For Quick Alerts
ALLOW NOTIFICATIONS  
For Daily Alerts

ಹೀಗೆಲ್ಲಾ ಇದ್ದರೆ ನಿಮ್ಮ ಸಂಬಂಧ ಸೂಪರ್ ಆಗಿದೆ ಎನ್ನುವುದರಲ್ಲಿ ನೋ ಡೌಟ್‌

|

ಕಾಲ ಬದಲಾಗಿದೆ, ಇದು ಸ್ಮಾರ್ಟ್‌ ಡಿಜಿಟಲ್‌ ಯುಗ, ಇದು ಸಂಬಂಧಗಳ ಮೇಲೂ ಪರಿಣಾಮ ಬೀರುತ್ತಿದೆ. ಹುಡುಗ ಹುಡುಗಿ ಯಾವ್ಯಾವುದೋ ಆನ್‌ಲೈನ್‌ ಡೇಟಿಂಗ್‌ ಮೂಲಕ ಪರಿಚಯವಾಗಿ, ಒಂದೇ ವಾರಕ್ಕೆ ಆ ಸಂಬಂಧದ ರುಚಿ ಕೆಡುವುದು ಇದೆ. ಇಷ್ಟು ಮಾತ್ರವಲ್ಲ ನೆನ್ನೆಯಷ್ಟೇ ಪರಿಚಯವಾದರವರೂ ಒಂದು ಡೇಟಿಂಗ್‌ಗೆ ಹೋಗಿ, ಅಲ್ಲಿಂದಲೇ ಬೇರೆ ಬೇರೆ ದಾರಿ ಹಿಡಿಯುವುದೂ ಇದೆ.

ಎಷ್ಟೋ ವರ್ಷಗಳಿಂದ ಪ್ರೀತಿಸುತ್ತಿದ್ದವರೂ ಯಾವುದೋ ಕಾರಣದಿಂದ ಬೇರೆಯಾಗುವುದೂ ಇದೆ. ಸಂಬಂಧಗಳು ಗಟ್ಟಿಯಾಗಿ ನಿಲ್ಲುವುದೇ ನಂಬಿಕೆ, ಪ್ರೀತಿ, ಪ್ರಾಮಾಣಿಕತೆಯ ಮೇಲೆ. ನೀವೂ ಪ್ರೀತಿಯಲ್ಲಿದ್ದರೆ, ನಿಮ್ಮ ಸಂಬಂಧವು ಆರೋಗ್ಯಕರವಾಗಿದೆಯೇ ಎನ್ನುವುದನ್ನು ಈ ಲಕ್ಷಣಗಳಿಂದ ತಿಳಿದುಕೊಳ್ಳಬಹುದು. ಆ ಲಕ್ಷಣಗಳೇನಪ್ಪಾ.. ಎನ್ನುವ ಕುತೂಹಲ ನಿಮಗಿದ್ದರೆ ಈ ಸ್ಟೋರಿ ಕಂಪ್ಲೀಟ್‌ ಓದಿ.

ಮುಕ್ತವಾದ ಮಾತು

ಮುಕ್ತವಾದ ಮಾತು

ಸಂಗಾತಿಗಳೆಂದರೆ ಅವರಿಬ್ಬರ ಮಾತಿನ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಅದು ಖುಷಿಯ ವಿಚಾರವೇ ಆಗಲಿ, ದುಃಖದ ವಿಚಾರವೇ ಆಗಲಿ ಅಥವಾ ಇತರ ವಿಷಯಗಳ ಬಗ್ಗೆ ಆಗಲಿ ಇಬ್ಬರೂ ಮುಕ್ತವಾಗಿ ಒಬ್ಬರಿಗೊಬ್ಬರು ಹೇಳುತ್ತಿದ್ದಲ್ಲಿ ನಿಮ್ಮ ಸಂಬಂಧವು ಆರೋಗ್ಯಕರವಾಗಿದೆ ಎಂದು ಹೇಳಬಹುದು. ಇಬ್ಬರ ನಡುವಿನ ಮುಕ್ತ ಮಾತುಕತೆಯು ಇಬ್ಬರ ನಡುವೆ ಬಂದು ಹೋಗುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡುವುದಲ್ಲದೇ, ಇನ್ನಷ್ಟು ಹತ್ತಿರವಾಗಲು ಕಾರಣವಾಗುತ್ತದೆ.

