For Quick Alerts
ALLOW NOTIFICATIONS  
For Daily Alerts

ಮದುವೆಗೆ ಮೊದಲೇ ಈ ರೀತಿಯ ಸೂಚನೆ ಸಿಕ್ಕರೆ ಆ ಸಂಬಂಧ ಬೇಕೆ? ಅಂತ ಮತ್ತೊಮ್ಮೆ ಯೋಚಿಸಿ

|

ಮದುವೆ ಎಂಬುವುದು ಎಲ್ಲರ ಜೀವನದಲ್ಲಿ ತಗುಂಬಾನೇ ಸ್ಪೆಷಲ್‌, ಮದುವೆ ಬಗ್ಗೆ, ಮದುವೆ ಜೀವನದ ಬಗ್ಗೆ ಸಾಕಷ್ಟು ಕನಸುಗಳಿರುತ್ತದೆ, ನಾವು ಪ್ರೀತಿಸುವ, ನಮ್ಮನ್ನು ಪ್ರೀತಿಸುವ ವ್ಯಕ್ತಿ ಜೊತೆಗೆ ಹೊಸ ಬದುಕಿನ ಬಗ್ಗೆ ಕನಸು ಕಾಣುತ್ತೇವೆ. ನಮ್ಮ ಬದುಕು ಚೆನ್ನಾಗಿರಬೇಕೆಂದರೆ ನಮಗೆ ಸರಿಯಾದ ಜೀವನ ಸಂಗಾತಿ ಸಿಗಬೇಕು.

relationship tips

ಕೆಲವರ ಬದುಕು ಮದುವೆಗೆ ಮೊದಲು ಎಲ್ಲಾ ಚೆನ್ನಾಗಿರುತ್ತದೆ, ಆದರೆ ಮದುವೆಯಾಗಿ ಸ್ವಲ್ಪ ವರ್ಷಗಳು ಕಳೆಯುತ್ತಿದ್ದಂತೆ ಭಿನ್ನಾಭಿಪ್ರಾಯಗಳು ಶುರುವಾಗಿ ವಿಚ್ಛೇದನ ಮಾಡಬೇಕಾದ ಪರಿಸ್ಥಿತಿ ಉಂಟಾಗುವುದು, ಆದರೆ ಇನ್ನು ಕೆಲವರಿಗೆ ಮದುವೆಗೆ ಮೊದಲೇ ಏನೋ ಮಿಸ್‌ ಹೊಡೆಯುತ್ತಿದೆ ಎಂದು ಅನಿಸುತ್ತಿರುತ್ತದೆ, ಆದರೂ ಮದುವೆಯಾದ ಮೇಲೆ ಎಲ್ಲಾ ಸರಿಯಾಗುತ್ತೆ ಎಂದು ಯೋಚಿಸಿ ಮದುವೆಯಾಗುತ್ತಾರೆ, ಆದರೆ ಅಂಥ ತಪ್ಪು ಮಾಡದಿರುವುದೇ ಒಳ್ಳೆಯದು.

ಮದುವೆಗೆ ಮೊದಲೇ ಈ ಸೂಚನೆಗಳು ಕಂಡು ಬಂದರೆ ಆ ಸಂಬಂಧದಲ್ಲಿ ಮುಂದುವರೆಯಬೇಕೆ? ಎಂದು ಯೋಚಿಸಿದರೆ ಒಳ್ಳೆಯದು ನೋಡಿ...

