Just In
Don't Miss
- News
ಜನರಿಗೆ ಐಎಂಎ ಠೇವಣಿ ಯಾವಾಗ ವಾಪಸ್ ಕೊಡ್ತೀರಿ?: ಹೈಕೋರ್ಟ್
- Movies
ಶಿವಣ್ಣನಿಗೆ ಕೃಷ್ಣ-ಮಿಲನಾ ಜೋಡಿಯ ಮದುವೆ ಆಮಂತ್ರಣ- ಡಿ ಬಾಸ್ ಗೆ ಯಾವಾಗ ಕೊಡ್ತೀರಾ ಎನ್ನುತ್ತಿದ್ದಾರೆ ಅಭಿಮಾನಿಗಳು
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಬ್ರಿಸ್ಬೇನ್, ಅಂತಿಮ ದಿನದಾಟ Live ಸ್ಕೋರ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Automobiles
ಮಧ್ಯಮ ಗಾತ್ರದ ಕಾರುಗಳಿಗೆ ಹೊಸ ಡೀಸೆಲ್ ಎಂಜಿನ್ ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಮಗಾಗಿರುವುದು ಲವ್ವಾ, ಅಟ್ರಾಕ್ಷನಾ? ಕಂಡು ಹಿಡಿಯುವುದು ಹೇಗೆ?
ಯಾವುದೋ ಫಂಕ್ಷನ್‌ಗೆ ಹೋಗಿರುತ್ತೀರಿ ನೂರಾರು ಹೆಣ್ಮಕ್ಕಳು ಸುಂದರವಾಗಿ ಅಲಂಕಾರ ಮಾಡಿಕೊಂಡು ಓಡಾಡುತ್ತಾ ಇದ್ದರೂ ಅವರೆಲ್ಲರ ನಡುವೆ ಒಂದು ಹುಡುಗಿ ನಿಮ್ಮನ್ನು ಸೆಳೆದು ಬಿಡುತ್ತಾಳೆ. ನೀವು ಅವಳ ಸುತ್ತಲೇ ಓಡಾಡುತ್ತೀರಿ. ಅವಳು ನಿಮ್ಮೆಡೆಗೆ ನೋಡಿದಾಗ ನಗುವೊಂದು ನಿಮ್ಮ ತುಟಿಯಲ್ಲಿ ಅರಳುತ್ತದೆ....
ಅವಳನ್ನೇ ನೋಡುತ್ತಲೇ ಇರಬೇಕೆಂದು ಅನಿಸುತ್ತದೆ, ಅವಳ ಜೊತೆ ಮಾತನಾಡಬೇಕೆಂಬ ತುಡಿತ ಹೆಚ್ಚಾಗುತ್ತದೆ, ಅವಳು ಯಾರು, ಏನು ಮಾಡುತ್ತಿದ್ದಾಳೆ ಹೀಗೆ ಅವಳ ಬಗ್ಗೆ ಹೆಚ್ಚು ತಿಳಿಯಬೇಕೆಂಬ ಆಸಕ್ತಿ ಮೂಡುತ್ತದೆ. ಅವಳ ಫೇಸ್‌ಬುಕ್ ಅಕೌಂಟ್ ಪತ್ತೆ ಹಚ್ಚಿ ಹಾಯ್ ಎಂಬ ಸಂದೇಶ ಕಳುಹಿಸಲಾಗುತ್ತದೆ, ಅವಳು ನನ್ನ ಮೆಸೇಜ್‌ಗೆ ಸ್ಪಂದಿಸಲಿ ಎಂದು ಮನಸ್ಸು ಕಾತರದಿಂದ ಕಾಯುತ್ತಿರುತ್ತದೆ...
ಅವಳಿಗೂ ಅಷ್ಟೇ ಅವನ ನೋಡುವಾಗ ಏನೋ ಆಕರ್ಷಣೆ, ಅವನು ತನ್ನ ಸುತ್ತ ಸುತ್ತುತ್ತಿದ್ದರೆ ಮನಸ್ಸಿನಲ್ಲಿ ಅದೇನೋ ಪುಳುಕ. ಕದ್ದುಮುಚ್ಚಿ ಆತನನ್ನು ನೋಡುತ್ತಾ ಯಾರಿಗೂ ಕಾಣದಂತೆ ನಗುತ್ತಾಳೆ...
