For Quick Alerts
ALLOW NOTIFICATIONS  
For Daily Alerts

ಯಾರಾಲ್ಲಾದರೂ ಈ ಭಾವನೆಗಳು ಅನಿಸಿದ್ದೇ ಆದರೆ ಅವರೇ ನೋಡಿ ನಿಮಗೆ ಪರ್ಫೆಕ್ಟ್ ಜೋಡಿ

|

ಅವನಿಗೆ ಅವಳನ್ನು ನೋಡಿದ ತಕ್ಷಣ ಏನೋ ಒಂದು ಆಕರ್ಷಣೆ ಸೆಳೆಯುತ್ತದೆ. ಯಾರಲ್ಲಿಯೂ ಅನಿಸಿದ ಭಾವನೆ ಅವಳನ್ನು ನೋಡಿದಾಗ ಅನಿಸರಲಾರಂಭಿಸುತ್ತದೆ. ಆಕೆಗಿಂತ ಎಷ್ಟೋ ಸುಂದರಿಯರನ್ನು ನೋಡಿದಾಗ ಅನಿಸದ ಭಾವನೆ ಅವಳನ್ನು ನೋಡಿದಾಗ ಅನಿಸುತ್ತದೆ. ಅಕೆಯನ್ನು ನೋಡುತ್ತಲೇ ಇರಬೇಕು, ಆಕೆ ಜೊತೆ ಮಾತನಾಡಬೇಕು ಎಂದೆಲ್ಲಾ ಅ ಅನಿಸಲಾರಂಭಿಸುತ್ತದೆ. ಆಕೆ ಅತ್ತಿತ್ತ ಓಡಾಡುವಾಗ ಆಕೆಯನ್ನೇ ಆತನ ಕಣ್ಣುಗಳು ಹಿಂಬಾಲಿಸುತ್ತವೆ.

How To select Life Partner

ಆಕೆಗೂ ಆತನನ್ನೂ ನೋಡುತ್ತಾ ಇರಬೇಕು ಅನಿಸುತ್ತದೆ, ಆತ ನೋಡಿದಾಗ ಇವಳಿಗೆ ಅರಿಯದೆ ನಾಚಿಕೆಯಿಂದ ಕೆನ್ನೆಗಳು ಕೆಂಪೇರುತ್ತವೆ, ತುಟಿಯಲ್ಲಿ ತುಂಟ ನಗೆ ಲಾಸ್ಯವಾಡುತ್ತದೆ. ಅದುವೇ ಅಲ್ಲವೇ ಪ್ರೀತಿಯ ಆಕರ್ಷಣೆ. ಅವರು ನಿಮಗೆ ತುಂಬಾ ಇಷ್ಟವಾದ ಮಾತ್ರಕ್ಕೆ ನಿಮಗೆ ಪರ್ಫೆಕ್ಟ್ ಜೋಡಿಯಾಗಬಹುದೆಂದು ಹೇಗೆ ಹೇಳುವುದು. ನಿಮಗೆ ಆ ವ್ಯಕ್ತಿಯನ್ನು ನೋಡಿದಾಗ ಇಲ್ಲಿ ಹೇಳಿರುವ ಭಾವನೆಗಳು ಉಂಟಾಗಿದ್ದೇ ಅದರೆ ಅವರು ನಿಮಗೆ ಪರ್ಫೆಕ್ಟ್ ಆದ ಸೋಲ್‌ಮೇಟ್ ಅಗುವುದರಲ್ಲಿ ಡೌಟ್‌ ಇಲ್ಲ.

