For Quick Alerts
ALLOW NOTIFICATIONS  
For Daily Alerts

ದಂಪತಿಗಳ ವಿವಾಹ ವಿಚ್ಛೇದನ ಅಂದುಕೊಂಡಷ್ಟು ಸುಲಭವಲ್ಲ!

By Super
|

ವಿವಾಹ ಎಂಬ ಪದವೇ ಎಷ್ಟು ಸುಂದರ, ಎಷ್ಟು ರೋಮಾಂಚಕ! ಇಬ್ಬರು ವ್ಯಕ್ತಿಗಳು ತಮ್ಮ ಮುಂದಿನ ಇಡಿಯ ಜೀವನವನ್ನು ಒಬ್ಬರಿಗೊಬ್ಬರು ಸಂಗಾತಿಗಳಾಗಿ ಕಳೆಯಲು ಸಂಕಲ್ಪತೊಡುವ, ಗುರುಹಿರಿಯರ ಆಶೀರ್ವಾದ ಪಡೆದು ನಡೆಸುವ ಹೊಸ ಜೀವನದ ಪ್ರಾರಂಭ. ಭಾರತೀಯ ಸಂಸ್ಕೃತಿಯಲ್ಲಂತೂ ಮದುವೆ ಎಂದರೆ ಗಂಡು ಹೆಣ್ಣುಗಳ ನಡುವೆ ಆಗುವ ಸಂಬಂಧಕ್ಕಿಂತಲೂ ಎರಡು ಕುಟುಂಬಗಳ ನಡುವೆ ಆಗುವ ಸಂಬಂಧವೆಂದೇ ಹೇಳಬಹುದು. ಆದರೆ ಎಲ್ಲಾ ಮದುವೆಗಳು ಸುಖಮಯವಾಗಿರುವುದಿಲ್ಲ!

ಮದುವೆಯ ಬಳಿಕ ಸತಿ ಪತಿಯರು ತಮ್ಮ ಸಂಗಾತಿಗಳಲ್ಲಿ ಆಕ್ಷೇಪಿಸಿದ್ದ ಗುಣಗಳು ಕಂಡುಬರದೇ ಅಥವಾ ಬೇರಾವುದೋ ಕಾರಣಕ್ಕೆ ಸಾಂಗತ್ಯ ಸರಿಬರದೇ ಪರಸ್ಪರ ದೂರಸರಿಯುವ ನಿರ್ಧಾರಕ್ಕೆ ಬರುತ್ತಾರೆ. ಸತಿ ಪತಿಯರಿಂದ ಹಿಡಿದು ಎರಡೂ ಕುಟುಂಬದವರಿಗೆ ಅತೀವ ಬೇಸರ, ನೋವು ತರಿಸುವ ಈ ಬೇರ್ಪಡುವಿಕೆ ಹಲವು ಮನಗಳ ನಡುವೆ ವಿರಸ ಮತ್ತು ಬಾಂಧವ್ಯ ಒಡೆಯಲು ಕಾರಣವಾಗುತ್ತವೆ. ವಿಚ್ಛೇದನಕ್ಕೆ ಮುನ್ನ ಈ ರೀತಿ ಮಾಡುವುದರಲ್ಲಿ ತಪ್ಪೇನು?

