For Quick Alerts
ALLOW NOTIFICATIONS  
For Daily Alerts

ಹಣದ ಮುಂದೆ ಪ್ರೀತಿ, ವಿಶ್ವಾಸಕ್ಕೆ ಬೆಲೆಯೇ ಇಲ್ಲವೇ?

|

ಇತ್ತೀಚೆಗೆ ನಡೆದ ಒಂದು ಅಧ್ಯಯನ ಪ್ರಕಾರ ಬಹುತೇಕ ಮಂದಿ ದಂಪತಿಗಳು ತಮ್ಮದೇ ಆದ ವೈಯುಕ್ತಿಕ ಬ್ಯಾಂಕ್ ಖಾತೆಯನ್ನು ಹೊಂದಲು ಬಯಸುತ್ತಾರಂತೆ. ಇದು ನಿಜಕ್ಕೂ ಆರೋಗ್ಯಕರ ಬೆಳವಣಿಗೆಯೇ? ಎಲ್ಲಿಯವರೆಗು ಮನೆ ಖರ್ಚಿಗೆಂದು ಇಬ್ಬರೂ ತಮ್ಮ ತಮ್ಮ ಪಾಲನ್ನು ಚಾಚೂತಪ್ಪದೇ ನೀಡುತ್ತಾರೆ ಅಲ್ಲಿಯವರೆಗು ಎಲ್ಲವೂ ಸರಿಯಿರುತ್ತದೆಯೆಂಬುದು ಬಹುತೇಕ ಮಂದಿ ತಙ್ಞರ ಅಭಿಪ್ರಾಯವಾಗಿದೆ.

ಹಾಗಾದರೆ ಸಂಬಂಧದಲ್ಲಿ ಹಣದ ಮಹತ್ವ ಏನು? ಸಂಶಯವೇ ಬೇಡ ಕೆಲವೊಮ್ಮೆ ಹಣವು ಸಂಬಂಧಗಳನ್ನು ಮುರಿದುಬಿಡುತ್ತದೆ. ನಾವೆಲ್ಲರು ಲೌಕಿಕ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಇಲ್ಲಿ ನಮಗೆ ರೋಟಿ, ಕಪಡಾ ಔರ್ ಮಖಾನ್‌ಗಿಂತ ಮತ್ತಷ್ಟು ಬೇಕು ಎಂಬ ಮನೋಭಾವ ಮನೆ ಮಾಡಿರುತ್ತದೆ. ಇಂತಹ ಸಂದರ್ಭದಲ್ಲಿ ಹಣವಿಲ್ಲದೆ ಹಲವಾರು ವಿಚಾರಗಳಿಂದ ಮತ್ತು ಸಂತೋಷದಿಂದ ನೀವು ವಂಚಿತರಾಗಿದ್ದರು ಸಹ ಮುಂದೊಂದು ದಿನ ನಿಮ್ಮ ಪರಿಸ್ಥಿತಿ ಬದಲಾಗುತ್ತದೆ ಎಂದು ಆಶಾಭಾವನೆ ಇರಿಸಿಕೊಳ್ಳುವುದು ಸೂಕ್ತ.

 The Role Of Money In Relationships

ಕೆಲವೊಮ್ಮೆ ಹಣದಿಂದ ನಮಗೆ ನಿರಾಸೆಯುಂಟಾದರೆ ಆಗ ನಾವು ಸಂಬಂಧಕ್ಕಿಂತ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುತ್ತೇವೆ. ಆಗ ನೋಡಿ ನಮ್ಮ ಸಂಬಂಧವು ಅತ್ಯಂತ ಕಠಿಣ ಸಮಸ್ಯೆಗಳಿಗೆ ಹೋಗಿ ನಿಂತು ಕೊಳ್ಳುತ್ತದೆ. ಆಗ ನಾವು ಹಣದ ವಿಚಾರದಲ್ಲಿ ಒಂದಷ್ಟು ಪ್ರಮಾಣಗಳನ್ನು ಮಾಡುತ್ತೇವೆ. ಆದರೆ ಅವುಗಳನ್ನು ಈಡೇರಿಸಲು ಸಾಧ್ಯವಾಗದೆ ಪರಿತಪಿಸುತ್ತೇವೆ, ಜೊತೆಗೆ ಇಂತಹ ಆಶ್ವಾಸನೆಗಳು ನಮ್ಮನ್ನು ಹಣದ ಕುರಿತು ಮತ್ತಷ್ಟು ಆಸೆ ಹೊಂದುವಂತೆ ಮಾಡುತ್ತವೆ.