1. ಅವರನ್ನು ನೋಡಿದಾಗ ಏನೋ ಒಂದು ರೀತಿಯ ಸೆಳೆತ ಉಂಟಾಗುವುದು

1. ಅವರನ್ನು ನೋಡಿದಾಗ ಏನೋ ಒಂದು ರೀತಿಯ ಸೆಳೆತ ಉಂಟಾಗುವುದು

ಲವ್‌ ಎಟ್‌ ಫಸ್ಟ್ ಸೈಟ್‌ ಅಂತಾರೆ, ಆದರೆ ಎಲ್ಲರಿಗೂ ಮೊದಲ ನೋಟದಲ್ಲಿಯೇ ಪ್ರೀತಿ ಮೂಡುತ್ತದೆ ಎಂದು ಹೆಳಲು ಸಾಧ್ಯವಿಲ್ಲ, ನೋಡ್ತಾ-ನೋಡ್ತಾ ಕೂಡ ಪ್ರೀತಿ ಮೂಡಬಹುದು. ಆದರೆ ಪ್ರೀತಿ ಆಗಿದೆ ಅಂತ ಗೊತ್ತಾಗುವ ಮುನ್ನ ಅವರನ್ನು ನೋಡುವಾಗೆಲ್ಲಾ ಏನೋ ಒಂದು ರೀತಿಯ ಸೆಳೆತವಿರುತ್ತದೆ. ಅವರನ್ನು ನೋಡಿದಾಗ ನನಗೂ ಈ ವ್ಯಕ್ತಿಗೂ ಏನೋ ಸಂಬಂಧವಿದೆ ಎಂದು ಅನಿಸುತ್ತಿರುತ್ತದೆ. ಹಿಂದಿನ ಜನ್ಮದಿಂದಲೇ ಗೊತ್ತು ಅಂತಾರಲ್ಲ ಹಾಗೆ, ಅವರನ್ನು ಭೇಟಿಯಾದ ಸಂದರ್ಭ ಯಾವುದೇ ಆಗಿರಲಿ, ಆದರೆ ಅವರನ್ನು ನೋಡಿದ ಕ್ಷಣದಿಂದ ನಿಮಗೇ ಅರಿವಿಲ್ಲದೆ ನಿಮ್ಮ ಹೃದಯ ಅವರಿಗಾಗಿ ಮಿಡಿಯಲಾರಂಭಿಸಿರುತ್ತದೆ.

2. ಅಯಸ್ಕಾಂತೀಯ ಆಕರ್ಷಣೆ

2. ಅಯಸ್ಕಾಂತೀಯ ಆಕರ್ಷಣೆ

ನೀವು ನಿಮ್ಮ ಬದುಕಿನಲ್ಲಿ ಎಷ್ಟೇ ಬ್ಯುಸಿಯಾಗಿರಿ, ಎಷ್ಟೇ ಕೆಲಸದ ಒತ್ತಡವಿರಲಿ ಆದರೆ ಅದರ ಮಧ್ಯೆಯೂ ನಿಮ್ಮ ಹೃದಯ ಆ ವ್ಯಕ್ತಿಯನ್ನು ನೆನೆಸುತ್ತದೆ. ಒಬ್ಬರನ್ನೊಬ್ಬರು ಭೇಟಿ ಮಾಡಲು, ಮಾತನಾಡಲು ಮನಸ್ಸು ತವಕಿಸುತ್ತದೆ. ಅವರನ್ನು ನೆನೆಸದೆ ಒಂದು ದಿನ ಕಳೆಯುತ್ತೇನೆ ಎಂದು ನೀವಂದುಕೊಂಡರೆ ಅದು ನಿಮ್ಮಿಂದ ಸಾಧ್ಯವಾಗುವುದಿಲ್ಲ, ಅಷ್ಟೊಂದು ಅಯಸ್ಕಾಂತೀಯ ಸೆಳೆತ ನಿಮ್ಮಿಬ್ಬರ ನಡುವೆ ಇರುತ್ತದೆ.

3. ನಿಮ್ಮಿಬ್ಬರ ನಡುವೆ ಟೆಲಿಪತಿ ಕನೆಕ್ಷನ್ ಇರುತ್ತದೆ

3. ನಿಮ್ಮಿಬ್ಬರ ನಡುವೆ ಟೆಲಿಪತಿ ಕನೆಕ್ಷನ್ ಇರುತ್ತದೆ

ನೀವು ಎಷ್ಟೇ ಮೈಲಿ ದೂರವಿದ್ದರೂ ನಿಮ್ಮಿಬ್ಬರ ನಡುವೆ ಟೆಲಿಪತಿ ಕನೆಕ್ಷನ್ ಇರುತ್ತದೆ. ಅಂದರೆ ನಿಮಗೆ ಏಕೋ ಮನಸ್ಸು ಸರಿಯಿಲ್ಲ ಎಂದರೆ ತಕ್ಷಣವೇ ನಿಮ್ಮ ಪ್ರೇಮಿ ಕಾಲ್ ಮಾಡಿ, ಏನಾಯ್ತು? ಎಂದು ವಿಚಾರಿಸುತ್ತಾರೆ. ಅರೇ... ನಾನು ಏನೂ ಹೇಳಿಕೊಂಡಿಲ್ಲ, ಆದರೂ ಇವರಿಗೆ ಹೇಗೆ ಗೊತ್ತಾಯಿತು ಎಂದು ನಿಮಗೆ ಅಚ್ಚರಿ ಮೂಡಬಹುದು. ಆದರೆ ನಿಮ್ಮ ಮನಸ್ಸಿನ ಭಾವನೆಗಳನ್ನು ಅವರು ಎಷ್ಟೇ ಮೈಲಿ ದೂರವಿದ್ದರೂ, ನೀವು ಹೇಳದೆಯೇ ಅರ್ಥ ಮಾಡಿಕೊಂಡಿರುತ್ತಾರೆ. ನಿಜವಾದ ಪ್ರೀತಿಯಿದ್ದರೆ ಟೆಲಿಪತಿ ಕನೆಕ್ಷನ್‌ನಲ್ಲಿ ಸಂಗಾತಿಯ ಭಾವನೆ, ಆಲೋಚನೆ, ಸಮಸ್ಯೆಗಳನ್ನು ಅರಿಯಬಹುದು.