ಇವೆಲ್ಲಾ ಏನು ಲವ್ವಾ? ಅಥವಾ ಬರೀ ಅಟ್ರಾಕ್ಷನ್ ಅಷ್ಟನೇ ಎಂಬುವುದು ಇಬ್ಬರಿಗೂ ತಿಳಿಯುವುದಿಲ್ಲ. ಇಲ್ಲಿ ನಾವು ನಿಮಗೆ ಆ ರೀತಿಯ ಗೊಂದಲವಿದ್ದಾಗ ನಿಮ್ಮದು ಲವ್ ಇರಬಹುದಾ? ಅಥವಾ ಬರೀ ಅಟ್ರಾಕ್ಷನ್ ಅಷ್ಟೇನಾ? ಎಂದು ತಿಳಿಯುವುದು ಹೇಗೆ ಎಂಬುವುದು ಹೇಳಿದ್ದೇವೆ. ಇವೆರಡರ ನಡುವೆ ವ್ಯತ್ಯಾಸ ತಿಳಿದರೆ ನಿಮ್ಮ ಲೈಫ್ ಪಾರ್ಟ್ನರ್ ಆಯ್ಕೆ ಕೂಡ ಸುಲಭವಾಗುವುದು ನೋಡಿ

ಎರಡರ ನಡುವೆ ವ್ಯತ್ಯಾಸ ಕಂಡು ಹಿಡಿಯುವುದೇ ಒಂದು ಗೊಂದಲ
ಹೌದು ನನಗೆ ಆಗಿರುವುದು ಲವ್ವಾ ಅಥವಾ ಆಕರ್ಷಕಣೆ ಮಾತ್ರನಾ ಎಂದು ಕಂಡು ಹಿಡಿಯುವುದು ನಿಮಗೆ ಸ್ವಲ್ಪ ಕಷ್ಟದ ಕೆಲಸವೇ ಆಗಬಹುದು. ಏಕೆಂದರೆ ಒಬ್ಬ ವ್ಯಕ್ತಿ ಮೇಲೆ ಲವ್ ಇದ್ದಾಗ ಅಲ್ಲಿ ಆಕರ್ಷಣೆ ಇರುತ್ತದೆ. ಆದರೆ ಆಕರ್ಷಣೆ ಇದ್ದರೆ ಅಲ್ಲಿ ಲವ್ ಇರಬೇಕೆಂದೇನು ಇಲ್ಲ,
ನಿಮಗೆ ಸರಳವಾಗಿ ಹೇಳುವುದಾದರೆ ನಿಮಗೆ ಯಾವುದೋ ವ್ಯಕ್ತಿಯನ್ನು ನೋಡಿದಾಗ ಏನೋ ಒಂದು ರೀತಿಯ ಆಕರ್ಷಣೆ ಉಂಟಾಗುತ್ತದೆ, ಹಾಗಂತ ಅದು ಪ್ರೀತಿಯಾಗಿರಬೇಕಿಲ್ಲ, ಅದು ಆ ಕ್ಷಣ ಅಥವಾ ಆ ನಿಮಿಷಕ್ಕೆ ಉಂಟಾದ ಆಕರ್ಷಣೆಯಾಗಿರುತ್ತದೆ. ಇಲ್ಲಾಆ ರೀತಿಯ ಆಕರ್ಷಣೆ ಸ್ವಲ್ಪ ಸಮಯವಷ್ಟೇ ಇರುತ್ತದೆ. ಹೆಚ್ಚಿನವರು ಇದನ್ನು ಅರಿಯದೆ ಗೊಂದಲಕ್ಕೆ ಬಿದ್ದು ಅದೇ ಪ್ರೀತಿಯೆಂದು ಜೀವನದಲ್ಲಿ ನೋವನ್ನು ತಂದುಕೊಳ್ಳುತ್ತಾರೆ.
ನಿಜವಾಗಲೂ ಇದಕ್ಕಾಗಿ ದುಃಖಿಸಬೇಕೆ? ಖಂಡಿತವಿಲ್ಲ, ಏಕೆಂದರೆ ಆಕರ್ಷಣೆ ಉಂಟಾಗುವುದು ಮನುಷ್ಯನ ಸ್ವಾಭಾವಿಕ ಗುಣ.

ನಿಮಗಾಗಿರುವುದು ಆಕರ್ಷಣೆ ಮಾತ್ರ, ಪ್ರೀತಿಯಲ್ಲ ಎಂದು ತಿಳಿಯುವುದು ಹೇಗೆ?
ಆಕರ್ಷಣೆ ಎನ್ನುವುದು ಅಯಸ್ಕಾದಂತೆ ನಿಮ್ಮನ್ನು ಆ ವ್ಯಕ್ತಿ ಸೆಳೆಯಬಹುದು. ನಿಮಗೆ ಆ ವ್ಯಕ್ತಿಯನ್ನು ನೋಡದೆ, ಮಾತನಾಡದೆ ಇರಲು ಸಾಧ್ಯವಾಗದೇ ಇರಬಹುದು. ಆ ವ್ಯಕ್ತಿಗೋಸ್ಕರ ಏನು ಬೇಕಾದರೂ ಮಾಡಲು ಸಿದ್ಧರಾಗಬಹುದು, ಆದರೆ ಈ ರೀತಿಯ ಆಕರ್ಷಣೆ ಕೊನೆಯವರೆಗೆ ಉಳಿಯಲು ಸಾಧ್ಯವಿಲ್ಲ. ಎಷ್ಟೋ ಜನರ ಪಾಗಲ್ ಪ್ರೇಮಿಗಳಾಗುವುದು ಕೂಡ ಈ ರೀತಿಯ ಆಕರ್ಷಣೆಯಿಂದಲೇ...
