For Quick Alerts
ALLOW NOTIFICATIONS  
For Daily Alerts

ಹೆಚ್ಚಾಗುತ್ತಿದೆ ಗ್ರೀನ್‌ ಡೇಟಿಂಗ್ ಟ್ರೆಂಡ್‌, ಏನಿದರ ಪ್ಲಸ್ ಪಾಯಿಂಟ್ ಗೊತ್ತಾ?

|

ನೀವೆಲ್ಲಾ ಆನ್‌ಲೈನ್‌ ಡೇಟಿಂಗ್ ಬಗ್ಗೆ ಕೇಳಿರುತ್ತೀರಿ, ಕೆಲವರು ಆನ್‌ಲೈನ್ ಡೇಟಿಂಗ್ ಕೂಡ ಹೋಗಿರುತ್ತೀರಿ, ಅದಕ್ಕಿಂತ ಭಿನ್ನವಾದ ಅನುಭವವೇ ಗ್ರೀನ್ ಡೇಟಿಂಗ್. ಇದೀಗ ಈ ಟ್ರೆಂಡ್‌ ಹೆಚ್ಚಾಗುತ್ತಿದೆ. ಏನಿದು ಈ ಗ್ರೀನ್‌ ಡೇಟಿಂಗ್‌? ಏಕೆ ಇದು ತುಂಬಾನೇ ಜನಪ್ರಿಯ ಗಳಿಸುತ್ತಿದೆ ಎಂದು ನೋಡೋಣ ಬನ್ನಿ:

ಗ್ರೀನ್ ಡೇಟಿಂಗ್‌ ಏನೂ ಹೊಸ ಕಾನ್ಸೆಪ್ಟ್‌ ಅಲ್ಲ ನಮ್ಮ ಹಿಂದಿನ ಪದ್ಧತಿಗೆ ಹೊಸ ಲೇಬಲ್ ಅಷ್ಟೇ, ಅಲ್ಲದೆ ಈ ಟ್ರೆಂಡ್‌ ಪರಿಸರ ಜಾಗೃತಿ ಮೂಡಿಸುವಂತಿದೆ. ಹೌದು ಈಗ ಪ್ರೇಮಿಗಳು, ನವ ಜೋಡಿಗಳು ಈ ಗ್ರೀನ್‌ ಡೇಟಿಂಗ್‌ ಕಾನ್ಸೆಪ್ಟ್ ತುಂಬಾನೇ ಇಷ್ಟಪಡುತ್ತಿದ್ದಾರೆ. ತಮ್ಮ ರೊಮ್ಯಾಂಟಿಕ್‌ ಡೇಟ್‌ಗಾಗಿ ಹಸಿರು ತಾಣಗಳನ್ನು ಆಯ್ಕೆ ಮಾಡುತ್ತಾರೆ.

ಹಸಿರು ಇಷ್ಟಪಡುವುದು ಮಾತ್ರವಲ್ಲ, ಹಸಿರು ರಕ್ಷಣೆಯನ್ನೂ ಮಾಡುತ್ತಿದ್ದಾರೆ ಅಲ್ಲದೆ ಪ್ರಕೃತಿ ಜೊತೆ ಬೆರೆತಾಗ ಒಂದು ರೀತಿ ಫ್ರೆಷ್ ಅನಿಸುವುದು, ಅದೂ ಗ್ರೀನ್ ಡೇಟಿಂಗ್ ಅಂದರೆ ಸಕತ್‌ ಎಕ್ಸೈಟ್ ಆಗಿದೆ ಅಲ್ವಾ? ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