ಎಲ್ಲರ ಆಲೋಚನೆಗಳೂ ವಿಭಿನ್ನ, ಅದರಂತೆ ನಿಮ್ಮ ಸಂಗಾತಿಯ ಆಲೋಚನೆ, ಚಿಂತನೆಗಳೂ ವಿಭಿನ್ನವಾಗಿರುತ್ತದೆ, ಇಬ್ಬರೂ ಒಂದೇ ರೀತಿ ಯೋಚಿಸಲು ಸಾಧ್ಯವಿಲ್ಲ, ಅವರ ಮಾತುಗಳನ್ನೂ ನೀವು ಕೇಳಬೇಕು, ಅದನ್ನು ಅರ್ಥಮಾಡಿಕೊಳ್ಳಬೇಕು ಎನ್ನುವ ಮನೋಸ್ಥಿತಿ ನಿಮಗೂ ಇದ್ದಲ್ಲಿ, ಇದೇ ರೀತಿಯ ಮನೋಭಾವ ನಿಮ್ಮ ಸಂಗಾತಿಗೂ ಇದ್ದಲ್ಲಿ ನಿಮ್ಮಿಬ್ಬರದ್ದೂ ಪರಿಪೂರ್ಣ ಜೋಡಿಯೆನ್ನಬಹುದು.

ಹೆಚ್ಚಿನ ಸಂಬಂಧಗಳು ಕೆಡುವುದೇ ಮುಕ್ತವಾಗಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳದಿದ್ದಾಗ. ಅದು ಪಾಸಿಟಿವ್‌ ಆಗಿರಲಿ, ನೆಗೆಟಿವ್‌ ಆಗಿರಲಿ ನಿಮ್ಮ ಒಳಮನಸ್ಸನ್ನು ಸಂಗಾತಿಯ ಮುಂದೆ ಬಿಚ್ಚಿಟ್ಟಾಗ ಅವರೂ ಕೂಡಾ ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಂಡು, ತಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳಬಹುದು. ಈ ರೀತಿ ನಿಮ್ಮ ಸಂಬಂಧದಲ್ಲಿ ನಡೆಯುತ್ತಿದೆಯೆಂದರೆ ನಿಮ್ಮ ಸಂಬಂಧವು ಹಾಯಾಗಿ ಮುಂದುವರಿಯುತ್ತದೆ.

ನಂಬಿಕೆ

ನಂಬಿಕೆ

ಪ್ರೀತಿ, ಸಂಬಂಧಗಳು ನಿಲ್ಲುವುದೇ ನಂಬಿಕೆಯೆನ್ನುವ ಅಡಿಪಾಯದ ಮೇಲೆ. ಪರಸ್ಪರರ ರಹಸ್ಯಗಳನ್ನು ಹೇಳದೇ ಬಚ್ಚಿಟ್ಟುಕೊಳ್ಳುವುದು, ಮುಂದೊಮ್ಮೆ ಸಂಬಂಧದಲ್ಲಿ ಅಪಸ್ವರ ಬರಲು ಕಾರಣವಾಗಬಹುದು. ಆದರೆ ನಿಮ್ಮ ಸಂಗಾತಿಯು ನಿಮಗೆ ಮೋಸ ಮಾಡಲಾರರು, ಸುಳ್ಳು ಹೇಳಲಾರರು ಎನ್ನುವ ನಂಬಿಕೆಯನ್ನು ನೀವು ನಿಮ್ಮ ಸಂಗಾತಿಯ ಮೇಲೆ ಇಟ್ಟಿದ್ದಲ್ಲಿ ಅದು ಆರೋಗ್ಯಕರ ಸಂಬಂಧದ ಲಕ್ಷಣ.