4. ಒಬ್ಬರನ್ನೊಬ್ಬರು ಭೇಟಿ ಮಾಡಲು ತವಕಿಸುತ್ತೀರಿ

4. ಒಬ್ಬರನ್ನೊಬ್ಬರು ಭೇಟಿ ಮಾಡಲು ತವಕಿಸುತ್ತೀರಿ

ಪ್ರೇಮಿಗಳೆಂದರೆ ಒಬ್ಬರನ್ನೊಬ್ಬರು ಭೇಟಿ ಮಾಡಲು ಬಯಸುವುದು ಸಹಜ. ಆದರೆ ಈ ವ್ಯಕ್ತಿಯನ್ನು ನೋಡುವಾಗ ನನ್ನ ಜೀವನ ಈ ವ್ಯಕ್ತಿಯೊಂದಿಗೆ ಕಳೆಯಬೇಕು, ಈ ವ್ಯಕ್ತಿ ನನ್ನ ಬದುಕಿಗೆ ಬರದಿದ್ದರೆ ಅರ್ಥವೇ ಇಲ್ಲ ಎಂದು ಅನಿಸಲಾರಂಭಿಸುತ್ತದೆ. ಇಬ್ಬರ ಅಲೋಚನೆಗಳು ಒಂದೇ ರೀತಿ ಇರುತ್ತದೆ. ಅವರನ್ನು ನೋಡಿದ ತಕ್ಷಣ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ನಿಮ್ಮಿಂದ ಸಾಧ್ಯವಾದರೆ ನೀವಿಬ್ಬರು ಪರ್ಫೆಕ್ಟ್ ಜೋಡಿಯಾಗುವುದರಲ್ಲಿ ಸಂಶಯವಿಲ್ಲ.

5. ನಿಮ್ಮಿಬ್ಬರ ನ್ಯೂನತೆಗಳೂ ಗೊತ್ತಿರುತ್ತದೆ

5. ನಿಮ್ಮಿಬ್ಬರ ನ್ಯೂನತೆಗಳೂ ಗೊತ್ತಿರುತ್ತದೆ

ಪ್ರತಿಯೊಬ್ಬ ವ್ಯಕ್ತಿಯಲ್ಲಿ ಕೆಲವೊಂದು ನ್ಯೂನ್ಯತೆಗಳು ಇದ್ದೇ ಇರುತ್ತದೆ. ಅದು ಕೋಪಗೊಳ್ಳುವುದು ಇರಬಹುದು, ಅಥವಾ ಮತ್ತಿತರ ಕಾರಣಗಳಿರಬಹುದು. ನಿಮ್ಮಿಬ್ಬರ ನ್ಯೂನ್ಯತೆಗಳೇನು ಎಂಬುವುದು ನಿಮಗೆ ಗೊತ್ತಿರುತ್ತದೆ. ಆದರೆ ಆ ನ್ಯೂನ್ಯತೆಗಳನ್ನು ಮೀರಿ ನಿಮ್ಮಿಬ್ಬರ ಸಂಬಂಧ ಗಟ್ಟಿಯಾಗಿದ್ದರೆ ನಿಮಗೆ ಒಳ್ಳೆಯ ಜೀವನ ಸಂಗಾತಿ ಸಿಕ್ಕಿದ್ದಾರೆ ಎಂದು ಹೇಳಬಹುದು.