ಮಾತುಕತೆ ಕಡಿಮೆ

ಮಾತುಕತೆ ಕಡಿಮೆ

ಕೆಲವರು ತುಂಬಾ ಕಡಿಮೆ ಮಾತನಾಡುತ್ತಾರೆ, ಆದರೆ ಸಂಗಾತಿ ಕಡೆಗೆ ಅವರಿಗೆ ಪ್ರೀತಿ, ಆಕರ್ಷಣೆಯಿದೆ ಎಂದು ಅವರ ನಡತೆಯಿಮದಲೇ ಗೊತ್ತಾಗುತ್ತದೆ. ಆದರೆ ಇನ್ನು ಕೆಲವರು ಇರುತ್ತಾರೆ ಹೆಚ್ಚು ಮಾತನಾಡುವುದಿಲ್ಲ, ನೀವಾಗಿ ಮಾತನಾಡೋಣ ಅಂತ ಕರೆ ಮಾಡಿದರೆ ಬ್ಯುಸಿ ಅಂತ ಇಟ್ಟು ಬಿಡುತ್ತಾರೆ. ನಿಮಗೆ ಅವರ ಜೊತೆ ಮಾತನಾಡಬೇಕೆಂಬ ತುಂಬಾ ಆಸೆ, ಆದರೆ ಅವರು ಒಂದೊಂದು ಕಾರಣ ಹೇಳಿ ನಿಮ್ಮ ಜೊತೆ ನೀವು ಬಯಸಿದ ರೀತಿ ಮಾತನಾಡುತ್ತಿಲ್ಲ ಎಂದಾದರೆ ಆ ಸಂಬಂಧದ ಬಗ್ಗೆ ಯೋಚಿಸುವುದು ಒಳ್ಳೆಯದು. ಅವರಿಗೆ ನಿಮ್ಮ ಬಗ್ಗೆ ಆಸಕ್ತಿಯಿಲ್ಲ ಎಂಬುವುದ ಸ್ಪಷ್ಟ ಸೂಚನೆಯಾಗಿದೆ.

ನಿಮ್ಮ ಅಭಿಪ್ರಾಯಗಳಿಗೆ ಗೌರವ ಕೊಡದಿರುವುದು

ನಿಮ್ಮ ಅಭಿಪ್ರಾಯಗಳಿಗೆ ಗೌರವ ಕೊಡದಿರುವುದು

ಎಲ್ಲಾ ಅವರು ಹೇಳಿದಂತೆ ನಡೆಯಬೇಕು ಎಂದು ಹೇಳುವುದು, ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದೇ ಇರುವುದು, ನಿಮ್ಮ ಅಭಿಪ್ರಾಯಗಳ ಮೇಲೆ ಗೌರವ ಇಲ್ಲದಂತೆ ವರ್ತಿಸುವುದು ಮಾಡಿದರೆ ಅಂಥವರನ್ನು ಮದುವೆಯಾದರೆ ಚೆನ್ನಾಗಿರುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಅವರು ಮುಂದೆ ಕೂಡ ನಿಮ್ಮ ಮಾತುಗಳಿಗೆ ಗೌರವ ಕೊಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಸಂಸಾರ ಎಂದ ಮೇಲೆ ಇಬ್ಬರೂ ಒಬ್ಬರನ್ನೊಬ್ಬರು ಗೌರವಿಸಬೇಕು.

ನಿಮ್ಮ ಬಗ್ಗೆ ಆಸಕ್ತಿಯಿಲ್ಲದಿರುವುದು

ಅವರಿಗೆ ನಿಮ್ಮ ಬಗ್ಗೆ ತಿಳಿದುಕೊಳ್ಳಲು ಯಾವುದೇ ಆಸಕ್ತಿಯಿಲ್ಲ, ಅವರು ನಿಮ್ಮ ಬಳಿ ಏನೂ ಹೇಳುತ್ತಿಲ್ಲ, ನಿಮ್ಮ ಜೊತೆ ಭವಿಷ್ಯದ ಬಗ್ಗೆ ಮಾತನಾಡುತ್ತಿಲ್ಲ ಎಂದಾದರೆ ನೀವು ಈ ಸಂಬಂಧದ ಬಗ್ಗೆ ಮತ್ತೊಮ್ಮೆ ಆಲೋಚಿಸುವುದು ಒಳ್ಳೆಯದು. ಒಂದೋ ಅವರು ಮನೆಯವರ ಒತ್ತಾಯಕ್ಕೆ ನಿಮಗೆ ಒಕೆ ಹೇಳಿರುತ್ತಾರೆ, ಆದರೆ ನೀವು ಅವರಿಗೆ ಇಷ್ಟವಾಗಿರಲ್ಲ. ಮತ್ತೊಂದು ಕಾರಣವೆಂದರೆ ಅವರಿಗೆ ಈಗಾಗಲೇ ಬೇರೆಯೊಂದು ಸಂಬಂಧ ಇರುತ್ತದೆ, ಆದರೆ ಮನೆಯವರಿಗೆ ಹೇಳಲು ಧೈರ್ಯವಿಲ್ಲದೆ ನಿಮ್ಮ ಜೊತೆ ಮದುವೆಯಾಗಲು ಒಪ್ಪಿದಂತೆ ನಟಿಸುತ್ತಿರುತ್ತಾರೆ.

