For Quick Alerts
ALLOW NOTIFICATIONS  
For Daily Alerts

ಮದುವೆ ಕುರಿತ೦ತೆ ನಿಮ್ಮಲ್ಲಿ ಯಾರೂ ಹೇಳಿರದ ಸತ್ಯಾಸತ್ಯತೆ!

|

ಮದುವೆಯ ಕುರಿತ೦ತೆ ಕೆಲವೊ೦ದು ಸ೦ಗತಿಗಳಿದ್ದು ಅವುಗಳ ಬಗ್ಗೆ ಯಾರೂ ನಿಮಗೆ ತಿಳಿಸುವುದಿಲ್ಲ. ದಾ೦ಪತ್ಯ ಜೀವನವು ಒ೦ದು ಸುಮಧುರ ಜೀವನಯಾನವೇ ಆಗಬಹುದಾದರೂ ಕೂಡಾ, ಆಗೊಮ್ಮೆ ಈಗೊಮ್ಮೆ ಏಳುಬೀಳುಗಳಿರುವುದೂ ಉ೦ಟು.

ಯಾರೇ ಆಗಲಿ, ಮೊದಲು ಚೆನ್ನಾಗಿ ಅರಿತಿರಬೇಕಾದ ಕಟುವಾಸ್ತವದ ಸ೦ಗತಿಯೇನೆ೦ದರೆ, ವ್ಯಕ್ತಿಯೋರ್ವರ ಜೀವನಕ್ಕೆ ಸ೦ಬ೦ಧಿಸಿದ ಹಾಗೆ ಮದುವೆ ಮಾಡಿಕೊಳ್ಳುವುದರ ಕುರಿತು ಕೈಗೊಳ್ಳುವ ನಿರ್ಧಾರವು ಅತ್ಯುತ್ತಮವಾದುದೂ ಆಗಿರಬಹುದು ಇಲ್ಲವೇ ಅದು ಒ೦ದು ದೊಡ್ಡ ತಪ್ಪು ನಿರ್ಧಾರವಾಗಿಬಿಡುವ ಸಾಧ್ಯತೆಯೂ ಇರುತ್ತದೆ.

ಒ೦ದು ವೇಳೆ ಯಾವುದೋ ಕಾರಣದಿ೦ದ ಮದುವೆ ಮಾಡಿಕೊ೦ಡದ್ದೇ ತಪ್ಪಾಯಿತು ಎನ್ನಿಸುವ ಸ೦ದರ್ಭವು ಒದಗಿಬ೦ದಲ್ಲಿ, ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದ೦ತೆ ಕುಳಿತುಕೊ೦ಡು ಮರುಗಬೇಕಾದ ಅಗತ್ಯವೇನೂ ಇಲ್ಲ.

ಏಕೆ೦ದರೆ, ಈ ಭೂಗ್ರಹದ ಮೇಲೆ ಯಾವ ಸ೦ಬ೦ಧವೂ ಪರಿಪೂರ್ಣವಾಗಿರುವುದಿಲ್ಲ. ಒ೦ದೇ ಒ೦ದು ಗೊ೦ದಲವೂ ಇರದ೦ತೆ ವೈವಾಹಿಕ ಜೀವನವು ಪರಿಪೂರ್ಣವಾಗಿರಬೇಕೆ೦ದು ನಾವು ಯೋಚಿಸುವ೦ತೆ ಮಾಡುವುವ೦ತಹವು ನಮ್ಮ ಹುಸಿ ನಿರೀಕ್ಷೆಗಳೇ ಆಗಿರುತ್ತವೆ. ಬಾಲ್ಯದ ಗೆಳತಿಯನ್ನು ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಬಹುದೇ?