6. ನಿಮ್ಮ ಕಷ್ಟ ಕಾಲದಲ್ಲಿಯೂ ಜೊತೆಯಾಗಿರುವವರು

6. ನಿಮ್ಮ ಕಷ್ಟ ಕಾಲದಲ್ಲಿಯೂ ಜೊತೆಯಾಗಿರುವವರು

ಉತ್ತಮವಾದ ಸಂಗಾತಿ ನಿಮ್ಮ ಸುಖದಲ್ಲಿ ಮಾತ್ರವಲ್ಲಿ ಕಷ್ಟದಲ್ಲಿಯೂ ಜೊತೆಯಾಗಿ ನಿಲ್ಲುತ್ತಾರೆ. ನೀವು ಕಷ್ಟದಲ್ಲಿದ್ದಾಗ ಅದನ್ನು ಅರ್ಥಮಾಡಿಕೊಂಡು ನಿಮಗೆ ಆ ಕಷ್ಟದಿಂದ ಹೊರಬರಲು ಮಾನಸಿಕವಾದ ಬೆಂಬಲ ನೀಡುತ್ತಾರೆ. ನೀವು ಏನೋ ಒಂದು ತೊಂದರೆ ಸಿಕ್ಕಿದಾಗ ಅವರನ್ನು ಭೇಟಿಯಾದಾಗ ನಿಮ್ಮ ಮನಸ್ಸು ನಿರಾಳವಾದರೆ, ನಿಮ್ಮ ಅತ್ಯಂತ ಕಷ್ಟಕರ ಸಂದರ್ಭದಲ್ಲಿ ನಿಮ್ಮಿಂದ ದೂರವಾಗದೆ ಜೊತೆಯಾಗಿದ್ದರೆ ಅಂತಹ ಸಂಗಾತಿ ಪಡೆಯಲು ನೀವು ಅದೃಷ್ಟವಂತರಾಗಿದ್ದೀರಿ. ಅಂತಹವರನ್ನು ಎಂದಿಗೂ ಕಳೆದುಕೊಳ್ಳಬಾರದು.

7. ಅವರಲ್ಲಿ ನಿಮ್ಮ ಪ್ರತಿಬಿಂಬ ಕಂಡಾಗ

7. ಅವರಲ್ಲಿ ನಿಮ್ಮ ಪ್ರತಿಬಿಂಬ ಕಂಡಾಗ

ನೀವು ಅವರಲ್ಲಿ ನಿಮ್ಮದೇ ಪ್ರತಿಬಿಂಬ ಕಾಣುತ್ತೀರ. ನೀವು ಏನು ಆಲೋಚಿಸುತ್ತೀರಾ ಅದರಂತೆ ಅವರು ನಡೆದುಕೊಳ್ಳುತ್ತಾರೆ. ನಿಮ್ಮಲ್ಲಿರುವ ಪ್ರಶ್ನೆಗಳಿಗೆ ಅವರಿಂದ ಉತ್ತರ ದೊರೆಯುತ್ತದೆ. ಅವರಲ್ಲಿದೆ ನಿಮಗೇನೂ ಮಾಡಲು ಸಾಧ್ಯವಿಲ್ಲ, ನೀವು ಏನೇ ಮಾಡಲಿ ಅವರ ಸ್ಪೂರ್ತಿ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂದು ನಿಮಗನಿಸಲಾರಂಭಿಸಿದರೆ ಅವರಿಲ್ಲದ ಜೀವನ ಊಹಿಸಲೂ ನಿಮ್ಮಿಂದ ಅಸಾಧ್ಯ ಎಂದರ್ಥ.

8. ನಿರ್ಬಂಧವಿಲ್ಲದ ಪ್ರೀತಿ

8. ನಿರ್ಬಂಧವಿಲ್ಲದ ಪ್ರೀತಿ

ನಿಮ್ಮ ಪ್ರೀತಿಯಲ್ಲಿ ಯಾವುದೇ ನಿರ್ಬಂಧಗಳಿಲ್ಲ, ನೀನು ಆಗಿರಬೇಕು, ಹೀಗಿರಬೇಕು ಎಂಬ ಕಂಡೀಷನ್ಸ್ ಇಲ್ಲ, ಅವರ ಜೊತೆ ಮಾತನಾಡಬೇಡ, ಇದನ್ನು ದರಿಸಬೇಡ, ಆಗಿರಬೇಡ, ಹೀಗಿರಬೇಡ ಎಂಬ ಕಟ್ಟಳೆಗಳಿಲ್ಲ. ನೀವು ಮೊದಲು ಹೇಗೆ ಇದ್ದಿರೋ, ಪ್ರೀತಿಸಲು ಪ್ರಾರಂಭಿಸಿದ ಮೇಲೂ ಹಾಗೇ ಇರಲು ಬಿಟ್ಟರೆ, ನಿಮ್ಮ ಸ್ವಾತಂತ್ರ್ಯಕ್ಕೆ ಯಾವುದೂ ಧಕ್ಕೆ ಬಾರದಿದ್ದರೆ , ಯಾವುದೇ ನಿರ್ಬಂಧವಿಲ್ಲದೆ ನೀವು ಹೇಗಿದ್ದಿರೋ ಹಾಗೆಯೇ ಅವರು ನಿಮ್ಮನ್ನು ಸ್ವೀಕರಿಸಿದ್ದರೆ ಅಂತಹ ವ್ಯಕ್ತಿ ನಿಮಗೆ ಅತ್ಯುತ್ತಮವಾದ ಜೀವನ ಸಂಗಾತಿ ಆಗುವುದರಲ್ಲಿ ಯಾವುದೇ ಡೌಟಿಲ್ಲ.

9. ಜೊತೆಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು

9. ಜೊತೆಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು

ಒಬ್ಬರು ಮತ್ತೊಬ್ಬರ ಭಾವನೆಗಳನ್ನು ಗೌರವಿಸಿದರೆ ಮಾತ್ರ ಜೊತೆಯಾಗಿ ನಿರ್ಧಾರ ತೆಗೆದುಕೊಳ್ಳಲು ಸಾದ್ಯ. ನಿಮ್ಮ ಪ್ರತಿಯೊಂದು ಒಳ್ಳೆಯ ಕೆಲಸಕ್ಕೆ ಅವರು ಸ್ಪೂರ್ತಿ ತುಂಬುವುದು ಮಾಡಿದರೆ, ನಿಮ್ಮ ಕೈಯಿಂದ ಸಾಧ್ಯವ ಇಲ್ಲ ಎಂದು ನೀವು ನಿರಾಸೆಯಿಮದ ಕೈಚೆಲ್ಲಿದಾಗ ನಿಮ್ಮ ಸಾಮರ್ಥ್ಯ ಅರಿತು ನಿನ್ನಿಂದ ಸಾಧ್ಯ ಎಂದು ನಿಮ್ಮನ್ನು ಹುರಿದುಂಬಿಸಿ ನಿಮ್ಮ ಬೆನ್ನ ಹಿಂದೆ ಬೆಂಬಲವಾಗಿ ನಿಲ್ಲುವ ವ್ಯಕ್ತಿಯಾಗಿದ್ದರೆ ಅವರನ್ನು ಜೀವನದಲ್ಲಿ ಯಾವುದೇ ಕಾರಣಕ್ಕೆ ಮಿಸ್‌ ಮಾಡಿಕೊಳ್ಳಬೇಡಿ.

10. ನಿಮ್ಮ ಖಾಸಗಿತನ, ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಿದ್ದರೆ

10. ನಿಮ್ಮ ಖಾಸಗಿತನ, ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಿದ್ದರೆ

ಯಾರಿಗೆ ಆಗಲಿ ನಮ್ಮ ಖಾಸಗಿತನ ಹಾಗೂ ಸ್ವಾತಂತ್ರಕ್ಕೆ ದಕ್ಕೆ ಉಂಟಾಗುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಂಗಾತಿಗೆ ನಮ್ಮ ಮೇಲೆ ನಂಬಿಕೆಯಿದ್ದರೆ ನಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿ ಉಂಟಾಗುವುದಿಲ್ಲ. ಸಮಬಂಧದಲ್ಲಿ ಮುಖ್ಯವಾಗಿ ಬೇಕಾಗಿರುವುದೇ ನಂಬಿಕೆ. ನಂಬಿಕೆಯಿದ್ದಲ್ಲಿ ಯಾವುದೇ ಸಂಶಯವಾಗಲಿ, ನಿರ್ಬಂಧವಾಗಲಿ ಇರುವುದಿಲ್ಲ, ಅಂತಹವರ ಜೊತೆ ಬಾಳು ತುಂಬಾ ಸುಂದರವಾಗಿರುತ್ತದೆ.

ಇಲ್ಲಿ ಹೇಳಿರುವಂತಹ ಲಕ್ಷಣಗಳು ನಿಮ್ಮ ಪ್ರೇಮಿಯಲ್ಲಿ ಇದ್ದರೆ ಅವರನ್ನು ಎಂದಿಗೂ ಕಳೆದುಕೊಳ್ಳಬೇಡಿ...

English summary

signs you have met perfect soul mate

If you want to have perfect life partner to lead a happy life you must notice whether you have these signs in your life partner. If you find few signs in him/her, you are lucky to have them in your life.
Story first published: Friday, January 24, 2020, 13:15 [IST]
X
Desktop Bottom Promotion