ಈ ರೀತಿ ನಿಮಗನಿಸಿದರೆ ಆ ಮದುವೆಯಿಂದ ಹಿಂದೆ ಸರಿಯುವುದೇ ಒಳ್ಳೆಯದು, ಏಕೆಂದರೆ ನಿಮ್ಮ ಬೇಕು-ಬೇಡಗಳನ್ನು ತಿಳಿದು, ನಿಮ್ಮನ್ನು ಇಷ್ಟಪಡುವ ಸಂಗಾತಿ ಬದುಕಿಗೆ ಸಿಕ್ಕೇ ಸಿಗುತ್ತಾರೆ.

ಮೆಚ್ಯೂರಿಟಿ ಇಲ್ಲದಿರುವುದು

ಮೆಚ್ಯೂರಿಟಿ ಇಲ್ಲದಿರುವುದು

ಕೆಲವರು ಮದುವೆ ವಯಸ್ಸಿಗೆ ಬಂದರೂ ಏನೂ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ತಿಂದ್ಕೊಂಡು, ಉಂಡ್ಕೊಂಡು ಆರಾಮವಾಗಿ ಇರುತ್ತಾರೆ, ಇವನಿಗೆ ಮದುವೆ ಮಾಡೋಣ ಎಂದು ಮದುವೆ ಮಾಡಲು ಮುಂದಾಗುತ್ತಾರೆ, ಆದರೆ ಅವರು ಮುಂದೆ ಸರಿಹೋಗುತ್ತಾರೆ ಎಂದು ಭಾವಿಸಿ ಮದುವೆ ಮಾಡಲು ಮುಂದಾಗುವುದು ತಪ್ಪಾದ ನಿರ್ಧಾರ, ಮದುವೆಯಾದ ಮೇಲೂ ಕೂಡ ಅವರು ತಮ್ಮ ಬೇಜಾವ್ದಾರಿ ವರ್ತನೆ ಮುಂದುವರಿಸಿದರೆ ಇದರಿಂದ ಸಂಗಾತಿ ತುಂಬಾ ಕಷ್ಟಪಡಬೇಕಾಗುತ್ತದೆ. ಇನ್ನು ನಿಮಗೆ ಮದುವೆಗೆ ಗೊತ್ತಾಗಿದೆ, ಸಂಗಾತಿಯಲ್ಲಿ ಏಕೋ ಮೆಚ್ಯೂರಿಟಿ ಕಡಿಮೆ ಇದ್ದಂಗೆ ಅನಿಸಿದರೆ ಅಂದರೆ ಅವರೇನು ನಿರ್ಧಾರ ತೆಗೆದುಕೊಳ್ಳುತ್ತಿಲ್ಲ, ಎಲ್ಲಾ ಅವರ ಪೋಷಕರು ಹೇಳಿದಂತೆ ಕೇಳುತ್ತಿದ್ದಾರೆ,ಎಂದು ಗಮನಕ್ಕೆ ಬಂದರೆ ಭವಿಷ್ಯದ ಬಗ್ಗೆ ಅವರ ಜೊತೆ ಮಾತನಾಡಿ. ಭವಿಷ್ಯದ ಬಗ್ಗೆ ಒಂದು ಸ್ಪಷ್ಟ ಕ್ಲಾರಿಟಿ ಇಲ್ಲದಿದ್ದರೆ ನೀವು ಅವರ ಜೊತೆ ಬಾಳಿಕೊಂಡು ಹೋಗುತ್ತೀರಾ ಎಂಬ ತೀರ್ಮಾನ ನಿಮ್ಮದು.