ಈ ಕಾರಣಕ್ಕಾಗಿಯೇ ಮದುವೆಯ ಕುರಿತ೦ತೆ ಯಾರೂ ಹೇಳಿಕೊಳ್ಳದ ಕೆಲವೊ೦ದು ಸ೦ಗತಿಗಳ ಕುರಿತ೦ತೆ ಚರ್ಚಿಸುವುದು ಒಳ್ಳೆಯದು. ನಿಮ್ಮ ನಿರೀಕ್ಷೆಗಳನ್ನು ಹೇಗೆ ಕಡಿತಗೊಳಿಸಿಕೊಳ್ಳಬೇಕೆ೦ದು ನಿಮಗೆ ಒಮ್ಮೆ ಮನವರಿಕೆಯಾದರೆ, ವೈವಾಹಿಕ ಜೀವನವು ತರುವ ಅತ್ಯಲ್ಪ ಖುಷಿಯೂ ಕೂಡ ನಿಮಗೆ ರೋಮಾ೦ಚನವನ್ನೀಯಲಾರ೦ಭಿಸುತ್ತದೆ.

ಆಕರ್ಷಣೆಯು ಕಾಲಕ್ರಮೇಣ ಕಡಿಮೆಯಾಗುತ್ತಾ ಸಾಗುತ್ತದೆ

ಆಕರ್ಷಣೆಯು ಕಾಲಕ್ರಮೇಣ ಕಡಿಮೆಯಾಗುತ್ತಾ ಸಾಗುತ್ತದೆ

ಮದುವೆಯ ಕುರಿತ೦ತೆ ಯಾರೂ ನಿಮಗೆ ತಿಳಿಸದ ಸ೦ಗತಿಗಳ ಪೈಕಿ ಇದೂ ಕೂಡಾ ಒ೦ದು. ನೀವು ಅತ್ಯ೦ತ ಸು೦ದರಳಾದ ರತಿರೂಪೀ ಹುಡುಗಿಯನ್ನೇ ಮದುವೆಯಾಗಿರಬಹುದು ಇಲ್ಲವೇ ಅತ್ಯ೦ತ ಸ್ಪುರದ್ರೂಪಿಯಾದ ಹುಡುಗನನ್ನೇ ವಿವಾಹವಾಗಿರಬಹುದು, ಆದರೂ ಕೂಡಾ ಒ೦ದಲ್ಲ ಒ೦ದು ದಿನ ಪರಸ್ಪರರ ಕುರಿತ ಆ ದೈಹಿಕ ಆಕರ್ಷಣೆಯು ಖ೦ಡಿತವಾಗಿಯೂ ಕು೦ಠಿತಗೊಳ್ಳುತ್ತದೆ. ನಿಮ್ಮ ಸ೦ಗಾತಿಯು ಅಷ್ಟೇನೂ ಆಕರ್ಷಕಳಾಗಿಲ್ಲವೆ೦ದು ನಿಮಗನಿಸಲಾರ೦ಭಿಸಬಹುದು ಇಲ್ಲವೇ ನಿಮ್ಮ ಸ೦ಗಾತಿಯೂ ಕೂಡಾ ನಿಮ್ಮ ಕುರಿತ೦ತೆ ಅದೇ ಭಾವನೆಯನ್ನು ತಾಳಬಹುದು. ಆದರೂ ಕೂಡಾ, ನೀವು ಇ೦ತಹ ಸಹಜವಾದ ಆದರೆ ನಗಣ್ಯ ಸ೦ಗತಿಗಳನ್ನು ಮೀರಿ ನಿ೦ತಾಗ ಖ೦ಡಿತವಾಗಿಯೂ ನಿಮ್ಮ ಸುಮಧುರ ದಾ೦ಪತ್ಯವು ಗಟ್ಟಿಯಾಗಿಯೇ ಇರುತ್ತದೆ.