ಏನಾದರು ಸರಿ ಸಂಬಂಧದಲ್ಲಿ ಹಣಕಾಸಿನ ಸಮಸ್ಯೆಯನ್ನು ನಾವು ಎದುರಿಸಲಾರದೆ ಇರಲಾರೆವು. ಅದೇ ಸಂದರ್ಭದಲ್ಲಿ ಹಣವು ನಿಮಗೆ ಒಳ್ಳೆಯ ಸಂಬಂಧವನ್ನು ನೀಡಲಾರದು ಎಂಬ ಮಾತು ಸಹ ಸತ್ಯ. ಹಾಗಾದರೆ ಸಂಬಂಧದಲ್ಲಿ ಹಣದ ಮಹತ್ವ ಏನು ಎಂಬ ಪ್ರಶ್ನೆಗೆ ಉತ್ತರ ಮುಂದಿದೆ ಓದಿ. ಮದುವೆಯ ಬಳಿಕ ಹುಡುಗಿಯರು ಏಕೆ ಇಷ್ಟೊಂದು ಬದಲಾಗಿ ಬಿಡುತ್ತಾರೆ?

ಬಡತನವು ಸುಖಕರವಲ್ಲ
ಸಂಬಂಧದಲ್ಲಿ ಸಂಗಾತಿಗಳ ನಡುವೆ ಸಾಕಷ್ಟು ಪ್ರೀತಿ ಇದ್ದರು ಸಹ, ಆಯಾ ದಿನದ ಹೊಟ್ಟೆ ಪಾಡು ಕಳೆಯಲಿಲ್ಲವಾದಲ್ಲಿ ಆ ಸಂಬಂಧ ತುಂಬಾ ದಿನ ಬದುಕುವುದಿಲ್ಲ. ಇಂತಹ ಸಂದರ್ಭ ಬಂದಾಗ ತೀರಾ ಅಪರೂಪವಾಗಿ ಸಂಗಾತಿಗಳು ಒಬ್ಬರ ಬೆಂಬಲಕ್ಕೆ ಒಬ್ಬರು ನಿಲ್ಲುತ್ತಾರೆ. ಬಡತನದಲ್ಲಿ ತುಂಬಾ ದೀರ್ಘಕಾಲ ಬದುಕಲು ಯಾರೂ ಬಯಸುವುದಿಲ್ಲ. ಇಂತಹ ಸಂದರ್ಭದಲ್ಲಿ ಯಾರಾದರು ಒಬ್ಬ ಸಂಗಾತಿ ಈ ಸಂಬಂಧದಿಂದ ಹೊರನಡೆಯುವ ನಿರ್ಧಾರಕ್ಕೆ ಬಂದರೆ ಆಶ್ಚರ್ಯ ಪಡಬೇಕಿಲ್ಲ.