ಫಸ್ಟ್‌ ಡೇಟಿಂಗ್‌ ಕೂಡ ಪ್ರಕೃತಿ ನಡುವೆ

ಫಸ್ಟ್‌ ಡೇಟಿಂಗ್‌ ಕೂಡ ಪ್ರಕೃತಿ ನಡುವೆ

ಎಲ್ಲೋ ಕಾಫಿ ಶಾಪ್‌ನಲ್ಲೋ, ರೆಸ್ಟೋರೆಂಟ್‌ನಲ್ಲೋ ಮೀಟ್‌ ಮಾಡುವ ಬದಲಿಗೆ ನಾವಿಬ್ಬರು ಹಚ್ಚ ಹಸಿರು ತುಂಬಿದ ಸ್ಥಳದಲ್ಲಿ ಭೇಟಿಯಾಗೋಣ ಎಂದು ಹೇಳುವವರ ಸಂಖ್ಯೆ ಹೆಚ್ಚುತ್ತಿದೆ. ಫಾಲ್ಸ್‌ಗೆ ಹೋಗುವುದು ಅಥವಾ ಫಸ್ಟ್‌ ಡೇಟಿಂಗ್‌ನಲ್ಲಿ ಟ್ರಕ್ಕಿಂಗ್‌ ಹೋಗೋಣ ಎಂಬ ಕ್ರೇಝ್‌ ಹೆಚ್ಚಾಗುತ್ತಿದೆ.

ಗಿಫ್ಟ್ಸ್ ಕೂಡ ಪರಿಸರ ಸ್ನೇಹಿಯಾಗಿಯೇ ನೀಡ್ತಾ ಇದ್ದಾರೆ

ಗಿಫ್ಟ್ಸ್ ಕೂಡ ಪರಿಸರ ಸ್ನೇಹಿಯಾಗಿಯೇ ನೀಡ್ತಾ ಇದ್ದಾರೆ

ಪ್ರೇಮಿ ಅಥವಾ ಸಂಗಾತಿಗೆ ಗಿಫ್ಟ್‌ ನೀಡುವಾಗ ಪರಿಸರ ಸ್ನೇಹಿ ಗಿಫ್ಟ್‌ ನೀಡುವ ಟ್ರೆಂಡ್‌ ಈಗ ಇದೆ. ಗಿಡಗಳನ್ನು ನೀಡುವುದು ಅಥವಾ ಪರಿಸರ ಸ್ನೇಹಿ ಕಾಫಿ ಮಗ್‌, ಬ್ಯಾಗ್‌ಗಳು ಹೀಗೆ ಗಿಫ್ಟ್‌ ನೀಡಲಾಗುವುದು.

ಪಿಕ್‌ನಿಕ್‌ ಹೋಗ್ತಾ ಇದ್ದಾರೆ

ಪಿಕ್‌ನಿಕ್‌ ಹೋಗ್ತಾ ಇದ್ದಾರೆ

ಹೋಟೆಲ್‌ಗೆ ಹೋಗುವ, ರೆಸ್ಟೋರೆಂಟ್‌ನಲ್ಲಿ ಮೀಟ್‌ ಮಾಡುವ ಎನ್ನುವ ಬದಲಿಗೆ ಚಿಕ್ಕ ಪಿಕ್‌ನಿಕ್‌ ಪ್ಲ್ಯಾನ್ ಮಾಡಿ ಹೋಗ್ತಾ ಇದ್ದಾರೆ. ಪರಿಸರ ಜೊತೆಗೆ ಹೆಚ್ಚಾಗಿ ಬೆರೆಯುವ ಮೂಲಕ ತಮ್ಮ ಸಂಗಾತಿ ಬಗ್ಗೆ ಹೆಚ್ಚಾಗಿ ಅರಿಯಲು ಪ್ರಯತ್ನಿಸುತ್ತಿದ್ದಾರೆ.

 ರೊಮ್ಯಾಂಟಿಕ್ ವಾಕ್‌, ಸೈಕ್ಲಿಂಗ್‌

ರೊಮ್ಯಾಂಟಿಕ್ ವಾಕ್‌, ಸೈಕ್ಲಿಂಗ್‌

ಜೋಡಿಗಳು ಲಾಂಗ್‌ ಡ್ರೈವ್, ರೈಡ್ ಬದಲಿಗೆ ರೊಮ್ಯಾಂಟಿಕ್ ವಾಕ್‌ ಹೋಗುವುದು, ಸೈಕ್ಲಿಂಗ್‌ ಈ ಕಡೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಈ ಡೇಟಿಂಗ್‌ ಲೈಕ್‌ ಮೈಡೆಂಡ್‌ ಹಾಗೂ ಪರಿಸರದ ಬಗ್ಗ ಕಾಳಜಿ ಇರುವವರಿಗೆ ತುಂಬಾನೇ ಲೈಕ್‌ ಆಗ್ತಾ ಇದೆ.

