For Quick Alerts
ALLOW NOTIFICATIONS  
For Daily Alerts

ಎಂಥ ಪುರುಷನನ್ನು ಪಡೆದ ಹೆಣ್ಣು ಮಾತ್ರ ಖುಷಿಯಾಗಿರುತ್ತಾಳೆ?

|

ಎಲ್ಲಾ ಹೆಣ್ಣು ಮಕ್ಕಳಿಗೆ ತನ್ನ ಮದುವೆಯಾಗುವವ ಹುಡುಗ ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಎಲ್ಲಾ ಹೆಣ್ಣು ಮಕ್ಕಳು ಸರಿಯಾದ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಪಡೆಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಹುಡುಗನ ರೂಪ ನೋಡಿ ಮರುಳಾದರೆ, ಇನ್ನು ಕೆಲವರು ಬಣ್ಣದ ಮಾತುಗಳಿಗೆ, ಇನ್ನು ಕೆಲವರು ಅವನಲ್ಲಿರುವ ಹಣ ನೋಡಿ ಅವನ ಜೊತೆ ಬದುಕಲು ತೀರ್ಮಾನಿಸುತ್ತಾರೆ.

ಆದರೆ ಒಬ್ಬ ಹೆಣ್ಣು ಖುಷಿಯಾಗಿ, ನೆಮ್ಮದಿಯಿಂದ ಬದುಕಬೇಕಾದರೆ ಒಬ್ಬ ಉತ್ತಮ ಪುರುಷನನ್ನು ಬದುಕಿನಲ್ಲಿ ಆಯ್ಕೆ ಮಾಡಬೇಕು, ಇಲ್ಲದಿದ್ದರೆ ಏನು ಇದ್ದರು ಅವಳು ಬದುಕಿನಲ್ಲಿ ಖುಷಿ, ನೆಮ್ಮದಿ ಇರುವುದಿಲ್ಲ. ಎಷ್ಟೋ ಹೆಣ್ಣು ಮಕ್ಕಳು ಪ್ರೀತಿ-ಪ್ರೇಮ ಅಂತ ಹೋಗುವಾಗ ಹಿಂದೆ ಮುಂದೆ ಯೋಚಿಸುವುದೇ ಇಲ್ಲ. ಪರಿಣಾಮ ಅವನಿಂದ ವಂಚಿತರಾಗಿ ಕಣ್ಣೀರು ಸುರಿಸುತ್ತಾರೆ.

ಕೆಲವರು ತಮ್ಮ ಪ್ರೀತಿ ಸಾಬೀತು ಪಡಿಸಲು ಅವನು ಹೇಳಿದಂತೆ ಕೇಳಬೇಕೆಂದು ಎಂದು ಯೋಚಿಸುತ್ತಾರೆ, ಹಾಗಾಗಿ ಅವನು ಹೇಳಿದಂತೆ ಕೇಳಿ ಕೊನೆಗೆ ನಾನು ತಪ್ಪು ಮಾಡಿದೆ ಎಂದು ಪಶ್ಚತಾಪ ಪಡುತ್ತಾರೆ.

ಇತ್ತೀಚೆಗೆ ಕಿರುತೆರೆ ನಟಿ ಕಾವ್ಯಾಗೌಡ ಅವರು ಎಂಥ ಹುಡುನನ್ನು ನೀವು ಸಂಗಾತಿಯಾಗಿ ಪಡೆಯಬೇಕೆಂಬ ಪೋಸ್ಟ್ ಹಾಕಿದ್ದರು. ಅವರ ಪೋಸ್ಟ್ ಕೂಡ ವೈರಲ್ ಆಗಿತ್ತು. ಹೌದು ಎಲ್ಲಾನ ಹೆಣ್ಣು ಮಕ್ಕಳಿಗೆ ಅದು ಅತ್ಯುತ್ತಮವಾದ ಪೋಸ್ಟ್ ಆಗಿದೆ. ಅದರಲ್ಲೂ ಹದಿಹರೆಯದ ಪ್ರಾಯದ ಹೆಣ್ಣು ಮಕ್ಕಳು ಈ ಪ್ರೀತಿ ಪ್ರೇಮದ ಮೋಸದ ಜಾಲಕ್ಕೆ ಸಿಲುಕಿಕೊಳ್ಳುವುದು ಹೆಚ್ಚು.