ನಿಮ್ಮ ಸಂಗಾತಿಯೊಂದಿಗೆ ಸುರಕ್ಷಿತವಾಗಿದ್ದಿರಿ ಎನ್ನುವ ಭಾವನೆಯಿದ್ದಲ್ಲಿ, ಏನೇ ಆದರೂ ಅವರು ನಿಮ್ಮನ್ನು ದೈಹಿಕವಾಗಿ ಆಗಲಿ, ಮಾನಸಿಕವಾಗಿ ಆಗಲಿ ನೋವುಂಟು ಮಾಡದೇ ಇದ್ದಾಗ, ನಿಮ್ಮ ಹಿತಾಸಕ್ತಿಗಳನ್ನೂ ನಿಮ್ಮ ಸಂಗಾತಿಯು ಪರಿಗಣಿಸುತ್ತಿದ್ದಾರೆ ಎಂದು ನಿಮಗನಿಸಿದರೆ ಅವರ ಮೇಲೆ ನಂಬಿಕೆಯೆನ್ನುವುದು ಬೆಳೆಯುತ್ತದೆ. ನೀವೂ ಕೂಡಾ ಅವರ ಆಯ್ಕೆಗಳ ಬಗ್ಗೆಯೂ ಕಾಳಜಿ ವಹಿಸಿದರೆ, ಏನೇ ಆಗಲಿ ಬೆನ್ನೆಲುಬಾಗಿ ನಾನಿದ್ದೇನೆ ಎನ್ನುವ ಭಾವನೆಯನ್ನು ನಿಮ್ಮ ಸಂಗಾತಿಯಲ್ಲಿ ಮೂಡಿಸಿದರೆ ಅಲ್ಲಿ ನಂಬಿಕೆಯ ಕೊರತೆ ಇರದು.

ಹೊಸದಾದ ವ್ಯಕ್ತಿತ್ವವನ್ನು ನಿಮ್ಮಲ್ಲಿ ನೀವು ಕಂಡಲ್ಲಿ

ಆರೋಗ್ಯಕರ ಸಂಬಂಧದಲ್ಲಿ ಒಬ್ಬರಿಗೊಬ್ಬರು ಅವಲಂಬಿತರಾಗುವುದು ಮುಖ್ಯ ಎನ್ನಲಾಗುತ್ತದೆ. ಅವಲಂಬನೆ ಎಂದರೆ ಹಣ ಅಥವಾ ಅಂದುಕೊಂಡಿದ್ದನ್ನು ಪಡೆಯಲು ಅವಲಂಬಿಸುವುದು ಎಂದಲ್ಲ, ಅವಲಂಬನೆ ಎಂದರೆ ಪರಸ್ಪರರ ಕಷ್ಟಸುಖಗಳಿಗೆ ಬೆಂಬಲವಾಗಿರುವುದು. ಏನೇ ಕಷ್ಟಗಳು ಬಂದರೂ ನಿನ್ನೊಂದಿಗೆ ನಾನಿದ್ದೇನೆ ಎನ್ನುವ ಸಂಗಾತಿಯ ಮಾತು ಅಥವಾ ನಿಮ್ಮ ಸಂಗಾತಿಗೆ ನೀವು ಬೆನ್ನೆಲುಬಾಗಿ ನಿಲ್ಲುವ ರೀತಿ ನಿಮ್ಮನ್ನು ವಿಶೇಷವಾಗಿಸಬಹುದು. ಈ ವ್ಯಕ್ತಿತ್ವವನ್ನು ನಿಮ್ಮಲ್ಲಿ ನೀವು ಕಂಡಲ್ಲಿ ಅದು ಆರೋಗ್ಯಕರ ಸಂಬಂಧದ ಲಕ್ಷಣ ಅಂದರೆ, ನೀವು ಸಂಪೂರ್ಣವಾಗಿ ನಿಮ್ಮ ಸಂಬಂಧದಲ್ಲಿ ವಿಶ್ವಾಸವನ್ನಿಟ್ಟಿದ್ದೀರಿ ಎಂದರ್ಥ.

