For Quick Alerts
ALLOW NOTIFICATIONS  
For Daily Alerts

ಸಂಬಂಧ ಮುರಿದು ಬೀಳಲು ಕಾರಣ ಒಂದಾದರೇನು, ನೂರಾದರೇನು?

|

ಕೆಲವೊಂದು ಅಭ್ಯಾಸಗಳು ನಿಮ್ಮ ಸಂಬಂಧಕ್ಕೆ ಹುಳಿ ಹಿಂಡುತ್ತವೆ ಎಂಬುದು ಎಲ್ಲರಿಗು ಗೊತ್ತು. ಆದರೆ ಅವು ಯಾವುವು ಎಂಬುದು ನಿಖರವಾಗಿ ಗೊತ್ತಿರುವುದಿಲ್ಲ. ನಿಮ್ಮ ವೈವಾಹಿಕ ಸಂಬಂಧವು ಚಿರಕಾಲ ಇರಬೇಕೆಂದರೆ, ಇವುಗಳ ಕುರಿತು ತಪ್ಪದೆ ತಿಳಿದುಕೊಳ್ಳಿ. ನಾಲ್ಕು ಗೋಡೆಗಳ ಮಧ್ಯೆ ನೀವು ಒಬ್ಬ ವ್ಯಕ್ತಿಯ ಜೊತೆಗೆ ಜೀವಿಸುತ್ತಿದ್ದಲ್ಲಿ, ಕೆಲವೊಂದು ಸಮಸ್ಯೆಗಳು ಬರುತ್ತಿರುತ್ತವೆ ಮತ್ತು ಹೋಗುತ್ತಿರುತ್ತವೆ. ಆಗ ಕೆಲವೊಂದು ವಿಚಾರಗಳನ್ನು ನೀವು ಅನುಸರಿಸಿಕೊಂಡು ಹೋಗಬೇಕಾಗುತ್ತದೆ.

ಅದರಲ್ಲೂ ನಿಮ್ಮ ಸಂಗಾತಿಯ ಕೆಲವೊಂದು ಅಭ್ಯಾಸಗಳು ನಿಮ್ಮನ್ನು ಘಾಸಿಗೊಳಿಸುತ್ತಿದ್ದಲ್ಲಿ, ತಾಳ್ಮೆಯಿಂದ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಹೆಚ್ಚಿರುತ್ತದೆ. ಸಂಗಾತಿಗಳಲ್ಲಿ ಇಬ್ಬರಿಗು ಸಹಕಾರ ಮನೋಭಾವ ಇದ್ದಲ್ಲಿ ವೈವಾಹಿಕ ಜೀವನವು ಚಿರಕಾಲ ಬಾಳುತ್ತದೆ. ಈ ಅಂಕಣದಲ್ಲಿ ನಾವು ನಿಮ್ಮ ಸಂಬಂಧವನ್ನು ಹಾಳು ಮಾಡುವ ಕೆಲವೊಂದು ಅಭ್ಯಾಸಗಳ ಕುರಿತು ನಾವು ತಿಳಿಸುತ್ತಿದ್ದೇವೆ.

5 Toxic Marriage Habits To Break

ಒಂದು ವೇಳೆ ನಿಮಗಾಗಲಿ ಅಥವಾ ನಿಮ್ಮ ಸಂಗಾತಿಗಾಗಲಿ ಇಂತಹ ಅಭ್ಯಾಸಗಳು ಇದ್ದಲ್ಲಿ, ಅದನ್ನು ಬದಲಾಯಿಸಿಕೊಳ್ಳಲು ಪ್ರಯತ್ನಪಡಿ. ಯಾವುದೇ ಕಾರಣಕ್ಕು ನಿಮ್ಮ ಈ ಅಭ್ಯಾಸವು ನಿಮ್ಮ ಸಂಗಾತಿಯನ್ನು ನೋಯಿಸದಂತೆ ಕಾಪಾಡಿಕೊಳ್ಳಿ. ಇಂತಹ ಅಭ್ಯಾಸಗಳನ್ನು ಬಿಡುವ ಕುರಿತು ತಿಳಿದುಕೊಳ್ಳಿ. ಮುಂದೆ ಓದಿ... ಪ್ರತೀ ನವದ೦ಪತಿಯೂ ಎದುರಿಸಬೇಕಾಗಿ ಬರುವ ಸಮಸ್ಯೆಗಳೇನು?