ಜೀವನದಲ್ಲಿ ನಾನು ಖುಷಿಯಾಗಿರಬೇಕು, ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಪುರುಷನ ಜೊತೆ ಬಾಳಬೇಕೆಂದು ಬಯಸುವುದಾದರೆ ನಿಮ್ಮ ಪುರುಷನಲ್ಲಿ ಈ ಗುಣಲಿದೆಯೇ ಎಂಬುವುದನ್ನು ತಿಳಿದುಕೊಳ್ಳಿ:

ನಿಮಗಾಗಿ ಸೇಫ್ಟಿ ಪ್ಯಾಡ್ ತರುವವನು ಪಡೆಯಿರಿ, ಕಾಂಡೋಮ್ ಕೊಳ್ಳುವನ್ನಲ್ಲ

ನಿಮಗಾಗಿ ಸೇಫ್ಟಿ ಪ್ಯಾಡ್ ತರುವವನು ಪಡೆಯಿರಿ, ಕಾಂಡೋಮ್ ಕೊಳ್ಳುವನ್ನಲ್ಲ

ಈ ಮಾತನ್ನ ಕಾವ್ಯಾ ಅವರು ಹೇಳಿರುವುದು ಎಷ್ಟೊಂದು ಅರ್ಥಪೂರ್ಣವಾಗಿದೆ. ಹೆಣ್ಣನ್ನು ಕಾಮದ ದೃಷ್ಟಿಯಿಂದಲೇ ನೋಡುವ ಹುಡುಗನಿಗೆ ಯಾವತ್ತೂ ಅವಳೊಬ್ಬಳು ಭೋಗದ ವಸ್ತು. ಅವಳ ಭಾವನೆಗಳಿಗೆ ಕವಡೆ ಕಾಸಿನ ಬೆಲೆ ಕೊಡಲ್ಲ. ತನ್ನ ಆಸೆ ಪೂರೈಸಿಕೊಂಡ ಮೇಲೆ ಆಕೆಯನ್ನು ಬಿಟ್ಟು ಬೇರೆಂದು ಹೂವಿನ ಕಡೆ ಹಾರುತ್ತಾನೆ.

 ಮನೆಗೆ ಕರದೊಯ್ಯುವ ಹುಡುಗನನ್ನು ಪಡೆಯಿರಿ, ಹೋಟೆಲ್‌ಗೆ ಕರೆದೊಯ್ಯುವವನಲ್ಲ

ಮನೆಗೆ ಕರದೊಯ್ಯುವ ಹುಡುಗನನ್ನು ಪಡೆಯಿರಿ, ಹೋಟೆಲ್‌ಗೆ ಕರೆದೊಯ್ಯುವವನಲ್ಲ

ನಿಮ್ಮನ್ನು ಪ್ರೀತಿಸುವ ಹುಡುಗ ಅವನ ಮನೆಯವರಿಗೆ ನಿಮ್ಮನ್ನು ಪರಿಚಯಿಸುತ್ತಾನೆ ಎಂದಾದರೆ ಆತ ನಿಜವಾಗಲೂ ನಿಮ್ಮನ್ನು ಅವನ ಬಾಳಿನಲ್ಲಿ ಬಯಸುತ್ತಿದ್ದಾನೆ ಎಂದರ್ಥ. ನಿಮ್ಮಿಬ್ಬರ ಸಂಬಂಧವನ್ನು ಗೌಪ್ಯವಾಗಿಟ್ಟು ಸುತ್ತಾಟ ನಡೆಸುವವನು ಆದರೆ ಆತ ಮುಂದೆ ನಿಮ್ಮನ್ನು ವಂಚಿಸುವ ದುರುದ್ದೇಶ ಹೊಂದಿದ್ದಾನೆ ಎಂದು ಹೇಳಬಹುದು.