ಸಂಬಂಧದಲ್ಲಿ ಅಲವಂಬನೆ ಎಂದರೆ ಪೂರ್ತಿಯಾಗಿ ನಿಮ್ಮ ಸ್ವಾಭಿಮಾನವನ್ನು ಬಿಟ್ಟುಕೊಡುವುದಲ್ಲ. ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಸಂಗಾತಿಯ ಮೆಚ್ಚುಗೆ ಮತ್ತು ಪ್ರೀತಿಯನ್ನು ನೀವು ಪಡೆದರೆ ನಿಮ್ಮ ರಿಲೇಷನ್‌ಶಿಪ್‌ ಸರಿಯಾದ ದಾರಿಯಲ್ಲಿ ನಡೆಯುತ್ತಿದೆ ಎನ್ನಬಹುದು. ಇಬ್ಬರೂ ನಿಮ್ಮಿಬ್ಬರ ಸಂಬಂಧವನ್ನು ಹೊರತಪಡಿಸಿ ಸ್ನೇಹಿತರೊಂದಿಗೂ ಸಮಯ ಕಳೆಯುಯಿರಿ, ನಿಮ್ಮ ಸ್ವಂತ ಆಸಕ್ತಿಗಳು ಮತ್ತು ಹವ್ಯಾಸಗಳ ಬಗ್ಗೆಯೂ ಗಮನ ಹರಿಸಿ. ಇದು ನಿಮ್ಮ ಸಂಬಂಧದಲ್ಲಿ ಹೊಸತನವನ್ನು ತರುತ್ತದೆ.

ಕುತೂಹಲ

ಕುತೂಹಲ

ದೀರ್ಘಾವಧಿಯವರೆಗೂ ಮುಂದುವರಿಯುವ ಸಂಬಂಧಧ ಒಂದು ಲಕ್ಷಣ ಅದು ಕುತೂಹಲ. ಕುತೂಹಲವೆಂದರೆ ನಿಮ್ಮ ಸಂಗಾತಿ ಏನು ಮಾಡ್ತಾರೆ, ಎಲ್ಲೆಲ್ಲಿ ಸುತ್ತಾಡ್ತಾರೆ ಎನ್ನುವುದನ್ನು ತಿಳಿದುಕೊಳ್ಳುವುದಲ್ಲ. ನಿಮ್ಮ ಸಂಗಾತಿಯ ಆಸಕ್ತಿ, ಅವರ ಜೀವನದ ಗುರಿ ಏನು ಎನ್ನುವುದನ್ನು ತಿಳಿಯುವ ಕುತೂಹಲ ನಿಮಗಿದ್ದಲ್ಲಿ ನೀವು ಅವರನ್ನು ಅವರ ಗುರಿಯೆಡೆಗೆ ಸಾಗಿಸುವಂತಹ ಪ್ರಯತ್ನವನ್ನು ಖಂಡಿತಾ ಮಾಡುತ್ತೀರಿ.ಈ ಹಿಂದೆ ಅವರ ನಡವಳಿಕೆ ಹೇಗಿತ್ತು, ಈಗ ಬದಲಾಯಿಸಲು ಸಾಧ್ಯವೇ ಎನ್ನುವ ಕುತೂಹಲವಿರಬೇಕು. ಅಲ್ಲದೇ ನಿಮ್ಮ ಸಂಬಂಧದಲ್ಲಿ ಹೊಸತನವನ್ನು ಉಳಿಸಿಕೊಳ್ಳಲು ಬದಲಾವಣೆಯು ಅತ್ಯಗತ್ಯ. ಆ ಬದಲಾವಣೆಗಳನ್ನು ಸಂಬಂಧದಲ್ಲಿ ಅವಳವಡಿಸಿಕೊಂಡಾಗ ನಿಮ್ಮ ಸಂಗಾತಿಯನ್ನು ವಿಶೇಷ ರೀತಿಯಲ್ಲಿ ನೋಡುತ್ತೀರಿ ಮಾತ್ರವಲ್ಲ, ಕಾಳಜಿಯೂ ಹೆಚ್ಚಾಗುತ್ತದೆ.

