For Quick Alerts
ALLOW NOTIFICATIONS  
For Daily Alerts

ಸ್ನೇಹ ಗಾಢವಾಗುವ ಮುನ್ನ ಈ ಸತ್ಯಗಳನ್ನು ನೀವು ತಿಳಿಯಲೇಬೇಕು

|

ಜೀವನ ಅಂದ್ರೆನೆ ಹಾಗೆ. ಯಾರು ಯಾವಾಗ ಯಾವ ಸಮಯದಲ್ಲಿ ಇಷ್ಟ ಆಗ್ತಾರೆ ಅಂತ ಹೇಳೋಕೆ ಆಗಲ್ಲ. ಅದರಲ್ಲೂ ಈ ಪ್ರೀತಿ ಅಥವಾ ಸ್ನೇಹದ ವಿಷಯಕ್ಕೆ ಬಂದ್ರೆ ಅದು ಹೇಗೆ ಶುರುವಾಯ್ತು ಅಂತ ಹೇಳೋದೇ ಕಷ್ಟ. ಆದರೆ ಒಪ್ಪಿಕೊಂಡ ಸ್ನೇಹವಿರಲಿ ಪ್ರೀತಿಯಿರಲಿ ಅದನ್ನ ಕೊನೆವರೆಗೂ ಉಳಿಸಿಕೊಳ್ಳೋದು ಒಂದು ದೂಡ್ಡ ಸವಾಲು. ಒಂದು ಚೂರು ಹೆಚ್ಚು ಕಮ್ಮಿ ಆದ್ರೂ ಅದ್ಭುತವಾಗಿರುವ ಒಂದು ಸಂಬಂಧನೇ ಮುರಿದುಬೀಳುವ ಸಾಧ್ಯತೆಗಳಿರುತ್ತೆ. ಹಾಗಾಗಿ ಸಂಬಂಧಗಳಲ್ಲಿ ಅತ್ಯಂತ ಜಾಗರೂಕತೆಯಿಂದ ಇರಬೇಕು.

ಯಾವುದೇ ಸಂಬಂಧವಿರಲಿ ಅಥವಾ ಸ್ನೇಹವಿರಲಿ ಅದರಲ್ಲಿ ನಾವು ಒಪ್ಪಿಕೊಳ್ಳಬೇಕಾದಂತ ಕೆಲವು ಕಟು ಸತ್ಯಗಳಿರುತ್ತವೆ. ಅದನ್ನ ಅರ್ಥ ಮಾಡಿಕೊಂಡು ಮುಂದುವರೆದರೆ ಯಾವುದೇ ಸಂಬಂಧ ಅಥವಾ ಸ್ನೇಹದಲ್ಲಿ ವಿಶ್ವಾಸದಿಂದ ಇರಬಹುದಾಗಿದೆ.

ನಮ್ಮ ಕುಟುಂಬದವರನ್ನ ಹೊರತುಪಡಿಸಿ ಸ್ನೇಹಿತರಿಗೆ ತುಂಬಾ ಹತ್ತಿರದವರಾಗಿರುತ್ತೇವೆ. ಇಂತಹ ಸ್ನೇಹ ಪ್ರೀತಿಯನ್ನು ಬಯಸದವರು ಬಹುಶಃ ಈ ಜಗತ್ತಿನಲ್ಲಿಯೇ ಯಾರೂ ಇಲ್ಲ. ಆದರೆ ನಿಮ್ಮೊಡನಿರುವ ವ್ಯಕ್ತಿ ಇದಕ್ಕೆ ಬದ್ಧನಾಗಿಲ್ಲದಿದ್ದರೆ ನಿಮಗೆ ಈ ಅನುಭವ ಆಗದೇ ಇರಬಹುದು..

ಹಾಗಾಗಿ ಸ್ನೇಹಕ್ಕೆ ಸಂಬಂಧಪಟ್ಟ ಈವರೆಗೆ ನಿಮಗೆ ತಿಳಿದಿಲ್ಲದ ಕೆಲವು ಕಟು ಸತ್ಯಗಳನ್ನು ನಾವಿಲ್ಲಿ ಹೇಳುತ್ತಿದ್ದೇವೆ ಮುಂದೆ ಓದಿ.