ಪ್ರೀತಿ ಸಾಬೀತು ಪಡಿಸಲು ಬಟ್ಟೆ ಬಿಚ್ಚಬೇಕಾಗಿಲ್ಲ

ಪ್ರೀತಿ ಸಾಬೀತು ಪಡಿಸಲು ಬಟ್ಟೆ ಬಿಚ್ಚಬೇಕಾಗಿಲ್ಲ

ಗಂಡು-ಹೆಣ್ಣಿನ ಸಂಬಂಧದಲ್ಲಿ ಕಾಮವಿದ್ದೇ ಇರುತ್ತದೆ. ಆದರೆ ಮದುವೆಗೆ ಮುಂಚೆಯೇ ಆತ ನಿಮ್ಮನ್ನು ಮಂಚಕ್ಕೆ ಕರೆಯುತ್ತಿದ್ದಾನೆ ಎಂದಾದರೆ ಅಂಥ ಹುಡುಗನ ಬಗ್ಗೆ ನೀವು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಪ್ರೀತಿ-ಪ್ರೇಮ ಎಲ್ಲವೂ ಸರಿ, ಹಾಗಂತ ಮದುವೆಗೆ ಮೊದಲು ಮಂಚಕ್ಕೆ ಹೋದರೆ ಮುಂದೆ ಅನುಭವಿಸಬೇಕದವಳು ಕೂಡ ಹೆಣ್ಣೇ ಆಗಿರುತ್ತಾಳೆ ಎಂಬುವುದು ನೆನಪಿರಲಿ.

ಬೆತ್ತಲೆ ದೇಹ ಬೇಡುವವನಿಗಿಂತ ಮುಟ್ಟಿನ ನೋವು ಕೇಳುವವ ಲೇಸು

ಬೆತ್ತಲೆ ದೇಹ ಬೇಡುವವನಿಗಿಂತ ಮುಟ್ಟಿನ ನೋವು ಕೇಳುವವ ಲೇಸು

ನಿಮ್ಮ ಬದುಕಿನಲ್ಲಿ ಬರುವ ಪುರುಷ ನಿಮ್ಮ ಭಾವನೆಗಳಿಗೆ ಬೆಲೆ ನೀಡುವವನಾದರೆ, ನಿಮ್ಮನ್ನು ಮನಸ್ಸನ್ನು ಅರಿತುಕೊಳ್ಳುವವನು ಆಗಿದ್ದರೆ ನೀವು ನಿಜವಾಗಿಯೂ ಅದೃಷ್ಟಶಾಲಿಗಳು. ಹೆಣ್ಣನ್ನು ಕಾಮಕ್ಕಾಗಿ, ಭೋಗಕ್ಕಾಗಿ ಬಳಸುವವನು ಖಂಡಿತ ಅವಳ ಮನಸ್ಸನ್ನು ಅರಿಯಲು ಪ್ರಯತ್ನಿಸುವುದಿಲ್ಲ. ಇಂಥ ಪುರುಷನ ಬಳಿ ಎಷ್ಟೇ ಹಣ, ಅಂತಸ್ತು ಇದ್ದರು ಹೆಣ್ಣಿಗೆ ಸುಖ ಎಂಬುವುದು ಸಿಗುವುದಿಲ್ಲ.

 ಹೆಂಡತಿ ಎಂದರೆ ಬಟ್ಟೆ ತೊಳೆಯುವವಳು, ಅಡುಗೆ ಮಾಡುವವಳು ಮಾತ್ರವಲ್ಲ

ಹೆಂಡತಿ ಎಂದರೆ ಬಟ್ಟೆ ತೊಳೆಯುವವಳು, ಅಡುಗೆ ಮಾಡುವವಳು ಮಾತ್ರವಲ್ಲ

ಹೆಂಡತಿ ಎಂದರೆ ಅವಳು ತನ್ನ ಮನೆಯ ಕೆಲಸಗಳನ್ನು ಮಾಡುತ್ತಾ, ತನ್ನ ಬೇಕು-ಬೇಡಗಳನ್ನು ತೀರಿಸುವವು, ನಾನೇ ಯಜಮಾನ, ನಾನು ಹೇಳಿದಂತೆ ಆಕೆ ಕೇಳಬೇಕು ಎಂಬ ಭಾವನೆ ಕೆಲ ಪುರುಷರಿಗೆ ಇರುತ್ತದೆ. ಗಂಡ-ಹೆಂಡತಿ ಎಂದರೆ ಯಾರು ಮೇಲಲ್ಲ, ಯಾರೂ ಕೀಳಲ್ಲ, ಇಬ್ಬರೂ ಸಮಾನರು, ಇಬ್ಬರು ಸಂಸಾರದ ಬಂಡಿಯ ಎರಡು ಚಕ್ರಗಳು, ಇಬ್ಬರಲ್ಲಿ ಪರಸ್ಪರ ಗೌರವ ಪ್ರೀತಿ ಇದ್ದರೆ ಮಾತ್ರ ಅದೊಂದು ಸುಂದರವಾದ ಸಂಸಾರವಾಗುತ್ತದೆ.

English summary

What Type of Man Makes Woman happy in Relationship

Never remove your clothes to prove your love. Going to Date is okay but before marriage never go to bed. Get a boy who can buy safety pads for you, not condoms says Kavya Gowda.
X