ಅದೇ ಪ್ರೀತಿಯಲ್ಲಿ ಆಕರ್ಷಣೆ ಇರುತ್ತದೆ, ಆದರೆ ಅಲ್ಲಿ ಆಕರ್ಷಣೆಯನ್ನೂ ಮೀರಿ ಮನಸ್ಸಿನ ಭಾವಗಳು ಹೆಚ್ಚು ಬೆಸೆದಿರುತ್ತದೆ.

ಆಕರ್ಷಣೆ ಎನ್ನುವುದು ದೈಹಿಕ ಆಕರ್ಷಣೆ
ಒಬ್ಬ ವ್ಯಕ್ತಿಯ ಅಂದ ಅಥವಾ ಅವರಲ್ಲಿರುವ ಬೇರೆ ಯಾವುದೋ ಒಂದು ಕಾರಣ ನೋಡಿ ಆಕರ್ಷಣೆ ಹುಟ್ಟಿಕೊಳ್ಳುತ್ತದೆ. ಉದಾಹರಣೆಗೆ ಅವನು/ಅವಳು ನೋಡಲು ತುಂಬಾ ಸುಂದರವಾಗಿದ್ದಾರೆ ಎಂದು ಅಥವಾ ಅವರ ಬುದ್ಧಿವಂತೆಕೆ, ಅಂತಸ್ತು, ಪ್ರಭಾವ ಹೀಗೆ ಯಾವುದೋ ಒಂದು ಕಾರಣ ನೋಡಿ ಅವರ ಮೇಲೆ ಆಕರ್ಷಣೆ ಹುಟ್ಟಿರುತ್ತದೆ.
ಆದರೆ ಪ್ರೀತಿ ಅವುಗಳೆನ್ನೆಲ್ಲಾ ನೋಡುವುದಿಲ್ಲ, ಆತ/ಆಕೆಯ ಹೃದಯ ಮಿಡಿತವನ್ನು ಸ್ಪಂದಿಸುತ್ತದೆ. ಪ್ರೀತಿಯಲ್ಲಿ ಯಾವುದೇ ನಿರ್ಬಂಧಗಳಿರುವುದಿಲ್ಲ.

ಬ್ರೇಕ್‌ಅಪ್ ಆದರೆ ಅವರ ಬಗ್ಗೆ ಚಿಂತಿಸುವುದು ಇಲ್ಲ
ಈ ಆಕರ್ಷಣೆಯನ್ನೇ ಪ್ರೀತಿಯೆಂದು ಭಾವಿಸಿ ಸಿನಿಮಾ ಜೋಡಿಗಳಂತೆ ಸುತ್ತಾಡಿ ಕೊನೆಗೊಂದು ದಿನ ಯಾವುದೋ ಕಾರಣಕ್ಕೆ ಬ್ರೇಕ್‌ಅಪ್ ಆದರೆ ನಂತರ ಅವರನ್ನು ಸುಲಭವಾಗಿ ಮರೆತು ಹೋದರೆ ಅದು ಖಂಡಿತವಾಗಿಯೂ ಪ್ರೀತಿಯಾಗಿರಲಿಲ್ಲ, ಅಲ್ಲಿ ಇದ್ದದ್ದು ಬರೀ ಆಕರ್ಷಣೆಯಷ್ಟೇ... ನಿಜವಾದ ಪ್ರೀತಿಯಾಗಿದ್ದರೆ ದಶಕ ಕಳೆದರೂ ಆ ವ್ಯಕ್ತಿಯನ್ನು ಮರೆಯಲು ಸಾಧ್ಯವಾಗುವುದಿಲ್ಲ, ಅವರ ನೆನಪುಗಳು ಸದಾ ಕಾಡುತ್ತಲೇ ಇರುತ್ತದೆ.
ನಿಮಗೆ ಯಾರ ಮೇಲಾದರೂ ಲವ್ ಆದರೆ ಅದು ಪ್ರೀತಿನಾ ಅಥವಾ ಬರೀ ಆಕರ್ಷಣೆಯಷ್ಟೇ ಇರಬಹುದಾ ಎಮದು ನಿಮ್ಮ ಮನಸ್ಸನ್ನೇ ಕೇಳಿಕೊಳ್ಳಿ. ಇಲ್ಲ ಆ ವ್ಯಕ್ತಿ ನಿಮ್ಮ ಬದುಕಿನಲ್ಲಿ ಬೇಕೇ ಬೇಕು ಎಂದು ನಿಮ್ಮ ಮನಸ್ಸು ಹೇಳಿದರೆ Just go head...