For Quick Alerts
ALLOW NOTIFICATIONS  
For Daily Alerts

ಯುವಕರ ಈ ಗುಣಗಳನ್ನು ಹೆಣ್ಣುಮಕ್ಕಳು ಎಂದಿಗೂ ಇಷ್ಟಪಡುವುದಿಲ್ಲ!

|

ವಿರುದ್ಧ ಲಿಂಗವನ್ನು ಆಕರ್ಷಿಸಲು ನಿಮ್ಮಿಂದ ಸಾಧ್ಯವಾಗಬಹುದಾದದ್ದನ್ನೆಲ್ಲಾ ನೀವು ಮಾಡುತ್ತಲೇ ಇದ್ದರೂ ಎಲ್ಲ ಪ್ರಯತ್ನಗಳೂ ವಿಫಲವಾಗುತ್ತಲೇ ಇರುತ್ತವೆ. ಈ ವಿಚಾರದಲ್ಲಿ ನಿಮ್ಮ ಕೆಲವು ಕ್ರಿಯೆಗಳು ಮತ್ತು ವರ್ತನೆಗಳು ತದ್ವಿರುದ್ಧ ಪರಿಣಾಮಗಳನ್ನೇ ಉಂಟುಮಾಡುತ್ತಿದೆ ಎಂಬುದನ್ನು ನೀವು ಅರಿತಾಗ ಸಾಕಷ್ಟು ಬೇಸರ ಉಂಟಾಗಬಹುದು. ಹುಡುಗಿಯರನ್ನು ನಿಮ್ಮತ್ತ ಸೆಳೆಯುವುದಕ್ಕೆಂದೇ ನೀವು ಅಷ್ಟೆಲ್ಲಾ ಪ್ರಯತ್ನಿಸುತ್ತಿದ್ದರೂ ನಿಮ್ಮ ವರ್ತನೆಯ ಕಾರಣದಿಂದ ಹುಡುಗಿಯರು ನಿಮ್ಮಿಂದ ದೂರವಾಗಿಯೇ ಉಳಿಯಬಹುದು ಎಂಬುದರ ಬಗ್ಗೆ ಸಣ್ಣ ಕಲ್ಪನೆಯೂ ಕೂಡಾ ವಾಸ್ತವವಾಗಿ ನಿಮಗಾಗಿರಲಿಕ್ಕಿಲ್ಲ. ನೀವು ಇಷ್ಟಪಟ್ಟ ಅಥವಾ ಸರಿಯಾದ ಹುಡುಗಿಯರನ್ನು ನಿಮ್ಮತ್ತ ನಿಜಕ್ಕೂ ಸೆಳೆಯಲು ಅವರನ್ನು ಆಕರ್ಷಿಸಲು ನೀವು ಮಾಡಬಾರದ ವಿಷಯಗಳೇನು ಹಾಗೂ ನಮ್ಮ ಯಾವ ವರ್ತನೆಗಳು ಯುವತಿಯರು ಹೆಚ್ಚು ಇಷ್ಟಪಡುತ್ತಾರೆ ಎಂಬುದರ ಕುರಿತು ಈ ಲೇಖನ ನಿಮಗೆ ವಿವರವಾಗಿ ತಿಳಿಸಿಕೊಡಲಿದೆ. ಅದೇನೆಂದು ಈಗ ತಿಳಿದುಕೊಳ್ಳೋಣ ಬನ್ನಿ.....