ಹಳೆಯ ತಪ್ಪುಗಳನ್ನು ಎತ್ತಿ ತೋರಿಸುವುದು
ಒಂದು ವೇಳೆ ನೀವು ನಿಮ್ಮ ಸಂಗಾತಿ ಮಾಡಿದ ತಪ್ಪುಗಳನ್ನು ಎತ್ತಿ ತೋರಿಸುವ ದಾಖಲೆಯನ್ನು ಮಾಡುತ್ತಿದ್ದಲ್ಲಿ, ಮೊದಲು ಆ ಅಭ್ಯಾಸವನ್ನು ಬಿಡಿ. ಇದು ದಾಂಪತ್ಯದಲ್ಲಿ ಮಾಡಬಹುದಾದ ಅತಿ ದೊಡ್ಡ ತಪ್ಪು. ನಿಮ್ಮ ಬಾಳಿನ ಗುರಿ, ಒಂದಾಗಿ ಬಾಳು ಎಂಬುದನ್ನು ಯಾವತ್ತಿಗು ಮರೆಯಬೇಡಿ. ನೀವು ಗೆಲ್ಲಬೇಕು ಎಂಬ ಕಾರಣಕ್ಕಾಗಿ ನಿಮ್ಮ ಸಂಗಾತಿಯ ತಪ್ಪುಗಳನ್ನು ಎತ್ತಿ ತೋರಿಸಬೇಡಿ. ಅಷ್ಟಕ್ಕೂ ಸುಖಿ ಸಂಸಾರದ ಹಿಂದಿರುವ ಯಶಸ್ಸಿನ ಗುಟ್ಟೇನು?

ಕೋಪ
ಇದು ಸಹ ವೈವಾಹಿಕ ಸಂಬಂಧದಲ್ಲಿ ಕಂಡು ಬರುವ ಮತ್ತೊಂದು ಕೆಟ್ಟ ಅಭ್ಯಾಸ. ಕೋಪವು ನಿಮ್ಮನ್ನು ಹತಾಶೆಗೆ ತಳ್ಳುತ್ತದೆ. ಇದು ನಿಜಕ್ಕು ನಿಮ್ಮ ಸಂಗಾತಿಯನ್ನು ಬೆಚ್ಚಿ ಬೀಳುವಂತೆ ಮಾಡುತ್ತದೆ. ನಿಮ್ಮ ಕೋಪವನ್ನು ಸರಿಯಾದ ರೀತಿಯಲ್ಲಿ ಮತ್ತು ಸಾತ್ವಿಕ ರೀತಿಯಲ್ಲಿ ತೋರಿಸಲು ಇರುವ ಮಾರ್ಗಗಳನ್ನು ಹುಡುಕಿ. ನಿಮ್ಮ ಅಸಂತೋಷವನ್ನು ತೋರಿಸುವ ಹಕ್ಕನ್ನು ನೀವು ಪಡೆದಿದ್ದೀರಿ. ಆದರೆ ಅದಕ್ಕೆಂದು ಇತರರನ್ನು ನೋಯಿಸುವಂತಹ ಹಕ್ಕನ್ನು ನೀವು ಪಡೆದಿಲ್ಲ ಎಂಬುದನ್ನು ಮರೆಯಬೇಡಿ. ನಿಮ್ಮ ನಡುವೆ ಹೆಮ್ಮೆ ಪಡಬೇಕಾದ ಮತ್ತು ನೀವು ಪರಸ್ಪರ ಕೃತಙ್ಞರಾಗಿರಬಹುದಾದ ಹಲವು ವಿಚಾರಗಳು ಇವೆ ಎಂಬುದನ್ನು ಮರೆಯಬೇಡಿ.

ದೂರುವುದು
ಯಾವಾಗಲೋ ಒಮ್ಮೆ ನಿಮ್ಮ ಸಂಗಾತಿಯ ವಿರುದ್ಧ ದೂರಿದರೆ ತಪ್ಪೇನಿಲ್ಲ. ಇದು ನಮ್ಮ ಹತಾಶೆಯನ್ನು ಹೊರಹಾಕಲು ಇರುವ ಒಂದು ಮಾರ್ಗವಾಗಿದೆ. ಆದರೆ ಪ್ರತಿ ಸಣ್ಣ ವಿಚಾರಕ್ಕು ದೂರುವುದು ಒಳ್ಳೆಯ ಅಭ್ಯಾಸವಲ್ಲ. ಇದರಿಂದ ನಿಮ್ಮ ವೈವಾಹಿಕ ಸಂಬಂಧವು ಹಳಿ ತಪ್ಪುತ್ತದೆ. ಪರಸ್ಪರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ, ಇತರರನ್ನು ಗೌರವಿಸಿ. ವೈವಾಹಿಕ ಜೀವನದಲ್ಲಿ ಸರಸ ಸಲ್ಲಾಪ ಏಕೆ ಮಹತ್ವಪೂರ್ಣ?

