್ನು ಅರಿಯದೇ ತಮ್ಮದೇ ಅಭಿಪ್ರಾಯವನ್ನು ಹೇರುವ ಮೂಲಕ ಇನ್ನೊಬ್ಬರ ಮೇಲೆ ಒಡೆತನ ಸಾಧಿಸುವುದಾದರೆ ಅದು ದಾಂಪತ್ಯವಲ್ಲ, ಗುಲಾಮಗಿರಿ. ವಿಚ್ಛೇದನಕ್ಕೆ ತಿರುಗಿದ ತೊಂಭತ್ತು ಶೇಖಡಾ ದಂಪತಿಗಳು ಎಡವುವುದೇ ಇಲ್ಲಿ.

ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಅರಿವಿರುವುದೇ ಇಲ್ಲ. ತಮ್ಮ ಮೊಲಕ್ಕೆ ಮೂರೇ ಕಾಲು ಎಂಬಂತೆ ಮಾತನಾಡುತ್ತಾ ತಮ್ಮ ಮೊಂಡುವಾದವನ್ನೇ ಮಂಡಿಸುತ್ತಾ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಲೇ ಹೋಗುತ್ತಾರೆ. ಈ ಹಂತದಲ್ಲಿ ಆಪ್ತ ಸಮಾಲೋಚನೆಯ ಅಗತ್ಯವಿದೆ. ಆಪ್ತ ಸಲಹೆಯನ್ನು ದಂಪತಿಗಳಿಗೆ ಹತ್ತಿರದಿಂದ ಬಲ್ಲವರಾದ ಹಿರಿಯರೇ ನಿಭಾಯಿಸಿದಷ್ಟೂ ಉತ್ತಮ. ಏಕೆಂದರೆ ನಂತರವೂ ಅವರು ಅಕ್ಕಪಕ್ಕದಲ್ಲಿಯೇ ಇದ್ದು ಗಮನಿಸುತ್ತಿರುವುದರಿಂದ ದಂಪತಿಗಳ ಬಿರುಕು ಇನ್ನಷ್ಟು ಬಿಗಡಾಯಿಸುವುದರಿಂದ ತಪ್ಪಿಸಬಹುದು. ಹಿರಿಯರಿಗೂ ತಿಳಿಸಬಾರದ ಖಾಸಗಿ ವಿಷಯವಿದ್ದರೆ ಅನುಭವಿ ಹಾಗೂ ವೃತ್ತಿಪರ ಸಮಾಲೋಚಕರ ಸಲಹೆ ಪಡೆಯಬಹುದು. ಆದರೆ ಸಮಾಲೋಚನೆಯಂತೂ ಅಗತ್ಯವಾಗಿದೆ. ಇದು ಏಕೆ ಅಗತ್ಯ ಎಂಬುದನ್ನು ಈಗ ನೋಡೋಣ.....

ನಿಮ್ಮ ಜಗಳಕ್ಕೆ ನಿಜವಾದ ಕಾರಣ ಏನು ಎಂಬುವುದು ಸ್ಪಷ್ಟವಾಗುತ್ತದೆ
ನೀವಿಬ್ಬರೂ ಯಾವ ಕಾರಣಕ್ಕೆ ಜಗಳ ಮಾಡುತ್ತಿದ್ದಿರೋ ಅದಕ್ಕೆ ಕಾರಣವನ್ನು ನಿಮ್ಮ ದೃಷ್ಟಿಕೋನದಿಂದ ಮಾತ್ರ ನೋಡುತ್ತಿದ್ದೀರಿ. ಆದರೆ ಇದನ್ನು ಭಿನ್ನ ದೃಷ್ಟಿಕೋನದಿಂದ ನೋಡುವ ಮೂರನೆಯ ವ್ಯಕ್ತಿ ನೀವಿಬ್ಬರೂ ಗಮನಿಸದ ಸಾಕಷ್ಟು ವಿಷಯಗಳನ್ನು ಗಮನಿಸಬಲ್ಲರು. ಅಂತೆಯೇ ಸಮಾಲೋಚಕರು ಈ ಬಗ್ಗೆ ನಿಮ್ಮ ಗಮನ ಸೆಳೆದು ನಿಮ್ಮ ನಡುವಣ ಭಿನ್ನಾಭಿಪ್ರಾಯಗಳನ್ನು ನಿವಾರಿಸಬಲ್ಲರು. ಅತ್ಯಂತ ಚಿಕ್ಕ ವಿಷಯವನ್ನೇ ಗಮನಿಸಲಾಗದೇ ಕೋಳಿ ಜಗಳ ಮಾಡಿಕೊಂಡು ಬಳಿಕ ಇದರ ಕಾರಣವನ್ನು ಸಮಾಲೋಚಕರು ತಿಳಿಸಿದ ಬಳಿಕ ಅವಾಕ್ಕಾಗಿ ಇಷ್ಟು ಚಿಕ್ಕ ವಿಷಯಕ್ಕೆ ನಾವು ಜಗಳ ಮಾಡಿದ್ದೇವೆಯೇ ಎಂದು ಚಕಿತರಾಗಿ ಐದೇ ನಿಮಿಷದಲ್ಲಿ ಕೈ ಕೈ ಹಿಡಿದುಕೊಂಡು ಹೊರನಡೆದ ದಂಪತಿಗಳ ಸಂಖ್ಯೆ ಬಹಳ ದೊಡ್ಡದಿದೆ. ಅಯ್ಯೋ ದೇವರೆ ನನಗೆ ಎಂತಹ ಗಂಡ ಸಿಕ್ಕಿ ಬಿಟ್ಟ!