1. ಸಭ್ಯತೆಯಿಲ್ಲದಿರುವುದು, ರಕ್ಷಣಾ ಪ್ರವೃತ್ತಿಯ ಕೊರತೆ

1. ಸಭ್ಯತೆಯಿಲ್ಲದಿರುವುದು, ರಕ್ಷಣಾ ಪ್ರವೃತ್ತಿಯ ಕೊರತೆ

ಅವರು ಏನು ಬೇಕಾದರೂ ಹೇಳಿಕೊಳ್ಳಲೀ, ಸಭ್ಯತೆಯಿಂದ ಇರುವ ಸಂರಕ್ಷಣಾ ಗುಣವು ಇನ್ನೂ ತನ್ನ ಮೌಲ್ಯವನ್ನು ಕಳೆದುಕೊಂಡಿಲ್ಲ. ಇಂದಿಗೂ ತಮ್ಮ ಜೊತೆಗಾತಿಯನ್ನು ಹೇಗೆ ನಡೆಸಿಕೊಳ್ಳಬೇಕೆಂಬ ಪರಿಜ್ಞಾನವುಳ್ಳವರು ಇನ್ನೂ ಕೆಲವರಿದ್ದಾರೆ. ಆದ್ದರಿಂದ, ಒಂದು ವೇಳೆ ನಿಮಗೇನಾದರೂ ಕೆಟ್ಟ ಅಭಿರುಚಿಗಳಿದ್ದಲ್ಲಿ, ದಯಮಾಡಿ ಅವುಗಳಿಂದ ಹಿಂದೆ ಸರಿಯಿರಿ!. ಇಂತಹ ಗುಣಗಳನ್ನು ಯುವತಿಯರು ನಿಮ್ಮಲ್ಲಿ ಸೂಕ್ಷ್ಮವಾಗಿಯೇ ಗಮನಿಸಿ ನಿಮ್ಮಿಂದ ದೂರ ಸರಿಯುತ್ತಾರೆ.

2. ಸಿಡುಕುಮೋರೆ ಸಿದ್ದಪ್ಪ

2. ಸಿಡುಕುಮೋರೆ ಸಿದ್ದಪ್ಪ

ಆಯಿತು, ನಮಗೇನೂ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವವರು ಬೇಕಾಗಿಲ್ಲ, ಆದಾಗ್ಯೂ ನಾವು ಹಾಸ್ಯ ಪ್ರವೃತ್ತಿಯುಳ್ಳವರನ್ನು ಬಲು ನೆಚ್ಚಿಕೊಳ್ಳುತ್ತೇವೆ. ನಿಮಗಿದು ಗೊತ್ತೇ, ಕೆಲವೊಮ್ಮೆ ಹೆಣ್ಣಾದವಳು, ತನ್ನನ್ನೇ ಕೆಕ್ಕರಿಸಿ ನೋಡುವ ತನ್ನ ಪ್ರಿಯಕರನ ನೋಟಗಳಿಗೆ ಲಕ್ಷ್ಯಕೊಡುವ ಬದಲು ಏಕಾಂಗಿಯಾಗಿ ಕಾಲಕಳೆಯಲು ಬಯಸುವಳು!.

3. ಹಣವನ್ನ ನೀರಿನಂತೆ ಖರ್ಚುಮಾಡಿ ಓಲೈಸುವುದು

3. ಹಣವನ್ನ ನೀರಿನಂತೆ ಖರ್ಚುಮಾಡಿ ಓಲೈಸುವುದು

ಸಂಬಂಧದಲ್ಲಿ ಒಳ್ಳೆಯ ವಸ್ತುಗಳೊಂದಿಗೆ ಒಬ್ಬರನ್ನೊಬ್ಬರು ನಡೆಸಿಕೊಳ್ಳುವುದು/ಅರ್ಥಾತ್ ಉಡುಗೊರೆಗಳ ವಿನಿಮಯದಂತಹ ಸಂಗತಿಯು ಸರ್ವೇಸಾಮಾನ್ಯ. ಆದರೆ, ನೀವು ಸಾಕಷ್ಟು ಹಣ ಅವಳಿಗಾಗಿ ಖರ್ಚು ಮಾಡುತ್ತೀರಿ ಎನ್ನುವ ಕಾರಣಕ್ಕೆ ಆಕೆಯ ಹೃದಯಕ್ಕೇ ಲಗ್ಗೆ ಇಡಲು ನಿಮಗೆ ಅವಕಾಶ ಸಿಗುವುದು ಕಷ್ಟ. ನಿಮ್ಮ ಬಳಿ ಹಣವಿರಬಹುದು, ಮಾತ್ರಕ್ಕೇ ನಮ್ಮ ಪ್ರೀತಿ, ವಿಶ್ವಾಸಗಳಲ್ಲಿ ನಿಮಗೆ ನೆಲೆಯಿದೆ ಎಂಬುದರ ಭರವಸೆಯೇನೂ ಇರಲಾರದು.