1. ಪರಿಪೂರ್ಣ ಸ್ನೇಹ ಎಂದಿಗೂ ಅಸ್ತಿತ್ವದಲ್ಲಿಲ್ಲ

1. ಪರಿಪೂರ್ಣ ಸ್ನೇಹ ಎಂದಿಗೂ ಅಸ್ತಿತ್ವದಲ್ಲಿಲ್ಲ

ಒಬ್ಬ ಮನುಷ್ಯ ಪರಿಪೂರ್ಣ ಎಂದು ಎಂದಿಗೂ ಹೇಳಲು ಸಾಧ್ಯವಿಲ್ಲ. ಮನುಷ್ಯರು ಎಂದಿಗೂ ಅಸ್ತಿತ್ವದಲ್ಲಿಲ್ಲ ಮತ್ತು ದೋಷರಹಿತ ಅಥವಾ ಪರಿಪೂರ್ಣವಾದ ಯಾವುದೇ ಸಂಬಂಧಗಳಿಲ್ಲ. ಸ್ನೇಹದಲ್ಲಿ, ಸ್ನೇಹಿತರ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ನಮ್ಮ ಸ್ನೇಹಕ್ಕೇ ಕುತ್ತಾಗಬಹುದು. ಹಾಗಾಗಿ ನಿಮ್ಮ ಸ್ನೇಹಿತರನ್ನು ಅವರು ಇರುವ ರೀತಿಯಲ್ಲಿಯೇ ಅವರನ್ನು ಸ್ವೀಕರಿಸುವುದು ಉತ್ತಮ. ನಿಮ್ಮ ಸ್ನೇಹಿತರ ನ್ಯೂನತೆಗಳು ಮತ್ತು ಅಪೂರ್ಣತೆಗಳನ್ನು ಎತ್ತಿ ತೋರಿಸುವುದರ ಬದಲು ಅವರು ಒಬ್ಬ ಉತ್ತಮ ವ್ಯಕ್ತಿಯಾಗಲು ನೀವು ಅವರಿಗೆ ಸಹಾಯ ಮಾಡಿ.

2. ಅವರಿಗೂ ಬೇಕು ಸ್ವಾತಂತ್ರ್ಯ

2. ಅವರಿಗೂ ಬೇಕು ಸ್ವಾತಂತ್ರ್ಯ

ಪ್ರೀತಿ ಇರಲಿ ಸ್ನೇಹವಿರಲಿ, ಯಾರನ್ನಾದರೂ ಅತಿಯಾಗಿ ಹಚ್ಚಿಕೊಂಡರೆ ಅಲ್ಲಿ ನೋವುಂಟಾಗಬಹುದು. ಪ್ರತಿಯೊಬ್ಬರಿಗೂ ಅವರದೇ ಆದ ಸ್ವಾತಂತ್ರ್ಯ, ಸ್ಪೇಸ್ ಕೊಡಬೇಕಾಗುತ್ತದೆ. ನಿಮ್ಮ ಪ್ರೀತಿ ಪಾತ್ರರು, ಸ್ನೇಹಿತರು ಅಥವಾ ಸಂಗಾತಿ ನಿಮ್ಮನ್ನು ಬಿಟ್ಟು ಬೇರೆ ಸ್ನೇಹಿತರನ್ನೂ ಹೊಂದಿರಬಹುದು. ಅವರು ಆ ಸ್ನೇಹಿತರೊಂದಿಗೆ ಹೊರಗಡೆ ಹೋಗಬಹುದು, ಹರಟಬಹುದು, ಮಾತುಗಳನ್ನಾಡಬಹುದು.

ಆದರೆ ನೀವು ಇದನ್ನು ಸಹಿಸದೇ ಇದ್ದರೆ ಅಥವಾ ನಿಮ್ಮನ್ನು ಹೊರತಾಗಿಯೂ ಅವರಿಗೆ ಬೇರೊಬ್ಬರ ಸ್ನೇಹವಿದೆ ಎಂಬ ಕಟು ಸತ್ಯವನ್ನು ಅರಿತುಕೊಳ್ಳದಿದ್ದರೆ ಸಮಸ್ಯೆಯಾಗುವುದು ಖಂಡಿತ. ಈ ಬಗ್ಗೆ ಅಸೂಯೆ ಪಟ್ಟುಕೊಳ್ಳದೇ, ಅಥವಾ ಸ್ನೇಹಿತೆ/ಸ್ನೇಹಿತ ಬಿಟ್ಟು ಹೋಗಬಹುದು ಎಂಬ ಅಸುರಕ್ಷಿತ ಭಾವನೆಯನ್ನು ಬೆಳೆಸಿಕೊಳ್ಳದೆ ಸಂಗತಿಯನ್ನು ಹಾಗೆಯೇ ಒಪ್ಪಿಕೊಂಡರೆ ಅವರ ವಯಕ್ತಿಕ ಜೀವನವನ್ನು ಗೌರವಿಸುವುದು ಸೂಕ್ತ.