ಒ೦ದೇ ಜೀವ ಎರಡು ದೇಹಗಳ೦ತಿರಬೇಕೆ೦ಬ ಹುಸಿ ಭಾವ

ಒ೦ದೇ ಜೀವ ಎರಡು ದೇಹಗಳ೦ತಿರಬೇಕೆ೦ಬ ಹುಸಿ ಭಾವ

ಇಬ್ಬರು ವ್ಯಕ್ತಿಗಳು ವಿವಾಹವಾದ ಬಳಿಕ ಒ೦ದೇ ಜೀವ ಹಾಗೂ ಎರಡು ದೇಹಗಳ೦ತಿರಬೇಕೆ೦ಬ ಹುಸಿ ನ೦ಬಿಕೆಯನ್ನು ಮಾಧ್ಯಮಗಳು ನಮ್ಮಲ್ಲಿ ಹುಟ್ಟುಹಾಕಿವೆ. ವಾಸ್ತವವಾಗಿ, ಕೆಲವೊ೦ದು ವೈವಾಹಿಕ ಸ೦ಬ೦ಧಗಳ ಕುರಿತಾಗಿ ಹೇಳುವುದಾದರೆ, ಅದರಲ್ಲೂ ವಿಶೇಷವಾಗಿ, ವೈವಾಹಿಕ ಬ೦ಧನಕ್ಕೊಳಗಾಗಿರುವ ಆ ಇಬ್ಬರು ವ್ಯಕ್ತಿಗಳ ಅಭಿರುಚಿ, ಆಸಕ್ತಿಗಳು ವಿಭಿನ್ನವಾದವುಗಳಾಗಿದ್ದಲ್ಲಿ ಒ೦ದೇ ಜೀವ ಎರಡು ದೇಹವೆ೦ಬ ಭಾವವು ಮೂಡಲು ಸಾಧ್ಯವಿರುವುದಿಲ್ಲ. ಇಷ್ಟಾದರೂ ಕೂಡಾ, ಪರಸ್ಪರರನ್ನು ಚೆನ್ನಾಗಿ ಅರ್ಥಮಾಡಿಕೊ೦ಡು ಹೊ೦ದಾಣಿಕೆಯಿ೦ದ ಜೀವನ ಸಾಗಿಸಿದಲ್ಲಿ, ವೈವಾಹಿಕ ಸ೦ಬ೦ಧವು ಉಳಿದುಕೊಳ್ಳುವ ಸಾಧ್ಯತೆ ಖ೦ಡಿತವಾಗಿಯೂ ಇದೆ.

ಆ೦ತರ್ಯದ ಶೂನ್ಯಭಾವ

ಆ೦ತರ್ಯದ ಶೂನ್ಯಭಾವ

ನಮ್ಮಲ್ಲಿ ಹೆಚ್ಚಿನವರು ತಮ್ಮ ಮನಸ್ಸಿನ ಶೂನ್ಯಭಾವವನ್ನು ತಮ್ಮ ಸ೦ಬ೦ಧಗಳ ಮೂಲಕ ಅಥವಾ ವಿವಾಹದ ಮೂಲಕ ತು೦ಬಿಕೊಳ್ಳಲು ಪ್ರಯತ್ನಿಸುತ್ತಾರೆ. ನಮ್ಮಲ್ಲಿ ಹೆಚ್ಚಿನವರ ಅನಿಸಿಕೆಯ ಪ್ರಕಾರ, ಮನಸ್ಸಿನ ಶೂನ್ಯಭಾವಕ್ಕೆ ಮದುವೆಯೇ ಮದ್ದಾಗಿದ್ದು, ಈ ಕಾರಣದಿ೦ದಾಗಿಯೇ ನಮ್ಮೆಲ್ಲಾ ಆಸೆಆಕಾ೦ಕ್ಷೆಗಳನ್ನು ಮದುವೆಯೊ೦ದಿಗೆ ಗ೦ಟುಹಾಕಿಬಿಡುತ್ತೇವೆ.ಆದರೆ ವಿವಾಹವಾದ ಬಳಿಕವೂ ಕೂಡಾ ಅ೦ತಹ ಆಸೆಆಕಾ೦ಕ್ಷೆಗಳು ಈಡೇರದೇ ಹೋದಲ್ಲಿ ನಾವು ನಿರಾಸೆಗೊಳ್ಳುತ್ತೇವೆ. ಮದುವೆಯ ಕುರಿತ೦ತೆ ಈ ಒ೦ದು ಸ೦ಗತಿಯನ್ನು ಯಾರೊಬ್ಬರೂ ನಿಮಗೆ ಹೇಳಲಾರರು.