4. ಹೆಚ್ಚು ಸಮಯ ಮೇಕಪ್ ಮಾಡುವ ಹುಡುಗರು

4. ಹೆಚ್ಚು ಸಮಯ ಮೇಕಪ್ ಮಾಡುವ ಹುಡುಗರು

ಬಚ್ಚಲು ಮನೆಯನ್ನು ಘಂಟೆಗಟ್ಟಲೆ ತಾನೋರ್ವನೇ ಬಳಸಿಕೊಳ್ಳುವುದು, ಪುರುಷರ ಪ್ರಸಾಧನ ಸಾಮಗ್ರಿಗಳೊಂದಿಗೆ ಘಂಟೆಗಟ್ಟಲೆ ಕಾಲಕಳೆಯುವುದು ಹಾಗೂ ನಮ್ಮ ಸ್ಟ್ರೈಟ್ ನರ್ ಗಳನ್ನು ನಮ್ಮ ಅಪ್ಪಣೆಯಿಲ್ಲದೇ ತೆಗೆದುಕೊಳ್ಳುವುದು ಹೆಣ್ಣು ಮಕ್ಕಳಿಗೆ ಹಿಡಿಸಲಾರದು. ಯುವಕರು ಹೆಚ್ಚಿನ ಸಮಯ ಕನ್ನಡಿ ಮುಂದೆ ಕಳೆಯುವುದನ್ನು ಯುವತಿಯರು ಎಂದಿಗೂ ಇಷ್ಟಪಡುವುದಿಲ್ಲ. ಆದ್ದರಿಂದ ಈ ವಿಚಾರದಲ್ಲಿ ನೀವು ನಿಮ್ಮ ಸ್ತ್ರೀ ಸಂಗಾತಿಗೆ ಹೊಂದಿಕೊಳ್ಳುವುದನ್ನು ಕಲಿಯಿರಿ.

5. ಅಹಂ ಇರುವಿಕೆ

5. ಅಹಂ ಇರುವಿಕೆ

ನೀವು ನೋಡೋದಕ್ಕೆ ಚೆನ್ನಾಗಿ ಕಾಣಿಸುತ್ತಿರುವಿರೆಂದು ಮತ್ತು ಆಕರ್ಷಕರಾಗಿರುವಿರೆಂದು ನಮಗೆ ಗೊತ್ತು - ಅಷ್ಟಕ್ಕೂ ಇದೇ ಕಾರಣಕ್ಕಾಗಿಯೇ ಮೊದಲ ನೋಟಕ್ಕೆ ನಾವು ನಿಮಗೆ ಫಿದಾ ಆಗಿದ್ದೂ ಕೂಡಾ. ಆದರೆ ಅದೇ ವಿಚಾರವನ್ನೇ ಪದೇ ಪದೇ ನಮಗೆ ನೆನಪಿಸುವಂತಹವರು ನಿಜಕ್ಕೂ ನಮಗೆ ಬೇಡ ಎನ್ನುತ್ತಾರೆ ಯುವತಿಯರು. ಸರಸ ಸಂಬಂಧದ ವಿಚಾರದಲ್ಲಿ ಅಹಮಿಕೆ ಒಂದು ದೊಡ್ಡ ಅಡಚಣೆಯಾಗಿದ್ದು ಅದು ಎಂತಹ ಅಂದಗಾರನನ್ನೂ ಕ್ಷಣಾರ್ಧದಲ್ಲಿಯೇ ಕುರೂಪನನ್ನಾಗಿಸಿ ಬಿಡುವುದು.

6. ಹಾಸ್ಯಪ್ರಜ್ಞೆ ಇಲ್ಲದಿರುವಿಕೆ

6. ಹಾಸ್ಯಪ್ರಜ್ಞೆ ಇಲ್ಲದಿರುವಿಕೆ

ಒಂದಿಷ್ಟೂ ರಸಿಕತೆ, ಹಾಸ್ಯಪ್ರಜ್ಞೆ ಇಲ್ಲದವನ ಜೊತೆಗೆ ಡೇಟಿಂಗ್ ಗೆ ಹೋಗುವಷ್ಟು ದುರಂತ ಸಂಗತಿ ಇನ್ನೊಂದಿರಲಾರದು. ಕೊಂಚ ಹಾಸ್ಯಪ್ರಜ್ಞೆ ಸಂಗತಿಗಳನ್ನು ಜೀವನವನ್ನು ಹಗುರಾಗಿಸಬಲ್ಲದು. ಒಂದು ವೇಳೆ ಎಲ್ಲವೂ ವಿಫಲಗೊಂಡು ಮತ್ತು ನೀವು ಹಾಸ್ಯಪ್ರವೃತ್ತಿ ಇಲ್ಲದವರಾಗಿದ್ದರೆ, ನಿಮಗೆ ಗೊತ್ತಿರುವ ಕೆಲವು ಚಾಲಾಕೀ ನಗೆಚಟಾಕಿಗಳನ್ನು ಕಲಿತು ಅದನ್ನು ಉತ್ತಮವಾಗಿ ಹೇಳುವ ಪ್ರಯತ್ನವನ್ನಾದರೂ ಮಾಡಿ.