ಹಣಕಾಸು ಸಮಸ್ಯೆಗಳು ಹತಾಶೆಯನ್ನುಂಟು ಮಾಡುತ್ತವೆ
ಯಾವಾಗ ಹಣದ ವಿಚಾರದಲ್ಲಿ ಏರುಪೇರುಗಳು ಉಂಟಾಗುತ್ತವೆಯೋ, ಆಗ ಸಂಬಂಧದಲ್ಲಿ ಹತಾಶೆಯುಂಟಾಗುತ್ತದೆ. ಯಾವಾಗ ಹಣಕಾಸಿನ ಸಮಸ್ಯೆಗಳು ದೀರ್ಘಕಾಲದವರೆಗೆ ಎಳೆದುಕೊಂಡು ಹೋಗುತ್ತವೆಯೋ, ಆಗ ಸಂಗಾತಿಯರಲ್ಲಿ ಒಬ್ಬರು ತೀವ್ರತರನಾದ ನಿರ್ಧಾರವನ್ನು ತೆಗೆದುಕೊಳ್ಳಲು ಹೋಗಬಹುದು. ಉದಾಹರಣೆಗೆ: ಗಂಡನಾದವನು ಹೆಂಡತಿಯ ಹಣದಲ್ಲಿ ಜೀವಿಸುವ ಪರಿಸ್ಥಿತಿಗೆ ಬಂದಾಗ, ಹೆಂಡತಿಗೆ ಇದರಿಂದ ಹತಾಶೆಯುಂಟಾಗಿ ಅವರ ಸಂಬಂಧ ಮುರಿದುಬೀಳುವ ಹಂತಕ್ಕೆ ಹೋಗಬಹುದು. ಇದರಿಂದ ಪಾರಾಗಲು ಈ ಸಂಬಂಧಕ್ಕೆ ಕಡಿಮೆ ಅವಕಾಶಗಳು ದೊರೆಯುತ್ತವೆ. ದಾಂಪತ್ಯದಲ್ಲಿ ಲೈಂಗಿಕತೆ, ಹಣ, ಸಂವಹನದ ಪಾತ್ರ

ಐಷಾರಾಮಿತನ ಸಂತೈಸಬಹುದು
ನಾವೆಲ್ಲರು ಐಷಾರಾಮಿತನವನ್ನು ಬಯಸುತ್ತೇವೆ ಎಂಬುದು ಸತ್ಯ. ಪ್ರೀತಿಯು ನಮ್ಮ ಹಸಿವನ್ನು ನೀಗುವುದಿಲ್ಲ. ಮನೆ-ಮಠ ಇಲ್ಲದೆ ಪ್ರೀತಿ ಮಾಡಲು ಹೋಗಬಾರದು. ಕನಿಷ್ಠ ಭದ್ರತೆ ಮತ್ತು ಕನಿಷ್ಠ ಸುಖ ಇದ್ದಲ್ಲಿ ನಿಮ್ಮ ಪ್ರೀತಿ ಸ್ವಲ್ಪ ದಿನ ಜೀವ ಹಿಡಿದುಕೊಂಡಿರುತ್ತದೆ.

ಆದರೆ.... ಹಣವೇ ಮುಖ್ಯವಲ್ಲ
ಹಣವು ಸಂಬಂಧಗಳನ್ನು ಮುರಿಯುವುದು ನಿಜವಾದರು, ಹಣವೇ ಮುಖ್ಯವೆಂದು ನಂಬಬಾರದು. ಹಣದಿಂದ ಪ್ರೀತಿಯನ್ನು ಕೊಳ್ಳಲಾಗುವುದಿಲ್ಲ. ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಹಣ ಮುಖ್ಯ. ಹಣಕಾಸಿನ ಭದ್ರತೆ ಜೀವನದಲ್ಲಿ ತುಂಬಾ ಮುಖ್ಯ. ಭದ್ರತೆ ಇಲ್ಲವಾದಲ್ಲಿ ಸಂಬಂಧಗಳು ಉಳಿಯುವುದು ಕಷ್ಟವಾಗುತ್ತದೆ.

English summary

The Role Of Money In Relationships

What is the role of money in relationships? Well, it goes without saying that money can sometimes break relationships easily. All of us love in a material world here food clothing shelter and some luxuries are necessary to live a life.
Story first published: Wednesday, April 22, 2015, 14:36 [IST]
X
Desktop Bottom Promotion