ಒಟ್ಟಿಗೆ ಸಮಯವನ್ನು ಕಳೆಯುವುದು

ಒಟ್ಟಿಗೆ ಸಮಯವನ್ನು ಕಳೆಯುವುದು

ನೀವು ಸಂಗಾತಿಯೊಂದಿಗೆ ಸುಮಧುರ ಭಾಂಧವ್ಯವನ್ನು ಬೆಳೆಸಿಕೊಂಡಿದ್ದೀರಿ ಎನ್ನುವುದು ಅವರೊಂದಿಗೇ ಕಳೆಯುವ ಪ್ರತಿಕ್ಷಣದಲ್ಲೂ ತಿಳಿದುಬಿಡುತ್ತದೆ. ಹಾಗಂತ ದಿನದ ಇಪ್ಪತ್ನಾಲ್ಕು ಗಂಟೆಯೂ ಸಂಗಾತಿಯೊಂದಿಗೇ ಕಳೆಯಲು ಸಾಧ್ಯವಿಲ್ಲ.. ನೋಡಿ. ನಮ್ಮದೇ ಆದ ವೈಯಕ್ತಿಕ ಕೆಲಸಗಳು, ಅಗತ್ಯತೆಗಳ ಮಧ್ಯೆ ಒಂಚೂರು ಬಿಡುವು ಮಾಡಿಕೊಂಡು ಸಂಗಾತಿಯೊಂದಿಗೆ ಸಮಯವನ್ನು ಸಂತೋಷದಿಂದ ಹರಟೆ ಹೊಡೆಯುತ್ತಾ ಕಳೆಯುತ್ತಿದ್ದೀರಿ ಎಂದಾದರೆ ಜೀವನದ ಪಯಣದಲ್ಲಿ ಸದಾ ಇಬ್ಬರೂ ಜೊತೆಯಾಗಿರುತ್ತೀರಿ ಎಂದು ಹೇಳಬಹುದು. ಇದು ಆರೋಗ್ಯಕರ ಸಂಬಂಧಧ ಲಕ್ಷಣವೂ ಹೌದು.

ಈಗಿನ ಕಾಲದಲ್ಲಿ ಮನೆಯಲ್ಲಿ ಎಲ್ಲರೂ ಇದ್ದರೂ ಮಾತನಾಡುವುದೇ ಅಪರೂಪ, ಮೊಬೈಲ್‌, ಲ್ಯಾಪ್‌ಟಾಪ್‌ನಲ್ಲಿ ತಲೆ ಹೊಕ್ಕಿಸಿ ಕುಳಿತರೆ ಪಕ್ಕದಲ್ಲಿರುವವರ ಬಗ್ಗೆ ಪ್ರಜ್ಞೆಯೇ ಇರುವುದಿಲ್ಲ. ಸಂಬಂಧದಲ್ಲಿ ಈ ಪರಿಸ್ಥಿತಿಯನ್ನೂ ತಂದುಕೊಳ್ಳಬೇಡಿ. ಗ್ಯಾಜೆಟ್‌ಗಳನ್ನು ಬದಿಗಿಟ್ಟು, ಫ್ರೀಯಾಗಿ ಸಿಕ್ಕ ಸಮಯವನ್ನು ಸಂಪೂರ್ಣವಾಗಿ ಬಳಸಿಕೊಂಡು, ಮನಸ್ಸು ಹರಗುರಾಗಿಸಿಕೊಂಡು ಸಂಗಾತಿಯೊಂದಿಗೆ ಹರಟೆ ಹೊಡೆಯಿರಿ. ಮಾತುಗಳೊಂದಿಗೆ ಮನಸ್ಸುಗಳೂ ಹತ್ತಿರರವಾಗುತ್ತೆ.