7. ಚರ್ಮಕ್ಕಂಟಿಕೊಂಡಂತಿರುವ ಜೀನ್ಸ್

7. ಚರ್ಮಕ್ಕಂಟಿಕೊಂಡಂತಿರುವ ಜೀನ್ಸ್

ಚರ್ಮಕ್ಕಂಟಿಕೊಂಡಷ್ಟು ಬಿಗಿಯಾದ ಜೀನ್ಸ್ ಗಳಿರುವುದು ಹುಡುಗಿಯರಿಗಾಗಿ. ಅಂತಹದ್ದನ್ನು ಓರ್ವ ಹುಡುಗನು ಧರಿಸಿಕೊಂಡಲ್ಲಿ ಅದು ವೇಷಭೂಷಣದ ಕುರಿತ ಒಂದು ದೋಷವಾದೀತು! ಹಾಗಾಗಿ, ಇಂತಹ ಪ್ರಮಾದವನ್ನು ಮಾಡದಿರಿ ಹಾಗೂ ನಿಯಮಿತವಾದ ಬಿಗಿ ಜೀನ್ಸ್ ಗಳನ್ನೇ ಧರಿಸಿರಿ. ಇದು ನಿಮಗೆ ಹೆಚ್ಚು ಒಪ್ಪವಾಗಿ ಕಾಣಿಸುತ್ತದೆ.

8. ನಾಚಿಕೆ ಸ್ವಭಾವ

8. ನಾಚಿಕೆ ಸ್ವಭಾವ

ಒಂದಾನೊಂದು ಕಾಲದಲ್ಲಿ ಹುಡುಗಿಯರು ಹೆಚ್ಚಾಗಿ ನಾಚಿಕೆ ಸ್ವಭಾವದ ಹುಡುಗರನ್ನು ಇಷ್ಟಪಡುತ್ತಿದ್ದರು. ಆದರೆ ಈಗ ಇದು 2019ರ ಕಾಲಘಟ್ಟವಾಗಿದ್ದು, ಈಗ ಹುಡುಗಿಯರು ನಾಚಿಕೆ ಸ್ವಭಾವದ ಹುಡುಗರ ಬದಲಾಗಿ ಆತ್ಮವಿಶ್ವಾಸವಿರುವ ಹುಡುಗರನ್ನೇ ನೆಚ್ಚಿಕೊಳ್ಳುತ್ತಾರೆ. ಈ ಬಗ್ಗೆ ಕೊಂಚ ಗಮನಹರಿಸಿ.

9. ಒಪ್ಪಓರಣವಿಲ್ಲದ ಗಡ್ಡ

9. ಒಪ್ಪಓರಣವಿಲ್ಲದ ಗಡ್ಡ

ಇಂದಿನ ದಿನಗಳಲ್ಲಿ ಗಡ್ಡವನ್ನಿರಿಸಿಕೊಳ್ಳುವುದು ಸರ್ವೇಸಾಮಾನ್ಯ, ಟ್ರೆಂಡ್ ಸಹ ಹೌದು. ಆದರೆ ಗಡ್ಡವನ್ನು ಸರಿಯಾಗಿ ಓರಣಗೊಳಿಸಿ, ಸ್ವಚ್ಛವಾಗಿರಿಸಿಕೊಳ್ಳುವುದೂ ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ. ಚೆಂದವಾಗಿ ಗಡ್ಡ ಬೆಳೆಸಿ ಅದನ್ನು ಸ್ವಚ್ಚ್ವಾಗಿಟ್ಟುಕೊಳ್ಳದಿದ್ದರೆ ಹೆಣ್ಣು ಮಕ್ಕಳು ಹತ್ತಿರವೂ ಸುಳಿಯರು. ಇಷ್ಟರಲ್ಲೆ ನಿಮ್ಮ ವ್ಯಕ್ತಿತ್ವವನ್ನು ಸಹ ಅಳೆಯುತ್ತಾರೆ ಎಚ್ಚರ.

Read more about: relationship ಯುವತಿ
English summary

These Things Girls Finds Unattractive In Boys, See If You Have Or Not?

While you may be doing everything in your power to attract the opposite sex, it may surprise you to learn that some of your actions and behaviors can actually have the opposite effect. In fact, you may not even realize that you're acting in a way that drives men away when all you're really trying to do is draw them toward you. In order to take control of the situation and truly attract the right guys, we've dug up some research on what to avoid doing and what to do instead to avoid being labeled as unattractive to men.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more