3. ಸ್ನೇಹದಲ್ಲಿ ಸಂಘರ್ಷಗಳು ಉಂಟಾಗಬಹುದು

3. ಸ್ನೇಹದಲ್ಲಿ ಸಂಘರ್ಷಗಳು ಉಂಟಾಗಬಹುದು

ಯಾವುದೇ ಸಂಬಂಧಗಳು ಅಥವಾ ಸ್ನೇಹ ಗುಲಾಬಿಗಳ ತೋಟದಲ್ಲಿ ನಡೆಯುತ್ತ ಆಸ್ವಾದಿಸುವಷ್ಟು ಸುಲಭವಲ್ಲ. ಪರಿಪೂರ್ಣ ಮತ್ತು ಸಂಘರ್ಷಗಳಿಲ್ಲದ ಯಾವುದೇ ಸ್ನೇಹವಿಲ್ಲ! ಸಾಕಷ್ಟು ಸಲ ಪರಸ್ಪರ ಒಬ್ಬರನ್ನೊಬ್ಬರು ಒಪ್ಪದಿರಬಹುದು. ಇದರಿಂದ ನಿಮಗೆ ನಿಮ್ಮ ಸ್ನೇಹಿತರ ಮೇಲೆ ಕಿರಿಕಿರಿ ಉಂಟಾಗಬಹುದು ಆದರೆ ಯಾವುದೇ ಮನುಷ್ಯನು ಪರಿಪೂರ್ಣನಲ್ಲ ಎಂಬುದನ್ನು ಮೊದಲು ನೀವು ಅರ್ಥಮಾಡಿಕೊಳ್ಳಬೇಕು.

ನಿಮ್ಮ ಸ್ನೇಹಿತರನ್ನು ಬದಲಾಯಿಸಲು ಪ್ರಯತ್ನಿಸುವ ಬದಲು, ಜೀವನದ ಬಗ್ಗೆ ಹೊಸ ಮತ್ತು ಉತ್ತಮ ದೃಷ್ಟಿಕೋನವನ್ನು ಬೆಳೆಸಲು ನೀವು ಅವರಿಗೆ ಸಹಾಯ ಮಾಡಬಹುದು. ನಿಮ್ಮ ಸ್ನೇಹದಲ್ಲಿ ಅತೀ ಮುಖ್ಯವಾದುದು ನೀವು ಪರಸ್ಪರ ಒಪ್ಪಿಕೊಂಡು ಮುಂದುವರೆಯುವುದು.

4. ಪ್ರತಿಯೊಬ್ಬರೂ ಶಾಶ್ವತವಾಗಿ ಉಳಿಯುವುದಿಲ್ಲ

4. ಪ್ರತಿಯೊಬ್ಬರೂ ಶಾಶ್ವತವಾಗಿ ಉಳಿಯುವುದಿಲ್ಲ

ಇದನ್ನು ನಾವು ಮೊದಲು ಅರಿತುಕೊಳ್ಳಬೇಕು. ನಿಮ್ಮ ಜೀವನದಲ್ಲಿ ನೀವು ಅನೇಕ ಜನರನ್ನು ಭೇಟಿ ಮಾಡುತ್ತೀರಿ, ಅವರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತೀರಿ. ಆದರೆ ಅವರು ಎಂದೆಂದಿಗೂ ನಿಮ್ಮ ಜೊತೆಯಲ್ಲಿಯೇ ಇರಬೇಕೆಂದೇನೂ ಇಲ್ಲ.

