For Quick Alerts
ALLOW NOTIFICATIONS  
For Daily Alerts

ಪ್ರೀತಿಯಲ್ಲಿ ಈ ವಿಚಾರಗಳು ಬಂದರೆ ಸಹಿಸಿಕೊಂಡು ಇರುವುದು ಎಂದಿಗೂ ಸರಿಯಲ್ಲ..

|

ಪ್ರೀತಿಯಲ್ಲಿ ಎಲ್ಲವೂ ಚೆನ್ನ ಎಂಬ ಮಾತಿದೆ. ಹಾಗಂತ ಎಲ್ಲವನ್ನೂ ಸಹಿಸಿಕೊಂಡು ಇರುವುದು ಸರಿಯಲ್ಲ. ಪರಸ್ಪರ ಗೌರವ, ಪ್ರೀತಿಯ ನಡುವೆ ಪ್ರತ್ಯೇಕ ಜಾಗ ಹಾಗೂ ಸಹಕಾರ ಎಂಬುವುದು ತುಂಬಾ ಮುಖ್ಯ. ಅದಕ್ಕಾಗಿ ನಿರ್ದಿಷ್ಟ ಗಡಿಯೊಂದನ್ನು ನಿರ್ಮಿಸಿಕೊಳ್ಳುವುದು ಉತ್ತಮ. ಆ ಗಡಿ ದಾಟಿ ನಿಮ್ಮ ಸಂಗಾತಿ ಬರಬಾರದು. ಇಲ್ಲವಾದಲ್ಲಿ ಇದು ಮುಂದೆ ವೈಯಕ್ತಿಕ ಬೆಳವಣಿಗೆಗೆ ಅಡ್ಡಿಯಾಗುವುದು. ಈ ಕಾರಣದಿಂದಾಗಿ, ಸಂಬಂಧದಲ್ಲಿ ನೀವು ಎಂದಿಗೂ ಸಹಿಸಬಾರದಂತಹ ವಿಚಾರಗಳ ಬಗ್ಗೆ ಹೇಳಿದ್ದೇವೆ.

ಸಂಬಂಧದಲ್ಲಿ ಸಹಿಸಿಕೊಳ್ಳಬಾರದಂತಹ ವಿಷಯಗಳನ್ನು ಈ ಕೆಳಗೆ ನೀಡಿಲಾಗಿದೆ:

ನಡವಳಿಕೆಯನ್ನು ನಿಯಂತ್ರಿಸುವುದು:

ನಡವಳಿಕೆಯನ್ನು ನಿಯಂತ್ರಿಸುವುದು:

ನಿಮ್ಮನ್ನು ನಿಮಿಷ್ಟದಂತೆ ಬದುಕಲು ಬಿಡುವುದು ನಿಜವಾದ ಪ್ರೀತಿಯ ಲಕ್ಷಣ. ಆದರೆ ಕೆಲವೊಮ್ಮೆ ನಿಮ್ಮ ಸಂಗಾತಿ ನಿಮಗೆ ತಿಳಿಯದಂತೆ, ಒಂದುವೇಳೆ ತಿಳಿದರೂ ನಿಮಗೆ ಸರಿಯೆಂದು ಅನಿಸುವಂತೆ ನಿಮ್ಮ ನಡವಳಿಕೆ ಮತ್ತು ಕಾರ್ಯಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಅವರು ತಮ್ಮ ಆದ್ಯತೆಗಳು ಮತ್ತು ಇಚ್ಛೆಗೆ ಅನುಗುಣವಾಗಿ ಬದಲಾಯಿಸಲು ಅಥವಾ ನಿಯಂತ್ರಣ ಮಾಡಲು ಪ್ರಯತ್ನಿಸುತ್ತಾರೆ. ಎಲ್ಲಾ ಸಮಯದಲ್ಲೂ ಎಲ್ಲಿದ್ದೀರಿ ಮತ್ತು ಯಾರೊಂದಿಗೆ ಇದ್ದೀರಿ ಎಂಬುದರ ಕುರಿತು ನಿರಂತರ ಮಾಹಿತಿಯನ್ನು ಪಡೆಯಲು ಅವರು ಬಯಸಬಹುದು.