ಸ್ವಾರ್ಥ
ನೀವು ಒಂಟಿಯಾಗಿದ್ದಾಗ ಸ್ವಾರ್ಥಿಯಾಗಿದ್ದರೆ ಪರವಾಗಿಲ್ಲ. ಆದರೆ ಒಂದು ಸಂಬಂಧದಲ್ಲಿ ಅಂದರೆ ಸಂಗಾತಿಯ ಜೊತೆಗೆ ಇರುವಾಗ ಸ್ವಾರ್ಥಿಯಾಗಿದ್ದರೆ ನಿಜಕ್ಕು ಒಳ್ಳೆಯದಲ್ಲ. ಇಲ್ಲಿ ನಾನು ಎನ್ನುವುದಕ್ಕಿಂತ ನಮ್ಮ, ನಮಗೆ, ನಾವು ಎಂಬ ಭಾವನೆಯು ಒಳ್ಳೆಯದು. ಸ್ವಾರ್ಥವು ನಿಮ್ಮ ಸಂಬಂಧವನ್ನು ಹಾಳು ಮಾಡಿ ಬಿಡುತ್ತದೆ. ಈ ಅಭ್ಯಾಸಗಳನ್ನು ಮೊದಲು ಬಿಡಿ ಸುಖವಾಗಿ ಬಾಳಿ.

ಶ್ಲಾಘನೆಯಿಂದ ದೂರ ಉಳಿಯುವುದು


ಯಾವುದೇ ವಿಷಯ ಅಥವಾ ವ್ಯಕ್ತಿಯನ್ನು ಲಘುವಾಗಿ ಪರಿಗಣಿಸುವುದು ಮನುಷ್ಯನ ಸಹಜ ಗುಣ. ಪ್ರತಿಯೊಬ್ಬ ಮನುಷ್ಯ ಕೂಡ ಮೆಚ್ಚುಗೆಗೆ ಹಪಹಪಿಸುತ್ತಿರುತ್ತಾನೆ ಎಂದು ನಿಮಗೆ ತಿಳಿದಿರಲಿ. ನಿಮ್ಮ ಸಂಗಾತಿಗಾಗಿ ಎಷ್ಟೇ ಒಳ್ಳೆಯ ಕೆಲಸಗಳನ್ನು ಮಾಡಿದರೆ ಅದಕ್ಕೆ ಮೆಚ್ಚುಗೆ ಬರದಿದ್ದರೆ ನಿಮಗೆ ಹೇಗಾಗಬಹುದು? ನಿಮಗೆ, ಮನೆಗೆ ಮತ್ತು ಮಕ್ಕಳಿಗೆ ಏನು ಮಾಡುತ್ತಾರೆಯಾ ಅದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ. ಸ್ನೇಹಿತರು ಮತ್ತು ಮನೆಯವರ ಮುಂದೆ ಅವರನ್ನು ಶ್ಲಾಘಿಸಿ. ಪ್ರತೀದಿನ ಊಟ ಚೆನ್ನಾಗಿದೆ ಎಂದು ಅವರನ್ನು ಶ್ಲಾಘಿಸಿ. ಅವರ ಶಕ್ತಿ, ಮಮತೆ, ಧೈರ್ಯ ಮತ್ತು ನಿಸ್ವಾರ್ಥತೆಯನ್ನು ಶ್ಲಾಘಿಸಿ. ಪ್ರೀತಿ ಪಡೆಯುವುದು ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸುವಂತಹ ವ್ಯಕ್ತಿಯನ್ನು ಜತೆಗಿರುವುದು ನೀವು ಪಡೆಯುವ ಅತ್ಯಂತ ಸುಂದರ ಉಡುಗೊರೆ. ಇದು ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುತ್ತದೆ ಎಂದು ಭಾವಿಸಬೇಡಿ.
English summary

5 Toxic Marriage Habits To Break

There are certain toxic marriage habits and it is better to know about them if you want your marriage to last longer. When you are living with someone under the same roof, several habits of yours might cause problems to the other person. Also, you might need to adjust a bit when several habits of your partner affect you.
Story first published: Wednesday, February 4, 2015, 14:18 [IST]
X
Desktop Bottom Promotion