ಕೆಲವೊಮ್ಮೆ ವಿಷಯಗಳು ಅನಿರೀಕ್ಷಿತ ರೀತಿಯಲ್ಲಿ ನಿಮ್ಮ ಕೈತಪ್ಪಿ ಹೋಗಬಹುದು ಅಥವಾ ನಿಮ್ಮ ಸ್ನೇಹಿತರೊಂದಿಗೆ ಇನ್ನು ಮುಂದೆ ಸಂಪರ್ಕ ಇಟ್ಟುಕೊಳ್ಳದಂತ ಸ್ಥಿತಿ ನಿರ್ಮಾಣವಾಗಬಹುದು. ಇದರ ಪರಿಣಾಮವಾಗಿ, ನಿಮ್ಮ ಸ್ನೇಹವು ಅಂತ್ಯಗೊಳ್ಳಬಹುದು. ಅಂತಹ ಸಂದರ್ಭದಲ್ಲಿ, ನಿಮ್ಮ ಕಳೆದುಕೊಂಡ ಸ್ನೇಹಕ್ಕಾಗಿ ಅಳುವುದು ಬುದ್ಧಿವಂತಿಕೆಯಲ್ಲ. ಈ ಸಮಯದಲ್ಲಿ, ನೀವು ಸಂಯಮದಿಂದ ವರ್ತಿಸಬೇಕು ಮತ್ತು ಇತರರ ಆಯ್ಕೆಗಳನ್ನು ಗೌರವಿಸಬೇಕು.

5. ಸ್ನೇಹಿತರ ಗುಂಪು ಅನಿವಾರ್ಯವಲ್ಲ

5. ಸ್ನೇಹಿತರ ಗುಂಪು ಅನಿವಾರ್ಯವಲ್ಲ

ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು, ನಮ್ಮ ಸುತ್ತಮುತ್ತಲಿನ ಜನರು ಪರಿಪೂರ್ಣವಾದ ಸುಂದರವಾದ ಜೀವನವನ್ನು ಹೊಂದಿದ್ದಾರೆಂದು ನಂಬುವಂತೆ ಮಾಡುತ್ತವೆ. ತಮ್ಮ ತಮ್ಮ ಅಪೂರ್ಣತೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ, ಆದರೆ ಮೇಲ್ನೋಟಕ್ಕೆ ನಾವು ನೋಡುವುದು ಬೇರೆಯೇ! ಸಾಮಾನ್ಯವಾಗಿ, ಜನರು 'ಸ್ಕ್ವಾಡ್ ಗೋಲ್ಸ್' ಶೀರ್ಷಿಕೆಗಳ ಅಡಿಯಲ್ಲಿ ತಮ್ಮ ಸ್ನೇಹಿತರೊಂದಿಗೆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವುದನ್ನು ನೀವು ನೋಡಿರಬಹುದು.

ಆ ಚಿತ್ರಗಳನ್ನು ನೋಡುವಾಗ, ಎಲ್ಲರೂ ಸಮಾನವಾಗಿ ಹೊಂದುಕೊಳ್ಳುವಂತಹ ನಿಮ್ಮ ಸ್ವಂತ ಸ್ನೇಹಿತರ ಗುಂಪೊಂದನ್ನು ಹೊಂದಲು ನೀವು ಬಯಸಬಹುದು, ಆದರೆ ತೋರಿಕೆಗೆ ಸ್ನೇಹಿತರ ತಂಡವನ್ನು ಹೊಂದುವ ಅಗತ್ಯವಿಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ನಿಮಗೆ ಒಬ್ಬರು ಅಥವಾ ಇಬ್ಬರು ಸ್ನೇಹಿತರು ಇದ್ದರೂ ಸಾಕು, ನಿಮ್ಮ ಜೀವನ ಸಂತೋಷದಿಂದ ಕೂಡಿರಬಹುದು! ಹೊಂದಾಣಿಕೆಯಾಗದ ಮತ್ತು ನಕಲಿ ಸ್ನೇಹಿತರ ಒಂದು ಸೈನ್ಯವನ್ನೇ ಹೊಂದಿರುವುದಕ್ಕಿಂತ ಬೆರಳೆಣಿಕೆಯಷ್ಟು ವಿಶ್ವಾಸಾರ್ಹ ಸ್ನೇಹಿತರನ್ನು ಉಳಿಸಿಕೊಳ್ಳುವುದು ಉತ್ತಮ.

