Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ಈ ರೀತಿಯ ಗುಣವಿರುವ ಹುಡುಗ ಒಳ್ಳೆಯ ಲೈಫ್ ಪಾರ್ಟನರ್ ಆಗಲು ಸಾಧ್ಯವೇ ಇಲ್ಲ
ಪ್ರೀತಿಯಲ್ಲಿ ಬೀಳುವಾಗ ಎಲ್ಲವೂ ಚೆನ್ನಾಗಿರುತ್ತದೆ, ಅದಾಗಿ ಸ್ವಲ್ಪ ದಿನಗಳಲ್ಲಿ ಕೆಲವೊಂದು ವ್ಯತ್ಯಾಸಗಳು ಉಂಟಾಗುವುದು. ಎಷ್ಟೋ ಬಾರಿ ನಾನು ಲವ್ ಮಾಡಬಾರದಿತ್ತು, ಈತನನ್ನು ಲವ್ ಮಾಡಿ ದೊಡ್ಡ ತಪ್ಪು ಮಾಡಿದೆ ಎಂದು ಎಷ್ಟೋ ಜನರಿಗೆ ಅನಿಸುತ್ತದೆ.
ಲವ್ ಈಸ್ ಬ್ಲೈಂಡ್ ಅಂತಾರೆ.... ಆದರೆ ಸ್ವಲ್ಪ ಜಾಗ್ರತೆವಹಿಸಿದರೆ ಒಳ್ಳೆಯದು. ಲವ್ ಮಾಡಿ ಮದುವೆಯಾಗಿ ಕಷ್ಟಪಡುವುದಕ್ಕಿಂತ ಪ್ರಾರಂಭದಿಂದಲೇ ಅವನ ಸ್ವಭಾವ ನೋಡಿ ನಂತರ ಮದುವೆಯಾಗುವುದು ಒಳ್ಳೆಯದು.
ಇಂಥ ಗುಣಗಳಿರುವ ಹುಡುಗನನ್ನು ಮದುವೆಯಾದರೆ ಕಂಡಿತ ನೆಮ್ಮದಿಯ ಬದುಕು ಸಿಗಲ್ಲ ನೋಡಿ:

ಸ್ವಾರ್ಥಿ
ನಿಮಗೆ ತುಂಬಾ ಸಲ ಅವನು ತುಂಬಾ ಸ್ವಾರ್ಥಿ ಅನಿಸುವುದೇ? ಅವನಿಗೆ ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಬೇಕಾಗಿರಲ್ಲ, ಅವನು ಏನು ಹೇಳುತ್ತಾನೆ ಅದೇ ಸರಿ, ಸಿಟ್ಟೋ.. ಮೂಗಿನ ತುದಿಯಲ್ಲಿ ಅಂಥ ಹುಡುಗನ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ? ಹುಷಾರು ಕಣ್ರೀ..... ಆತ ಅವನಿಗೋಸ್ಕರ ನಿಮಗೆ ಏನು ಮಾಡಲು ಹೇಸಲ್ಲ, ಇಂಥವನ ಜೊತೆ ಸಂಬಂಧ ತೂಗುಕತ್ತಿ ತಲೆಮೇಲೆ ನೇತಾಡಿದಂತೆ. ನಿಮಗೆ ಗೊತ್ತಿಲ್ಲದೆ ಲವ್ ಮಾಡಿ, ನಂತರ ಅವನನ್ನು ಈ ಬಗೆಯ ಗುಣಗಳಿದೆ ಎಂದು ಗೊತ್ತಾದರೆ ನಿಮ್ಮ ಬಗ್ಗೆ ನೀವು ಜಾಗ್ರತೆವಹಿಸುವುದು ಒಳ್ಳೆಯದು.

ಸುಳ್ಳುಗಾರ
ಸುಳ್ಳು ಹೇಳುವವರನ್ನು ಗುರುತಿಸುವುದು ಕಷ್ಟ, ಏಕೆಂದರೆ ಸತ್ಯದ ತಲೆಗೆ ಹೊಡೆದಂತೆ ಸುಳ್ಳು ಹೇಳುವ ಕಲೆ ಗೊತ್ತಿರುತ್ತದೆ. ಅವರು ಸುಳ್ಳು ಹೇಳುವ ಮೂಲಕ ಯಾವುದೋ ದೊಡ್ಡ ವಿಷಯವನ್ನು ನಿಮ್ಮಿಂದ ಬಚ್ಚಿಡುತ್ತಿರುತ್ತಾರೆ. ಸುಳ್ಳಿನ ಅರಮನೆ ಕಟ್ಟು ಮೂಲಕ ನಿಮಗೆ ದೊಡ್ಡ ಮೋಸ ಮಾಡುತ್ತಿರುತ್ತಾರೆ. ಅವರು ಸುಳ್ಳು ಹೇಳಿ ಸಿಕ್ಕಿ ಬಿದ್ದರೆ ಅವರನ್ನು ಸಂಪೂರ್ಣವಾಗಿ ನಂಬಲು ಹೋಗಬೇಡಿ. ನಿಮ್ಮ ಹುಡುಗ ಸುಳ್ಳು ಹೇಳುತ್ತಿದ್ದಾನೆ ಎಂದು ಗೊತ್ತಾದರೆ, ಯಾವುದೇ ಕಾರಣಕ್ಕೆ ಸುಳ್ಳು ಹೇಳಬೇಡ ಎಂಬುವುದನ್ನು ನೇರವಾಗಿ ಹೇಳಿ. ಅವನು ತುಂಬಾ ಸುಳ್ಳು ಹೇಳುತ್ತಿದ್ದಾನೆ ಎಂದಾದರೆ ನಂಬಲು ಅರ್ಹನಲ್ಲ.

