For Quick Alerts
ALLOW NOTIFICATIONS  
For Daily Alerts

ಪ್ರೀತಿ, ಪ್ರೇಮದ ಜೊತೆಗೆ ಸಂಬಂಧಕ್ಕೂ ಬೆಲೆ ನೀಡಿ

By Deepu
|

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ- ಎಂದು ಹಾಡುವಾಗ ನಾವು ನಮ್ಮ ಪ್ರೀತಿ ಪಾತ್ರರನ್ನು ಸಂತೋಷಪಡಿಸಲು ಏನೆಲ್ಲಾ ಬೇಕೋ ಅದನ್ನು ಮಾಡಲು ತಯಾರಾಗಿರುತ್ತೇವೆ. ಪ್ರೀತಿಯೇ ಹಾಗೆ ನಶೆಯನ್ನು ಏರಿಸುತ್ತಾ ಹೋಗುತ್ತದೆ, ಅದರ ನೋವು- ನಲಿವು ಎರಡು ಮಧುರಾತಿಮಧುರ...! ಮರಿಯಾಗಿದ್ದಾಗ ಕತ್ತೆಯೂ ಮುದ್ದಾಗಿಯೇ ಇರುತ್ತದೆ, ಎಂಬ ನಾಣ್ಣುಡಿಯಂತೆ ಪ್ರೀತಿಯಲ್ಲಿದ್ದಾಗಲೂ ಅಷ್ಟೇ, ಈಗ ತಾನೇ ಮೊಳೆಯುತ್ತಿರುವ ಪ್ರೀತಿಯಲ್ಲಿದ್ದಾಗ ಎಲ್ಲವೂ ಸುಂದರ, ಸತ್ಯ ಎಂದೇ ತೋರುತ್ತದೆ. ಅಷ್ಟೇ ಅಲ್ಲದೆ ಈ ಭರದಲ್ಲಿ ಪ್ರೇಮಿಗಳು ಒಬ್ಬರಿಗೊಬ್ಬರು ನೀಡುವ ಆಣೆ ಭಾಷೆಗಳು ಜೀವಮಾನದಾದ್ಯಂತ ಪಾಲಿಸುವ ಮಾತುಗಳಾಗುತ್ತವೆ.

ಆದರೆ ಕೆಲ ಕಾಲ ಕಳೆದಂತೆ ಪ್ರೀತಿ ಪ್ರೇಮದ ಅಮಲು ಇಳಿಯುತ್ತಿದ್ದ ಹಾಗೇ ನಿಜಜೀವನಕ್ಕೆ ಹೆಚ್ಚು ಹೆಚ್ಚು ಎದುರಾಗುತ್ತಿದ್ದಂತೆ ಈ ಆಣೆ ಭಾಷೆಗಳೆಲ್ಲಾ ಎಷ್ಟು ನಿರರ್ಥಕ ಎಂದು ಅರಿವಾಗಿತ್ತದೆ. ಪ್ರೀತಿಯ ಭರದಲ್ಲಿ ನೀಡಿದ ಭರವಸೆ ಹುಸಿಯಾದರೆ ಪ್ರೇಮದ ಕಂಭಗಳು ಉರುಳುತ್ತಾ ಕಡೆಗೆ ಸಂಬಂಧವೇ ಹಳಸುವ ಅಪಾಯವಿರುತ್ತದೆ...! ಹೌದು, ಇಂದಿನ ವಾಸ್ತವದ ಜೀವನದಲ್ಲಿ ನಾವು ಯಾವಾಗಲು ಸಂಗತಿಗಳನ್ನು ತುಂಬಾ ಆಳವಾಗಿ ನೋಡುವ ಗುಣಗಳನ್ನು ಬೆಳೆಸಿಕೊಂಡಿರುತ್ತೇವೆ. ಅದರಲ್ಲಿಯೂ ನಮಗೆ ಕೆಲವೊಮ್ಮೆ ತಪ್ಪುಗಳೇ ಕಾಣಿಸುತ್ತಿರುತ್ತವೆ. ಇನ್ನೂ ಕೆಲವೊಮ್ಮೆ ನಮಗೆ ಒಳ್ಳೆಯ ವಿಚಾರಗಳು ಕಾಣಿಸಿಕೊಂಡರು ಸಹ ಅವುಗಳ ಒಳ್ಳೆಯತನವನ್ನು ಗುರುತಿಸಲು ನಾವು ವಿಫಲರಾಗುತ್ತೇವೆ. ಇದರಿಂದ ನಿಮ್ಮ ಜೊತೆಗೆ ಸಂಬಂಧದಲ್ಲಿ ಇರುವವರಿಗೆ ಇದರಿಂದ ನೋವುಂಟಾಗುತ್ತದೆ.

