For Quick Alerts
ALLOW NOTIFICATIONS  
For Daily Alerts

ಮಗು ವೈವಾಹಿಕ ಸಮಸ್ಯೆ ಹೇಗೆ ಬಗೆಹರಿಸುವುದು?

By Hemanth P
|

ತಂದೆ ಹಾಗೂ ತಾಯಿಯಾಗುವ ಸಂಭ್ರಮಕ್ಕಿಂತ ದೊಡ್ಡದ್ದು ಮತ್ತೊಂದಿಲ್ಲ. ಆದರೆ ಇದು ಎಲ್ಲಾ ದಂಪತಿಗಳಿಗೂ ಒಂದೇ ರೀತಿಯಾಗಿರುತ್ತದೆಯಾ? ವೈವಾಹಿಕ ಜೀವನದಲ್ಲಿನ ಕೆಲವೊಂದು ಗಂಭೀರ ಸಮಸ್ಯೆಗಳಿಂದಾಗಿ ನೀವು ಮಗು ಪಡೆಯದಿರಲು ನಿರ್ಧರಿಸಿದ್ದರೆ ಅದರಿಂದ ಅಚ್ಚರಿಪಡಬೇಕಾಗಿಲ್ಲ. ಆದರೆ ನಿಮ್ಮ ನಿರ್ಧಾರ ಬದಲಾಯಿಸುವ ಸಮಯ ಬಂದಿದೆ. ನಿಮ್ಮ ಮತ್ತು ಸಂಗಾತಿ ನಡುವಿನ ಸಮಸ್ಯೆಯನ್ನು ಮಗು ನಿವಾರಿಸಿದರೆ ಆಗ ಹೇಗಾಗಬಹುದು? ಮಕ್ಕಳು ನಿಮ್ಮ ಜೀವನದ ಮೇಲೆ ಹಲವಾರು ಧನಾತ್ಮಕ ವಿಧಾನಗಳಿಂದ ಪರಿಣಾಮ ಬೀರಬಹುದು. ವೈವಾಹಿಕ ಜೀವನದ ಸಮಸ್ಯೆ ಸರಿದೂಗಿಸಿ ಕುಟುಂಬವಾಗಿಸುವಲ್ಲಿ ಮಕ್ಕಳು ಪ್ರಮುಖ ಪಾತ್ರ ವಹಿಸುತ್ತಾರೆ.
ಮಗು ಪಡೆಯುವ ಮೂಲಕ ನಿಮ್ಮ ಸಂಗಾತಿ ಜತೆಗಿನ ಸಂಬಂಧ ಮತ್ತಷ್ಟು ಬಲವಾಗಬಹುದು. ಇದರಿಂದ ನೀವು ಸಂಗಾತಿ ಕಡೆ ಹೆಚ್ಚಿನ ಬದ್ಧತೆ ತೋರಿಸಬಹುದು. ನಿಮ್ಮ ಸಂಗಾತಿ ಅನುಭವಿಸುತ್ತಿರುವ ಒತ್ತಡ ಹಾಗೂ ಚಿಂತೆಯನ್ನು ಅರ್ಥಮಾಡಿಕೊಳ್ಳಲು ಇದು ನೆರವಾಗಬಹುದು. ಸಾಂಗತ್ಯ ಎಷ್ಟು ವಿಶೇಷವೆನ್ನುವುದನ್ನು ತೋರಿಸುವ ಮೂಲಕ ಮಕ್ಕಳು ನಿಮ್ಮ ಮನೆಯ ವಾತಾವರಣವನ್ನೇ ಬದಲಾಯಿಸಬಹುದು.

Is A Child Solution To Marital Problems?
ವೈವಾಹಿಕ ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಗುವಿನಿಂದ ಹಲವಾರು ಉಪಯೋಗಗಳಿವೆ. ನಿಮ್ಮ ಮನೆಗೆ ಹೊಸ ಸದಸ್ಯನನ್ನು ಆಹ್ವಾನಿಸಿ, ಬದಲಾವಣೆ ಅನುಭವಿಸಿ. ನಿಮ್ಮ ವೈವಾಹಿಕ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಇಲ್ಲಿವೆ ಕೆಲವೊಂದು ಆಸಕ್ತಿದಾಯಕ ಲಾಭಗಳು.

