Just In
Don't Miss
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- News
ಮುಡಾ ನಿವೇಶನಗಳ ಅಭಿವೃದ್ಧಿಗೆ ಒನ್ ಟೈಂ ಸೆಟ್ಲಮೆಂಟ್
- Automobiles
ಬಿಡುಗಡೆಗೆ ಸಜ್ಜಾಗುತ್ತಿದೆ 2021ರ ಮಾರುತಿ ಎಕ್ಸ್ಎಲ್5 ಕಾರು
- Movies
ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರತಂಡದಿಂದ ಪ್ರಮುಖ ಅಪ್ಡೇಟ್
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ವಿಷಯ ಬಾಯ್‌ಫ್ರೆಂಡ್‌ಗೆ ಹೇಳದೇ ಇದ್ದರೆ ಸೇಫ್
ಈ ಪ್ರೀತಿ, ಪ್ರೇಮ, ಪ್ರಣಯ ಎಷ್ಟು ಸುಂದರವೋ ಅಷ್ಟೇ ಕಾಂಪ್ಲಿಕೇಟ್ ಕೂಡ ಹೌದು ಕಣ್ರೀ..ಯಾವುದೋ ಒಂದು ಕಾರಣಕ್ಕೆ ಪ್ರೀತಿ ಹುಟ್ಟುತ್ತದೆ, ಏನೋ ಸಿಲ್ಲಿ ಕಾರಣಕ್ಕೆ ಬ್ರೇಕಪ್ ಆಗುವ ಎಷ್ಟೋ ಸಂಬಂಧಗಳನ್ನು ನೋಡುತ್ತೇವೆ.
ಲವ್‌ನಲ್ಲಿ ಬಿದ್ದ ಮೇಲೆ ಹುಡುಗಿಯರಿಗೆ ಒಂದು ಗುಣವಿರುತ್ತದೆ, ಪ್ರತಿಯೊಂದು ವಿಷಯವನ್ನು ತನ್ನ ಬಾಯ್‌ಫ್ರೆಂಡ್ ಬಳಿ ಹೇಳಿಕೊಳ್ಳುವುದು. ಕೆಲವು ಹೆಣ್ಮಕ್ಕಳಂತೂ ಬೆಳಗ್ಗೆ ಎದ್ದ ಕ್ಷಣದಿಂದ ಆ ದಿನದಲ್ಲಿ ನಡೆಯುವ ಸಣ್ಣ-ಪುಟ್ಟ ವಿಷಯಗಳನ್ನೂ ಬಾಯ್‌ಫ್ರೆಂಡ್ ಜೊತೆ ಹೇಳುತ್ತಾರೆ. ಹೀಗೆ ಹೇಳುವುದರಿಂದ ಇವಳಿಗೆ ಅವನ ಜೊತೆ ಸದಾ ಫೋನ್‌ನಲ್ಲಿ ಮಾತನಾಡಲು ಒಂದು ಟಾಪಿಕ್ ಸಿಗುತ್ತದೆ.
ಅವನು ಕೂಡ ಅದನ್ನೆಲ್ಲಾ ಮೊದ ಮೊದಲಿಗೆ ತುಂಬಾ ಆಸಕ್ತಿಯಿಂದ ಕೇಳುತ್ತಾನೆ, ಬರ್ತಾ... ಬರ್ತಾ ಇವಳ ಕತೆ ಕೇಳುವುದು ಅವನಿಗೂ ಬೋರ್ ಅನಿಸಲಾರಂಭಿಸಿರುತ್ತದೆ. ಆದ್ದರಿಂದ ನೀವು ಸಣ್ಣ-ಪುಟ್ಟ ವಿಷಯವನ್ನೂ ಅವರಿಗೆ ವರದಿ ಒಪ್ಪಿಸದೇ ಇರುವುದು ಒಳ್ಳೆಯದು, ಇನ್ನು ಈ ವಿಷಯಗಳನ್ನು ನೀವು ಅವರ ಜೊತೆ ಹಂಚಿಕೊಳ್ಳದೇ ಇದ್ದರೆ ನಿಮ್ಮ ರಿಲೇಷನ್‌ಶಿಪ್ ಸೇಫ್ ನೋಡಿ:

1. ನಿಮ್ಮ ಸೋಷಿಯಲ್ ಮೀಡಿಯಾ ಪಾಸ್‌ವರ್ಡ್
ನಿಮ್ಮಿಬ್ಬರ ಸಂಬಂಧದಲ್ಲಿ ಯಾವುದೇ ಮುಚ್ಚುಮರೆ ಇರಬಾರದು, ಹಾಗಂತ ನಿಮ್ಮ ಸೋಷಿಯಲ್ ಮೀಡಿಯಾ ಪಾಸ್‌ವರ್ಡ್ ಅವರಿಗೆ ಕೊಡದೇ ಇರುವುದು ಒಳ್ಳೆಯದು. ಅಷ್ಟಕ್ಕೂ ಅವ ನಿಮ್ಮ ಬಾಯ್ ಫ್ರೆಂಡ್, ಅವನ ಮೇಲೆ ತುಂಬಾ ನಂಬಿಕೆ ನಿಮಗಿರುತ್ತದೆ, ಆದರೆ ಪಾಸ್‌ವರ್ಡ್ ಕೊಡದೇ ಇದ್ದರೆ ಒಳ್ಳೆಯದು.
ಆತ ನಿಮ್ಮ ಸೋಷಿಯಲ್ ಮೀಡಿಯಾದಲ್ಲಿ ಅನುಮಾನದಿಂದ ಕಣ್ಣಾಡಿಸುವುದು, ಇನ್ನು ನಿಮ್ಮ ಮೇಲೆ ಕೋಪಗೊಂಡಾಗ ನಿಮ್ಮ ಸಾಮಾಜಿಕ ತಾಣವನ್ನು ಮಿಸ್‌ಯೂಸ್ ಮಾಡಲ್ಲ ಅಂತ ಹೇಗೆ ತಾನೆ ಹೇಳುವಿರಿ. ಪ್ರೀತಿಯಲ್ಲಿ ನಂಬಿಕೆ ಿರಬೇಕು, ಆದರೆ ಅತಿಯಾದ ನಂಬಿಕೆ ಒಳ್ಳೆಯದಲ್ಲ, ಅಲ್ವಾ?

2. ಅವನ ಸ್ನೇಹಿತರ ಬಗ್ಗೆ ಹೇಳುವುದು
ಅವನ ಸ್ನೇಹಿತರು ಹಾಗೂ ಮನೆಯವರು ನಿಮಗೆ ಇಷ್ಟವಾದರೆ ಅವರನ್ನು ಹೊಗಳುವುದರಿಂದ ಏನೂ ತೊಂದರೆಯಿಲ್ಲ. ಆದರೆ ಅವರಲ್ಲಿ ನಿಮಗೆ ಯಾರನ್ನಾದರೂ ಇಷ್ಟವಾಗಿಲ್ಲ ಅಂದರೆ ಅದನ್ನು ಹೇಳುವುದರಿಂದ ನಿಮ್ಮಿಬ್ಬರ ಸಂಬಂಧದಲ್ಲಿ ಬಿರುಕು ಮೂಡಬಹುದು ಹುಷಾರ್!
ಏಕೆಂದರೆ ಸ್ನೇಹ ಬೇರೆ- ಪ್ರೀತಿ ಬೇರೆ. ನಿಮ್ಮ ಪ್ರೀತಿಗಾಗಿ ತುಂಬಾ ಸಮಯದಿಂದ ಅವರ ಸ್ನೇಹಕ್ಕೆ ನೋವುಂಟಾಗುವುದನ್ನು ಅವರು ಬಯಸುವುದಿಲ್ಲ. ಅವರ ಬಗ್ಗೆ ಸದಾ ದೂರುವುದು, ಅವನ ಮನೆಯವರ ಬಗ್ಗೆ ಕೆಟ್ಟದಾಗಿ ನಿಮ್ಮ ಅಭಿಪ್ರಾಯಗಳನ್ನು ಹೇಳುವುದನ್ನು ಮಾಡಲೇಬೇಡಿ.