ಭಾವನಾತ್ಮಕ ನೋವು:

ಭಾವನಾತ್ಮಕ ನೋವು:

ನಿಮ್ಮ ಸಂಗಾತಿ ನಿಮ್ಮ ಕೆಲಸದ ಬಗ್ಗೆ ಚುಚ್ಚಿ ಮಾತನಾಡುವುದು, ನಿಮ್ಮ ಯೋಚನೆ, ನೆನಪು, ಆಸೆಗಳ ಕುರಿತಂತೆ ಕೆಟ್ಟದಾಗಿ ಮಾತನಾಡಿ ನೋವು ನೀಡುವುದನ್ನು ಸಹ ನೀವು ಎಂದಿಗೂ ಸಹಿಸಿಕೊಂಡು ಕೂರುವುದು ಸರಿಯಲ್ಲ. ಅವರು ನಿಮ್ಮನ್ನು ಗೇಲಿ ಮಾಡಬಹುದು, ನಿಮ್ಮ ಭಾವನೆಗಳು ಅಪ್ರಸ್ತುತ ಹಾಗೂ ನಿಷ್ಪ್ರಯೋಜಕ ಎಂದು ಹೇಳುವುದನ್ನೂ ಸಹ ತರವಲ್ಲ.

ದೈಹಿಕ ಕಿರುಕುಳ:

ದೈಹಿಕ ಕಿರುಕುಳ:

ಇದನ್ನು ಯಾವ ಕಾರಣಕ್ಕೂ ಸಹಿಸುವ ಮಾತಿಲ್ಲ. ನಿಮ್ಮ ಸಂಗಾತಿ ನಿಮ್ಮನ್ನು ಮಾನಸಿಕವಾಗಿ ಅಥವಾ ದೈಹಿಕವಾಗಿ ಹಿಂಸಿಸಿದರೆ, ನಿಂದಿಸಿದರೆ ಅಥವಾ ನಿಮ್ಮನ್ನು ಹೊಡೆದರೆ, ನೀವು ಅವರಿಂದ ದೂರವಿರಬೇಕು. ಏಕೆಂದರೆ ಇದಕ್ಕಿಂತ ದೊಡ್ಡ ನೋವು ಬೇರೊಂದಿಲ್ಲ. ನಿಮ್ಮನ್ನೇ ನಂಬಿಕೊಂಡ ಬಂದ ವ್ಯಕ್ತಿಗೆ ನೀವು ಈ ರೀತಿಯ ದೈಹಿಕ ಹಿಂಸೆ ನೀಡಿದರೆ ಅವರ ಹೃದಯ ಚೂರಾಗಬಹುದು.

ಸ್ವಾಭಿಮಾನದ ಬಗ್ಗೆ ಮಾತು:

ಸ್ವಾಭಿಮಾನದ ಬಗ್ಗೆ ಮಾತು:

ನಿಮ್ಮ ಸಂಗಾತಿ ನೀವು ಇರುವಾಗ ಯಾವಾಗಲೂ ನಿಮ್ಮನ್ನು ಅನುಮಾನಿಸುತ್ತೀರಾ? ಹೌದು ಎಂದಾದರೆ, ನಿಮ್ಮ ಸಂಗಾತಿ ನಿಮಗೆ ಆತ್ಮವಿಶ್ವಾಸ ಮತ್ತು ಒಳ್ಳೆಯದನ್ನುಂಟುಮಾಡುವಲ್ಲಿ ಸೋತಿದ್ದಾರೆ ಎಂದರ್ಥ. ನಿಮ್ಮ ಸಂಗಾತಿ ನಿಮಗೆ ಭಯ ಹುಟ್ಟಿಸುವಂತಹ ವಿಷಯಗಳನ್ನು ಹೇಳುತ್ತಿದ್ದರೆ, ಅವರಿಗೆ ನಿಮ್ಮ ಏಳಿಗೆ ಬೇಕಾಗಿಲ್ಲ, ಅದಕ್ಕೆ ಅಂತಹ ಮಾತುಗಳನ್ನಾಡಿ ಕುಗ್ಗಿಸುತ್ತಿದ್ದಾರೆ ಎಂಬುದನ್ನು ನೆನಪಿನಲ್ಲಿಡಿ.