ಕುಟುಂಬದ ಬಂಧನ ಬೆಸೆಯುತ್ತದೆ
ವೈವಾಹಿಕ ಜೀವನದ ಸಮಸ್ಯೆ ಪರಿಹರಿಸಲು ಮಗು ಪಡೆಯುವುದು ಒಳ್ಳೆಯ ವಿಧಾನ. ಯಾಕೆಂದರೆ ಮಗು ನಿಮ್ಮ ಕುಟುಂಬದ ಬಂಧನ ಬೆಸೆಯುತ್ತದೆ. ಮಗುವಿನ ಮೂಲಕ ವೈವಾಹಿಕ ಜೀವನದ ಸಮಸ್ಯೆ ಪರಿಹಾರವಾಗಿ ಕುಟುಂಬದೊಂದಿಗಿನ ಬೆಸುಗೆ ಬಲವಾಗಬಹುದು.

ಜವಾಬ್ದಾರಿ ಹೆಚ್ಚಿಸುತ್ತದೆ
ನಿಮಗೆ ಮಗುವಾದರೆ, ಆಗ ನೀವಿಬ್ಬರು ಕೂಡ ಕುಟುಂಬದ ಜವಾಬ್ದಾರಿ ಬಗ್ಗೆ ಯೋಚಿಸುತ್ತೀರಿ. ಮಕ್ಕಳ ಪ್ರಭಾವ ಹೆತ್ತವರ ವರ್ತನೆ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತದೆ. ಮಗುವಿನ ಜವಾಬ್ದಾರಿ ವೈವಾಹಿಕ ಜೀವನದ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಲ್ಲದು.

ಗಮನ ಬೇರೆಡೆ ಸೆಳೆಯಲು
ದಿನದ 24 ಗಂಟೆ ಕೂಡ ವ್ಯಸ್ತರಾಗಿರುವ ನಿಮ್ಮ ಗಮನ ಬೇರೆಡೆಗೆ ಬರಲು ಮಗುವನ್ನು ಪಡೆಯಿರಿ. ಇದರಿಂದ ಸಂಗಾತಿ ಜತೆಗಿನ ಜಗಳದ ಬಗ್ಗೆ ಗಮನ ಹರಿಸಲು ಹೆಚ್ಚಿನ ಸಮಯ ಸಿಗದು. ಮಗುವಿನೊಂದಿಗೆ ಹೆಚ್ಚಿನ ಸಮಯ ಕಳೆಯಲು ತಯಾರಾಗಿ ಹಾಗೂ ಮಗು ವೈವಾಹಿಕ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತದೆ ಎಂದು ನೋಡಿ.

ಪರಿಸ್ಥಿತಿ ತಿಳಿಗೊಳಿಸಲು
ಮಗುವಿನ ಉಪಸ್ಥಿತಿಯು ಆಕಸ್ಮಿಕ ಅಥವಾ ಉದ್ದೇಶಪೂರ್ವಕವಾಗಿ ಪರಿಸ್ಥಿತಿ ತಿಳಿಗೊಳಿಸಲು ನೆರವಾಗುತ್ತದೆ. ನಿಮ್ಮ ಮಗು ನಿಮ್ಮಿಬ್ಬರ ಜಗಳದ ಮಧ್ಯೆ ಬರಲು ಅವಕಾಶ ಮಾಡಿಕೊಟ್ಟರೆ ಆಗ ವೈವಾಹಿಕ ಜೀವನದ ಸಮಸ್ಯೆ ಸುಲಭವಾಗಿ ಪರಿಹಾರವಾಗಬಹುದು.

ಎರಡೆರಡು ಸಲ ಯೋಚಿಸಬೇಕಾಗುತ್ತದೆ
ಕುಟುಂಬದಲ್ಲಿ ಮಗು ಇರುವುದರಿಂದ ನಿಮ್ಮ ಜಗಳದ ಭಾಷೆ ಮತ್ತು ಆಡುವ ಮಾತುಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಮಗುವಿದ್ದರೆ ಮಾತನಾಡುವ ಮೊದಲು ಎರಡೆರಡು ಸಲ ಯೋಚಿಸಬೇಕು. ಇದು ಪರಿಸ್ಥಿತಿ ಶಾಂತಗೊಳಿಸುತ್ತದೆ ಮತ್ತು ವೈವಾಹಿಕ ಜಗಳವನ್ನು ಕಡಿಮೆ ಮಾಡುತ್ತದೆ.

ನಿಮ್ಮೊಳಗಿನ ಮಗುವನ್ನು ಹೊರಗೆ ತನ್ನಿ
ನಿಮ್ಮ ಮಗುವಿನೊಂದಿಗೆ ಕೆಲ ಸಮಯ ಕಳೆದರೆ ಆಗ ನಿಮ್ಮೊಳಗಿರುವ ಮಗುವನ್ನು ಅದು ಹೇಗೆ ಹೊರಗೆ ತರುತ್ತದೆ ಎಂದು ನೋಡಿ. ಇದರಿಂದ ನೀವು ತಮಾಷೆಯಾಗಿರಲು ನೆರವಾಗುತ್ತದೆ. ಇದರಿಂದ ನೀವು ಸಂಗಾತಿ ಕಡೆ ಗೌರವಾನ್ವಿತ ಮತ್ತು ಆಕರ್ಷಕವಾಗಿರಲು ನೆರವಾಗುತ್ತದೆ.