3. ಮಾಜಿಯ ಬಗ್ಗೆ ನಿಮ್ಮ ಫೀಲಿಂಗ್ ಹೇಳಿಕೊಳ್ಳುವುದು
ನೀವು ಈಗಾಗಲೇ ಒಬ್ಬರನ್ನು ಪ್ರೀತಿಸಿ ಅದು ಬ್ರೇಕಪ್ ಆಗಿದ್ದರೆ ಆ ವಿಷಯವನ್ನು ಹೇಳಿ ತೊಂದರೆಯಿಲ್ಲ, ಅದು ಗೊತ್ತಾದರೆ ಒಳ್ಳೆಯದೇ, ಆದರೆ ಅವನ ಮೇಲೆ ನಿಮಗಿರುವ ಫೀಲಿಂಗ್, ನಿಮ್ಮ ರೊಮ್ಯಾಂಟಿಕ್ ದಿನಗಳು ಇವಗಳ ಬಗ್ಗೆ ಹೇಳಲು ಹೋಗದಿರುವುದೇ ಒಳ್ಳೆಯದು.
ಅಲ್ಲದೆ ಮಾಜಿ ಪ್ರೇಮಿ ಜೊತೆ ಈಗ ಸ್ನೇಹ ಸಂಬಂಧವಿದ್ದರೆ ಅವರ ಜೊತೆ ಇರುವ ಎಲ್ಲಾ ಸಂಬಂಧ ಕಡಿದುಕೊಳ್ಳುವುದೇ ಒಳ್ಳೆಯದು. ಏಕೆಂದರೆ ಆ ನಂಟು ನಿಮ್ಮ ಈಗೀನ ಸಂಬಂಧಕ್ಕೆ ಧಕ್ಕೆ ತರಬಹುದು. ಅನಾವಶ್ಯಕವಾಗಿ ನಿಮ್ಮಿಬ್ಬರ ಪ್ರೀತಿಯಲ್ಲಿ ತೊಡಕು ಉಂಟಾಗಲು ಕಳೆದು ಹೋದ ಗತಕಾಲ ಕಾರಣವಾಗಬಾರದು ಅಲ್ಲವೇ?

4. ನಿಮ್ಮ ಇತ್ತೀಚಿನ ಕ್ರಷ್
ನಿಮಗೆ ನಿಮ್ಮ ಆಫೀಸ್‌ನಲ್ಲೂ ಅಥವಾ ಸ್ನೇಹಿತರ ಬಳಗದಲ್ಲೂ ಯಾವುದಾದರೂ ವ್ಯಕ್ತಿ ಮೇಲೆ ಕ್ರಷ್ ಆಗಿದ್ದರೆ ಅದರ ಕುರಿತು ನಿಮ್ಮ ಬಾಯ್‌ಫ್ರೆಂಡ್‌ಗೆ ಹೇಳಲು ಹೋಗಬೇಡಿ. ಅವಮನು ನೋಡಲು ಸುಂದರವಾಗಿದ್ದಾನೆ ಎಂದು ನಿಮಗೆ ಕ್ರಷ್ ಆಗುವುದು ಸಹಜ, ಆದರೆ ಅದನ್ನು ನಿಮ್ಮ ಪ್ರೇಮಿಯ ಹೇಳುವ ಅಗ್ಯತವಿಲ್ಲ.
ಏಕೆಂದರೆ ನಿಮಗೇನು ಆ ವ್ಯಕ್ತಿ ಮೇಲ ಲವ್ ಆಗಿರಲ್ಲ, ಏನೋ ನೋಡೋಕೆ ಚೆನ್ನಾಗಿದ್ದಾನೆ ಅಂತ ಅನಿಸಿರುತ್ತದೆ. ಆದರೆ ಅವನ ಬಗ್ಗೆ ನಿಮ್ಮ ಬಾಯ್‌ಫ್ರೆಂಡ್ ಬಳಿ ಹೇಳಿದರೆ ಆತ ಸುಮ್ಮನೆ ನಿಮ್ಮನ್ನು ಸಂಶಯ ಪಡಬಹುದು, ಏಕೆ ಸುಮ್ಮನೆ ಕಾಂಪ್ಲಿಕೇಟ್ ಮಾಡುವುದು ಅಲ್ವಾ?

5. ಬೇರೆಯವರು ಹೇಳಿದ್ದ ಮಾತುಗಳು
ನೂರು ಜನರದ್ದು ನೂರು ದೃಷ್ಟಿಕೋನ, ಅಭಿಪ್ರಾಯವಿದ್ದೇ ಇರುತ್ತದೆ. ಕೆಲವರು ನಿಮ್ಮಿಬ್ಬರ ಸಂಬಂಧದ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು.
ಅದನ್ನೆಲ್ಲಾ ನಿಮ್ಮ ಬಾಯ್‌ಫ್ರೆಂಡ್ ಬಳಿ ಹೇಳಲು ಹೋಗಬೇಡಿ. ನೀವಿಬ್ಬರು ಮುಂದೆ ಖುಷಿಯಾಗಿರುತ್ತೀರಾ, ನಿಮ್ಮ ಬಾಯ್‌ಫ್ರೆಂಡ್ ಒಳ್ಳೆಯವನು, ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ಭರವಸೆ ನಿಮಗಿದ್ದರೆ ಸುಮ್ಮನೆ ತಲೆಕೆಡಿಸಿಕೊಂಡು, ಅವನ ಮನಸ್ಸನ್ನೂ ಹಾಳು ಮಾಡುವ ಪ್ರಯತ್ನ ಮಾಡದಿರಿ.