ಹಾಗಾಗಿ ನಿಮ್ಮ ಸಂಬಂಧದಲ್ಲಿ ಸ್ಪಷ್ಟತೆಯನ್ನು ಇರಿಸಿಕೊಳ್ಳಿ, ನಿಮಗೆ ಏನು ಬೇಕು ಎಂಬುದನ್ನು ಇತರರಿಗೆ ಮನವರಿಕೆ ಮಾಡಿಕೊಡಿ. ಅದಕ್ಕಿಂತ ಹೆಚ್ಚಾಗಿ ನೀವು ನಿಮ್ಮ ಜೊತೆ ಸಂಬಂಧದಲ್ಲಿರುವವರನ್ನು ಅರ್ಥ ಮಾಡಿಕೊಂಡರೆ ಅದರಿಂದ ಅವರ ಮೇಲಿನ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಆಗ ನಿಮ್ಮ ಬಾಳ ಬಂಡಿ ಸುಗಮವಾಗಿ ಯಾವುದೇ ಅಡೆ-ತಡೆಗಳಿಲ್ಲದೆ ಸಾಗುತ್ತದೆ. ಇದು ನಿಮ್ಮನ್ನು ಒಬ್ಬ ಉತ್ತಮ ವ್ಯಕ್ತಿಯನ್ನಾಗಿ ಸಹ ಮಾಡುತ್ತದೆ. ಇದಕ್ಕಾಗಿ ನಾವು ಇಂದು ಸಂಬಂಧದ ಕುರಿತಾದ ಕೆಲವೊಂದು ಸಂಗತಿಗಳ ಕುರಿತು ತಿಳಿಸಿಕೊಡುತ್ತಿದ್ದೇವೆ. ಇವು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆಯೆಂಬುದರಲ್ಲಿ ಸಂಶಯವೇ ಇಲ್ಲ. ಬನ್ನಿ ಅವುಗಳು ಯಾವುವು ಎಂದು ತಿಳಿದುಕೊಳ್ಳಲು ಮುಂದೆ ಓದಿ....

ಕೆಲವೊಂದು ಸಂಬಂಧಗಳು ವರವಾಗಿದ್ದರೆ, ಕೆಲವೊಂದು ಪಾಠ ಕಲಿಸುತ್ತವೆ

ಕೆಲವೊಂದು ಸಂಬಂಧಗಳು ವರವಾಗಿದ್ದರೆ, ಕೆಲವೊಂದು ಪಾಠ ಕಲಿಸುತ್ತವೆ

ಎಲ್ಲಾ ಪ್ರೇಮ ಕತೆಗಳು ಸುಖಾಂತ್ಯವಾಗುತ್ತವೆ ಎಂದು ಹೇಳಲಾಗುವುದಿಲ್ಲ. ಯಾರನ್ನಾದರು ಪ್ರೀತಿಸುವುದನ್ನು ಆರಂಭಿಸುವುದು ನಮ್ಮ ಕೈಯಲ್ಲಿಲ್ಲ. ನಮ್ಮಲ್ಲಿ ಬಹುತೇಕರು ಕೆಟ್ಟ ವ್ಯಕ್ತಿಯ ಜೊತೆಗೆ ಪ್ರೀತಿಯಲ್ಲಿ ಬೀಳುತ್ತಾರೆ ಎಂಬುದನ್ನು ನಾವು ನೋಡಿರುತ್ತೇವೆ. ಹಾಗೆ ಒಂದು ವೇಳೆ ನಾವು ಸಹ ಪ್ರೀತಿಯಲ್ಲಿ ಬಿದ್ದರೆ, ಅದು ಸರಿಯಿಲ್ಲ ಎಂದು ಗೊತ್ತಾದ ಕೂಡಲೆ ಅದರಿಂದ ಹೊರಬರುವ ಪ್ರಯತ್ನ ಮಾಡಬೇಕು ಎಂದಲ್ಲ. ಯಾರಿಗೆ ಗೊತ್ತು, ಈ ಸಮಯಕ್ಕೆ ನಿಮ್ಮನ್ನು ಪ್ರೀತಿಸಲು ಕಾಯುತ್ತಿದ್ದವರು ಹೊರಟು ಹೋಗಿರಬಹುದು. ಇರುವ ಪ್ರೀತಿಯಲ್ಲಿ ತಪ್ಪುಗಳನ್ನು ಸರಿಪಡಿಸಿಕೊಂಡು- ಸರಿಗಳನ್ನು ಕಾಪಾಡಿಕೊಂಡು ಹೋಗುವುದು ಬುದ್ಧಿವಂತಿಕೆಯೆನಿಸುತ್ತದೆ.