ನಿಮ್ಮ ತಾಳ್ಮೆ ಹೆಚ್ಚಿಸುತ್ತದೆ
ನೀವು ಮತ್ತು ನಿಮ್ಮ ಸಂಗಾತಿ ವೈವಾಹಿಕ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಕಷ್ಟಪಡುತ್ತಿದ್ದರೆ ಅದು ಖಂಡಿತವಾಗಿಯೂ ತಾಳ್ಮೆ ಕಳಕೊಳ್ಳುವುದರಿಂದ. ಇದಕ್ಕೆ ಮಗುವನ್ನು ಪಡೆಯುವುದು ಅತ್ಯುತ್ತಮ ಉಪಾಯ. ಮಗು ತಾಳ್ಮೆಯನ್ನು ಹೆಚ್ಚಿಸುತ್ತದೆ ಮತ್ತು ಇದರಿಂದಾದ ಬದಲಾವಣೆ ನಿಮ್ಮ ಜೀವನದಲ್ಲಿ ಕಂಡುಬರಬಹುದು.

ನಿಮ್ಮನ್ನು ಸಂತೋಷವಾಗಿಡುತ್ತದೆ
ಮಗು ನಿಮ್ಮ ಜೀವನವನ್ನು ಸಂತವಾಗಿಟ್ಟು ವೈವಾಹಿಕ ಸಮಸ್ಯೆ ಬಗೆಹರಿಸಬಹುದು. ವೈವಾಹಿಕ ಸಮಸ್ಯೆ ಬಗೆಹರಿಸಲು ತುಂಬಾ ಕಷ್ಟಪಡುತ್ತಿದ್ದರೆ ಮಗುವನ್ನು ಪಡೆದು ಅದರ ಸಂಭ್ರಮವನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಬದಲಾವಣೆ ನಿಮ್ಮ ಮೂಡ್ ನಲ್ಲಿ ಕಂಡುಬರಲಿದೆ.

ನೈತಿಕತೆ ಮತ್ತು ಶಿಸ್ತು ಪಾಲಿಸಿ
ಮಗು ನೀವು ಏನು ಮಾಡುತ್ತೀರಿ ಎನ್ನುವುದನ್ನು ಗಮನಿಸಿ ಅದನ್ನೇ ಅನುಕರಿಸುತ್ತದೆ. ನೀವು ರೋಲ್ ಮಾಡೆಲ್ ಆಗುವಂತಹ ಪರಿಸ್ಥಿತಿ ಬಂದರೆ ಆಗ ನೀವು ನೈತಿಕತೆ ಮತ್ತು ಶಿಸ್ತನ್ನು ಪಾಲಿಸಿ. ಇದರಿಂದ ನಿಮ್ಮ ಸಂಗಾತಿ ಜತೆಗಿನ ವೈವಾಹಿಕ ಸಮಸ್ಯೆ ಬಗೆಹರಿಸಲು ನೆರವಾಗಬಹುದು.

ಭಾವನಾತ್ಮಕವಾಗಿ ಬಲಿಷ್ಠರಾಗಿ
ಕೆಲವೊಂದು ಭಾವನಾತ್ಮಕ ಜಗಳಗಳಿಂದ ವೈವಾಹಿಕ ಸಮಸ್ಯೆಗಳು ಆರಂಭವಾಗುತ್ತದೆ. ಮಗು ಬರುವುದರಿಂದ ನೀವು ಭಾವನಾತ್ಮಕವಾಗಿ ಬಲಿಷ್ಠರಾಗಬಹುದು. ಭಾವನಾತ್ಮಕವಾಗಿ ಬಲಿಷ್ಠವಾಗಿರುವ ವೈವಾಹಿಕ ಸಮಸ್ಯೆಗಳನ್ನು ನಿಮ್ಮ ಮಗು ಬಗೆಹರಿಸಬಹುದು.

English summary

Is A Child Solution To Marital Problems?

Nothing will be more exciting than becoming a father or a mother. But, is it the same for all couples? There is no wonder if you decide not to have a child due to serious marital problems.
Story first published: Monday, December 9, 2013, 9:54 [IST]
X
Desktop Bottom Promotion