ನಿಮ್ಮ ದುಃಖಕ್ಕೆ ಸಾಂತ್ವಾನ ದೊರಕಬಹುದು
ಸಂತೋಷ ಹಂಚಿದಷ್ಟೂ ಹೆಚ್ಚಾಗುತ್ತದೆ, ದುಃಖ ಹಂಚಿಕೊಂಡಷ್ಟೂ ಕಡಿಮೆಯಾಗುತ್ತದೆ ಎಂಬ ಸುಭಾಷಿತವೊಂದಿದೆ. ಎಷ್ಟೋ ದಂಪತಿಗಳ ನಡುವೆ ಅನುಮಾನದ ಭೂತ ಕಾಡುತ್ತದೆ. ಇದರ ಮೂಲಕ ಉದ್ಭವವಾದ ಅಸಮಾಧಾನ ಇಬ್ಬರೇ ಇದ್ದಾಗ ಭುಗಿಲೇಳುತ್ತದೆ. ಮನದಲ್ಲಿ ಸಾವಿರಾರು ಋಣಾತ್ಮಕ ಆಲೋಚನೆಗಳು ಮೂಡುತ್ತವೆ. ಕಾಲ ಸರಿದಂತೆ ಇಲ್ಲಸಲ್ಲದ್ದನ್ನೇ ಯೋಚಿಸಿಕೊಂಡು ಹಾಗಿರಬಹುದು ಹೀಗಿರಬಹುದು ಎಂಬ ತಪ್ಪುಕಲ್ಪನೆ ಮೂಡಿ ಕೆಲಸಮಯದ ಬಳಿಕ ಈ ಕಲ್ಪನೆಗಳೇ ಸತ್ಯ ಎಂಬ ಭಾವನೆ ದಟ್ಟವಾಗುತ್ತಾ ಹೋಗುತ್ತದೆ. ಈ ಪರಿಸ್ಥಿತಿಯಲ್ಲಿ ತಮ್ಮ ಮನದ ಮಾತುಗಳನ್ನು ಹೊರಗೆಡವದೇ ಹೋದರೆ ಮಾನಸಿಕ ರೋಗ ಆವರಿಸಬಹುದು. ಆದರೆ ಈ ಮಾತುಗಳನ್ನು ಕೇಳುವ ಆಪ್ತರು ಇಲ್ಲದಿದ್ದರೆ ಮಾನಸಿಕರಾಗಿ ಜರ್ಝರಿತರಾಗುತ್ತಾ ಹೋಗುತ್ತಾರೆ. ಆಪ್ತ ಸಮಾಲೋಚಕರೊಂದಿಗೆ ಈ ವಿಷಯಗಳನ್ನು ಒಮ್ಮೆ ಹೇಳಿ ಮುಗಿಸಿಬಿಟ್ಟರೆ ಸಾಕು, ಮನದ ಭಾರ ಎಷ್ಟೋ ಕಡಿಮೆಯಾಗುತ್ತದೆ. ಇದಕ್ಕೆ ಪರಿಹಾರ ಸಿಗಲೀ, ಸಿಗದೇ ಇರಲಿ, ಮಾನಸಿಕ ರೋಗಕ್ಕೆ ತುತ್ತಾಗುವುದರಿಂದಂತೂ ಬಚಾವಾದಂತಾಗುತ್ತದೆ.