ಮನೆಯವರ ಜೊತೆ ಯಾವುದೇ ಕನೆಕ್ಷನ್ ಇಲ್ಲ

ಮನೆಯವರ ಜೊತೆ ಯಾವುದೇ ಕನೆಕ್ಷನ್ ಇಲ್ಲ

ಕೆಲವರಿಗೆ ಅವರ ಮನೆಯವರ ಜೊತೆ ಯಾವುದೇ ಕಲೆಕ್ಷನ್ ಅಂದರೆ ಬಾಂಧವ್ಯ ಇರುವುದಿಲ್ಲ. ಇವರ ಪಾಡಿಗೆ ಇವರು ಜೀವನ ಮಾಡುತ್ತಿರುತ್ತಾರೆ ಅಂಥವರನ್ನು ಮದುವೆಯಾಗುವುದಾದರೆ ತುಂಬಾ ಯೋಚಿಸಬೇಕು. ಏಕೆಂದರೆ ಈ ರೀತಿಯ ಜನರಲ್ಲಿ 2 ಗುಂಪಿನವರು ಇರುತ್ತಾರೆ.

ಮೊದಲ ಗುಂಪು ಯಾವುದೋ ಕಾರಣಕ್ಕೆ ಮನೆಯಿಂದ ಬಾಂಧವ್ಯ ಕಳೆದುಕೊಂಡಿರುತ್ತಾರೆ, ಅವರು ಮದುವೆಯಾದ ಮೇಲೆ ತಮ್ಮ ಕುಟುಂಬದ ಜೊತೆಗೆ ಚೆನ್ನಾಗಿರುತ್ತಾರೆ.

ಎರಡನೇ ಗುಂಪು ಅವರಿಗೆ ಭಾವನೆ ಕಡಿಮೆ ಅವರು ಮನೆಯವರ ಜೊತೆಗೆ ಮಾತ್ರವಲ್ಲ ಯಾರ ಜೊತೆಗೂ ಅಷ್ಟು ಕನೆಕ್ಷನ್ ಇಟ್ಟುಕೊಳ್ಳಲ್ಲ, ಅಂಥವರಾಗಿದ್ದರೆ ನಿಮಗೆ ಅವರನ್ನು ಹೊಂದಿಕೊಂಡು ಹೋಗಲು ಸಾಧ್ಯವೇ ಎಂದು ಯೋಚಿಸುವುದು ಒಳ್ಳೆಯದು.

ಸುಳ್ಳು ಹೇಳಿದ್ದು ಗೊತ್ತಾದರೆ

ಮದುವೆಯಾಗಬೇಕೆಂದಿದ್ದರೆ ನೂರು ಸುಳ್ಳು ಹೇಳಬೇಕೆಂದು ಹೇಳುತ್ತಾರೆ, ಆದರೆ ಮದುವೆಯಾಗುವಾಗ ಯಾವ ಸುಳ್ಳು ಹೇಳದಿರುವುದೇ ಒಳ್ಳೆಯದು. ಇದ್ದ ಸತ್ಯವನ್ನು ಹೇಳುವುದು ಒಳ್ಳೆಯದು. ಸುಳ್ಳು ಹೇಳಿ ಅದು ನಿಮಗೆ ಗೊತ್ತಾದರೆ ಏಕೆ ಹೇಳಿದರು ಅಂತ ಕೇಳಿ, ಆವಾಗಲೂ ಅವರು ಸುಳ್ಳು ಹೇಳುತ್ತಿದ್ದಾರೆ ಎಂದನಿಸಿದರೆ ನೀವು ಮದುವೆ ಬಗ್ಗೆ ಮತ್ತೊಮ್ಮೆ ಯೋಚಿಸುವುದು ಒಳ್ಳೆಯದು.

ನಿಮಗೆ ಮದುವೆಗೆ ಮೊದಲೇ ಏಕೋ ಈ ಸಂಬಂಧ ಸರಿ ಕಾಣುತ್ತಿಲ್ಲ ಎಂದನಿಸಿದರೆ ಅವರನ್ನು ಮದುವೆಯಾಗದಿರುವುದೇ ಒಳ್ಳೆಯದು, ಇದರಿಂದ ಅವರ ಬದುಕು ಚೆನ್ನಾಗಿರುತ್ತದೆ, ನಿಮಗೂ ಒಳ್ಳೆಯ, ಏನಂತೀರಿ?

English summary

Red Flags to Consider Before Getting Married in kannada

When your marriage get fixed if you find these red flags in your relationship better to rethink, read on...
X
Desktop Bottom Promotion