6. ದೂರವಿದ್ದರೆ ಸ್ನೇಹ ಕಹಿಯಾಗುವುದಿಲ್ಲ

6. ದೂರವಿದ್ದರೆ ಸ್ನೇಹ ಕಹಿಯಾಗುವುದಿಲ್ಲ

ನೀವು ವರ್ಷಗಳಿಂದ ಒಬ್ಬರನ್ನೊಬ್ಬರು ನೋಡದೇ ಇರಬಹುದು, ದೈಹಿಕವಾಗಿ ಪರಸ್ಪರ ದೂರವಿದ್ದರೂ ಭಾವನಾತ್ಮಕವಾಗಿ ಒಬ್ಬರನ್ನೊಬ್ಬರು ಪರಸ್ಪರ ಸಂಪರ್ಕ ಹೊಂದಿರುತ್ತೀರಿ. ನೀವು ಯಾರೊಂದಿಗಾದರೂ ಸ್ನೇಹಿತರಾಗಿದ್ದೀರಿ ಎಂದರೆ ಎಂದೆಂದಿಗೂ ಜೊತೆಯಾಗಿಯೇ ಇರಬೇಕೆಂದಿಲ್ಲ. ನೀವು ನಿಮ್ಮ ಅಧ್ಯಯನಗಳು, ಕುಟುಂಬ ಸಂಬಂಧಿತ ಸಮಸ್ಯೆಗಳು ಅಥವಾ ನಿಮ್ಮ ಕೆಲಸದ ಸ್ಥಳಗಳಿಂದಾಗಿ ವರ್ಷಗಳಿಂದ ನಿಮ್ಮ ಸ್ನೇಹಿತರನ್ನು ಭೇಟಿ ಮಾಡದಿರುವ ಸಂದರ್ಭಗಳು ಇರಬಹುದು.

ಆದರೆ ಇದರ ಅರ್ಥ ಅವರು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದಲ್ಲ. ಅಂತಹ ಸಂದರ್ಭದಲ್ಲಿ, ಒಬ್ಬರನ್ನೊಬ್ಬರು ದೂಷಿಸುವುದು ಅಥವಾ ನಿಮ್ಮ ಸ್ನೇಹವು ನಕಲಿ ಎಂದುಕೊಳ್ಳುವ ಬದಲು ನಿಮ್ಮ ಸ್ನೇಹವನ್ನು ಇನ್ನೂ ಹೆಚ್ಚು ಕಾಲ ಜೊತೆಗಿರುವಂತೆ ಉಳಿಸಿಕೊಳ್ಳಬಹುದು.

7. ಎಲ್ಲಾ ಸ್ನೇಹಿತರು ಬೆಂಬಲಿಸುವವರಾಗಿರುವುದಿಲ್ಲ

7. ಎಲ್ಲಾ ಸ್ನೇಹಿತರು ಬೆಂಬಲಿಸುವವರಾಗಿರುವುದಿಲ್ಲ

ನಿಮ್ಮ ಶಾಲೆ ಅಥವಾ ಕಾಲೇಜಿನಲ್ಲಿ ನೀವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯು ಬೆಂಬಲಿಸುವ ಸ್ನೇಹಿತರಾಗಿರುತ್ತಾರೆ ಎಂದು ನೀವು ಭಾವಿಸಿದರೆ ಅದು ತಪ್ಪು! ಹೌದು, ನಿಮ್ಮ ಆಯ್ಕೆಗಳ ಬಗ್ಗೆ ಎಂದಿಗೂ ಕಾಳಜಿ ವಹಿಸದ ಕೆಲವು ಸ್ನೇಹಿತರಿರುತ್ತಾರೆ, ನಿಮ್ಮ ಕಷ್ಟದ ಸಮಯದಲ್ಲಿ ನಿಮಗೆ ಎಂದಿಗೂ ಸಹಾಯ ಮಾಡುವುದಿಲ್ಲ.

ಈ ಸ್ನೇಹಿತರು ತಮ್ಮ ಕೆಟ್ಟ ಸ್ವಭಾವದೊಂದಿಗೆ ನಿಮ್ಮಲ್ಲಿರುವ ಸಕಾರಾತ್ಮಕ ಭಾವನೆಯನ್ನು ಹಾಳುಮಾಡಬಹುದು. ಇಂತಹ ಸಂದರ್ಭದಲ್ಲಿ, ನಿಮ್ಮ ಸಂತೋಷದ ಬಗ್ಗೆ ಕಾಳಜಿ ವಹಿಸುವುದು ಮತ್ತು ನಿಮ್ಮ ಸಮಯ ಮತ್ತು ಭಾವನೆಗಳನ್ನು ಅರ್ಥಪೂರ್ಣ ಸಂಬಂಧದಲ್ಲಿ ಕಳೆಯುವುದು ಒಳ್ಳೆಯದು.