ಕಷ್ಟ ಕಾಲದಲ್ಲಿ ಜತೆಗಿರುವವರು

ಕಷ್ಟ ಕಾಲದಲ್ಲಿ ಜತೆಗಿರುವವರು

ನಿಮ್ಮನ್ನು ಪ್ರೀತಿಸುವವರು ಮಾತ್ರ ಕಷ್ಟ ಕಾಲದಲ್ಲಿ ನಿಮ್ಮ ಜೊತೆಗಿರುತ್ತಾರೆ. ಒಮ್ಮೆ ನಿಮ್ಮಲ್ಲಿ ಹಣವಿಲ್ಲದೆ ಇದ್ದರೆ, ಪೊಳ್ಳು ಸಂಬಂಧಗಳು ಎಲ್ಲವು ಇದ್ದಕ್ಕಿದ್ದಂತೆ ಮಾಯವಾಗುತ್ತವೆ. ಆದರೆ ನಿಜವಾದ ಪ್ರೀತಿ ಮತ್ತು ಸಂಬಂಧಗಳು ಮಾತ್ರ. ಇದನ್ನು ನೀವು ದಂಪತಿಗಳಲ್ಲಿ ಹೆಚ್ಚಾಗಿ ನೋಡಬಹುದು. ಸ್ನೇಹ ಆಗಿರಲಿ, ದಾಂಪತ್ಯವಾಗಿರಲಿ ಕಷ್ಟ ಕಾಲದಲ್ಲಿ ನಿಂತು ಎದುರಿಸುವ ಸಾಮರ್ಥ್ಯವನ್ನು ನಮಗೆ ನೀಡುತ್ತಾ, ನಮ್ಮ ಜೊತೆಗೆ ಇರುತ್ತಾರೆ. ಇದು ನಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

ಪ್ರಪಂಚದಲ್ಲಿ ಕೆಟ್ಟವರು ಅಧಿಕವಾಗಿರುತ್ತಾರೆ

ಪ್ರಪಂಚದಲ್ಲಿ ಕೆಟ್ಟವರು ಅಧಿಕವಾಗಿರುತ್ತಾರೆ

ಯಾರಾದರು ನಮ್ಮನ್ನು ಹೊಗಳಿದಾಗ ಅವರನ್ನು ನಾವು ನಂಬುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ನಮ್ಮನ್ನು ಬೀಳಿಸಲು ಹಾಕಿರುವ ಬಲೆ ಎಂದು ನಮಗೆ ಗೊತ್ತಾಗಲು ತುಂಬಾ ದಿನಗಳು ಬೇಕಾಗುತ್ತವೆ. ಆದರೆ ಒಂದು ದಿನ ಅವರ ನಿಜ ಸ್ವರೂಪವನ್ನು ನೀವು ನೋಡಿದಾದ ಅದನ್ನು ನೀವು ನಂಬಲೇ ಬೇಕಾಗುತ್ತದೆ. ಏಕೆಂದರೆ ಇದೇ ಅವರ "ನಿಜವಾದ" ಮುಖ. ಆಗ ಉಳಿದೆಲ್ಲಾ ಅಂಶಗಳು ನಗಣ್ಯವಾಗುತ್ತವೆ. ಆಗ ನಂಬುವಂತಹ ಪರಿಸ್ಥಿತಿಯಲ್ಲಿ ಇರುವುದಿಲ್ಲವಾದರು, ಅದನ್ನು ನಂಬದೆ ವಿಧಿ ಇರುವುದಿಲ್ಲ.

ಅಧಿಕ ಅಸೂಯೆಯು ಪೊಸೆಸಿವ್ ಅನ್ನು ಸೂಚಿಸುವುದಿಲ್ಲ!

ಅಧಿಕ ಅಸೂಯೆಯು ಪೊಸೆಸಿವ್ ಅನ್ನು ಸೂಚಿಸುವುದಿಲ್ಲ!

ಅಸೂಯೆಯನ್ನು ಯಾವುದೇ ಕಾರಣಕ್ಕು ಪೊಸೆಸಿವ್‌ನೆಸ್ ಜೊತೆಗೆ ಬೆರೆಸಬೇಡಿ. ಪೊಸೆಸಿವ್ ಆಗಿರುವುದು ಅಥವಾ ಅಸೂಯಾಪರರಾಗಿರುವುದು ಸಂಬಂಧವನ್ನು ಕೊಂದು ಹಾಕುತ್ತದೆ. ಒಂದು ವೇಳೆ ನೀವು ನಿಮ್ಮ ಸಂಗಾತಿ ಅಥವಾ ಸ್ನೇಹಿತರ ಜೊತೆಯಲ್ಲಿ ಅಭದ್ರತೆಯ ಭಾವನೆಯನ್ನು ಅನುಭವಿಸುತ್ತಿದ್ದಲ್ಲಿ, ಮೊದಲು ಮಾತನಾಡಿ ಮತ್ತು ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಇದರಿಂದ ನಿಮ್ಮ ಸಂಬಂಧ ಮತ್ತಷ್ಟು ಸುಧಾರಿಸಬಹುದು. ಇದರ ಕುರಿತು ನಿಮಗೆ ಏನಾದರು ಸಲಹೆ ಸೂಚನೆಗಳು ಇದ್ದಲ್ಲಿ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

English summary

Relationship Facts That Make Us Strong

When we're in love, we do not think twice before jumping into conclusions when it comes to making our loved ones happy. In this process, we often tend to overlook at certain deep dark truths for that moment. When it over-surfaces, its only then we realise the fact that it was right there, but we chose to ignore it! There are certain relationship facts that we need to understand. This can make us stronger during times of crisis...
Story first published: Thursday, December 17, 2015, 16:27 [IST]
X
Desktop Bottom Promotion