Just In
Don't Miss
- News
ರಾಮನಗರ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದ ಬಿರುಗಾಳಿ ಸಹಿತ ಭಾರೀ ಮಳೆ
- Sports
ಐಪಿಎಲ್ 2021: ಪಂಜಾಬ್ vs ಚೆನ್ನೈ, ಮುಖಾಮುಖಿಯ ಅಂಕಿಅಂಶ
- Movies
ಸುದೀಪ್ ಅನಾರೋಗ್ಯದ ಬಗ್ಗೆ ಸ್ಪಷ್ಟನೆ: ನಿರೂಪಣೆಯಿಂದ ಹಿಂದೆ ಸರಿದ ಕಿಚ್ಚ
- Finance
ಏಪ್ರಿಲ್ 16ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Automobiles
ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್
- Education
CBSE Board Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಶುಭ ಕೋರಿದ ಸೋನು ಸೂದ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೀಗೆ ಆಯ್ಕೆ ಮಾಡಿದರೆ ನೀವು ಬಯಸಿದಂಥ ಸಂಗಾತಿಯೇ ಸಿಗುವರು
ಮದುವೆಯೆನ್ನುವುದು ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹತ್ತರವಾದ ತಿರುವು. ಹೊಸ ಸಂಗಾತಿಯ ಆಗಮನದಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಬಹುದು. ಮದುವೆಗಾಗಿ ಸಂಗಾತಿಯನ್ನು ಅರಸುವುದೇ ಒಂದು ದೊಡ್ಡ ಕೆಲಸ. ಬಹಳ ಸಮಯದವರೆಗೆ ಇದು ಹೀಗೆ ನಡೆಯುತ್ತದೆ. ಆದರೆ ಹೆಚ್ಚು ತಾಳ್ಮೆ ನಿಮಗೆ ಈ ಸಂದರ್ಭದಲ್ಲಿ ಅವಶ್ಯಕವಾಗಿ ಬೇಕು. ನಿಮ್ಮ ಜೀವನ ಸಂಗಾತಿಯನ್ನು ಆಯ್ದುಕೊಳ್ಳುವ ಸಂದರ್ಭದಲ್ಲಿ ನೀವು ಯಾವ ಎಚ್ಚರಿಕೆಗಳನ್ನು ಮೊದಲೇ ವಹಿಸಿದರೆ ಸೂಕ್ತ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.

ಇತರರು ಹೇಳುತ್ತಾರೆ, ನೀವು ಕೇಳುವಿರಿ, ಅದು ಬೇಡ
ಸಾಧಾರಣವಾಗಿ ನೀವು ನಿಮ್ಮ ಜೀವನ ಸಂಗಾತಿಯನ್ನು ಅರಸಲು ಹೊರಟಾಗ ನೇರವಾಗಿ ಅವರ ಬಳಿ ಅವರ ಬಗ್ಗೆ ಕೇಳುವ ಬದಲು ಬೇರೆಯವರ ಬಳಿ ಅವರ ವಿಷಯಗಳನ್ನು ವಿಚಾರಿಸುವುದು ಮತ್ತು ತಿಳಿದುಕೊಳ್ಳುವುದು ಸಾಮಾನ್ಯ. ಅವರ ಇದುವರೆಗಿನ ಜೀವನ, ಅವರು ನಡೆದು ಬಂದ ದಾರಿ, ಅವರ ವಿದ್ಯಾಭ್ಯಾಸ, ಅವರ ಕುಟುಂಬದ ಹಿನ್ನೆಲೆ ಹೀಗೆ ಇತ್ಯಾದಿ ವಿಚಾರಗಳನ್ನು ಬೇರೆಯವರಿಂದ ಕೇಳಿ ತಿಳಿದುಕೊಳ್ಳಲು ಪ್ರಯತ್ನ ಪಡುವಿರಿ. ಆದರೆ ಹೇಳುವವರು ನಿಮಗೆ ಸಂಪೂರ್ಣವಾಗಿ ಎಲ್ಲವನ್ನು ಸತ್ಯವಾಗಿ ಹೇಳುತ್ತಾರೆ ಎಂದೇನಿಲ್ಲ. ಜೊತೆಗೆ ಚೂರುಪಾರು ಸೇರಿಸಿಕೊಂಡು ಅಥವಾ ಇರುವ ವಿಷಯವನ್ನು ಬಿಟ್ಟು ಬೇರೆ ಹೇಳಬಹುದು.