8. ಎಲ್ಲರೊಂದಿಗಿನ ಬಂಧಗಳು ಒಂದೇ ರೀತಿ ಇರುವುದಿಲ್ಲ

8. ಎಲ್ಲರೊಂದಿಗಿನ ಬಂಧಗಳು ಒಂದೇ ರೀತಿ ಇರುವುದಿಲ್ಲ

ನಿಮ್ಮ ಜೀವನದುದ್ದಕ್ಕೂ ನೀವು ನಿಮ್ಮ ಪ್ರತಿಯೊಬ್ಬ ಸ್ನೇಹಿತರೊಂದಿಗೆ ಒಂದೇ ರೀತಿಯ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನೀವು ಬೆಳೆದು ಪ್ರಬುದ್ಧರಾದಂತೆ, ಅಗತ್ಯವಿಲ್ಲದ ಗಾಸಿಪ್ ಮಾತುಗಳನ್ನಾಡುವ ಸ್ನೇಹಿತರಿಗಿಂತ ಕೆಲವು ಅರ್ಥಪೂರ್ಣ ಜನರನ್ನು ನೀವು ಹುಡುಕಬಹುದು. ಅಥವಾ ನಿಮ್ಮ ಬಾಲ್ಯದಲ್ಲಿ ಅಥವಾ ನಿಮ್ಮ ಕಾಲೇಜು ದಿನಗಳಲ್ಲಿ ನಡೆದ ಸಂಗತಿಗಳ ಬಗ್ಗೆ ಮಾತನಾಡಲು ನಿಮಗೆ ಇಷ್ಟವಿಲ್ಲದಿರಬಹುದು. ದಿನಕಳೆದಂತೆ ನಿಮ್ಮ ಆಯ್ಕೆಗಳು ಭಿನ್ನವಾಗಿ, ನೀವು ಒಮ್ಮೆ ಹೊಂದಿದ್ದಂತಹ ನಿಕಟತೆಯನ್ನು ಮತ್ತೆ ಹೊಂದಲು ಸಾಧ್ಯವಾಗದೇ ಹೋಗಬಹುದು.

ಜೀವನವು ಸಾಕಷ್ಟು ಅನಿರೀಕ್ಷತೆಯನ್ನು ಒಳಗೊಂಡಿರುತ್ತದೆ. ನಿಮ್ಮ ಜೀವನದಲ್ಲಿ ಪಡೆಯಬೇಕೆಂದುಕೊಂಡಿರುವ ಜನರು ನಿಮ್ಮೊಂದಿಗೆ ಇರಲು ಖಂಡಿತವಾಗಿಯೂ ಒಂದಿಲ್ಲೊಂದು ಮಾರ್ಗ ದೊರೆತೇ ದೊರೆಯುತ್ತದೆ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ. ಪರಿಪೂರ್ಣ ಸ್ನೇಹವನ್ನು ಹೊಂದುವ ಕಲ್ಪನೆಯೊಂದಿಗೆ ನೀವು ಕಳೆದುಹೋಗಬೇಡಿ. ಇಲ್ಲದ ಸ್ನೇಹದ ಹುಡುಕಾಟದಲ್ಲಿ ಕಳೆದ ವರ್ಷಗಳನ್ನು ಎಣಿಸಬೇಡಿ, ಬದಲಿಗೆ ಉತ್ತಮ ಸ್ನೇಹವನ್ನು ನಿಮ್ಮದಾಗಿಸಿಕೊಳ್ಳಿ. ನೀವು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವಂತ ಸಿಹಿ ನೆನಪುಗಳು ಖಂಡಿತವಾಗಿಯೂ ನಿಮ್ಮದಾಗಲಿವೆ.

English summary

Harsh Truths About Friendship That You Need To Know

Here we are discussing about harsh Truths About Friendship That You Need To Know. Read more.
Story first published: Monday, March 2, 2020, 15:59 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X