ಪ್ಲೇ ಬಾಯ್
ನಿಮ್ಮ ಹುಡುಗ ಪ್ಲೇ ಬಾಯ್ ಅಂದರೆ ಅವನು ಇತರ ಹೆಣ್ಮಕ್ಕಳ ಕಡೆ ಬೇಗನೆ ಆಕರ್ಷಿತನಾಗುತ್ತಾನೆ, ಅವನಿಗೆ ಫ್ಲರ್ಟ್ ಬುದ್ಧಿ ಇದೆ ಎಂದಾದರೆ ನೀವು ಸ್ವಲ್ಪ ಎಚ್ಚರವಹಿಸಿ. ಏಕೆಂದರೆ ಅವನನ್ನು ನೀವು ಸಂಪೂರ್ಣವಾಗಿ ನಂಬಿದರೆ ದುಃಖ ತಪ್ಪಿದ್ದಲ್ಲ. ಅವನಿಗೆ ಈ ಮೊದಲು ತುಂಬಾ ಗರ್ಲ್ ಫ್ರೆಂಡ್ಸ್ ಇದ್ದರೆ ಅಥವಾ ಅವನು ಬೇರೆ ಗರ್ಲ್ ಫ್ರೆಂಡ್ ಜೊತೆ ಚಾಟ್ ಮಾಡುತ್ತಿದ್ದರೆ ನೀವು ಎಚ್ಚರವಹಿಸಿ. ಅವರು ಅವರ ಬುದ್ಧಿ ತೋರಿಸಿಯೇ ತೋರಿಸುತ್ತಾರೆ, ಮೋಸ ಹೋಗಿ ಅತ್ತು ಪ್ರಯೋಜನವಿಲ್ಲ, ಆದ್ದರಿಂದ ಎಚ್ಚರವಹಿಸುವುದು ಒಳ್ಳೆಯದು ಅಲ್ವಾ...

ಅವನಿಗೆ ಬೇಕಾದಾಗ ಮಾತ್ರ ನಿಮ್ಮ ಜೊತೆ ಮಾತನಾಡುವವ
ಅವನ ಸ್ವಭಾವವೇ ನಿಮಗೆ ತುಂಬಾ ವಿಚಿತ್ರ ಅನಿಸುತ್ತಿದೆಯೇ? ಕೆಲವು ಸಂದರ್ಭದಲ್ಲಿ ಆತ ತುಂಬಾ ಚೆನ್ನಾಗಿರುತ್ತಾನೆ, ನಿಮ್ಮ ಮೇಲೆ ಪ್ರೀತಿಯ ಮಳೆ ಸುರಿಸುತ್ತಾನೆ, ಇನ್ನು ಕೆಲವು ಸಂದರ್ಭಗಳಲ್ಲಿ ಆತ ನಿಮ್ಮ ಬಗ್ಗೆ ಕೇರ್ ಮಾಡಲ್ಲ, ನಿಮ್ಮ ಭಾವನೆಗಳಿಗೆ ಸ್ಪಂದಿಸುವುದಿಲ್ಲ ಈ ರೀತಿ ವರ್ತಿಸುತ್ತಿದ್ದರೆ ನಿಮಗೆ ಅವನ ಜೀವನದಲ್ಲಿ ನನ್ನ ಪ್ರಾಮುಖ್ಯತೆ ಇದೆಯೇ ಎಂದು ನಿಮಗನಿಸುತ್ತಿದ್ದರೆ ಅಂಥ ವ್ಯಕ್ತಿ ಜೊತೆಗಿನ ಸಂಬಂಧ ಗಟ್ಟಿಯಾಗುವುದು ಕಷ್ಟ.