ಬದಲಾವಣೆ:

ಬದಲಾವಣೆ:

ನಿಮ್ಮನ್ನು ನಿಜವಾಗಿಯೂ ಪ್ರೀತಿಸುವವರಾಗಿದ್ದರೆ, ನೀವು ಹೇಗಿದ್ದರೂ ನಿಮ್ಮನ್ನು ಒಪ್ಪಿಕೊಳ್ಳಬೇಕು. ನೀವು ಯಾರಿಗಾಗಿಯೂ ಬದಲಾಗುವ ಅವಶ್ಯಕತೆಯಿಲ್ಲ. ನಿಮಗೆ ಬದಲಾಗಬೇಕು ಎಂಬ ಭಾವನೆ ಬರುವವರೆಗೆ ಬದಲಾಗುವ ಅವಶ್ಯಕತೆ ಇಲ್ಲ. ಒಂದುವೇಳೆ ನಿಮ್ಮ ಸಂಗಾತಿ ನಿಮ್ಮ ವ್ಯಕ್ತಿತ್ವ ಅಥವಾ ನೋಟವನ್ನು ಅವರ ಆದ್ಯತೆಗಳಿಗೆ ಅನುಗುಣವಾಗಿ ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ ಅದು ಸರಿಯಲ್ಲ.

ನಿಮ್ಮನ್ನು ಪ್ರತ್ಯೇಕಿಸುವುದು:

ನಿಮ್ಮನ್ನು ಪ್ರತ್ಯೇಕಿಸುವುದು:

ನಿಮ್ಮ ಸಂಗಾತಿಗೆ ಅಸುರಕ್ಷಿತ ಭಾವನೆ ಮೂಡುವುದೆಂದು ಇತರ ಸ್ನೇಹಿತರೊಂದಿಗೆ ಸಮಯ ಕಳೆಯುವುದನ್ನು ಬಿಡಬೇಕಾಗಿಲ್ಲ. ನೀವು ಯಾರಿಂದಲೂ ಪ್ರತ್ಯೇಕವಾಗುವ ಅವಶ್ಯಕತೆಯಿಲ್ಲ. ನೀವು ಇತರರೊಂದಿಗೆ ಬೆರೆಯುವುದನ್ನು ಸಹಿಸದ ಅವರು ನಿಧಾನವಾಗಿ ಇತರರಿಂದ ಬೇರ್ಪಡಿಸಲು ಕಾರಣವಾಗುವ ಸಂಗತಿಗಳೊಂದಿಗೆ ನಿಮ್ಮ ಮನಸ್ಸನ್ನು ಪೋಷಿಸುತ್ತಾರೆ. ನಿಮ್ಮ ವೈಯಕ್ತಿಕ ಜೀವನವೂ ಮುಖ್ಯ, ಅದನ್ನು ನಿಮ್ಮ ಸಂಗಾತಿ ಗೌರವಿಸಲು ಸಾಧ್ಯವಾಗದಿದ್ದರೆ, ಅವರು ಯೋಗ್ಯರಲ್ಲ ಎಂಬುದನ್ನು ಯಾವಾಗಲೂ ನೆನಪಿಡಿ.

English summary

Things you Should Never Tolerate in a Relationship in Kannada

Here we talking about Things you should never tolerate in a relationship in Kannada, read on
Story first published: Saturday, July 3, 2021, 18:03 [IST]
X
Desktop Bottom Promotion