ಉದಾಹರಣೆಗೆ ನಿಮ್ಮ ಸಂಗಾತಿ ಆಗಲು ಹೊರಟಿರುವವರು ಸ್ವಲ್ಪ ಒರಟು ಸ್ವಭಾವದವರು ಎಂದು ಹೇಳಬಹುದು. ಮತ್ತು ಮದುವೆಯಾದ ನಂತರ ಸರಿ ಹೋಗುತ್ತಾರೆ ಎಂದು ಸಹ ಹೇಳಬಹುದು. ಹಾಗೆಂದು ನೀವು ಮದುವೆಯಾದ ನಂತರ ಅವರನ್ನು ತಿದ್ದಿ ಬದಲಾಯಿಸಬಹುದು ಎಂಬ ಕನಸನ್ನು ಮಾತ್ರ ಎಂದಿಗೂ ಕಾಣಬೇಡಿ. ಏಕೆಂದರೆ ಪ್ರಪಂಚದಲ್ಲಿ ಒಬ್ಬೊಬ್ಬ ವ್ಯಕ್ತಿಗೆ ತನ್ನದೇ ಆದ ವಿಶೇಷ ಗುಣಗಳು ಇರುತ್ತವೆ. ಕೆಲವರು ಅದನ್ನು ಬದಲಾಯಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಆದರೂ ಕೂಡ ಆಗುವುದಿಲ್ಲ. ಇನ್ನು ಕೆಲವರು ತಮ್ಮ ಇಷ್ಟಕ್ಕೆ ತಕ್ಕಂತೆ ಬದುಕಲು ಮುಂದಾಗುತ್ತಾರೆ. ಆದರೆ ಜೀವನವೆಂಬುದು ಕೇವಲ ಒಬ್ಬರ ಜೊತೆ ಇನ್ನೊಬ್ಬರು ಹೊಂದಿಕೊಂಡು ಹೋಗುವುದು ಮಾತ್ರ ಎಂಬುದು ನಿಮ್ಮ ಅರಿವಿನಲ್ಲಿ ಇರಲಿ.

ನಿಮ್ಮ ಸಂಗಾತಿ ಆಗುವವರ ಜೊತೆ ಸ್ವಲ್ಪ ಸಮಯ ಕಳೆಯಿರಿ
ಈಗಿನ ಕಾಲದ ಯುವಜನತೆ ತುಂಬಾ ಸೂಕ್ಷ್ಮ. ಯಾವುದೇ ಕಾರಣಕ್ಕೂ ತಮ್ಮ ಮನಸ್ಸಿಗೆ ಒಪ್ಪದ ಕೆಲಸವನ್ನು ಮಾಡುವುದಿಲ್ಲ. ಮದುವೆಯ ವಿಚಾರ ಬಂದಾಗ ಕೂಡ ಮನೆಯಲ್ಲಿ ಅಪ್ಪ ಅಮ್ಮ ನೋಡಿದ ಹುಡುಗಿಯನ್ನು ಇಂದಿನ ಕಾಲದವರ ತರಹ ಸುಖಾಸುಮ್ಮನೆ ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ಅವರ ಬಳಿ ತಮಗೆ ಬೇಕಾದ ಮಾಹಿತಿಯನ್ನು ಕಲೆಹಾಕಲು ಬಯಸುತ್ತಾರೆ. ಅವರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡುತ್ತಾರೆ.