ತಮಾಷೆ ಮಾಡಿಕೊಳ್ಳುವುದು

ತಮಾಷೆ ಮಾಡಿಕೊಳ್ಳುವುದು

ಇಬ್ಬರೂ ಫ್ರಿ ಇದ್ದಾಗ ಮಾತನಾಡಿಕೊಂಡು ತಮಾಷೆ ಮಾಡುತ್ತಾ, ಕಾಲೆಳೆಯುತ್ತಾ, ನಗುತ್ತಿದ್ದರೆ ನಿಮ್ಮ ಸಂಬಂಧವು ಹಾಯಾಗಿ ಸಾಗುತ್ತಿದೆ ಎನ್ನಬಹುದು. ಜೀವನದಲ್ಲಿ ಏರುಪೇರುಗಳು ಆಗುತ್ತಲೇ ಇರುತ್ತದೆ. ಸಣ್ಣ ವಿಷಯಕ್ಕೂ ಬೇಸರಿಸಿಕೊಂಡು ಮುಖ ಊದಿಸಿಕೊಂಡು ಜಗಳವನ್ನು ಮುಂದುವರಿಸುವ ಬದಲು, ನಕ್ಕು ಹಗುರಾದರೆ ಹೃದಯಕ್ಕೂ ನೆಮ್ಮದಿ. ಕೆಲವೊಮ್ಮೆ ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ತಿರುವುಗಳು ಸಂಬಂಧವನ್ನು ಅಲುಗಾಡಿಸಬಹುದು. ಆದರೆ ಹಿಂದೆ ನಿಲ್ಲುವ ಬದಲು, ಒಟ್ಟಿಗೆ ಕುಳಿತು ಮಾತನಾಡಿ, ಸಮಸ್ಯೆಗಳನ್ನು ಬಗೆಹರಿಸಕೊಳ್ಳಿ. ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತೆ.

ದೈಹಿಕ ಅನ್ಯೋನ್ಯತೆ

ದೈಹಿಕ ಅನ್ಯೋನ್ಯತೆ

ನೀವು ಮತ್ತು ನಿಮ್ಮ ಸಂಗಾತಿಯು ದೈಹಿಕವಾಗಿಯೂ ಪರಸ್ಪರ ಸಾಂಗತ್ಯವನ್ನುಅನುಭವಿಸುತ್ತಿದ್ದೀರಿ ಎಂದಾದರೆ ನಿಮ್ಮದು ಆರೋಗ್ಯಕರ ಸಂಬಂಧವೇ. ಯಾಕೆಂದರೆ ಭಿನ್ನಾಭಿಪ್ರಾಯಗಳಿದ್ದಾಗ ದೈಹಿಕವಾಗಿ ಅನ್ಯೋನ್ಯವಾಗಿರುವುದೂ ಕಷ್ಟ. ಹಾಗಂತ ಆರೋಗ್ಯಕರ ಸಂಬಂಧದಲ್ಲಿದ್ದರೆ ಮಾತ್ರ ಲೈಂಗಿಕತೆಯತೆಯಲ್ಲಿ ಆನಂದವನ್ನು ಹೊಂದಲು ಸಾಧ್ಯ. ಲೈಂಗಿಕವಾಗಿ ಒಂದಾದರೆ ಸಂಬಂಧವೂ ಮುಂದುವರಿಯುತ್ತದೆ ಎನ್ನಲಾಗುವುದಿಲ್ಲ. ಸಂಬಂಧ ಮುಂದುವರಿಯಬೇಕೆಂದರೆ ಲೈಂಗಿಕತೆಯೂ ಅತ್ಯಗತ್ಯ ಎಂದು ಹೇಳಲಾಗದು.