ವಿಚ್ಛೇದನ ಯಾವುದೋ ಸಕಾರಣಕ್ಕೆ ಆಗಿದ್ದರೂ ಸಮಾಜದ ದೃಷ್ಟಿಯಲ್ಲಿ ಇದು ತಪ್ಪೇ ಆಗಿದ್ದು ಸಮಾಜದಿಂದ ಹಲವಾರು ಟೀಕೆಗಳನ್ನು ಅನಿವಾರ್ಯವಾಗಿ ಎದುರಿಸಬೇಕಾಗುತ್ತದೆ. ಸತಿ ಪತಿಯರಿಗಿಂತಲೂ ಹೆಚ್ಚಾಗಿ ಇಬ್ಬರ ತಂದೆ ತಾಯಿಯರಿಗೆ ಈ ಟೀಕೆಗಳು ಅರ್ಜುನನ ಬಾಣಗಳಂತೆ ಹೃದಯಕ್ಕೇ ಇರಿಯುತ್ತವೆ. ಇವು ಪರೋಕ್ಷವಾಗಿ ಇನ್ನೂ ಹಲವು ವೈಮನಸು ಹಾಗೂ ನೋವುಗಳಿಗೆ ಕಾರಣವಾಗಬಹುದು. ಉದಾಹರಣೆಗೆ ಒಂದು ಮನೆಯ ಹೆಣ್ಣನ್ನು ಇನ್ನೊಂದು ಮನೆಗೆ ಸೊಸೆಯಾಗಿ ಕೊಟ್ಟು ಆ ಮನೆಯ ಹೆಣ್ಣನ್ನು ಸೊಸೆಯಾಗಿ ತಂದ ಬಳಿಕ ಅದರಲ್ಲಿನ ಎರಡು ಸಂಸಾರಗಳಲ್ಲಿ ಒಂದು ಸಂಸಾರ ಸುಖವಾಗಿಲ್ಲದೇ ವಿಚ್ಛೇದನಕ್ಕೆ ಒಳಗಾದಾಗ ಇದಕ್ಕೆ ಪ್ರತೀಕಾರದ ರೂಪದಲ್ಲಿ ಆ ಮನೆಯ ತಂದೆ ತಾಯಿಯರು ಬಲವಂತವಾಗಿ ತಮ್ಮ ಮನೆಯ ಸೊಸೆಗೆ ಮಗನಿಂದ ವಿಚ್ಚೇದನ ಕೊಡಿಸಿ ಆಕೆಯನ್ನು ತೌರಿಗೆ ಅಟ್ಟಿರುವ ಘಟನೆ ಎಂತಹವರಿಗಾದರೂ ಕಣ್ಣೀರು ತರಿಸುತ್ತದೆ. (ನಿಜ ಘಟನೆ) ಸಂಸಾರದಲ್ಲಿ ದುಃಸ್ವಪ್ನದಂತೆ ಕಾಡುವ ವಿಚ್ಛೇದನ!

ವಿಚ್ಛೇದನವನ್ನು ಅತ್ಯಂತ ಕಡೆಯ ಮತ್ತು ಅತ್ಯಂತ ಅನಿವಾರ್ಯವಾದ ನಿರ್ಧಾರವನ್ನಾಗಿ ಪಡೆದುಕೊಳ್ಳಬೇಕೇ ವಿನಃ ಜೊತೆ ಮುಂದುವರೆಯಲು ಒಂದು ಸಕಾರಣವಿದ್ದರೂ ಇದನ್ನು ಅಲ್ಲಗಳೆಯಬಾರದು ಎಂದು ಎಲ್ಲಾ ಧರ್ಮಗಳೂ, ಭಾರತೀಯ ಸಂವಿಧಾನವೂ ತಿಳಿಸುತ್ತದೆ. ಅಂತೆಯೇ ವಿಚ್ಛೇದನವನ್ನು ನ್ಯಾಯಾಲಯ ಒಮ್ಮೆಲೇ ನೀಡುವುದಿಲ್ಲ. ಅರ್ಜಿ ಹಾಕಿದ ಬಳಿಕ ಕೊಂಚ ಕಾಲಾವಕಾಶ ನೀಡಿ ಸಂಧಾನಕ್ಕೆ ಪ್ರಯತ್ನಿಸುತ್ತದೆ. ಅದಕ್ಕೂ ಹೊರತಾಗಿ ಸಂಧಾನವಾಗದಿದ್ದಲ್ಲಿ ಮಾತ್ರ ವಿಚ್ಛೇದನ ನೀಡಲಾಗುತ್ತದೆ. ಆದರೆ ವಿಚ್ಛೇದನದ ಬಳಿಕ ಯಾವ ರೀತಿಯಾದ ಟೀಕೆ ಮತ್ತು ತೊಂದರೆಗಳು ಎದುರಾಗುತ್ತವೆ ಎಂಬ ಬಗ್ಗೆ ಎಲ್ಲರಿಗೂ ಅರಿವಿರುವುದಿಲ್ಲ, ಏಕೆಂದರೆ ಅನುಭವಿಸಿದವರು ತಿಳಿಸುವುದೇ ಇಲ್ಲ. ಈ ನೋವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಇಂದು ಬೋಲ್ಡ್ ಸ್ಕೈ ತಂಡ ಹಂಚಿಕೊಳ್ಳುತ್ತಿದೆ...