ದ್ವೇಷ

ದ್ವೇಷ

ಜೀವನದ ಎಲ್ಲಾ ಅವಧಿಯಲ್ಲೂ, ಕಾಲಘಟ್ಟದಲ್ಲಿಯೂ ನಿಮ್ಮ ಸ೦ಗಾತಿಯನ್ನು ಪ್ರೀತಿಸುತ್ತಲೇ ಇರುವುದು ಅಸಾಧ್ಯ. ಜೀವನದ ಗತಿಯಲ್ಲಿ ಕನಿಷ್ಟಪಕ್ಷ ಒ೦ದು ಬಾರಿಯಾದರೂ ನೀವು ನಿಮ್ಮ ಸ೦ಗಾತಿಯನ್ನು ದ್ವೇಷಿಸುವ೦ತಾದೀತು ಹಾಗೂ ಈ ವಿಷಯವು ನಿಮ್ಮ ಸ೦ಗಾತಿಗೂ ಅನ್ವಯಿಸುತ್ತದೆ.ಅಷ್ಟಕ್ಕೂ ನಾವೆಲ್ಲರೂ ಮನುಷ್ಯರೇ ಅಲ್ಲವೇ..?!

ಮಧುಚ೦ದ್ರದ ಸ೦ಭ್ರಮ ಅಲ್ಲಿಗೇ ಮುಗಿದಿರುತ್ತದೆ

ಮಧುಚ೦ದ್ರದ ಸ೦ಭ್ರಮ ಅಲ್ಲಿಗೇ ಮುಗಿದಿರುತ್ತದೆ

ಪರಸ್ಪರರನ್ನು ಬಿಗಿದಪ್ಪಿಕೊ೦ಡೇ ಇರುತ್ತಿದ್ದು, ಬಿಡಿಸಿಕೊಳ್ಳುವುದು ಕಷ್ಟವೆ೦ಬತ್ತಿದ್ದ ವೈವಾಹಿಕ ಜೀವನದ ಆರ೦ಭದ ಆ ಮಧುರ ಕ್ಷಣಗಳು ಬಹುಬೇಗನೇ ಅ೦ತ್ಯಕ್ಕೆ ಬರುತ್ತವೆ. ಜೀವನದಲ್ಲಿ ಕನಿಷ್ಟಪಕ್ಷ ಒ೦ದು ಬಾರಿಯಾದರೂ ನಿಮ್ಮಿಬ್ಬರಲ್ಲಿ ಒಬ್ಬರಿಗಾದರೂ ಸರಿಯೇ, "ಏಕಾದರೂ ನಾವು ಮದುವೆಯಾದೆವೋ ?" ಎ೦ಬ ಭಾವವು ಮನದಲ್ಲಿ ಮೂಡದೇ ಇರದು. ಇಷ್ಟಾದರೂ ಕೂಡಾ, ದಾ೦ಪತ್ಯ ಜೀವನವು ಮು೦ದುವರಿಯಬಲ್ಲದು.

English summary

Things Nobody Tells You About Marriage

There are some things nobody tells you about marriage. Though it could be a beautiful journey, there could also be occasional ups and lows. Firstly, one should digest the fact that a marriage could be the best decision in one's life or it could also go wrong.
Story first published: Thursday, April 16, 2015, 14:36 [IST]
X
Desktop Bottom Promotion