ಲೈಂಗಿಕ ಸುಖಕ್ಕಿಂತ ಹೆಚ್ಚಾಗಿ ದೈಹಿಕ ಅನ್ಯೋನ್ಯತೆ ಎಂದರೆ ಒಂದು ಬಿಸಿಯಾದ ಅಪ್ಪುಗೆಯಾಗಿರಬಹುದು, ಮನಸ್ಸಿಗೆ ಖುಷಿಯಾದಾಗ ಸಿಹಿಮುತ್ತನ್ನು ನೀಡುವುದಾಗಿರಬಹುದು, ಮುದ್ದಾಡುವುದಾಗಿರಬಹುದು ಅಥವಾ ಒಟ್ಟಿಗೇ ಮಲಗುವುದಾಗಿರಬಹುದು. ಇವು ಆರೋಗ್ಯಕರ ಸಂಬಂಧಧ ಪ್ರಮುಖ ಲಕ್ಷಣವಾಗಿರುತ್ತದೆ. ಜೊತೆಗೆ ಅನ್ಯೋನ್ಯತೆಯೊಂದಿಗೆ ಲೈಂಗಿಕ ಆನಂದವನ್ನೂ ಇಬ್ಬರೂ ಮನಸಾರೆ ಅನುಭವಿಸಿದರೂ ಅದು ಉತ್ತಮ ಸಂಬಂಧದ ಲಕ್ಷಣವಾಗಿರುತ್ತೆ.

ಇದರೊಂದಿಗೆ ಪ್ರೀತಿಯ ಸಂಬಂಧದಲ್ಲಿ ದೈಹಿಕ ಅನ್ಯೋನ್ಯತೆಯೊಂದಿಗೆ ಇಬ್ಬರೂ ಕೂಡಾ ಲೈಂಗಿಕ ಆಸಕ್ತಿಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಲ್ಲಿ, ನಿಮ್ಮ ಆಸಕ್ತಿಗಳನ್ನೂ ಸಂಗಾತಿಯು ಕೇಳುತ್ತಿದ್ದಲ್ಲಿ, ನಿಮ್ಮ ಇಷ್ಟ- ಕಷ್ಟಗಳನ್ನೂ ಸಂಗಾತಿಯು ಕೇಳುತ್ತಿದ್ದಲ್ಲಿ ನಿಮ್ಮದು ಸುರಕ್ಷಿತ ಸಂಬಂಧವಾಗಿರುತ್ತದೆ.

ಜೊತೆಯಾಗಿ ಮುನ್ನಡೆಯುವುದು

ಜೊತೆಯಾಗಿ ಮುನ್ನಡೆಯುವುದು

ಉತ್ತಮ ಸಂಬಂಧದಲ್ಲಿ ಇಬ್ಬರ ಅಭಿರುಚಿಗಳೂ ಭಿನ್ನವಾಗಿದ್ದರೂ, ಇಬ್ಬರೂ ಒಬ್ಬರಿಗೊಬ್ಬರು ಬೆಂಬಲಿಸುತ್ತಾ, ಮುನ್ನಡೆಯುತ್ತೀರಿ. ಎಲ್ಲರಿಗೂ ಜೀವನದಲ್ಲಿ ಸಾಧನೆ ಮಾಡಬೇಕು ಎನ್ನುವ ಕನಸಿರುತ್ತದೆ. ಇದರಂತೆ ಸಂಗಾತಿಯ ಗುರಿಯನ್ನು ತಿಳಿದುಕೊಂಡು, ಅದನ್ನು ಪೋಷಿಸುವ ಗುಣ ನಿಮ್ಮಲ್ಲಿರಲಿ.ಸಂಕ್ಷಿಪ್ತವಾಗಿ ಹೇಳುವುದಾದರೆ ಸಂಗಾತಿಯ ಅಗತ್ಯಗಳಿಗೆ ನೀವೂ ಬೆನ್ನೆಲುಬಾಗಿ ನಿಲ್ಲುವುದು, ನಿಮ್ಮ ಕಷ್ಟಗಳಿಗೆ ಅವರೂ ಕೈಹಿಡಿದು ನಿಮಗೆ ಸಂಪೂರ್ಣ ಬೆಂಬಲವನ್ನಿತ್ತರೆ, ಇಬ್ಬರೂ ಮೇಡ್‌ ಫಾರ್‌ ಈಚ್‌ ಅದರ್ಸ್‌ ಅಲ್ಲವೇ..!

ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಮನೋಸ್ಥಿತಿ

ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಮನೋಸ್ಥಿತಿ

""ಎಲ್ಲರ ಮನೆಯ ದೋಸೆಯೂ ತೂತು'' ಎನ್ನುವ ಗಾದೆಯಂತೆ, ಭಿನ್ನಾಭಿಪ್ರಾಯ, ಕೋಪ ತಾಪಗಳು ಇರದ ಸಂಬಂಧಗಳಿಲ್ಲ ಎನ್ನಬಹುದು. ನಿಮ್ಮ ಸಂಬಂಧದಲ್ಲೂ ಪದೇ ಪದೇ ಕೋಪ ಪ್ರತಾಪಗಳು ಬಂದು ಹೋಗುತ್ತಿದ್ದಲ್ಲಿ ಅದು ಕಾಮನ್‌ ಬಿಡಿ. ಆದರೆ ಕೋಪವು ಇನ್ನಷ್ಟ ತಾರಕಕ್ಕೇರುವ ಬದಲು ಕೂತು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಉತ್ತಮ ಸಂಬಂಧಧ ಲಕ್ಷಣ.

ಸಂಬಂಧದಲ್ಲಿ ಸಮಸ್ಯೆಗಳು ಎದುರಾದಾಗ ಅದನ್ನು ಹೇಗೆ ನಿಭಾಯಿಸುತ್ತೀರಿ ಎನ್ನುವುದು ಕೂಡಾ ಮುಖ್ಯವಾಗುತ್ತೆ. ಇಂತಹ ಸಂದರ್ಭಗಳು ಬಂದರೆ ಪ್ರಾಮಾಣಿಕವಾಗಿರಿ ಮತ್ತು ಸಂಗಾತಿಯ ಅಭಿಪ್ರಾಯಗಳಿಗೂ ಗೌರವವನ್ನು ನೀಡಿ. ಯಾವುದೇ ಅಹಂ ಇಲ್ಲದೇ ನೀವು ಸಮಸ್ಯೆಯನ್ನು ಬಗೆಹರಿಸಿಕೊಂಡು ರಾಜಿ ಮಾಡಿಕೊಳ್ಳುವುದು ಸಂಬಂಧದಲ್ಲಿ ಅತೀ ಮುಖ್ಯ. ನಿಮ್ಮದು ತಪ್ಪಿದ್ದಲ್ಲಿ ಕ್ಷಮೆ ಕೇಳಿ. ಸಂಗಾತಿಗೂ ಅವರ ತಪ್ಪಾಗಿದ್ದಲ್ಲಿ ಅವರಿಗೆ ಅದನ್ನು ಅರ್ಥಮಾಡಿಸಿ. ಸಮಸ್ಯೆಯನ್ನು ಆದಷ್ಟು ಬಗೆಹರಿಸಲು ಪ್ರಯತ್ನಿಸಿ.

English summary

Signs You're in a Healthy Relationship in Kannada

These Signs that shows you are in a Healthy Relationship in Kannada, Read on...
Story first published: Saturday, June 18, 2022, 18:10 [IST]
X
Desktop Bottom Promotion