ನಿಮ್ಮ ಸಂಬಂಧ ಉಳಿಸಿಕೊಳ್ಳಲು ಯಾವುದೇ ಎಫರ್ಟ್ ಹಾಕದಿದ್ದರೆ
ನೀವು ಮಾತ್ರ ನಿಮ್ಮಿಬ್ಬರ ಸಂಬಂಧ ಉಳಿಸಿಕೊಳ್ಳಲು ತುಂಬಾ ಎಫರ್ಟ್ ಹಾಕುತ್ತಿದ್ದೀರಿ, ಆದರೆ ಅವರು ಅಂಥ ಯಾವ ಎಫರ್ಟ್ ಹಾಕುತ್ತಿಲ್ಲ ಎಂದಾದರೆ ಅಂಥ ಹುಡುಗನಿಂದ ದೂರ ಇರುವುದೇ ಒಳ್ಳೆಯದು. ಅವನಿಗೋಸ್ಕರ ನೀವು ಅವನನ್ನು ಭೇಟಿ ಮಾಡಲು ಹೋಗುತ್ತೀರಿ, ಅವನ ಇಷ್ಟಗಳನ್ನು ಅರ್ಥಮಾಡಿಕೊಂಡು ನಡೆದುಕೊಳ್ಳುತ್ತೀರಿ, ಆದರೆ ಅವನು ಮಾತ್ರ ನಿಮ್ಮ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದಾದರೆ ಒಮ್ಮೆ ಯೋಚಿಸುವುದು ಒಳ್ಳೆಯದು.

ಎಮೋಷನಲ್ ಕನೆಕ್ಷನ್ ಇರದಿದ್ದರೆ
ತನ್ನ ಮನಸ್ಸಿನಲ್ಲಿ ಏನಿದೆ ಎಂಬುವುದನ್ನು ಅವನು ನಿಮ್ಮ ಜೊತೆ ಹಂಚಿಕೊಳ್ಳಲ್ಲ, ಭವಿಷ್ಯದ ಬಗ್ಗೆ ನಿಮ್ಮ ಜೊತೆ ಚರ್ಚಿಸಲ್ಲ ಎಂದಾದರೆ ಅಂಥ ಹುಡುಗನ ಜೊತೆಗಿನ ಸಂಬಂಧದ ಬಗ್ಗೆ ಯೋಚಿಸುವುದು ಒಳ್ಳೆಯದು. ಏಕೆಂದರೆ ಇಂಥ ಹುಡುಗನ ಜೊತೆ ಮದುವೆಯಾದರೆ ತುಂಬಾ ಒಂಟಿತನ ಕಾಡುವುದು, ಅವನು ಜೊತೆಗೇ ಇರುತ್ತಾನೆ, ಸದಾ ಅವನ ಲೋಕದಲ್ಲಿ ಮುಳುಗಿರುತ್ತಾನೆ ನಿಮ್ಮ ಬಗ್ಗೆ ಚಿಂತಿಸುವುದಿಲ್ಲ ಎಂದಾದರೆ ನಿಮ್ಮ ಸಂಬಂಧ ಮುಂದುವರೆಸಬೇಕೆ ಎಂದು ಆಲೋಚಿಸಿ ಮುಂದುವರೆಯಿರಿ.

ತುಂಬಾ ಕಂಟ್ರೋಲ್ ಮಾಡುವವ
ಇಂಥ ವ್ಯಕ್ತಿ ಜೊತೆಗಿನ ಬದುಕು ಕೂಡ ನರಕ. ಪ್ರತಿಯೊಂದು ವಿಷಯಕ್ಕೆ ಕಂಟ್ರೋಲ್ ಮಾಡುತ್ತಾನೆ, ನೀನು ಹೀಗಿರಬೇಕು, ಹೀಗೆ ನಡೆದುಕೊಳ್ಳಬೇಕು, ಅವರ ಜೊತೆ ಮಾತನಾಡಬೇಡ, ಇವರ ಜೊತೆ ಮಾತನಾಡಬೇಡ, ಮುಖಕ್ಕೆ ಮೇಕಪ್ ಹಚ್ಚಬೇಡ ಎಂದೆಲ್ಲಾ ತುಂಬಾ ಕಂಟ್ರೋಲ್ ಮಾಡುವವನಾದರೆ ಅವನ ಜೊತೆಗಿನ ಬದುಕು ಉಸಿರುಗಟ್ಟಿದಂತಾಗುವುದು.
ಆದ್ದರಿಂದ ಲವ್ ಈಸ್ ಬ್ಲೈಂಡ್, ಆದರೆ ಲೈಫ್ ಅನ್ನು ಕಣ್ತೆರೆದು ನೋಡಿದರೆ ನಮ್ಮ ಬದುಕನ್ನು ನಮ್ಮ ಕೈಯಾರೆ ಹಾಳು ಮಾಡುವುದು ತಪ್ಪುತ್ತೆ, ಏನಂತೀರಿ?



Click it and Unblock the Notifications