ವಿಚ್ಛೇದನದ ಬಳಿಕ ಜೀವನ ನಿಜಕ್ಕೂ ದುರ್ಭರ

ವಿಚ್ಛೇದನದ ಬಳಿಕ ಜೀವನ ನಿಜಕ್ಕೂ ದುರ್ಭರ

ವಿವಾಹದ ಬಳಿಕ ದಂಪತಿಗಳ ರೂಪದಲ್ಲಿ ನೋಡಿದ್ದ ಸಮಾಜ ವಿಚ್ಛೇದಿತರ ರೂಪದಲ್ಲಿ ನೋಡಿದಾಗ ಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಎದುರಿಗಿರುವವರು ಏನೂ ಹೇಳದೇ ಇದ್ದರೂ ಅವರು ಈ ಬಗ್ಗೆ ಏನೆಂದುಕೊಳ್ಳುತ್ತಿದ್ದಾರೋ ಎಂದು ಅಳುಕುವ ಮನ ಜೀವನವನ್ನೇ ದುರ್ಭರವಾಗಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿಚ್ಛೇದನದ ಬಳಿಕ ಜೀವನ ನಿಜಕ್ಕೂ ದುರ್ಭರ

ವಿಚ್ಛೇದನದ ಬಳಿಕ ಜೀವನ ನಿಜಕ್ಕೂ ದುರ್ಭರ

ಭಾವನೆಗಳು ಋಣಾತ್ಮಕವಾಗಿದ್ದು ಸದಾ ಬೇಸರ, ದುಗುಡ, ಯಾವುದರಲ್ಲಿಯೂ ಆಸಕ್ತಿಯಿಲ್ಲದಿರುವಿಕೆ, ಎಲ್ಲವನ್ನೂ ತನ್ನ ವಿಚ್ಛೇದನಕ್ಕೆ ಸಂಬಂಧಿಸಿರುವಂತೆ ಕಲ್ಪಿಸಿಕೊಂಡು ಅಪಾರ್ಥ ಮಾಡಿಕೊಳ್ಳುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಇದು ಮಾನಸಿಕವಾಗಿ ವ್ಯಕ್ತಿಯನ್ನು ಬಲುವಾಗಿ ಕುಗ್ಗಿಸುತ್ತದೆ. ಸಮಾಜದ ಗೊಡವೆಯೇ ಬೇಡ ಎಂದು ಮನೆಯಲ್ಲಿಯೇ ಕುಳಿತಿದ್ದರೂ ಮನೆಯ ಕಿಟಕಿಯಿಂದ ಬರುವ ಟೀಕಾಸ್ತ್ರಗಳೇ ಮಾನಸಿಕವಾಗಿ ಕುಗ್ಗಿಸಲು ಸಮರ್ಥವಾಗಿವೆ.

ವಿಚ್ಛೇದನ ಸಾವಿಗೆ ಸಮಾನವಾದ ಅನುಭವ ನೀಡುತ್ತದೆ

ವಿಚ್ಛೇದನ ಸಾವಿಗೆ ಸಮಾನವಾದ ಅನುಭವ ನೀಡುತ್ತದೆ

ಸಾವು ಎಂದರೇನು? ಸುಲಭವಾಗಿ ಹೇಳಬೇಕೆಂದರೆ ಜೀವನದ ಕೊನೆ. ವಿಚ್ಛೇದನವೂ ಹೆಚ್ಚು ಕಡಿಮೆ ಇದೇ ಅನುಭೂತಿಯನ್ನು ನೀಡುತ್ತದೆ. ಜೀವನದ ಎಲ್ಲಾ ಚಟುವಟಿಕೆಗಳು ಏಕಾಏಕಿ ಸ್ತಬ್ಧಗೊಳ್ಳುತ್ತವೆ. ಈಗ ಉಳಿದಿರುವುದು ಹಿಂದಿನ ಸುಂದರ ನೆನಪುಗಳು ಮಾತ್ರ. ವಿಚ್ಛೇದನದ ಬಳಿಕ ಹಿಂದಿನ ನೆನಪುಗಳನ್ನು ಕೆದಕುವ ಯಾವುದೇ ವಸ್ತು ಅಥವಾ ಪ್ರಸಂಗ ಎದುರಾದರೆ ಅದು ಭಾವನಾತ್ಮಕವಾಗಿ ವ್ಯಕ್ತಿಯನ್ನು ಹಿಂಡಿ ಹಾಕಬಹುದು.