ಅದೇ ರೀತಿ ತಮ್ಮ ಬಗ್ಗೆ ಅವರ ಬಳಿ ಹೇಳಿಕೊಳ್ಳಲು ಹಾತೊರೆಯುತ್ತಾರೆ. ಹೀಗಿರುವಾಗ ನೀವು ಇಡೀ ಜೀವನ ನಿಮ್ಮ ಸಂಗಾತಿಯ ಜೊತೆ ಕಳೆಯಬೇಕಾದ ಸ್ಥಿತಿ ಇರುವುದರಿಂದ ಮೊದಲು ಅವರ ಬಗ್ಗೆ ತಿಳಿದುಕೊಳ್ಳಲು ಅವರನ್ನು ಅರ್ಥ ಮಾಡಿಕೊಳ್ಳಲು, ನಿಮ್ಮನ್ನು ನೀವು ಅರ್ಥ ಮಾಡಿಸಿಕೊಳ್ಳಲು ಸ್ವಲ್ಪ ಸಮಯ ಒಟ್ಟಿಗೆ ಮಾತುಕತೆಗಳ ವಿನಿಮಯದಲ್ಲಿ ಕಾಲಕಳೆಯುವುದು ಒಳ್ಳೆಯದು. ಇದರಿಂದ ನಿಮ್ಮ ಮತ್ತು ಅವರ ಮನಸ್ಸಿನ ಗೊಂದಲಗಳು ಸಾಕಷ್ಟು ಬಗೆಹರಿಯುತ್ತವೆ. ಇಬ್ಬರಿಗೂ ಒಪ್ಪಿಗೆ ಎಂದು ಇನ್ನಿಬ್ಬರಿಗೆ ಪರಸ್ಪರ ನಿರ್ಧಾರ ಆದ ನಂತರ ಮದುವೆಯ ಮುಂದಿನ ಹೆಜ್ಜೆ ಇಡಬಹುದು.

ನಿಮಗಾಗಿ ಹುಟ್ಟಿದ್ದಾರೆ ಎನ್ನುವವರನ್ನು ಅರಸಿ
ಇದು ಸಂಪೂರ್ಣವಾಗಿ ನಿಮ್ಮ ಅದೃಷ್ಟದ ಮೇಲೆ ನಿಂತಿರುತ್ತದೆ. ಒಬ್ಬ ಜೀವನ ಸಂಗಾತಿಯನ್ನು ಅರಸಲು ಪ್ರಾರಂಭ ಮಾಡಿದರೆ ಅದು ಒಂದೆರಡು ದಿನಗಳಿಗೆ ಮುಗಿಯುವ ಘಟನೆಯಲ್ಲ. ಕೆಲವರಿಗೆ ತಿಂಗಳುಗಳು ಹಿಡಿಯಬಹುದು. ಇನ್ನೂ ಕೆಲವರಿಗೆ ವರ್ಷಗಳೇ ಹಿಡಿಯಬಹುದು. ಆದರೂ ಕೂಡ ಚಲ ಬಿಡಬಾರದು. ಒಳ್ಳೆಯ ಸಂಸ್ಕೃತಿ ಇರುವ, ಒಳ್ಳೆಯ ಮನೆತನದಿಂದ ಬಂದಂತಹ ಸಂಗಾತಿ ಬೇಕೆಂದು ಪ್ರತಿಯೊಬ್ಬರೂ ಆಸೆಪಡುತ್ತಾರೆ.