 ಗ್ರೀನ್ ಡೇಟಿಂಗ್‌ನಲ್ಲಿ ಸಂಗಾತಿ ಬಗ್ಗೆ ಇನ್ನಷ್ಟು ತಿಳಿಯಬಹುದು ಎನ್ನುತ್ತಿದ್ದಾರೆ ಜನ

ಗ್ರೀನ್ ಡೇಟಿಂಗ್‌ನಲ್ಲಿ ಸಂಗಾತಿ ಬಗ್ಗೆ ಇನ್ನಷ್ಟು ತಿಳಿಯಬಹುದು ಎನ್ನುತ್ತಿದ್ದಾರೆ ಜನ

ನೀವು ಹೋಟೆಲ್‌ ಅಥವಾ ರೆಸ್ಟೋರೆಂಟ್‌ ಕೂತು ಗಂಟೆ-ಗಟ್ಟಲೆ ಮಾತನಾಡಿ ಅವರ ಬಗ್ಗೆ ತಿಳಿಯುವುದಕ್ಕಿಂತ ಹೀಗೆ ಹೊರಗಡೆ ಹೋದಾಗ ಹೆಚ್ಚು ತಿಳಿಯಬಹುದು. ಏಕೆಂದರೆ ವಾಕ್‌ ಹೋದಾಗ ಅಥವಾ ಸೈಕ್ಲಿಂಗ್ ಹೋದಾಗ, ಪಿಕ್ನಿಕ್‌ ಹೋದಾಗ ಅದು ರಿತಿ ನಮ್ಮ ದಿನನಿತ್ಯದ ಲೈಫ್‌ಸ್ಟೈಲ್‌ನಿಂದ ಒಂದು ಬ್ರೇಕ್‌ ನೀಡುವುದರ ಜೊತೆಗೆ ನಮ್ಮಲ್ಲಿ ಒಂದು ರೀತಿಯ ತಾಜಾತನ ತುಂಬುವುದು. ಇನ್ನು ಈ ರೀತಿಯೆಲ್ಲಾ ಹೋದಾಗ ನನ್ನ ಸಂಗಾತಿ ತುಂಬಾ ಆ್ಯಕ್ಟಿವ್ ಅಥವಾ ಸ್ವಲ್ಪ ಮೂಡಿನಾ ಎಂಬುವುದು ಕೂಡ ಗೊತ್ತಾಗುವುದು, ಇನ್ನು ಒಬ್ಬರನ್ನೊಬ್ಬರು ಎಷ್ಟು ಕೇರ್‌ ಮಾಡುತ್ತಾರೆ ಹಾಗೂ ಪರಿಸರ ಹಾಗೂ ಭವಿಷ್ಯದ ಬಗ್ಗೆ ಅವರ ಚಿಂತನೆಯೇನು ಎಂದು ತಿಳಿಯಲು ಸಹಾಯ ಮಾಡುತ್ತೆ. ಲೈಕ್‌ ಮೈಂಡೆಡ್ ಪಾರ್ಟನರ್ ಬೇಕೆನ್ನುವವರೂ ಈ ಗ್ರೀನ್ ಡೇಟಿಂಗ್ ತುಂಬಾ ಇಷ್ಟಪಡುತ್ತಿದ್ದಾರೆ...

English summary

What You Need To Know About the Green Dating Trend in kannada

What you need to know about the green dating trend in kannada, read on...
Story first published: Saturday, June 11, 2022, 13:43 [IST]
X
Desktop Bottom Promotion