ಸಮಾಲೋಚಕರು ಅಪರಿಚಿತರಾಗಿದ್ದರೆ ನಿಮ್ಮ ಬಗ್ಗೆ ಬೇಧಭಾವವಾಗುತ್ತಿದೆ ಎಂಬ ಭಾವನೆ ಇರುವುದಿಲ್ಲ
ಸಾಮಾನ್ಯವಾಗಿ ಆಪ್ತ ಸಮಾಲೋಚಕರು ತಮ್ಮ ಸಂಬಂಧಿಗಳ ಪರಿವಾಗಿಯೇ ಮಾತನಾಡುತ್ತಾರೆ. ಒಂದು ವೇಳೆ ಅವರದ್ದೇ ತಪ್ಪಿದ್ದರೂ ಬಾಂಧವ್ಯ ಬಿಡಲಾಗದೇ ಅನಿವಾರ್ಯವಾಗಿ ಬಂಧುವಿನ ಪರವನ್ನೇ ವಹಿಸಿಕೊಳ್ಳಬೇಕಾಗುತ್ತದೆ. ಆತ್ಮಾಭಿಮಾನವುಳ್ಳವರು ಮಾತ್ರವೇ ಸತ್ಯದ ಪರ ವಹಿಸುತ್ತಾರೆ. ಆದರೆ ದಂಪತಿಗಳಲ್ಲಿ ಸಮಾಲೋಚಕರು ತಮ್ಮ ಸಂಗಾತಿಯ ಬಂಧುವಾಗಿದ್ದರೆ ಅವರ ಪರವಾಗಿಯೇ ಮಾತನಾಡುತ್ತಾರೆ ಎಂಬ ದುಗುಡ ಮೂಡುತ್ತದೆ. ಈ ಪರಿಸ್ಥಿತಿಯಲ್ಲಿ ಸಮಾಲೋಚಕರು ವೃತ್ತಿಪರರಾಗಿದ್ದು ಇಬ್ಬರಿಗೂ ಅಪರಿಚಿತರಾಗಿದ್ದರೆ ಈ ದುಗುಡ ಇರುವುದಿಲ್ಲ.

ಒಂದು ವೇಳೆ ಸಮಾಲೋಚನೆಯೂ ಫಲನೀಡದಿದ್ದರೆ?
ಬಹುತೇಕ ಸಂದರ್ಭಗಳಲ್ಲಿ ಸಮಾಲೋಚಕರು ದಂಪತಿಗಳ ನಡುವಣ ಸಮಸ್ಯೆಯನ್ನು ಪರಿಹರಿಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸುತ್ತಾರೆ. ಈ ಮೂಲಕ ಸಂಬಂಧ ಮತ್ತೆ ಸುಲಲಿತವಾಗುತ್ತದೆ. ಕೆಲವೊಮ್ಮ ಸಮಸ್ಯೆ ಸಮಾಲೋಚಕರ ಕೈಮೀರುತ್ತದೆ. ಆಗ ಅವರೇ ಈ ಸಂಬಂಧ ಮತ್ತೆ ಮುಂದುವರೆಯುವುದು ಸಲ್ಲದು ಎಂಬ ನಿರ್ಧಾರಕ್ಕೆ ಬರುತ್ತಾರೆ. ದಂಪತಿಗಳು ಆಪ್ತ ಸಮಾಲೋಚನೆಯ ಬಳಿಕವೂ ಒಂದಾಗದೇ ಇದ್ದರೆ ಬೇರೆಯಾಗುವುದೇ ಸೂಕ್ತ ಎಂಬ ನಿರ್ಧಾರ ಸರಿ ಎಂದು ಸಮಾಧಾನಪಟ್ಟುಕೊಳ್ಳಬಹುದು. ಆದರೆ ಈ ನಿರ್ಧಾರ ಅತ್ಯಂತ ಕಡೆಯದಾಗಿದ್ದು ಬೇರೆ ಯಾವುದೇ ಕ್ರಮ ಸಾಧ್ಯವೇ ಇಲ್ಲ ಎಂದಾಗ ಮಾತ್ರ ಅನಿವಾರ್ಯವಾಗಿ ಕೈಗೊಳ್ಳಬೇಕೇ ಹೊರತು ಒಂದಾಗುವ ಶೇಖಡಾ ಒಂದು ಸಾಧ್ಯತೆಯಿದ್ದರೂ ಈ ಸಾಧ್ಯತೆಯನ್ನೇ ಪರಿಗಣಿಸಬೇಕು.

English summary

Why Counseling Isn't A Bad Idea?

When some couples seem to be happy all the time time, some couples may experience marriage problems after 20 years of togetherness. Some couples find it difficult to live with each other even for a second soon after they find that they're incompatible.
X
Desktop Bottom Promotion