ಏಕೆಂದರೆ ಪ್ರಾಮಾಣಿಕವಾಗಿ ಮುಂದಿನ ಜೀವನ ಅಚ್ಚುಕಟ್ಟಾಗಿ ನಡೆಯುತ್ತದೆ ಎನ್ನುವ ನಂಬಿಕೆ ಮೇಲೆ. ಅದೇ ರೀತಿ ಕೇವಲ ನಿಮ್ಮ ಸಂಗಾತಿ ಒಬ್ಬರೇ ನಿಮ್ಮ ಬೆಂಬಲಕ್ಕೆ ಇದ್ದರೆ ಸಾಲದು. ಬದಲಿಗೆ ನಿಮ್ಮ ಸಂಗಾತಿಯ ಕುಟುಂಬಸ್ಥರು ಕೂಡ ನಿಮ್ಮನ್ನು ಅವರ ಕುಟುಂಬದಲ್ಲಿ ಒಬ್ಬರನ್ನಾಗಿ ನೋಡುವಂತಹ ಮನಸ್ಥಿತಿಯನ್ನು ಹೊಂದಿರಬೇಕು. ಕೇವಲ ಅಂತಹ ಸಂಗಾತಿಯನ್ನು ಹುಡುಕಿ ಸಂಬಂಧವನ್ನು ಬೆಸೆದುಕೊಳ್ಳುವುದು ಒಳ್ಳೆಯದು.

ಅವರಿಗೆ ಯಾವುದೇ ಕೆಟ್ಟ ಅಭ್ಯಾಸಗಳು ಇರಬಾರದು
ಕೆಲವು ವ್ಯಕ್ತಿಗಳನ್ನು ನೋಡಿರಬಹುದು. ಅವರು ತಮ್ಮ ಪ್ರೊಫೈಲ್ ನಲ್ಲಿ ಆಗಾಗ ಸಿಗರೇಟ್ ಸೇದುವ ಅಭ್ಯಾಸವಿದೆ, ಆಗಾಗ ಮಧ್ಯಪಾನ ಮಾಡುವ ಅಭ್ಯಾಸವಿದೆ. ಆದರೆ ಇದು ನನಗೆ ಚಟವಾಗಿ ಅಂಟಿಕೊಂಡಿಲ್ಲ ಎಂದೆಲ್ಲಾ ಹಾಕಿಕೊಂಡಿರುತ್ತಾರೆ. ಇಂತಹ ಅಭ್ಯಾಸ ಅವರಿಗೆ ಸ್ವಲ್ಪ ಇದ್ದರೂ ಅಷ್ಟೇ, ಜಾಸ್ತಿ ಇದ್ದರೂ ಅಷ್ಟೇ. ಮುಂದೊಂದು ದಿನ ಇದು ದೊಡ್ಡದಾಗುವುದಿಲ್ಲ ಎನ್ನುವ ಯಾವುದೇ ಭರವಸೆ ಇಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಇಂತಹ ಅಭ್ಯಾಸಗಳನ್ನು ಸಣ್ಣಪುಟ್ಟ ಪ್ರಮಾಣಗಳಲ್ಲಿ ಹೊಂದಿರುವ ವ್ಯಕ್ತಿಗಳನ್ನು ನಿಮ್ಮ ಬಾಳಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳದಿರುವುದು ಒಳ್ಳೆಯದು.

ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುವವರು ನಿಮ್ಮ ಸಂಗಾತಿ ಆಗಬೇಕು
ಫೋಟೋ ನೋಡಿ ಅವರು ನಿಮಗೆ ಇಷ್ಟವಾದರೆ ಹೇಗಾದರೂ ಮಾಡಿ ಇವರನ್ನು ಮದುವೆಯಾದರೆ ನಮ್ಮ ಜೀವನ ಸುಖಕರವಾಗಿರುತ್ತದೆ ಎಂಬ ಭಾವನೆ ನಿಮ್ಮಲ್ಲಿ ಮೂಡಿ ಬರುವುದು ಸಹಜ. ಆದರೆ ಇದು ಕೇವಲ ಆರಂಭಿಕ ದಿನಗಳಲ್ಲಿ ಮಾತ್ರ. ದಿನಕಳೆದಂತೆ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತ ಹೋಗುತ್ತವೆ. ಅಂತಹ ಸಂದರ್ಭದಲ್ಲಿ ನಿಮ್ಮ ಅಂದ ಚಂದಕ್ಕಿಂತ ಮುಖ್ಯವಾಗುವುದು ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುವ ನಿಮ್ಮ ಸಂಗಾತಿಯ ಒಳ್ಳೆಯ ಮನಸ್ಸು. ಕೇವಲ ಅಂತಹ ವ್ಯಕ್ತಿ ಮಾತ್ರ ನಿಮ್ಮ ಜೀವನದಲ್ಲಿ ಬಂದರೆ ಒಳ್ಳೆಯದು. ಅದನ್ನು ಬಿಟ್ಟು ನಿಮಗೆ ಮೊದಲೇ ಇರುವ ಕಷ್ಟಗಳಿಗೆ ಮತ್ತಷ್ಟು ತುಪ್ಪ ಸುರಿಯುವ ಮನಸ್ಥಿತಿ ಹೊಂದಿರುವವರು ಸ್ವಲ್ಪ ದೂರವೇ ಉಳಿದರೆ ಒಳ್ಳೆಯದು.