ವಿಚ್ಛೇದನದ ಬಳಿಕದ ಜೀವನ ಅತ್ಯಂತ ಬೇಸರಮಯವಾಗಿರುತ್ತದೆ

ವಿಚ್ಛೇದನದ ಬಳಿಕದ ಜೀವನ ಅತ್ಯಂತ ಬೇಸರಮಯವಾಗಿರುತ್ತದೆ

ದಂಪತಿಗಳಾಗಿದ್ದಾಗ ಇದ್ದ ಜೀವನಕ್ಕೂ ವಿಚ್ಛೇದನದ ಬಳಿಕದ ಜೀವನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಏಕೆಂದರೆ ಓರ್ವರ ಪತಿ ಅಥವಾ ಪತ್ನಿಯಾಗಿದ್ದಾಗ ಆಕೆಯ/ಆತನ ಕುರಿತಾದ ಹತ್ತು ಹಲವು ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದ್ದು ಈ ಕರ್ತ್ಯವ್ಯದಲ್ಲಿ ಎಲ್ಲರೂ ತಮ್ಮ ಜೀವನದ ಸಾರ್ಥಕತೆಯನ್ನು ಅನುಭವಿಸುತ್ತಾರೆ. ಅದರಲ್ಲೂ ಮಕ್ಕಳಾಗಿದ್ದರೆ ಮಕ್ಕಳ ಕುರಿತಾದ ಕರ್ತವ್ಯಗಳನ್ನು ಇಬ್ಬರೂ ಹಂಚಿಕೊಂಡಿದ್ದು ಪ್ರತಿದಿನವೂ ಜೀವನವನ್ನು ಪೂರ್ಣವಾಗಿ ಅನುಭವಿಸುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿಚ್ಛೇದನದ ಬಳಿಕದ ಜೀವನ ಅತ್ಯಂತ ಬೇಸರಮಯವಾಗಿರುತ್ತದೆ

ವಿಚ್ಛೇದನದ ಬಳಿಕದ ಜೀವನ ಅತ್ಯಂತ ಬೇಸರಮಯವಾಗಿರುತ್ತದೆ

ವಾಸ್ತವವಾಗಿ ಜೀವನ ಕಳೆಯಲು ಈ ಕರ್ತವ್ಯಗಳೇ ನಿಜವಾದ ಮೈಲಿಗಲ್ಲುಗಳು. ವಿಚ್ಛೇದನವಾಗುತ್ತಿದ್ದಂತೆಯೇ ಪತಿ/ಪತ್ನಿಯ ಕುರಿತಾದ ಕರ್ತವ್ಯಗಳೇ ಮಾಯವಾಗಿಬಿಡುವುದರಿಂದ ಅದರ ಮೂಲಕ ಲಭಿಸುವ ಸಾರ್ಥಕತೆಯೂ ಮಾಯವಾಗುತ್ತದೆ. ಇದು ಜೀವನದಲ್ಲಿ ಅತ್ಯಂತ ಬೇಸರ ತರಿಸುತ್ತದೆ.

ವಿಚ್ಛೇದನಕ್ಕೆ ವಿಶ್ವಾಸಘಾತುಕತನವೇ ಮುಖ್ಯ ಕಾರಣ

ವಿಚ್ಛೇದನಕ್ಕೆ ವಿಶ್ವಾಸಘಾತುಕತನವೇ ಮುಖ್ಯ ಕಾರಣ

ಇದುವರೆಗೆ ಆಗಿರುವ ವಿಚ್ಛೇದನಗಳ ಸಮೀಕ್ಷೆ ನಡೆಸಿದವರಿಗೆ ಹೆಚ್ಚಿನ ವಿಚ್ಛೇದನಗಳಿಗೆ ವಿಶ್ವಾಸಘಾತುಕತನವೇ ಪ್ರಮುಖ ಕಾರಣವಾಗಿ ಕಂಡುಬಂದಿದೆ. ಏಕೆಂದರೆ ಪತಿ ಪತ್ನಿಯರ ಸಂಬಂಧದಲ್ಲಿ ಪರಸ್ಪರ ವಿಶ್ವಾಸ ಅತ್ಯಂತ ಅಗತ್ಯವಾಗಿದ್ದು ಯಾವುದೋ ತಪ್ಪು ಅಭಿಪ್ರಾಯದಿಂದ ಇಬ್ಬರಲ್ಲೊಬ್ಬರು ತಮ್ಮ ಸಂಗಾತಿಯಲ್ಲಿ ಕೊಂಚವೂ ವಿಶ್ವಾಸ ಕಳೆದುಕೊಂಡರೆ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಈ ಬಿರುಕು ದೊಡ್ಡದಾಗಿ ಭರವಸೆಯ ಅಣೆಕಟ್ಟು ಒಡೆಯಲು ಹೆಚ್ಚಿನ ಸಮಯ ಬೇಕಾಗಿಲ್ಲ. ಬಿರುಕು ಮೂಡಲು ಇಬ್ಬರಲ್ಲಿ ಕನಿಷ್ಟ ಒಬ್ಬರಲ್ಲಿಯಾದರೂ ಇರುವ ಅಹಂಭಾವ ಇನ್ನೊಂದು ಮುಖ್ಯ ಕಾರಣವಾಗಿದೆ.