ಒಂದೇ ಬಗೆಯ ಆಲೋಚನೆಗಳು ಹೆಚ್ಚು ಸೂಕ್ತ
ಇದು ಸ್ವಲ್ಪ ಕಷ್ಟದ ಕೆಲಸ ಎನಿಸಬಹುದು. ಏಕೆಂದರೆ ನೀವು ಮದುವೆಯಾಗುತ್ತಿರುವುದು ಸಂಪೂರ್ಣವಾಗಿ ವಿಭಿನ್ನ ವಾತಾವರಣದಲ್ಲಿ ಬೆಳೆದ ನಿಮಗೆ ಹೋಲಿಸಿದರೆ ಸಂಪೂರ್ಣವಾಗಿ ಬೇರೆ ಬಗೆಯ ಗುಣಲಕ್ಷಣಗಳನ್ನು ಹೊಂದಿರುವ ಸಂಗಾತಿಯನ್ನು. ಹಾಗಾಗಿ ಮುಂದಿನ ಜೀವನವನ್ನು ಕಳೆಯಲು ಸಾಕಷ್ಟು ವಿಷಯಗಳಲ್ಲಿ ಒಬ್ಬರಿಗೊಬ್ಬರು ತ್ಯಾಗ ಮಾಡಬೇಕಾಗಿ ಬರುತ್ತದೆ. ತಮ್ಮ ಸಣ್ಣ ಪುಟ್ಟ ಆಸೆಗಳನ್ನು ಬದಿಗೊತ್ತಿ ಜೀವನ ನಡೆಸಬೇಕಾಗಿ ಬರುತ್ತದೆ. ಎಲ್ಲ ವಿಚಾರದಲ್ಲೂ ನೀವು ನಿಮ್ಮ ಸಂಗಾತಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ಬದುಕಬೇಕಾಗುತ್ತದೆ. ಹಾಗಾಗಿ ಇಂತಹ ಕೆಲವು ಬಹುಮುಖ್ಯ ಎನಿಸಿದ ವಿಚಾರಗಳನ್ನು ನಿಮ್ಮ ಸಂಗಾತಿಯ ಜೊತೆ ಮೊದಲು ಕುಳಿತು ಚರ್ಚೆ ಮಾಡಿ. ಏಕೆಂದರೆ ನಿಮ್ಮಿಬ್ಬರ ಮಧ್ಯೆ ಹೆಚ್ಚು ವ್ಯತ್ಯಾಸಗಳು ಕಂಡು ಬಂದರೆ ಮುಂದೆ ನೀವು ಜೀವನ ನಡೆಸುವ ಪರಿ ಕಷ್ಟವಾಗಬಹುದು.
ಹಾಗಾಗಿ ನಿಮಗೆ ಹೊಂದಿಕೊಳ್ಳುವ ಸಂಗಾತಿಯ ಆಯ್ಕೆಯ ವಿಷಯದಲ್ಲಿ ನೀವು ಇಂತಹ ಹಲವಾರು ವಿಚಾರಗಳ ಕಡೆ ಗಮನಕೊಡಬೇಕು.