ವಿಚ್ಛೇದನ ಕ್ರಿಯೆ ಜಗಳರಹಿತವಲ್ಲ

ವಿಚ್ಛೇದನ ಕ್ರಿಯೆ ಜಗಳರಹಿತವಲ್ಲ

ವಿಚ್ಛೇದನ ಎಂದು ಒಂದೇ ಮಾತಿನಲ್ಲಿ ಹೇಳುವವರಿಗೆ ಇದರ ಕಷ್ಟಗಳೇನು ಎಂದು ತಿಳಿದಿಲ್ಲ. ವಕೀಲರ ಬೇಟಿ, ವಿಚ್ಛೇದನಕ್ಕೆ ಕಾರಣಗಳನ್ನು ವಿವರಿಸುವಾಗ ಎದುರಾಗುವ ಮುಜುಗರ, ಒಂದು ವೇಳೆ ಮಕ್ಕಳಾಗಿದ್ದರೆ ಅವರ ಯೋಗಕ್ಷೇಮದ ಮತ್ತು ಜವಾಬ್ದಾರಿಯ ಕುರಿತಾದ ಕಲಹ, ಹಣಕಾಸಿನ ಬಗ್ಗೆ ತಕರಾರು, ಮದುವೆ ಮತ್ತು ಆ ಬಳಿಕ ಆಗಿದ್ದ ಖರ್ಚುವೆಚ್ಚಗಳ ಬಗ್ಗೆ, ಆಸ್ತಿ, ಮನೆ, ಹಣಕಾಸಿನ ಕುರಿತು ಕೆಸರಿನ ಎರಚಾಟ, ಒಬ್ಬರ ತಪ್ಪು, ಅವಗುಣಗಳನ್ನು ಇನ್ನೊಬ್ಬರು ಜಗಜ್ಜಾಹೀರು ಮಾಡುವುದು, ಒಬ್ಬರ ನ್ಯೂನ್ಯತೆ, ಕುಂದು ಕೊರತೆ, ವ್ಯಯಕ್ತಿಕ ದೌರ್ಬಲ್ಯಗಳನ್ನು ಇನ್ನೊಬ್ಬರು ಹೀಯಾಳಿಸಿ ಊರ ತುಂಬಾ ಹರಡುವುದು ಮೊದಲಾದವು ಜೀವನವನ್ನೇ ದುರ್ಭರವಾಗಿಸುತ್ತವೆ. ಎಷ್ಟೋ ಸಲ ಈ ತೊಂದರೆಗಳೆಲ್ಲಾ ಎದುರಾಗುತ್ತಿದ್ದಂತೆಯೇ ಅಹಂಭಾವ ತೋರ್ಪಡಿಸಿದ್ದ ವ್ಯಕ್ತಿಗೆ ಜ್ಞಾನೋದಯವಾಗಿ ಕ್ಷಮಾಪಣೆ ಕೇಳಿದ ತಕ್ಷಣ ಆತನ/ಆಕೆಯ ಸಂಗಾತಿಯೂ ಕೂಡಲೇ ತನ್ನದೂ ತಪ್ಪು ಎಂದು ಕ್ಷಮಾಪಣೆ ಕೇಳಿ ಬಳಿಕ ಒಂದಾಗಿದ್ದೂ ಇದೆ.

ನಿಮ್ಮ ಮನೆಯವರು ಮೊದಲಿನಂತೆ ವರ್ತಿಸುವುದಿಲ್ಲ

ನಿಮ್ಮ ಮನೆಯವರು ಮೊದಲಿನಂತೆ ವರ್ತಿಸುವುದಿಲ್ಲ

ನಿಮ್ಮ ಮನೆಯವರು ಮತ್ತು ಸ್ನೇಹಿತರು ನಿಮ್ಮೊಂದಿಗೆ ವ್ಯವಹರಿಸಿದ್ದ ರೀತಿಯಲ್ಲಿಯೇ ವಿಚ್ಛೇದನದ ಬಳಿಕವೂ ವ್ಯವಹರಿಸುತ್ತಾರೆ ಎಂದು ಸರ್ವಥಾ ಭಾವಿಸುವಂತಿಲ್ಲ. ಏಕೆಂದರೆ ವಿಚ್ಛೇದನದ ಬಳಿಕ ಅವರಿಗೂ ನಿಮ್ಮಂತೆಯೇ ಸಂದಿಗ್ಧತೆ ಎದುರಾಗಿರುತ್ತದೆ. ಅವರೂ ಸಹಾ ನಿಮ್ಮಿಬ್ಬರಲ್ಲಿ ಒಬ್ಬರ ಪರವಾಗಿಯೇ ಮಾತನಾಡಬೇಕಾಗುತ್ತದೆ. ಅಥವಾ ಇಬ್ಬರಲ್ಲೊಬ್ಬರ ಜೊತೆ ಮಾತನಾಡುವಾಗ ಇನ್ನೊಬ್ಬರ ಬಗ್ಗೆ ಕೇಳಲಾಗದೇ ಇರಿಸು ಮುರಿಸು ಅನುಭವಿಸುತ್ತಾರೆ. ಅನಾಚೂನವಾಗಿ ಯಾವುದೋ ಮಾತು ತಮ್ಮಿಂದ ವಿಚ್ಛೇದಿತರ ನೋವನ್ನು ಇನ್ನಷ್ಟು ಹೆಚ್ಚಿಸುವುದು ಕಂಡುಬಂದರೆ ದುಃಖಿತರಾಗುತ್ತಾರೆ. ಇವರೊಂದಿಗೆ ಯಾವುದು ಮಾತನಾಡಬೇಕು, ಯಾವ ವಿಷಯ ಮಾತನಾಡಬಾರದು ಎಂಬ ದ್ವಂದ್ವದಲ್ಲಿ ಹೆಚ್ಚಿನವರು ವಿಚ್ಛೇದಿತರನ್ನು ಭೇಟಿಯಾಗುವುದನ್ನು ತಪ್ಪಿಸಿಕೊಳ್ಳುವುದೇ ಉತ್ತಮ ಎಂದು ಭಾವಿಸುತ್ತಾರೆ. ಮನೆಯವರಂತೂ ಸಮಾಜದ ಟೀಕೆಗಳಿಗೆ ತುತ್ತಾಗಿ ಅದಕ್ಕೆ ತಮ್ಮ ಮಕ್ಕಳೇ ಕಾರಣ ಎಂಬ ಸತ್ಯವನ್ನು ಮಕ್ಕಳ ಎದುರಿಗೇ ಹೇಳಲಾರದೇ ನೋವನ್ನು ನುಂಗುತ್ತಲೇ ಇರಬೇಕಾಗುತ್ತದೆ.

ನಿಮ್ಮ ಸಲಹೆಗಳನ್ನು ತಿಳಿಸಿ

ನಿಮ್ಮ ಸಲಹೆಗಳನ್ನು ತಿಳಿಸಿ

ದೇವರಿಗೂ ಇಷ್ಟವಿಲ್ಲದ ಈ ವಿಚ್ಛೇದನದಿಂದ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗ ಅನುಸರಿಸಬಹುದಾದರೂ ಆ ಬಗ್ಗೆ ನಿಮ್ಮ ಸಲಹೆ ಅಮೂಲ್ಯವಾಗಿದೆ. ನಿಮ್ಮ ಸಲಹೆಗಳನ್ನು ಕೆಳಗಿನ ಕಮೆಂಟ್ಸ್ ಸ್ಥಳದಲ್ಲಿ ಬರೆದು ತಿಳಿಸಿ, ಇದರಿಂದ ಒಂದು ಜೋಡಿ ದೂರವಾಗುವುದರಿಂದ ತಡೆದರೂ ಅದರ ಸಾವಿರ ಪಾಲು ಪುಣ್ಯ ನಿಮಗೆ ದೊರಕುತ್ತದೆ.

English summary

Things No One Tells You About Divorce

When you are ending up your marriage even for the good sake is a really tough decision. For every positive advice you get there are plenty of negative comments that overshadow your decision. There are many up's and lows that a couple go through during this tough time. Negative comments make an impact on the lives of couple and it makes them feel miserable and pathetic.
Story first published: Thursday, October 15, 2015, 10:52 [IST]
X
Desktop Bottom Promotion